ಗದಗ | ಮಹರ್ಷಿ ವಾಲ್ಮೀಕಿ ಜಯಂತಿ

Date:

ಮಹರ್ಷಿ ವಾಲ್ಮೀಕಿ ಅವರು ರಚಿಸಿದ ರಾಮಾಯಣವನ್ನು ಪ್ರತಿಯೊಬ್ಬರೂ ಓದಿ ಅದರಲ್ಲಿನ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ವಿಧಾನ ಪರಿಷತ ಸದಸ್ಯ ಎಸ್ ವಿ ಸಂಕನೂರ ಹೇಳಿದರು.

ಗದಗ ಜಿಲ್ಲಾಡಳಿತ ಭವನದಲ್ಲಿ ಶನಿವಾರದಂದು ಜರಗಿದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಮಾತನಾಡಿದರು.

“ದೇಶದ ಇತಿಹಾಸದಲ್ಲಿ ಪ್ರಥಮವಾಗಿ ಕಾವ್ಯ ರೂಪದಲ್ಲಿರುವ ದೊಡ್ಡ ಗ್ರಂಥ ರಾಮಾಯಾಣ. ಇದು ಪ್ರಥಮ ಗ್ರಂಥವಾಗಿದ್ದು, ಇದನ್ನು ರಚಿಸಿದ ಮಹರ್ಷಿ ಅವರನ್ನು ಆದಿಕವಿ ಎನ್ನುತ್ತೇವೆ” ಎಂದು ತಿಳಿಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ವಾಲ್ಮೀಕಿ ಅವರ ಜೀವನ ಚರಿತ್ರೆಯನ್ನು ನಾವು ಅರಿತುಕೊಳ್ಳಬೇಕು. ಅವರ ಜೀವನದಲ್ಲಿ ನಡೆದಂತಹ ಘಟನೆಯನ್ನು ನೆನಪಿಸಿಕೊಳ್ಳುತ್ತಾ ಅವರ ಜೀವನ ನಿರ್ವಹಣೆಗಾಗಿ ಮಾಡುತ್ತಿದ್ದ ಬೇಟೆಗಾರಿಕೆ ವೃತ್ತಿಯಿಂದ ಮಹರ್ಷಿಗಳು ಹೇಗಾದರು ಎಂಬುದನ್ನು ನಾವು ಅರಿತುಕೊಳ್ಳಬೇಕಾಗಿದೆ” ಎಂದು ತಿಳಿಸಿದರು.

“ಮನುಷ್ಯ ಸಹಜವಾಗಿ ತಪ್ಪುಗಳನ್ನು ಮಾಡುತ್ತಾನೆ. ಆ ತಪ್ಪುಗಳನ್ಬು ತಿದ್ದಿ ನಡೆಯುವುದೇ ಮುಖ್ಯ. ನಾರದ ಮುನಿಗಳ ಹಿತೋಪದೇಶದಿಂದ ತನ್ನ ತಪ್ಪುಗಳನ್ನು ತಿದ್ದಿಕೊಳ್ಳುವ ಮೂಲಕ ಬದಲಾದ ರತ್ನಾಕರರು ಮಹರ್ಷಿ ವಾಲ್ಮೀಕಿಯಾದರು. ಅವರು ರಚಿಸಿದ ರಾಮಾಯಣವನ್ನೂ ಪ್ರತಿಯೊಬ್ಬರು ಒದಬೇಕು. ಅದರಲ್ಲಿನ ಅಣ್ಣ-ತಮ್ಮ, ಗಂಡ-ಹೆಂಡತಿಯ ಸಂಬಂಧಗಳ ಕುರಿತು ಉಲ್ಲೇಖಿಸಲಾಗಿದ್ದು, ಇದನ್ನು ಅರಿತು ನಾವು ಜೀವನ ನಡೆಸಬೇಕು. ರಾಮಾಯಣವನ್ನು ಮುಖ್ಯವಾಗಿ ಜನ ಪ್ರತಿನಿಧಿಗಳು ಓದಿ ಅರಿತುಕೊಂಡು ರಾಜ ತನ್ನ ಸಾಮ್ರಾಜ್ಯದ ಪ್ರಜೆಗಳ ಜೊತೆ ಯಾವ ರೀತಿ ಸಂಬಂಧಗಳನ್ನು ಹೊಂದಿರಬೇಕು ಎಂಬುದನ್ನು ಅರುತುಕೊಳ್ಳಬೇಕಾಗಿದೆ” ಎಂದರು.

“ಮಹಾತ್ಮ ಗಾಂಧೀಜಿಯವರು ಕೂಡ ರಾಮಾಯಣದಿಂದ ಪ್ರಭಾವಿತರಾಗಿ ರಾಮ ರಾಜ್ಯದ ಕನಸು ಕಂಡಿದ್ದರು. ರಾಮಾಯಣ ಹಾಗೂ ವಾಲ್ಮೀಕಿ ಅವರ ಜೀವನದ ತತ್ವಾದರ್ಶಗಳನ್ನು ಅರಿತುಕೊಂಡು ಆದರ್ಶ, ಸುಂಸ್ಕೃತ ಜೀವನ ನಡೆಸಬೇಕು. ವ್ಯಕ್ತಿ ಸುಂಸ್ಕೃತವಾದರೆ ಸಮಾಜ ಸುಧಾರಣೆಯಾಗುತ್ತದೆ. ಆದ್ದರಿಂದ ರಾಮಾಯಣವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು” ಎಂದರು.

“ಆಧುನಿಕ ಯುಗದಲ್ಲಿ ವಿದ್ಯೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ವಿದ್ಯೆಯಿಂದ ಸಮಾಜದಲ್ಲಿನ ಅಸಮಾನತೆ ದೂರ ಮಾಡಬಹುದು. ಸರ್ಕಾರಗಳು ಇಂದು ಪರಿಶಿಷ್ಟರ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದು, ಪ್ರತಿಯೊಬ್ಬರು ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆಗೇರಬೇಕು. ಈ ಕುರಿತು ಪಾಲಕರು ತಮ್ಮ ಮಕ್ಕಳಿಗೆ ಉತ್ತಮವಾದ ಮಾರ್ಗದರ್ಶನ ನೀಡಿ ಪ್ರೇರಣೆ ನೀಡಬೇಕು” ಎಂದು ಎಸ್ ವಿ ಸಂಕನೂರ ಕರೆ ನೀಡಿದರು.

ಈ ಸುದ್ದಿ ಓದಿದ್ದೀರಾ? ತುಮಕೂರು | ಹೇಮಾವತಿ ನಾಲೆ ಕಳಪೆ ಕಾಮಗಾರಿ ಆರೋಪ; ರೈತರ ಪ್ರತಿಭಟನೆ

ನಿವೃತ್ತ ನ್ಯಾಯಾಧೀಶ ಡಿ ವೈ ಬಸಾಪುರ, ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷೆ ಉಷಾ ದಾಸರ, ಉಪಾಧ್ಯಕ್ಷೆ ಸುನಂದಾ ಬಾಕಳೆ, ಜಿಲ್ಲಾಧಿಕಾರಿ ವೈಶಾಲಿ ಎಂ ಎಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ‌ ಎಸ್ ನೇಮಗೌಡ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ, ಮಹರ್ಷಿ ವಾಲ್ಮೀಕಿ ಸಂಘದ ಜಿಲ್ಲಾ ಅಧ್ಯಕ್ಷ  ಬಸವರಾಜ ಬೆಳದಡಿ, ತಾಲೂಕು ಅಧ್ಯಕ್ಷ ಆದಪ್ಪನವರ, ಸಮುದಾಯದ ಗಣ್ಯರು, ಮುಖಂಡರು, ಸಾರ್ವಜನಿಕರು, ವಿವಿಧ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಹಾಜರಿದ್ದರು.

ಇದೇ ಸಂದರ್ಭದಲ್ಲಿ ಪರಿಶಿಷ್ಟ ಪಂಗಡದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ, ಪ್ರಬಂಧ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಿದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದರ್ಶನ್ ಪ್ರಕರಣ | ಕಾನೂನು ಉಲ್ಲಂಘಿಸೋರು ಶ್ರೀಮಂತರು – ನರಳೋರು ಬಡವರು; ನಟಿ ರಮ್ಯ ಟ್ವೀಟ್

ರಾಜ್ಯದಲ್ಲಿ ಇತ್ತೀಚೆಗೆ ಹಲವು ಪ್ರಕರಣಗಳು ಭಾರೀ ಸದ್ದು ಮಾಡುತ್ತಿವೆ. ಸಿನಿಮಾ ತಾರೆಯರು,...

ದಾವಣಗೆರೆ | ನವವಿವಾಹಿತೆ ಮೇಲೆ ಅತ್ಯಾಚಾರ ಯತ್ನ – ಚಾಕು ಇರಿತ

ನವವಿವಾಹಿತೆ ಮೇಲೆ ಆರೋಪಿಯೊಬ್ಬ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯ ಕುತ್ತಿಗೆಗೆ ಚಾಕುವಿನಿಂದ ಇರಿದ...

ಹಾವೇರಿ | ಬಸ್‌ ನಿಲ್ಲಿಸದ ಹಾಗೂ ಅಸಭ್ಯವಾಗಿ ವರ್ತಿಸುವ ಚಾಲಕ-ನಿರ್ವಾಹಕರ ವಿರುದ್ಧ ಕ್ರಮಕ್ಕೆ ಆಗ್ರಹ

ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನ ಹೊರವಲಯದ ಎಸ್.ಆರ್.ಕೆ ಬಡಾವಣೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ...