ಹಾಸನ | ಪೂರ್ಣಚಂದ್ರ ತೇಜಸ್ವಿ ರಂಗ ಮಂದಿರದಲ್ಲಿ ಮೇ 15ರಂದು ʼಮಲೆಯಾದ್ರಿ ನಾಟಕʼ ಪ್ರದರ್ಶನ

Date:

ಹಾಸನದ ಸಕಲೇಶಪುರ ತಾಲೂಕಿನ ರಕ್ಷದಿ ಗ್ರಾಮದಲ್ಲಿ ಕಳೆದ ಹದಿನೈದು ದಿನಗಳಿಂದ ಪ್ರಾಕೃತಿಕ ರಂಗ ಶಿಬಿರ ನಡೆಯುತ್ತಿದ್ದು, ಕರ್ನಾಟಕದ ಹಲವು ಜಿಲ್ಲೆಗಳ ಶಿಬಿರಾರ್ಥಿಗಳು ಭಾಗವಹಿಸಿದ್ದಾರೆ. ಮೇ 15ರ ಸಂಜೆ 7ಕ್ಕೆ ನಾಟಕ ಪ್ರದರ್ಶನ ಮತ್ತು ಶಿಬಿರದ ಸಮಾರೋಪ ಸಮಾರಂಭ ನಡೆಯಲಿದೆ.

ಶಿಬಿರಾರ್ಥಿಗಳು ಮಲೆನಾಡಿನ ಕಥೆಯನ್ನು ಆಧರಿಸಿ ʼಮಲೆಯಾದ್ರಿ ನಾಟಕʼ ಕಟ್ಟುತ್ತಿದ್ದಾರೆ. ಜತೆಗೆ ಶಿಬಿರಾರ್ಥಿಗಳ ಬದುಕಿನ ಕಥೆಗಳನ್ನು ನಾಟಕದಲ್ಲಿ ನೋಡಬಹುದಾಗಿದೆ. ಕಳೆದ ಹದಿನೈದು ದಿನಗಳಿಂದಲೂ ಈ ಶಿಬಿರ ಯಶಸ್ವಿಯಾಗಿ ನಡೆಯುತ್ತಾ ಬಂದಿದೆ. ಹಾಡು, ಕುಣಿತ, ಚಾರಣ, ಪರಿಸರ, ಫೋಟೋಗ್ರಾಫಿ, ರಂಗಭೂಮಿ ಹೀಗೆ ಹತ್ತು ಹಲವು ವಿಷಯಗಳ ಬಗ್ಗೆ ಪ್ರಕೃತಿಯ ಮಧ್ಯೆ ಸುಂದರವಾದ ಶಿಬಿರ ಮೂಡಿ ಬರುತ್ತಲಿದೆ.

ಶಿಬಿರವನ್ನು ಜೈ ಕರ್ನಾಟಕ ಸಂಘ ಬೆಳ್ಳೆಕೆರೆ ತಂಡ ಆಯೋಜಿಸಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರ್ಕಾರ ಇವರ ಸಹಯೋಗದೊಂದಿಗೆ ನಡೆಸುತ್ತಿದೆ. ಪ್ರಸಾದ್‌ ರಕ್ಷಿದಿರವರು ಶಿಬಿರದ ಸಂಚಾಲಕರಾಗಿದ್ದು, ನವೀನ್‌ ಸಾಣೇಹಳ್ಳಿ ನಾಟಕದ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ನಾಟಕ ಕೊನೆಯ ಹಂತದಲ್ಲಿದ್ದು, ಬುದವಾರ ಸಂಜೆ ನಾಟಕ ಪ್ರದರ್ಶನ ಮತ್ತು ಶಿಬಿರದ ಸಮಾರೋಪ ಸಮಾರಂಭ ನಡೆಯಲಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ಧೀರಾ? ಶಿವಮೊಗ್ಗ | ದಲಿತರ ಭೂಮಿ ಒತ್ತುವರಿ; ಎಂಪಿಎಂ ವಿರುದ್ಧ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ ದಸಂಸ

ಸಮಾರೋಪದಲ್ಲಿ ಖ್ಯಾತ ನ್ಯಾಯವಾದಿ ಸುದೀರ್‌ ಕುಮಾರ್‌ ಮುರೋಳಿಯವರು ಭಾಗವಹಿಸುತ್ತಿದ್ದಾರೆ. ನಾಟಕ ಸಕಲೇಶಪುರದ ರಕ್ಷಿದಿ ಗ್ರಾಮ ಪೂರ್ಣಚಂದ್ರ ತೇಜಸ್ವಿ ರಂಗ ಮಂದಿರದಲ್ಲಿ ನಡೆಯುತ್ತಿದ್ದು, ಉಚಿತ ಪ್ರವೇಶವಿದೆ. ಹಾಗಾಗಿ ಎಲ್ಲರೂ ಭಾಗವಹಿಸಿ ಕಾರ್ಯಕ್ರಮ ಯಶ್ವಿಗೊಳಿಸುವಂತೆ ಜೈ ಕರ್ನಾಟಕ ಸಂಘ ಬೆಳ್ಳೆಕೆರೆ ತಂಡ ವಿನಂತಿಸಿದೆ.

ಹೆಚ್ಚಿನ ಮಾಹಿತಿಗಾಗಿ9448825701

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ವೃದ್ಧರು ಹಾಗೂ ವಿಕಲಚೇತನರ ಬೆಂಬಲ ಸಭೆ

ಪಿಂಚಣಿ ಕಡಿತ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಮತ್ತು ವಿಕಲಚೇತನರಿಗೆ ಉಂಟಾಗುತ್ತಿರುವ...

ಕೋಲಾರ | ಜಡತ್ವಕ್ಕೆ ವಿವೇಕ ನೀಡಿದ ಕುಸ್‌ ಕುಸ್ ದಿಲ್ ಕುಶ್ ನಾಟಕ

ಯಾವುದು ಸ್ಥಿರವಲ್ಲ. ಗಳಿಗೆ ಗಳಿಗೆಯೂ ಬದಲಾಗುತ್ತಿರುತ್ತದೆ. ಸ್ಥಿರವೆಂದು ಭಾವಿಸಿದವನಿಗೆ ಅವನ ತಲೆಯೇ...

ರಾಯಚೂರು | ಮದುವೆಗೆ ಪ್ರಿಯಕರನ ಮನೆಯವರ ವಿರೋಧ : ಮಹಡಿಯಿಂದ ಜಿಗಿದು ಯುವತಿ ಆತ್ಮಹತ್ಯೆ

ಪ್ರೀತಿಸಿದ ಯುವಕನ ಮನೆಯವರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರಿಂದ ಮನನೊಂದ ಯುವತಿ ಮಹಿಳಾ...

ದಕ್ಷಿಣ ಕನ್ನಡ | ಭಾರೀ ಮಳೆ; ಕಲ್ಲಡ್ಕದಲ್ಲಿ ರಸ್ತೆಯೇ ಮಾಯವಾದ ದೃಶ್ಯ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾನುವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ಭಾರೀ ಮಳೆ ಸುರಿಯಿತು....