ಎಸ್‌ ಎಂ ಕೃಷ್ಣ ನಿವಾಸಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದ ಡಿಸಿಎಂ ಡಿ ಕೆ ಶಿವಕುಮಾರ್‌

Date:

ವಿಧಾನಸಭೆ ಅಧಿವೇಶನ ಆರಂಭಕ್ಕೂ ಮೊದಲು ಮಾಜಿ ಮುಖ್ಯಮಂತ್ರಿ ಎಸ್‌ ಎಂ ಕೃಷ್ಣ ಅವರ ಮನೆಗೆ ಭೇಟಿ ನೀಡಿದ್ದ ನೂತನ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಭೇಟಿ ನೀಡಿ ಆಶೀರ್ವಾದ ಪಡೆದರು.

ಎಸ್ ಎಂ ಕೃಷ್ಣ ನಿವಾಸದ ಬಳಿ ಸುದ್ದಿಗಾರರು ಜೊತೆಗೆ ಮಾತನಾಡಿದ ಡಿಕೆಶಿ, “ವಿಧಾನಸಭೆ ನೂತನ ಸದಸ್ಯರಾಗಿ ಇಂದು ಪ್ರಮಾಣವಚನ ಸ್ವೀಕಾರ ಮಾಡುವ ನನಗೆ ರಾಜಕೀಯವಾಗಿ ಪ್ರೋತ್ಸಾಹ ನೀಡಿರುವ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ಆಶೀರ್ವಾದ ಪಡೆಯುವುದು ನನ್ನ ಕರ್ತವ್ಯ” ಎಂದರು.

“ಹೀಗಾಗಿ, ಅವರ ನಿವಾಸಕ್ಕೆ ಭೇಟಿ ನೀಡಿ, ಆಶೀರ್ವಾದ ಹಾಗೂ ಮಾರ್ಗದರ್ಶನ ಪಡೆಯಲು ಬಂದಿದ್ದೆ. ಅವರು ‘ಬೆಂಗಳೂರು ಇತಿಹಾಸ’ವೆಂಬ ಪುಸ್ತಕ ನೀಡಿದ್ದಾರೆ. ಕೃಷ್ಣ ಅವರು ಬಹಳ ದೂರದೃಷ್ಟಿಯಿಂದ ಈ ಪುಸ್ತಕ ನೀಡಿದ್ದಾರೆ” ಎಂದು ಹೇಳಿದರು.

ಅಂಡರ್‌ಪಾಸ್‌ಗಳ ಬಗ್ಗೆ ವರದಿ ಪಡೆದು ಮುನ್ನೆಚ್ಚರಿಕೆ ವಹಿಸಬೇಕಿದೆ; ಡಿಕೆಶಿ

ಬೆಂಗಳೂರು ನಗರದ ಪ್ರಮುಖ ಅಂಡರ್‌ಪಾಸ್‌ಗಳ ಕುರಿತು ವರದಿ ತರಿಸಿಕೊಡು ಈ ಪ್ರದೇಶಗಳಲ್ಲಿ ಈ ರೀತಿ ಆಗದ ರೀತಿಯಲ್ಲಿ ಮುನ್ನೆಚ್ಚರಿಕೆ ವಹಿಸಬೇಕಿದೆ. ಪ್ರತಿಯೊಂದು ಜೀವ ಕಾಪಾಡುವುದು ನಮ್ಮ ಕರ್ತವ್ಯ ಎಂದು ಡಿಸಿಎಂ ಡಿ ಕೆ ಶಿವಕುಮಾರ್‌ ಹೇಳಿದರು.

ಈ ಸುದ್ದಿ ಓದಿದ್ದೀರಾ? ಮಂಡ್ಯ | ಚುನಾವಣೆಯಲ್ಲಿ ಕೊಟ್ಟ ಹಣ ಹಂಚಿಲ್ಲದವರು ವಾಪಸ್ ಕೊಡಿ: ನಾರಾಯಣಗೌಡ

ಮಳೆಗೆ ಬ್ಯಾಟರಾಯನಪುರದಲ್ಲಿ 27 ವರ್ಷದ ಯುವಕ ಕೊಚ್ಚಿ ಹೋಗಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ಭಾನುವಾರ ರಾತ್ರಿ ಬೆಂಗಳೂರಿನ ಪ್ರಮುಖ ಪ್ರದೇಶಗಳಲ್ಲಿ ಇಂತಹ ದುರ್ಘಟನೆಯ ನಡೆಯುತ್ತಿರುವುದು ದುರದೃಷ್ಟಕರ. ನಾವು ಎಲ್ಲೇ ಇದ್ದರೂ ಕಾಲುವೆಗಳ ಬಳಿ ಬಹಳ ಜಾಗೃತವಾಗಿ ಇರಬೇಕು” ಎಂದು ಸಲಹೆ ನೀಡಿದರು.

“ಹಿಂದೆ ಕೇಂದ್ರ ಸರ್ಕಾರ ನರ್ಮ್ ಯೋಜನೆ ಮೂಲಕ ನಗರಗಳ ಮೂಲ ಸೌಕರ್ಯ ಅಭಿವೃದ್ಧಿಗೆ ಬಹಳ ನೆರವು ನೀಡಿದ್ದರು. ನಗರಗಳಿಗೆ ಕೇಂದ್ರ ಸರ್ಕಾರದ ಯೋಜನೆಗಳನ್ನು ಎಷ್ಟರ ಮಟ್ಟಿಗೆ ಸದುಪಯೋಗ ಪಡಿಸಿಕೊಂಡಿದ್ದಾರೆ ಎಂದು ನೋಡಬೇಕಿದೆ” ಎಂದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈಸೂರು | ಕೆರೆ ತುಂಬಿಸುವ ಯೋಜನೆ ಮಂದಗತಿ; ಅಧಿಕಾರಿಗಳಿಗೆ ಸಚಿವರ ತರಾಟೆ

ಜುಲೈ ವೇಳೆಗೆ ಕಾಮಗಾರಿ ಪೂರ್ಣಗೊಳಿಸಲು ಸೂಚನೆ ಮೈಸೂರು ಜಿಲ್ಲೆಯ 133 ಕೆರೆ, 17...

ಪೊಲೀಸರು ಹಣೆಗೆ ಕುಂಕುಮ ಇಡುವಂತಿಲ್ಲವೇ? ಗೃಹ ಸಚಿವರ ಸ್ಪಷ್ಟನೆ

ಕೋಮುವಾದ ತಡೆಗೆ ಪೊಲೀಸ್‌ ಇಲಾಖೆಯಲ್ಲಿ ವಿಭಾಗ ರಚಿಸುತ್ತೇವೆ ಎಂದು ಕಾಂಗ್ರೆಸ್‌ ಸರ್ಕಾರ...

ಕೆನಡಾದಲ್ಲಿ ಇಂದಿರಾ ಗಾಂಧಿ ಹತ್ಯೆಯ ಸ್ತಬ್ಧಚಿತ್ರ ಮೆರವಣಿಗೆ; ವಿದೇಶಾಂಗ ಸಚಿವ ಜೈಶಂಕರ್‌ ಆಕ್ರೋಶ

ಕೆನಡಾದ ಬ್ರಾಂಪ್ಟನ್ ನಗರದಲ್ಲಿ ಖಲಿಸ್ತಾನ ಸಂಘಟನೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ...

ಮಣಿಪುರ | ಪ್ರತ್ಯೇಕ ಆಡಳಿತ ಕೋರಿದ್ದ 10 ಶಾಸಕರಿಗೆ ಶೋಕಾಸ್‌ ನೋಟಿಸ್

ರಾಜ್ಯ ವಿಧಾನಸಭೆಯ ಸವಲತ್ತುಗಳು ಮತ್ತು ನೀತಿ ಸಮಿತಿ ಶಾಸಕರಿಗೆ ಶೋಕಾಸ್‌ ನೋಟಿಸ್ ಕುಕಿ...