ಗದಗ | ದಕ್ಷ ಅಧಿಕಾರಿ ಶಂಕರ ಹುಲ್ಲಮ್ಮನವರನ್ನು ವರ್ಗಾವಣೆ ಮಾಡದಂತೆ ಜಿಲ್ಲಾಧಿಕಾರಿಗೆ ಮನವಿ

Date:

“ಮುಂಡರಗಿ ಪಟ್ಟಣದ ಅಭಿವೃದ್ಧಿ ಹಿತದೃಷ್ಟಿಯಿಮಲಂದ ನಿಷ್ಠಾವಂತ ಹಾಗೂ ದಕ್ಷ ಆಡಳಿತ ಅಧಿಕಾರಿಯಾದ ಶಂಕರ ಹುಲ್ಲಮ್ಮನವರ ವರ್ಗಾವಣೆ ಆದೇಶವನ್ನು ರದ್ದು ಮಾಡಿ, ಪುನಃ ಮುಂಡರಗಿ ಪಟ್ಟಣಕ್ಕೆ ಮುಖ್ಯಾಧಿಕಾರಿಯಾಗಿ ಮುಂದುವರೆಸಬೇಕು” ಎಂದು ವಿಶ್ವ ಕನ್ನಡ ರಕ್ಷಣಾ ವೇದಿಕೆ ಮುಖಂಡರು ಮನವಿ ಮಾಡಿದರು.

- Advertisement -

ಗದಗ ಪಟ್ಟಣದ ಜಿಲ್ಲಾಡಳಿತ ಭವನದಲ್ಲಿ ವಿಶ್ವ ಕನ್ನಡ ರಕ್ಷಣಾ ವೇದಿಕೆ ವತಿಯಿಂದ ಮುಂಡರಗಿ ಪಟ್ಟಣದ ಸಾರ್ವಜನಿಕರ ಹಿತದೃಷ್ಠಿಗಾಗಿ ಪಟ್ಟಣದ ಪುರಸಭೆ ಮುಖ್ಯಾಧಿಕಾರಿಗಳು ಶಂಕರ ಹುಲ್ಲಮ್ಮನವರ ವರ್ಗಾವಣೆ ಖಂಡಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

“ಬಹಳ ವರ್ಷಗಳ ಕಾಲದ ನಂತರ ಇಂತಹ ನಿಷ್ಟಾವಂತ ಅಧಿಕಾರಿ ಬಂದಿದ್ದಾರೆ. ಮುಂಡರಗಿ ಪಟ್ಟಣದ ಸಾರ್ವಜನಿಕರ ಕಷ್ಟ-ನಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಿ ಯಾವುದೇ ಜಾತಿ, ಧರ್ಮ, ಬೇಧ, ಭಾವ, ಮಾಡದೇ ಎಲ್ಲರಲ್ಲಿ ತಾವು ಒಬ್ಬರು ಎಂದು ಭಾವಿಸಿ ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಎಲ್ಲರಿಗೂ ಒಳ್ಳೆಯ ಕೆಲಸ ಮಾಡುತ್ತಾ ಬಂದಿದ್ದಾರೆ” ಎಂದು ಹೇಳಿದರು.

“ಸದರಿ ಮುಖ್ಯಾಧಿಕಾರಿಗಳು “ಕಾಯಕವೇ ಕೈಲಾಸ” ಎಂಬ ವಚನದಂತೆ ನಡೆದುಕೊಳ್ಳುತ್ತಾ ‘ಸರಕಾರದ ಕೆಲಸ ದೇವರ ಕೆಲಸ’ ಎಂದು ಭಾವಿಸಿ ಕೆಲವೇ ತಿಂಗಳಲ್ಲಿ ತಮ್ಮ ಸಿಬ್ಬಂದಿಗಳ ಜೊತೆ ಹಾಗೂ ಸಾರ್ವಜನಿಕರ ಜೊತೆ ಒಳ್ಳೆಯ ಸಂಬಂಧ ಹೊಂದಿದ್ದಾರೆ. ಮುಂಡರಗಿ, ಪಟ್ಟಣದ ಅಭಿವೃದ್ಧಿಗೆ ಹಗಲು- ಇರುಳು ಎನ್ನದೇ ಕೆಲಸ ಮಾಡುತ್ತಿರುವ ಸದರಿ ಮುಖ್ಯಾಧಿಕಾರಿಗಳನ್ನು ಏಕಾ ಏಕಿ ವರ್ಗಾವಣೆ ಮಾಡಿ ಸದರಿ ಪಟ್ಟಣದ ಸಾರ್ವಜನಿಕರಿಗೆ ಆಘಾತವನ್ನು ಉಂಟು ಮಾಡಿದೆ” ಎಂದರು

“ಕೂಡಲೇ ಮುಂಡರಗಿ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ ಅವರನ್ನು ವರ್ಗಾವಣೆ ರದ್ದು ಮಾಡಿ, ಮುಂದುವರೆಸಬೇಕು” ಎಂದು ಒತ್ತಾಯಿಸಿದರು.

ಮನವಿ ಸಂದರ್ಭದಲ್ಲಿ ವಿಶ್ವ ಕನ್ನಡ ರಕ್ಷಣಾ ವೇದಿಕೆ ಉಪಾಧ್ಯಕ್ಷ ಯಾಸಿನ್ ಬಗಲಿ, ಗೌರವಾಧ್ಯಕ್ಷರು ರಿಯಾಜ್ ಬಗಲಿ, ಮುಂಡರಗಿ ತಾಲೂಕು ಅಧ್ಯಕ್ಷರು ಮಧುಮತಿ ಮಡಿವಾಳರ, ಪೂಜಾ ಇಟಗಿಮಠ, ರಾಜೇಶ್ವರಿ ಪಾಟೀಲ್, ಶಬಾನ, ಲಿಂಗರಾಜ ಹಿರೇಮನಿ, ಧನಬಂತ ಕೋಳಿಯವರ ಇನ್ನೂ ಅನೆಕರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆರೋಗ್ಯ ಸುರಕ್ಷತೆಗೆ ಆದ್ಯತೆ ನೀಡಿ: ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ

ಕೊಡಗು ಜಿಲ್ಲೆಯಲ್ಲಿ ಡೆಂಗ್ಯೂ, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಅಗತ್ಯ...

ಉಡುಪಿ | ಯುವಜನರೇ, ನಿರಂತರ ಪರಿಶ್ರಮದಿಂದ ಯಶಸ್ಸಿನ ಮೆಟ್ಟಿಲೇರಿ: ಪ್ರಕಾಶ್ ಶೆಟ್ಟಿ

ಯುವಜನರು ನಿರಂತರ ಪ್ರಯತ್ನದ ಮೂಲಕ ಜೀವನದಲ್ಲಿ ಒಂದೊಂದೇ ಮೆಟ್ಟಿಲು ಏರುತ್ತಾ ಸಾಗಿದರೆ...

ವಿಜಯನಗರ | ಎಸ್‌ಐಆರ್ ರದ್ದತಿಗೆ ಆಗ್ರಹಿಸಿ ವಿದ್ಯಾರ್ಥಿ-ಯುವಜನ ಸಂಘಟನೆಗಳ ಬೃಹತ್ ಪ್ರತಿಭಟನೆ

ಜನವಿರೋಧಿ ಎಸ್‌ಐಆರ್ (SIR) ರದ್ದುಪಡಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್...

ವಸತಿ ಯೋಜನೆಗಳ ಪ್ರಗತಿಗೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಲು ಜಿಲ್ಲಾಧಿಕಾರಿ ಶ್ರೀರೂಪ ಸೂಚನೆ

ಚಾಮರಾಜನಗರ ಜಿಲ್ಲೆಯಲ್ಲಿ ವಿವಿಧ ವಸತಿ ಯೋಜನೆಗಳಡಿ ಮಂಜೂರಾಗಿರುವ ಮನೆಗಳ ನಿರ್ಮಾಣ ಕಾರ್ಯಕ್ಕೆ...