ಹಾಸನ | ಅನುಮಾನ ಮೂಡಿಸಿದ ಪ್ರಕರಣ; ಮಹಿಳೆ ಪತ್ತೆ

Date:

ಹಾಸನ ತಾಲ್ಲೂಕಿನ ಕಲ್ಕೆರೆ ಬಳಿ ನಡೆದಿದ್ದ ಮಹಿಳೆ ನಾಪತ್ತೆ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್​ ಎದುರಾಗಿದೆ. ಮೊದಲು ಕೊಲೆ ಅಥವಾ ಅಪಹರಣ ಎಂದು ಶಂಕಿಸಲಾಗಿದ್ದ ಪ್ರಕರಣದಲ್ಲಿ, ಮಹಿಳೆ ಪತ್ತೆಯಾಗಿದ್ದಾರೆ.

- Advertisement -

ಮದುವೆಗೆ ಬಂದಿದ್ದ 29 ವರ್ಷದ ಪ್ರಿಯಾಂಕ ಬಟ್ಟೆಗಳು ಹಾಸನ ತಾಲೂಕಿನ ಕಲ್ಕೆರೆ ಬಳಿ ಪತ್ತೆಯಾಗಿತ್ತು, ಇದರಿಂದ ಆತಂಕಗೊಂಡ ಪೊಲೀಸರು ಹುಡುಕಾಟ ಆರಂಭಿಸಿದ್ದರು. ನಿಗೂಢವಾಗಿ ನಾಪತ್ತೆಯಾಗಿದ್ದ ಪ್ರಿಯಾಂಕ ಬೇರೊಬ್ಬರ ಜೊತೆ ಸಂಸಾರ ಮಾಡಲು ಸ್ವಯಂ ಓಡಿಹೋಗಿದ್ದರು ಎಂದು ಹಾಸನ ಎಸ್‌ಪಿ ಶುಭನ್ವಿತಾ ತಿಳಿಸಿದ್ದಾರೆ. ಮೊದಲಿಗೆ ಪ್ರಿಯಾಂಕ ತುಮಕೂರು ಜಿಲ್ಲೆಯ ಕುಣಿಗಲ್‌ನಿಂದ ಚಿಕ್ಕಮಗಳೂರಿಗೆ ಮದುವೆಗೆ ಬಂದಿದ್ದರು. ಫೆಬ್ರವರಿ 12ರಂದು ರಾತ್ರಿ 7:15ರ ವೇಳೆ ತಾಯಿಗೆ ಕರೆ ಮಾಡಿ ಮಾತನಾಡಿದ್ದರು. 8 ಗಂಟೆಗೆ ಚಿಕ್ಕಮ್ಮನೊಂದಿಗೆ ಕೊನೆಯ ಬಾರಿಗೆ ಮಾತನಾಡಿದ ನಂತರ ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಫೆಬ್ರವರಿ 13ರಂದು ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗಿತ್ತು. ಮೈಮೇಲೆ 30 ಲಕ್ಷ ರೂಪಾಯಿ ಮೌಲ್ಯದ ಒಡವೆಗಳಿದ್ದುದರಿಂದ ಕೊಲೆ ಅಥವಾ ಅಪಹರಣ ಎಂದು ಶಂಕಿಸಲಾಗಿತ್ತು. ಪೊಲೀಸರು ಕಾಲ್ ಡಿಟೇಲ್‌ಗಳು ಮತ್ತು ಸಿಸಿಟಿವಿ ಫುಟೇಜ್‌ಗಳನ್ನು ಪರಿಶೀಲಿಸಿದರು. ನಂತರ ಶೋಧಕಾರ್ಯ ಆರಂಭಿಸಿದ್ದು ಪ್ರಿಯಾಂಕ ಡೇವಿಡ್​ ಜೊತೆಗೆ ಪತ್ತೆಯಾಗಿದ್ದಾಳೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

ಪ್ರಿಯಾಂಕ ತಮ್ಮ ಗಂಡನೊಂದಿಗೆ ಇರಲು ಇಷ್ಟಪಡದೆ ಬೇರೊಬ್ಬರ ಜೊತೆ ಹೋಗಲು ಪ್ಲಾನ್ ಮಾಡಿದ್ದರು ಎಂದು ಬಯಲಾಗಿದೆ. ಆ ವ್ಯಕ್ತಿ ಹೆಸರು ಡೇವಿಡ್. ಫೆಬ್ರವರಿ 12ರ ಸಂಜೆ 8 ಗಂಟೆ ನಂತರ ಬೇಲೂರಿನಿಂದ ಪ್ರಿಯಾಂಕ ಮತ್ತು ಡೇವಿಡ್ ಬೈಕ್‌ನಲ್ಲಿ ತೆರಳಿದ್ದರು. ಫಾರೆಸ್ಟ್ ಪ್ರದೇಶದಲ್ಲಿ ಪ್ರಿಯಾಂಕ ತಾನು ಧರಿಸಿದ್ದ ಬಟ್ಟೆಗಳನ್ನು ಬದಲಾಯಿಸಿ, ಹಳೆಯ ಬಟ್ಟೆಗಳನ್ನು ಕಲ್ಕೆರೆ ಕೆರೆ ಬಳಿ ಎಸೆದಿದ್ದಳು ಎಂದು ಬಯಲಾಗಿದೆ. ಪ್ರಿಯಾಂಕ ಡೇವಿಡ್‌ನೊಂದಿಗೆ ಬೇರೊಂದು ಫೋನ್‌ನಿಂದ ಸಂಪರ್ಕಿಸಿಕೊಂಡಿದ್ದರು. ಡೇವಿಡ್ ನನ್ನು ಬೇಲೂರಿಗೆ ಕರೆಸಿಕೊಂಡಿದ್ದಳು ಎಂದು ತನಿಖೆಯಲ್ಲಿ ದೃಢಪಟ್ಟಿದೆ. ಪ್ರಿಯಾಂಕ ಗಂಡನಿಂದ ದೂರವಾಗಲು ಯೋಜನೆ ಮಾಡಿ ಬೇರೊಬ್ಬರ ಜೊತೆ ಹೋಗಿದ್ದರು. ಇದು ಸ್ವಯಂ ಓಡಿಹೋಗುವ ಪ್ರಕರಣವಾಗಿದೆ ಎಂದು ಹೇಳಿದ್ದಾರೆ. ಪೊಲೀಸರು ಕಾಲ್ ಡಿಟೇಲ್‌ಗಳು, ಸಿಸಿಟಿವಿ ಮತ್ತು ಇತರ ಸಾಕ್ಷ್ಯಗಳನ್ನು ಆಧರಿಸಿ ಪ್ರಕರಣ ಭೇದಿಸಿದ್ದಾರೆ.

ಇದನ್ನೂ ಓದಿದ್ದೀರಾ?ಹಾಸನ | ಮದುವೆಗೆ ಬಂದಿದ್ದ ಯುವತಿ ನಾಪತ್ತೆ

ಪ್ರಿಯಾಂಕ ತಮ್ಮ ಇಚ್ಛೆಯಂತೆ ಬೇರೊಬ್ಬರ ಜೊತೆ ಹೋಗಿರುವುದು ದೃಢಪಟ್ಟಿದೆ. ಈ ಪ್ರಕರಣ ತನಿಖೆಯಲ್ಲಿ ಪೊಲೀಸರು ತ್ವರಿತ ಕ್ರಮ ಕೈಗೊಂಡಿದ್ದಾರೆ. ಸಿಸಿಟಿವಿ ಫುಟೇಜ್ ಮತ್ತು ಕಾಲ್ ರೆಕಾರ್ಡ್‌ಗಳು ಪ್ರಮುಖ ಸಾಕ್ಷ್ಯಗಳಾಗಿವೆ ಎನ್ನಲಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆಡಳಿತದಲ್ಲಿ ಪಾರದರ್ಶಕತೆಗೆ ಮಾಹಿತಿ ಹಕ್ಕು ಕಾಯ್ದೆ ಪ್ರಮುಖ ಅಸ್ತ್ರ: ಹಣಮಂತ ಶಿಂದೆ

ಮಾಹಿತಿ ಹಕ್ಕು ಕಾಯ್ದೆಯ ಪರಿಣಾಮಕಾರಿ ಬಳಕೆ, ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಸಾಮಾಜಿಕ...

ಯತ್ನಾಳ್ ವಿರುದ್ಧ ಹೊರ್ತಿ ವಾಗ್ದಾಳಿ; ಅರ್ಜಿ ವಾಪಸ್ ಪಡೆದ ಹಿಂದಿನ ಸತ್ಯ ಬಹಿರಂಗಪಡಿಸಲು ಸವಾಲು

ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬರೆದಿರುವ...

ಆರೋಗ್ಯ ಸುರಕ್ಷತೆಗೆ ಆದ್ಯತೆ ನೀಡಿ: ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ

ಕೊಡಗು ಜಿಲ್ಲೆಯಲ್ಲಿ ಡೆಂಗ್ಯೂ, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಅಗತ್ಯ...

ಉಡುಪಿ | ಯುವಜನರೇ, ನಿರಂತರ ಪರಿಶ್ರಮದಿಂದ ಯಶಸ್ಸಿನ ಮೆಟ್ಟಿಲೇರಿ: ಪ್ರಕಾಶ್ ಶೆಟ್ಟಿ

ಯುವಜನರು ನಿರಂತರ ಪ್ರಯತ್ನದ ಮೂಲಕ ಜೀವನದಲ್ಲಿ ಒಂದೊಂದೇ ಮೆಟ್ಟಿಲು ಏರುತ್ತಾ ಸಾಗಿದರೆ...