ಗದಗ | ಮನುಸ್ಮೃತಿ ಸುಟ್ಟಿರುವುದು ಭಗವದ್ಗೀತೆಯಲ್ಲಿಯ ಅಸಮಾನತೆಯನ್ನು ಸುಟ್ಟಂತೆ: ಬಂಡಾಯ ಸಾಹಿತಿ ಬಸೂ

Date:

“ಅಸಮಾನತೆ ಸಾರುವ ಮನುಸ್ಮೃತಿ ಸುಡುವುದು ಸಣ್ಣ ವಿಷಯವಲ್ಲ. ಈ ಹೆಣ್ಣು-ಗಂಡನ್ನೂ ಅಸಮಾನತೆ ನೋಡಲಾಯಿತು. ಬಾಬಾ ಸಾಹೇಬ್‌ರು ಮನುಸ್ಮೃತಿಯನ್ನ ಬಿಟ್ಟು ಬೇರೆ ಗ್ರಂಥಗಳನ್ನು ಸುಡಲಿಲ್ಲವೇಕೆ? ಅದರಲ್ಲಿರುವ ಅಸಮಾನತೆ, ಭೇದಭಾವ ಬೇರೆ ಗ್ರಂಥಗಳಲ್ಲಿ ಇಲ್ಲ. ಮನುಸ್ಮೃತಿ ಸುಟ್ಟಿರುವುದು ಭಗವದ್ಗೀತೆಯಲ್ಲಿರುವ ಅಸಮಾನತೆಯನ್ನು ಸುಟ್ಟಂತೆ” ಎಂದು ಪ್ರಗತಿಪರ ಚಿಂತಕ, ಬಂಡಾಯ ಸಾಹಿತಿ ಬಸವರಾಜ ಸೂಳಿಬಾವಿ ಹೇಳಿದರು.

- Advertisement -

ಗದಗ ಪಟ್ಟಣದ ಗಾಂಧಿ ವೃತ್ತದಲ್ಲಿ ‌ದಲಿತ ಸಂಘಟನೆಗಳ ಒಕ್ಕೂಟ ವತಿಯಿಂದ ಮನುಸ್ಮೃತಿ ದಹನ್ ದಿವಸವನ್ನು ‘ಮನುಸ್ಮೃತಿ’ ಸುಡುವ ಮೂಲಕ ‌ಆಚರಿಸಲಾಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

ಎಸ್‌ಐಆರ್‌ | 13 ಕೋಟಿ ಮತಗಳ ಮಾರಣಹೋಮ

ಭಾರತೀಯ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಅತ್ಯಂತ ಪ್ರಮುಖ ಅಡಿಪಾಯವೇ ಮತದಾನದ ಹಕ್ಕು. ದೇಶದ ಪ್ರಜಾಪ್ರಭುತ್ವದ ಮೌಲ್ಯಗಳು ಉಳಿದುಕೊಂಡಿರುವುದೇ ಚುನಾವಣಾ ವ್ಯವಸ್ಥೆಯ ಮೇಲಿರುವ ಸಾರ್ವಜನಿಕರ ಅಪಾರ ನಂಬಿಕೆಯಿಂದ. ಆದರೆ, ಚುನಾವಣಾ ಆಯೋಗವು (ECI) ದೇಶಾದ್ಯಂತ ಜಾರಿಗೆ...

ಬಂಡಾಯ ಹೊರಾಟಗಾರ ಲಡಾಯಿ ಪ್ರಕಾಶಕ ಬಸವರಾಜ್ ಸೂಳೆಬಾವಿ ಮಾತನಾಡಿ, “1927 ಡಿಸೆಂಬರ್ 25 ರಂದು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು “ಮನುಸ್ಮೃತಿ” ಸುಟ್ಟಿದ್ದು ಈ ದೇಶದ ಅಸಮಾನತೆ ಸುಟ್ಟ ದಿನ. ಈ ದೇಶ ಸಮಾನತೆಯಿಂದ ಕೂಡಿರುವಂತದ್ದಲ್ಲ. ಎಂದರು.

“ಮನುಷ್ಯನನ್ನೇ ಮನುಷ್ಯನನ್ನಾಗಿ ಕಾಣದ ದೇಶವಿದು. ಒಬ್ಬರು ಇನ್ನೊಬ್ಬರನ್ನು ಸಮಾನತೆಯಿಂದ ನೋಡದ ದೇಶವಿದು. ಎಲ್ಲರನ್ನೂ ಜಾತಿಯಿಂದ, ಜಾತಿ ಕಾರಣದ ಅಸಮಾನತೆಯಿಂದ ಕಂಡ ದೇಶವಿದು. ಬ್ರಾಹ್ಮಣರು ಶ್ರೇಷ್ಠ, ಉಳಿದವರು ಕನಿಷ್ಠವೆಂದು ಕಂಡಂತ ದೇಶವಿದು. ಈ ರೀತಿ ಅಸಮಾನತೆಯನ್ನು ಎತ್ತಿ ಹಿಡಿಯುವ ಮನುಸ್ಮೃತಿಯನ್ನು ಸುಡುವುದರ ಮೂಲಕ ಸಮಾನತೆ ಸಾರಿದರೆಂದು ಎಲ್ಲರೂ ತಿಳಿಯಬೇಕು” ಎಂದು ಹೇಳಿದರು.

“ಗಂಡು-ಹೆಣ್ಣಿನ ನಡುವೆ ಸಮಾನತೆ ಬರಬೇಕು ಎಂದು ಸಂವಿಧಾನ ಬಂದ ಮೇಲೆ ಬಂದಿದೆ ಎಂದು ನಾವೆಲ್ಲ ತಿಳಿದಿದ್ದೆವೆ. ಆದರೆ, ಇದು 1927ರಲ್ಲೇ ಬಾಬಾ ಸಾಹೇಬ್‌ರಿಗೆ ಈ ಆಲೋಚನೆ ಬಂದಿತ್ತು. ಈ ವಿಚಾರಕ್ಕೆ ಬೆಂಬಲ ಕೊಟ್ಡವರು ಮಹಾಡ್‌ನಲ್ಲಿ ಸಮಾವೇಶ ಆದ ಸಂದರ್ಭದಲ್ಲಿ ಮನುಸ್ಮೃತಿ ಸುಡಲು ಠರಾವು ಮಾಡಿದವರು ಚಿತ್ಪಾವನ ಬ್ರಾಹ್ಮಣ ಸಿ‌.ಎನ್. ಸಹಸ್ರ ಪುತೆ ಮಾಡಿದರು. ಪಿ‌.ಎನ್.ರಾಜಬೊದೆ ಎಂಬುವವರು ಅದಕ್ಕೆ ಅನುಮೋದನೆ ಮಾಡಿದರು” ಎಂದು ಹೇಳಿದರು.

ದಲಿತ ಕಲಾ ಮಂಡಳಿ ಕಲಾವಿದ ಶರೀಫ್ ಮಾತನಾಡಿ, “ಸಾವಿರಾರು ವರ್ಷಗಳಿಂದ ಈ ದೇಶದಲ್ಲಿ ಮೇಲು-ಕೀಳಿನಿಂದ ಜನರನ್ನು ವಿಂಗಡಿಸುತ್ತಾ ಬಂದಿದೆ. ಇಂದಿಗೂ ಜಾತಿ ಆಧಾರದಲ್ಲಿ ಮರ್ಯಾದೆ ಹತ್ಯಗಳು ಅದು ಮನುಸ್ಮೃತಿಯ ಒಂದು ಭಾಗವೇ ಅಗಿದೆ. ಹೆಣ್ಣು-ಗಂಡುಗಳ ಮಧ್ಯ ಬೇಧಭಾವ ಹುಟ್ಟು ಹಾಕಿ ಹೆಣ್ಣು ಅಡಿಗೆ ಮನೆಗೆ ಸೀಮೀತ ಎಂಬ ಕಟ್ಟಳೆಯನ್ನು ನಿರ್ಮಿಸಿದ್ದು ಈ ಮನುಸ್ಮೃತಿ ಇದನ್ನು ಸುಡುವುದರ ಮೂಲಕ ಬಾಬಾ ಸಾಹೇಬ್‌ರು 1927ರಲ್ಲಿ ಅಸಮಾನತೆ ಸಾರುವ ಮನುಸ್ಮೃತಿ ಸುಡುವುದರಿಂದ ಸಮಾನತೆಗೆ ಮೊದಲ ಚಾಲನೆ ನೀಡಿದರು” ಎಂದರು.

ಈ ಸುದ್ದಿ ಓದಿದ್ದೀರಾ? ಮನರೇಗಾ ಬದಲಿಗೆ ವಿಬಿ-ಜಿ ರಾಮ್‌ಜಿ; ಗಾಂಧಿ ಕನಸಿಗೆ ಕೊಳ್ಳಿ ಇಟ್ಟ ಕೇಂದ್ರ

ಈ ಸಂದರ್ಭದಲ್ಲಿ ಅನಂದ ಸಿಂಗಾಡೆ, ಶಿವಾನಮದ ತಮ್ಮಣ್ಣವರ, ಅನಿಲ್ ಕಾಳೆ, ಪರಶು ಕಾಳೆ, ಬಾಲರಾಜ್ ಅಳಂದ, ಯಲ್ಲಪ್ಪ ರಾಮಗೇರಿ, ಮುತ್ತು ಬಿಳಿಯೆಲಿ, ಬಸೂ ಬಿಳಿಯೆಲಿ, ರವಿ, ಎಸ್‌.ಎನ್.ಬಳ್ಳಾರಿ, ಶೇಖಣ್ಣ ಕವಳಿಕಾಯಿ, ಮಂಜುನಾಥ, ರಮೇಶ ಕೊಳೂರು ಹಾಗೂ ಇತರರು.

WhatsApp Image 2024 10 05 at 15.43.57 586b60ff min e1728123396595
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | ಆನೆ ದಾಳಿಗೆ ವಾಕಿಂಗ್ ತೆರಳಿದ್ದ ವ್ಯಕ್ತಿ ಬಲಿ

ಇಂದು ಮುಂಜಾನೆ ವಾಕಿಂಗ್ ತೆರಳಿದ್ದ ವ್ಯಕ್ತಿಯೊಬ್ಬರು ಆನೆ ದಾಳಿಗೆ ಮೃತಪಟ್ಟಿರುವ ಘಟನೆ...

ಮುಂಡಗೋಡ | ಮೊಬೈಲ್ ಅಂಗಡಿ ಕಳ್ಳತನ: ನಾಲ್ವರು ವಿದ್ಯಾರ್ಥಿಗಳ ಬಂಧನ

ಮೊಬೈಲ್ ಅಂಗಡಿಯ ಬೀಗ ಒಡೆದು ವಿವಿಧ ಎಲೆಕ್ಟ್ರಾನಿಕ್ ವಸ್ತುಗಳನ್ನು ಕಳವು ಮಾಡಿದ...

‘ವಿಬಿ-ಜಿ ರಾಮ್‌ ಜಿ’ ಅನುಷ್ಠಾನದಲ್ಲಿ ಎಡವಟ್ಟು! ಕೂಲಿ ಸಿಗದೆ ಕಂಗಾಲಾದ ಬಡ ಕಾರ್ಮಿಕರು

ಗ್ರಾಮೀಣ ಬಡ ಕುಟುಂಬಗಳಿಗೆ ಆಸರೆಯಾಗಬೇಕಿದ್ದ ‘ವಿಬಿ-ಜಿ ರಾಮ್ ಜಿ’ (VB-G RAM...

ಹೊನ್ನಾವರ | ಬಾಡಿಗೆ ಹಣ ಕೇಳಿದ್ದಕ್ಕೆ ಹಲ್ಲೆ, ಅವಾಚ್ಯ ಶಬ್ದಗಳಿಂದ ನಿಂದನೆ: ಪ್ರಕರಣ ದಾಖಲು

ಬಾಕಿ ಉಳಿದಿದ್ದ ಬಾಡಿಗೆ ಹಣ ನೀಡುವಂತೆ ಕೇಳಿದ ವ್ಯಕ್ತಿಗೆ ಅವಾಚ್ಯ ಶಬ್ದಗಳಿಂದ...