ದಾಂಡೇಲಿ | ಕಾಡಿನಲಿ ಬಾನಾಡಿಗಳ ಸಮ್ಮಿಲನ: ಜನೆವರಿ 16ರಿಂದ ಅದ್ದೂರಿ ‘ಹಾರ್ನ್‌ಬಿಲ್ ಪಕ್ಷಿ ಹಬ್ಬ’

Date:

ಉತ್ತರ ಕನ್ನಡ ಜಿಲ್ಲೆಯ ಪ್ರಕೃತಿಯ ಅಪ್ರತಿಮ ಸೌಂದರ್ಯದ ಗಣಿಯಾಗಿರುವ ದಾಂಡೇಲಿ ಅರಣ್ಯ ಪ್ರದೇಶವು ಮತ್ತೊಮ್ಮೆ ಪಕ್ಷಿ ಪ್ರೇಮಿಗಳ ಸಮ್ಮಿಲನಕ್ಕೆ ಸಜ್ಜಾಗುತ್ತಿದೆ.

- Advertisement -

ಪ್ರತಿ ವರ್ಷ ಜನವರಿ 5 ರಂದು ಆಚರಿಸಲಾಗುವ ‘ರಾಷ್ಟ್ರೀಯ ಪಕ್ಷಿ ದಿನ’ದ ಅಂಗವಾಗಿ, ಅಳಿವಿನಂಚಿನಲ್ಲಿರುವ ಪಕ್ಷಿ ಸಂಕುಲದ ರಕ್ಷಣೆ ಮತ್ತು ಪರಿಸರ ಸಮತೋಲನದ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಈ ಬಾರಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಖ್ಯಾತ ಪಕ್ಷಿ ತಜ್ಞ ರಾಹುಲ್ ಭಾವಾಜಿ ತಿಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನೊಬೆಲ್‌ ಪ್ರಶಸ್ತಿ ಸರಣಿ | ಭಾರತೀಯ ಮೂಲದ ದಕ್ಷಿಣ...

ಈ ಬಾರಿಯ ಶಾಂತಿ ನೊಬೆಲ್‌ ಪ್ರಶಸ್ತಿಯನ್ನು ಶಾಂತಿ ಮತ್ತು ಅಂತಾರಾಷ್ಟ್ರೀಯ ಕಾನೂನನ್ನು ಉತ್ತೇಜಿಸುವ ನಿಟ್ಟಿನಲ್ಲಿ ನಡೆಸಿದ ಪ್ರಯತ್ನಗಳಿಗಾಗಿ, ಮಾನವ ಹಕ್ಕುಗಳ ರಕ್ಷಣೆಗಾಗಿ ಜೀವನವನ್ನೇ ಮುಡಿಪಾಗಿಟ್ಟ ಭಾರತೀಯ ಮೂಲದ ದಕ್ಷಿಣ ಆಫ್ರಿಕಾದ ಡಾ. ನವನೀತಮ್‌...

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಇತ್ತೀಚಿನ ವರ್ಷಗಳಲ್ಲಿ ಮಾನವನ ಹಸ್ತಕ್ಷೇಪ ಹಾಗೂ ಪರಿಸರ ಬದಲಾವಣೆಯಿಂದಾಗಿ ಪಕ್ಷಿಗಳ ಸಂಖ್ಯೆ ಗಣನೀಯವಾಗಿ ಕ್ಷೀಣಿಸುತ್ತಿದೆ. ಈ ಹಿನ್ನೆಲೆಯಲ್ಲಿ ಅವುಗಳ ನೈಸರ್ಗಿಕ ವಾಸಸ್ಥಾನಗಳ ರಕ್ಷಣೆ ಮತ್ತು ಜೀವವೈವಿಧ್ಯದ ಮಹತ್ವವನ್ನು ಜನಸಾಮಾನ್ಯರಿಗೆ ಮನವರಿಕೆ ಮಾಡಿಕೊಡುವುದು ಇಂದಿನ ತುರ್ತು ಅಗತ್ಯವಾಗಿದೆ.

1000429165
ರಾಹುಲ್ ಭಾವಜಿ

ಈ ನಿಟ್ಟಿನಲ್ಲಿ ದಾಂಡೇಲಿಯ ಅರಣ್ಯ ಇಲಾಖೆಯ ವತಿಯಿಂದ ಜನವರಿ 16 ಮತ್ತು 17 ರಂದು ಆಯೋಜಿಸಲಾಗಿರುವ ‘ಹಾರ್ನ್‌ಬಿಲ್ ಪಕ್ಷಿ ಹಬ್ಬ’ವು ಪ್ರಕೃತಿ ಪ್ರೇಮಿಗಳಲ್ಲಿ ಹೊಸ ಸಂಚಲನ ಮೂಡಿಸಲಿದೆ. ದಕ್ಷಿಣ ಭಾರತದ ಪ್ರಮುಖ ಆಕರ್ಷಣೆಯಾಗಿರುವ ಈ ಹಾರ್ನ್‌ಬಿಲ್ ಹಬ್ಬಕ್ಕೆ ವಿವಿಧ ರಾಜ್ಯಗಳ ಪಕ್ಷಿ ವೀಕ್ಷಕರು, ಸಂಶೋಧಕರು ಹಾಗೂ ಛಾಯಾಗ್ರಾಹಕರು ಆಗಮಿಸುವ ನಿರೀಕ್ಷೆಯಿದೆ ಎಂದು ಕಾರ್ಯಕ್ರಮದ ಕುರಿತು ಭಾವಜಿ ಅವರು ಮಾಹಿತಿ ನೀಡಿದರು.

ಸ್ಥಳೀಯ ಯುವ ಸಮುದಾಯಕ್ಕೆ ಹಾಗೂ ಪ್ರಕೃತಿ ಬಗ್ಗೆ ಆಸಕ್ತಿಯುಳ್ಳವರಿಗೆ ಇದೊಂದು ಅತ್ಯುತ್ತಮ ಶೈಕ್ಷಣಿಕ ವೇದಿಕೆಯಾಗಲಿದೆ ಎಂದು ರಾಹುಲ್ ಭಾವಾಜಿ ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ಸುದ್ದಿ ಓದಿದ್ದೀರಾ? ಶಿರಸಿ | ಆಯ್ದ ಹತ್ಯೆಗಳ ಬಗ್ಗೆ ಮಾತ್ರ ಆಕ್ರೋಶವೇಕೆ? ಉಪೇಂದ್ರ ಪೈ–ಅನಂತಮೂರ್ತಿ ಹೆಗಡೆಗೆ ಅರ್ಜುನ್ ಮಿಂಟಿ ನೇರ ಪ್ರಶ್ನೆ

ಪಕ್ಷಿ ವೀಕ್ಷಣೆ ಎಂಬುದು ಕೇವಲ ಕಾಲಹರಣದ ಹವ್ಯಾಸವಲ್ಲ, ಅದೊಂದು ರೋಮಾಂಚಕಾರಿ ವೈಜ್ಞಾನಿಕ ಅಧ್ಯಯನ” ಎನ್ನುತ್ತಾರೆ ಭಾವಾಜಿ. ಕಾಡಿನ ಮೌನದಲ್ಲಿ ಪಕ್ಷಿಗಳ ಕಲರವ ಆಲಿಸುವುದು ಮನಸ್ಸಿಗೆ ನೆಮ್ಮದಿ ನೀಡುವುದಲ್ಲದೆ, ದೈಹಿಕ ಆರೋಗ್ಯಕ್ಕೂ ಪೂರಕವಾಗಿದೆ.

ಪಕ್ಷಿಗಳ ಆಹಾರ ಪದ್ಧತಿ, ಗೂಡು ಕಟ್ಟುವ ಕಲೆ, ಅವುಗಳ ಸಂತಾನೋತ್ಪತ್ತಿ ಕ್ರಿಯೆ ಹಾಗೂ ಬೇಟೆಯಾಡುವ ಕೌಶಲ್ಯಗಳನ್ನು ಹತ್ತಿರದಿಂದ ಗಮನಿಸುವುದು ಒಂದು ಅಪರೂಪದ ಅನುಭವ. ಇಂತಹ ಸೂಕ್ಷ್ಮ ವಿಷಯಗಳನ್ನು ದಾಖಲಿಸಿಕೊಳ್ಳುವುದು ಪ್ರವಾಸೋದ್ಯಮದ ಬೆಳವಣಿಗೆಗೂ ಪೂರಕವಾಗಲಿದೆ.

ಪ್ರಕೃತಿಯ ಅತಿಥಿಗಳಾದ ಪಕ್ಷಿಗಳನ್ನು ಪ್ರೀತಿಸೋಣ ಮತ್ತು ಅವುಗಳ ಸಂರಕ್ಷಣೆಗೆ ಕೈಜೋಡಿಸೋಣ ಎಂಬ ಆಶಯದೊಂದಿಗೆ ದಾಂಡೇಲಿಯ ಈ ಪಕ್ಷಿ ಹಬ್ಬಕ್ಕೆ ಅರಣ್ಯ ಇಲಾಖೆ ಮತ್ತು ಪಕ್ಷಿ ಪ್ರೇಮಿಗಳು ಸ್ವಾಗತ ಕೋರುತ್ತಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆಡಳಿತದಲ್ಲಿ ಪಾರದರ್ಶಕತೆಗೆ ಮಾಹಿತಿ ಹಕ್ಕು ಕಾಯ್ದೆ ಪ್ರಮುಖ ಅಸ್ತ್ರ: ಹಣಮಂತ ಶಿಂದೆ

ಮಾಹಿತಿ ಹಕ್ಕು ಕಾಯ್ದೆಯ ಪರಿಣಾಮಕಾರಿ ಬಳಕೆ, ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಸಾಮಾಜಿಕ...

ಯತ್ನಾಳ್ ವಿರುದ್ಧ ಹೊರ್ತಿ ವಾಗ್ದಾಳಿ; ಅರ್ಜಿ ವಾಪಸ್ ಪಡೆದ ಹಿಂದಿನ ಸತ್ಯ ಬಹಿರಂಗಪಡಿಸಲು ಸವಾಲು

ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬರೆದಿರುವ...

ಆರೋಗ್ಯ ಸುರಕ್ಷತೆಗೆ ಆದ್ಯತೆ ನೀಡಿ: ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ

ಕೊಡಗು ಜಿಲ್ಲೆಯಲ್ಲಿ ಡೆಂಗ್ಯೂ, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಅಗತ್ಯ...

ಉಡುಪಿ | ಯುವಜನರೇ, ನಿರಂತರ ಪರಿಶ್ರಮದಿಂದ ಯಶಸ್ಸಿನ ಮೆಟ್ಟಿಲೇರಿ: ಪ್ರಕಾಶ್ ಶೆಟ್ಟಿ

ಯುವಜನರು ನಿರಂತರ ಪ್ರಯತ್ನದ ಮೂಲಕ ಜೀವನದಲ್ಲಿ ಒಂದೊಂದೇ ಮೆಟ್ಟಿಲು ಏರುತ್ತಾ ಸಾಗಿದರೆ...