ಆಧುನಿಕ ಮಂಗಳೂರಿನ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ ಶಿಲ್ಪಿ ದಿವಂಗತ ಉಳ್ಳಾಲ ಶ್ರೀನಿವಾಸ್ ಮಲ್ಯ ಅವರ 125ನೇ ಜನ್ಮದಿನವನ್ನು ಮಂಗಳೂರು ನಗರದ ನಂತೂರು ಬಳಿಯ ಪದುವ ಶಾಲೆಯ ಮುಂಭಾಗದಲ್ಲಿರುವ ಶ್ರೀನಿವಾಸ್ ಮಲ್ಯ ಉದ್ಯಾನವನದಲ್ಲಿ ಆಚರಿಸಲಾಯಿತು.
ಮಂಗಳೂರು ನಗರದ ಪದುವ ಶಾಲೆ ಮುಂಭಾಗದಲ್ಲಿರುವ ಶ್ರೀನಿವಾಸ್ ಮಲ್ಯ ಉದ್ಯಾನವನದಲ್ಲಿ ಉಳ್ಳಾಲ ಶ್ರೀನಿವಾಸ್ ಮಲ್ಯ ಜನ್ಮ ದಿನಚರಣಾ ಸಮಿತಿ ನೇತೃತ್ವದಲ್ಲಿ ಶ್ರೀನಿವಾಸ್ ಮಲ್ಯರವರ 125ನೇ ಜನ್ಮ ದಿನಾಚರಣೆಯನ್ನು ಮಲ್ಯರವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವಾರಗಪಣೆ ಸಲ್ಲಿಸಲಾಯಿತು.
ಈ ಸಂಧರ್ಭದಲ್ಲಿ ಮಾಜಿ ಸಚಿವ ಬಿ.ರಾಮನಾಥ ರೈ ,ಜನ್ಮ ದಿನ ಆಚರಣಾ ಸಮಿತಿ ಸಂಚಾಲಕಿ ಶ್ರೀಮತಿ ಮಂಜುಳಾ ನಾಯಕ್, ಮಲ್ಯ ಕುಟುಂಬಸ್ಥರಾದ ಉಳ್ಳಾಲ ನರಹರಿ ಮಲ್ಯ , ಅರುಂಧತಿ ಮಲ್ಯ, ನಂದನ್ ಮಲ್ಯ ,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪದ್ಮರಾಜ್ ಪೂಜಾರಿ , ಮೆಸ್ಕಾಂ ನಿಗಮದ ಅಧ್ಯಕ್ಷ ಹರೀಶ್ ಕುಮಾರ್ , ಕರಾವಳಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ ಎ ಗಫೂರ್, ಅಕಾಡೆಮಿಯ ಸದಸ್ಯ ಸಮರ್ಥ ಭಟ್ ,ಸಮಿತಿ ಅಧ್ಯಕ್ಷರಾದ ಟಿಸಿ ಗಣೇಶ್, ನೀತು ಶರಣ್, ರಾಜೇಶ್ ದೇವಾಡಿಗ , ಯೋಗೀಶ್ ನಾಯಕ್ ಮತ್ತಿತರು ಉಪಸ್ಥಿತರಿದ್ದರು.




