ಮೈಶುಗರ್‌ ಖಾಸಗೀಕರಣ ಕುರಿತು ನಿರಾಣಿ ಹೇಳಿಕೆ: ರೈತ ಹಿತರಕ್ಷಣಾ ಸಮಿತಿ ಖಂಡನೆ

Date:

ಮೈಸೂರು ಸಕ್ಕರೆ ಕಾರ್ಖಾನೆ (ಮೈಷುಗರ್) ಅನ್ನು ಜಾಗತಿಕ ಟೆಂಡರ್ ಕರೆದು ಖಾಸಗಿ ವಲಯಕ್ಕೆ ನೀಡಲು ಮುರುಗೇಶ್ ನಿರಾಣಿ ಅವರು ನೀಡಿರುವ ಹೇಳಿಕೆಗೆ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯು ತೀವ್ರ ಖಂಡನೆ ವ್ಯಕ್ತಪಡಿಸಿ, ಎಚ್ಚರಿಕೆ ನೀಡಿದೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಮಿತಿಯ ಮುಖಂಡರಾದ ಸುನಂದ ಜಯರಾಂ ಅವರು, “ಮುರುಗೇಶ್ ನಿರಾಣಿ ಅವರು ದಶಕಗಳಿಂದಲೂ ಮೈಸೂರು ಸಕ್ಕರೆ ಕಾರ್ಖಾನೆಯನ್ನು ತಮ್ಮ ಹತೋಟಿಗೆ ಪಡೆಯಲು ನಾನಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಈ ಕಾರ್ಖಾನೆಯು ಮಂಡ್ಯ ಜಿಲ್ಲೆಯ ಜೀವನಾಡಿಯಾಗಿದೆ ಹಾಗೂ ಸರ್ಕಾರಿ ಸ್ವಾಮ್ಯದ ಏಕೈಕ ಕಾರ್ಖಾನೆಯಾಗಿದೆ. ಯಾವುದೇ ಕಾರಣಕ್ಕೂ ಕಾರ್ಖಾನೆಯು ಖಾಸಗಿ ವಲಯಕ್ಕೆ ಸೇರಲು ಮಂಡ್ಯ ರೈತರು ಬಿಡುವುದಿಲ್ಲ” ಎಂದು ಎಚ್ಚರಿಸಿದ್ದಾರೆ.

- Advertisement -

“ಪ್ರಸ್ತುತ ಕಾರ್ಖಾನೆಯು ಕಬ್ಬು ನುರಿಸುತ್ತಿದೆ. ಮುಂದಿನ ದಿನಗಳಲ್ಲಿ ಬಾಯ್ಲಿಂಗ್ ಹೌಸ್ ಕೂಡ ಸಿದ್ಧವಾಗುತ್ತಿದೆ. ಕಾರ್ಖಾನೆಯು ಎಲ್ಲಾ ಹಂತದಲ್ಲೂ ತನ್ನ ಸಾಮರ್ಥ್ಯ ಹೊಂದಿದೆ. ಸರ್ಕಾರ ಕೂಡ ಕಾರ್ಖಾನೆಯನ್ನು ನಡೆಸಲು ಬದ್ಧವಾಗಿದೆ. ಹೋರಾಟದ ಮೂಲಕ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲಿ ಉಳಿಸಿರುವ ಮಂಡ್ಯ ರೈತರು, ಕಾರ್ಖಾನೆಯನ್ನು ಖಾಸಗಿ ವ್ಯವಸ್ಥೆಗೆ ಸೇರಿಸುವ ಬಗ್ಗೆ ಮಾತನಾಡುವವರು ಯಾರೇ ಆಗಲಿ ಅದನ್ನು ಸಹಿಸುವುದಿಲ್ಲ. ನಿರಾಣಿಯವರು ಮಾಜಿ ಕೈಗಾರಿಕಾ ಸಚಿವರಾಗಿ ಸರ್ಕಾರಿ ಸ್ವಾಮ್ಯದ ಕಾರ್ಖಾನೆಯನ್ನು ಖಾಸಗೀಕರಣಕ್ಕೆ ನೀಡುವ ತಮ್ಮ ಧೋರಣೆಯನ್ನು ಮರೆತುಬಿಡಬೇಕು. ಒಂದು ವೇಳೆ ಅಕಸ್ಮಾತ್ ಮತ್ತೆ ಈ ರೀತಿಯ ಹೇಳಿಕೆ, ಆಲೋಚನೆ ಮಾಡುವುದಾದರೆ ಅವರ ವಿರುದ್ಧ ಹೋರಾಟ ಹಮ್ಮಿಕೊಳ್ಳುವುದು ಅನಿವಾರ್ಯವಾಗುತ್ತದೆ” ಎಂದು ಎಚ್ಚರಿಕೆ ನೀಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಖಾಸಗಿ ವೈದ್ಯರ ಎಡವಟ್ಟು; ಬಡ ಕುಟುಂಬದ ಆಧಾರ ಸ್ತಂಭ...

ಆತ ಕೂಲಿ‌ ಕೆಲಸ ಮಾಡಿಕೊಂಡು ಹಂಗೊ ಹೆಂಗೋ ಜೀವನ‌ ನಡೆಸಿಕೊಂಡು ಬಂದಿದ್ದ ಚಿರ ಯೌವ್ವನದ ಯುವಕ. ತನ್ನ ಮನೆ ಜವಾಬ್ದಾರಿಯನ್ನು ತನ್ನದೇ ಹೆಗಲ ಮೇಲೆರಿಸಿ ಕಷ್ಟಪಟ್ಟು ದುಡಿದು ತನ್ನ ಇಬ್ಬರು ಸಹೋದರಿಯರಿಗೆ ಮದುವೆಯನ್ನೂ...

ಭಾಷಣಗಳಲ್ಲಿ ಆಗಾಗ ಎಡವಟ್ಟು, ಸುಳ್ಳು-ಅತಿಶಯೋಕ್ತಿಯೇ ಮೇಲುಗೈ: ನವಭಾರತದ ‘ಪಪ್ಪು’...

ಒಂದು ಕಾಲದಲ್ಲಿ ರಾಹುಲ್ ಗಾಂಧಿ ಅವರನ್ನು ಅಪಹಾಸ್ಯ ಮಾಡಲು ಬಳಸುತ್ತಿದ್ದ 'ಪಪ್ಪು' ಎಂಬ ಪದವೇ ಇದೀಗ ಮೋದಿ ಅವರತ್ತ ತಿರುಗಿದೆ. 1987-88ರ ಡಿಜಿಟಲ್ ಕ್ಯಾಮೆರಾ-ಇಮೇಲ್ ಕಥೆಯಿಂದ ಹಿಡಿದು ಐತಿಹಾಸಿಕ ಪ್ರಮಾದಗಳವರೆಗೆ, ಮೋದಿ ಅವರ...

ಸಂದರ್ಶನ | ಸಡಿಲಗೊಂಡ ಪಿಎಫ್ ನಿಯಮ: ಕಾರ್ಮಿಕರ ಕೈಹಿಡಿಯುವುದೇ...

ತುರ್ತು ಸಂದರ್ಭಗಳಲ್ಲಿ ಪಿಎಫ್ ಹಣವನ್ನು ಹಿಂಪಡೆಯುವ ಪ್ರಕ್ರಿಯೆಯನ್ನು ಇಪಿಎಫ್‌ಒ ಸರಳಗೊಳಿಸಿರುವುದು ಕಾರ್ಮಿಕರಿಗೆ ತಕ್ಷಣದ ಆರ್ಥಿಕ ನೆರವು ನೀಡುತ್ತಿದೆ. ಆದರೆ, ಈ ನಿಯಮ ಸಡಿಲಿಕೆಯಿಂದ ಕಾರ್ಮಿಕರ ನಿವೃತ್ತಿ ಬದುಕಿನ ಭದ್ರತಾ ನಿಧಿ ಕರಗುವ ಅಪಾಯವಿದೆ...

“ಮೈಶುಗರ್ ಕಾರ್ಖಾನೆಯ ಬಗ್ಗೆ ಸರ್ಕಾರ ಗಮನ ಹರಿಸಬೇಕು. ಮೂರು ತಿಂಗಳಿಗೊಮ್ಮೆ ರೈತರ ಜೊತೆ ಕಾರ್ಖಾನೆಯ ಆಡಳಿತ ಮಂಡಳಿ ಸಭೆ ಕರೆಯುತ್ತಿರಬೇಕು. ಶತಮಾನೋತ್ಸವ ಆಚರಿಸಲು ಸಿದ್ಧವಾಗುತ್ತಿರುವ ಕಾರ್ಖಾನೆಯ ಬಗ್ಗೆ ಚುರುಕಾಗಿ ಗಮನ ಕೊಡಬೇಕು” ಎಂದು ಸಮಿತಿ ಎಚ್ಚರಿಸಿದೆ

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪೊಲೀಸ್ ಠಾಣೆಯಲ್ಲಿ ‘ಗಣಪತಿ ಹೋಮ’; ಭುಗಿಲೆದ್ದ ರಾಜಕೀಯ ವಿವಾದ

ಪೊಲೀಸ್ ಠಾಣೆಯ ಒಳಗೇ ಪೊಲೀಸ್ ಇನ್ಸ್‌ಪೆಕ್ಟರ್ ಒಬ್ಬರು ತಮ್ಮ ಕುಟುಂಬ ಸದಸ್ಯರೊಂದಿಗೆ...

ವಾರ್ಡ್ ಅಭಿವೃದ್ಧಿ, ಪಕ್ಷ ಸಂಘಟನೆಗೆ ಒತ್ತು: ಶಿವಮೊಗ್ಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ

ಯುವಕರ ಸಂಘಟನೆಗಾಗಿ ಭಾರತ್ ಜೋಡೋ ಯೋಜನೆ ಜಾರಿಗೊಳಿಸಲಾಗಿದೆ. ಯುವಕರಿಗೆ ಹುದ್ದೆಗಳನ್ನು ನೀಡುವ...

ಆಶಾ ಕಾರ್ಯಕರ್ತೆಯರ ಬೇಡಿಕೆಗಳಿಗೆ ಶಾಶ್ವತ ಪರಿಹಾರಕ್ಕೆ ಚಿಂತನೆ; ಹೋರಾಟ ಕೈಬಿಡುವಂತೆ ಸಿಎಂ ಮನವಿ

ತಮ್ಮ ಬೇಡಿಕೆಗಳಿಗಾಗಿ ನಡೆಸುತ್ತಿರುವ ಹೋರಾಟವನ್ನು ಕೈಬಿಡುವಂತೆ ಆಶಾ ಕಾರ್ಯಕರ್ತೆಯರಲ್ಲಿ ಡಿ.ಕೆ. ಶಿವಕುಮಾರ್...