ಜನರಿಗೆ ಮೊದಲು 15 ಲಕ್ಷ ಕೊ‌ಡಲಿ, ನಂತರ ನಮ್ಮ ಗ್ಯಾರಂಟಿ ಬಗ್ಗೆ ಬಿಜೆಪಿಯವರು ಮಾತನಾಡಲಿ: ಡಿ ಕೆ ಶಿವಕುಮಾರ್

Date:

  • ರಾಮಲಿಂಗಾರೆಡ್ಡಿ ಅವರಲ್ಲಿ ಯಾವುದೇ ಅಸಮಾಧಾವಿಲ್ಲ, ಸುಳ್ಳು ಸುದ್ದಿ ಬೇಡ
  • ‘ಒಂದು ಅಕೌಂಟ್‌ ಮಾಡಿಸಿ ಎಲ್ಲ ತಾಯಂದಿರಿಗೂ 2000 ಹಣ ಹಾಕುತ್ತೇವೆ’

ನಮ್ಮ ಗ್ಯಾರಂಟಿ ಯೋಜನೆಗಳ ಬಗ್ಗೆ ಟೀಕೆ ಮಾಡಿದ್ರೆ ತಾನೇ ಆ ಯೋಜನೆಗಳು ಪ್ರಚಾರ ಆಗೋದು. ಟೀಕಿಸುವವರ ದುಃಖ, ದುಮ್ಮಾನ ಅರ್ಥವಾಗುತ್ತದೆ. ನಾನು ಬಿಜೆಪಿ ಗೆಳೆಯರಿಗೆ ಕೇಳಲು ಇಷ್ಟಪಡುವೆ; ಮೊದಲು ನಮಗೆ 15 ಲಕ್ಷ ಕೊಡಿ ಸಾಕು ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಆಗ್ರಹಿಸಿದರು.

- Advertisement -

ರಾಮಲಿಂಗಾರೆಡ್ಡಿ ಅವರನ್ನು ಭೇಟಿಯಾದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ, “15 ಲಕ್ಷ ಪ್ರತಿಯೊಬ್ಬರ ಅಕೌಂಟ್‌ಗೆ ಮೋದಿ ಹಾಕು‌ತ್ತೇನೆ ಎಂದು ಹೇಳಿದ್ದರಲ್ಲ, ಆ ಮಾತು ಎಲ್ಲಿ ಹೋಯಿತು? ಮೊದಲು ಆ ಬಗ್ಗೆ ಬಿಜೆಪಿಯವರು ಮಾತನಾಡಲಿ. ಮಿಕ್ಕ ಮಾತು ಬೇಡ. ಬರುವ ಪಾರ್ಲಿಮೆಂಟ್‌ ಚುನಾವಣೆಯೊಳಗೆ ಪ್ರತಿಯೊಬ್ಬರಿಗೆ 15 ಲಕ್ಷ ಹಾಕಲಿ” ಎಂದು ಒತ್ತಾಯಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

“ಬಿಜೆಪಿ ಅವರೇ ಹೇಳಿದ್ದರು, ಸಾಲ ಮನ್ನಾ ವಿಚಾರ ಏನಾಯ್ತು? ರೈತರಿಗೆ ಉಚಿತ ವಿದ್ಯುತ ಕೊಡ್ತೀವಿ ಎಂದಿದ್ದರು ಅದೇನಾಯ್ತು? ಮೊದಲು ತಮ್ಮ ಭರವಸೆ ಬಗ್ಗೆ ಮಾತನಾಡಲಿ ಬಿಜೆಪಿ ನಾಯಕರು. ಆಮೇಲೆ ಪ್ರತಿಭಟನೆ, ಆವೇಶದ ಮಾತುಗಳು ಇರಲಿ” ಎಂದರು.

ಈ ಸುದ್ದಿ ಓದಿದ್ದೀರಾ? ಚುನಾವಣೆಯಲ್ಲಿ ಗೆದ್ದು ಮಂತ್ರಿಗಳಾಗಬೇಕಿದ್ದವರು ಸೋಲಿನ ಗಾಯ ಕೆರೆಯುತ್ತಾ ಕೂತಾಗ..

“ಮನೆಯ ಯಜಮಾನತಿಗೆ 2000 ಕೊಡ್ತೀವಿ ಎಂದಿದ್ದೇವೆ. ನಾವು ಇದರಿಂದ ಹಿಂದೆ ಸರಿಯಲ್ಲ. ಒಂದು ಮನೆಯಲ್ಲಿ ಸೊಸೆ ಇದ್ದು, ಅತ್ತೆ ಇದ್ದರೆ ಯಾರು ಯಜಮಾನತಿ? ಒಂದು ವೇಳೆ ನಾವು ಕೊಡುವ ದುಡ್ಡಿಗೆ ಯಾವುದೇ ಗಂಡಸರು ಕೈ ಹಾಕಿದರೆ ಹೇಗೆ? ಅವಿದ್ಯಾವಂತ ಮಹಿಳೆಯರನ್ನು ಯಾಮಾರಿಸುವ ಗಂಡಂದಿರು ಇದ್ದಾರೆ. ಅದಕ್ಕೆ ನೀತಿ ನಿಯಮ ರೂಪಿಸುತ್ತಿದ್ದೇವೆ. ಒಂದು ಅಕೌಂಟ್‌ ಮಾಡಿಸಿ ಎಲ್ಲ ತಾಯಂದಿರಿಗೂ ಹಣ ಹಾಕುತ್ತೇವೆ” ಎಂದು ತಿಳಿಸಿದರು.

“ಒಂದನೇ ತಾರೀಕೆಗೆ ಕ್ಯಾಬಿನೆಟ್‌ ಇದೆ. ಎಲ್ಲ ರೀತಿಯಲ್ಲೂ ಸಲಹೆ ಸೂಚನೆ ತರಲು ಹೇಳಿದ್ದೇವೆ. ಯಾರು ಪ್ರತಿಭಟನೆ ಮಾಡ್ತಾರೋ ಮಾಡಲಿ. ಇದು ಪ್ರಜಾಪ್ರಭುತ್ವ” ಎಂದರು.

ರಾಮಲಿಂಗಾರೆಡ್ಡಿ ಅವರ ಮುನಿಸಿಕೊಂಡಿದ್ದು ನಿಜವೇ ಎಂದು ಪ್ರಶ್ನಿಸಿದಾಗ, “ನಾವು ಬೇರೆ ಪಾರ್ಟಿಗೆ ಹೋಗಿದ್ದರೆ ನಾವು ಏನೇನೋ ಆಗ್ತಿದ್ವಿ. ಸ್ವಾಭಾವಿಕವಾಗಿ ಅಸಮಾಧಾನ ಇರುತ್ತದೆ. ಈಗ ಯಾವ ಗೊಂದಲವು ಇಲ್ಲ. ರಾಮಲಿಗಾರೆಡ್ಡಿ ಈಗ ಎಲ್ಲವನ್ನು ಒಪ್ಪಿಕೊಂಡಿದ್ದಾರೆ” ಎಂದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾವೇರಿ | ನಾಳೆ ಜಿಲ್ಲಾ ಮಟ್ಟದ ಕಾರ್ಯಾಗಾರ

ಸಾವಯವ ಹಾಗೂ ನೈಸರ್ಗಿಕ ಕೃಷಿ ಪದ್ಧತಿಯನ್ನು ಉತ್ತೇಜಿಸುವ ಜೊತೆಗೆ ರೈತರು ಬೆಳೆಯುವ...

‘ದಿಮಾಗಿ ನಕ್ಸಲ್’ ಟೀಕೆಗಳಿಗೆ ಬಗ್ಗದಿರಿ, ಹೋರಾಟ ಮುಂದುವರಿಸಿ: ಪರಿಸರವಾದಿಗಳಿಗೆ ನಿವೃತ್ತ ಸುಪ್ರೀಂ ನ್ಯಾಯಮೂರ್ತಿ ಓಕಾ ಕರೆ

ಪರಿಸರ ರಕ್ಷಣೆ ಮತ್ತು ಸಾಂವಿಧಾನಿಕ ಹಕ್ಕುಗಳಿಗಾಗಿ ಧ್ವನಿ ಎತ್ತುವ ಹೋರಾಟಗಾರರನ್ನು ‘ದಿಮಾಗಿ...

ಶಿರಸಿ | ರಾಜೇಂದ್ರ ಸಿರ್ಸಿಕರ್‌ಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೌರವ

ಶಿರಸಿ: ಪ್ರಾಣಿ-ಪಕ್ಷಿಗಳ ರಕ್ಷಣೆ ಮತ್ತು ಪುನರ್ವಸತಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿರಸಿಯ ರಾಜೇಂದ್ರ...

ಧಾರವಾಡ | ಪೊಲೀಸ್ ಹೆಸರೇಳಿ ರೂ. 15,700 ವಂಚನೆ: ನಾಲ್ಕು ಬೈಕ್‍ಗಳು ನಗದು ವಶ

ಪೊಲೀಸ್ ಹೆಸರೇಳಿ ವ್ಯಕ್ತಿಯೊಬ್ಬರಿಂದ ₹15,700 ಹಣ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ...