ಪ್ರಸಕ್ತ ವರ್ಷದ 2025-26ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ಗದಗ ಜಿಲ್ಲೆ ಶೇ 76.65 ಫಲಿತಾಂಶ ದಾಖಲಿಸಿ ರಾಜ್ಯ ಮಟ್ಟದಲ್ಲಿ 30ನೇ ಸ್ಥಾನದಲ್ಲಿದೆ.
2024-25ನೇ ಸಾಲಿನಲ್ಲಿ ಗದಗ ಜಿಲ್ಲೆ ಶೇ 66.64 ಅಂಕ ಗಳಿಸಿ 25ನೇ ಸ್ಥಾನದಲ್ಲಿತ್ತು. ಈ ಬಾರಿ ಶೇ 10.01ರಷ್ಟು ಹೆಚ್ಚು ಫಲಿತಾಂಶ ದಾಖಲಿಸಿದ್ದರೂ, ರಾಂಕಿಂಗ್‌ನಲ್ಲಿ ಇನ್ನಷ್ಟು ಕೆಳಕ್ಕೆ ಕುಸಿದಿದೆ.
ಕಳೆದ ಮೂರು ವರ್ಷಗಳಅಂಕಿ ಅಂಶಗಳನ್ನು ಗಮನಿಸಿದರೆ ಗದಗ ಜಿಲ್ಲೆ ರಾಂಕಿಂಗ್‌ನಲ್ಲಿ ವರ್ಷದಿಂದ ವರ್ಷಕ್ಕೆ ಕುಸಿಯುತ್ತಲೇ ಇರುವುದು ಗೊತ್ತಾಗುತ್ತದೆ.
2022-23ನೇ ಸಾಲಿನಲ್ಲಿ ಶೇ. 66.91 ಫಲಿತಾಂಶ ದಾಖಲಿಸಿ, 30ನೇ ಸ್ಥಾನದಲ್ಲಿತ್ತು. 2023-24ನೇ ಸಾಲಿನಲ್ಲಿ ಗದಗ ಜಿಲ್ಲೆ ಶೇ. 72.86 ಫಲಿತಾಂಶ ದಾಖಲಿಸಿ, ಕೊನೆಯ ಸ್ಥಾನದಲ್ಲಿತ್ತು. 2024-25ನೇ ಸಾಲಿನಲ್ಲಿ ಶೇ. 66.64 ಫಲಿತಾಂಶ ದಾಖಲಿಸಿ, 25ನೇ ಸ್ಥಾನದಲ್ಲಿತ್ತು. ಪ್ರಸಕ್ತ ವರ್ಷ ಶೇ. 76.65 ಫಲಿತಾಂಶ ದಾಖಲಿಸಿ 30ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದು, ಕಳಪೆ ಸಾಧನೆ ಮಾಡಿರುವುದ ಸಾರ್ವಜನಿಕರಲ್ಲಿ ಬೇಸರ ತಂದಿದೆ.




