​ಟಿ20 ವಿಶ್ವಕಪ್: ಪಾಕ್ ಗೆಲುವಿಗೆ 176 ರನ್ ಗುರಿ; ಇಶಾನ್ ಕಿಶನ್ ‘ದಾಖಲೆ’ಯ ಆಟ

Date:

ಶ್ರೀಲಂಕಾದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಹೈವೋಲ್ಟೇಜ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ಗೆಲುವಿಗೆ ಭಾರತ ತಂಡವು 176 ರನ್‌ಗಳ ಸ್ಪರ್ಧಾತ್ಮಕ ಗುರಿ ನೀಡಿದೆ. ಯುವ ಬ್ಯಾಟರ್ ಇಶಾನ್ ಕಿಶನ್ ಅವರ ಸ್ಫೋಟಕ ಅರ್ಧಶತಕ ಮತ್ತು ಶಿವಂ ದುಬೆ ಅವರ ಸಮಯೋಚಿತ ಆಟದ ನೆರವಿನಿಂದ ಭಾರತ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 175 ರನ್ ಕಲೆಹಾಕಿದೆ.

- Advertisement -

​ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಆರಂಭದಲ್ಲೇ ಆಘಾತ ಎದುರಾಗಿತ್ತು. ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಶೂನ್ಯಕ್ಕೆ ಔಟಾದರು. ಆದರೆ, ಈ ಹಂತದಲ್ಲಿ ಕ್ರೀಸ್‌ಗೆ ಬಂದ ಇಶಾನ್ ಕಿಶನ್, ಅಬ್ಬರದ ಆಟವಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಾಕ್ಸ್ ಆಫೀಸ್‌ನಲ್ಲಿ ರಾವಣನೇ ವಿಜೃಂಭಿಸಿರುವ ‘ರಾಮಾಯಣ’ದ ಅಬ್ಬರ: ₹1,600...

ರಾವಣನೇ ವಿಜೃಂಭಿಸಿರುವ ಬಾಲಿವುಡ್‌ ಸಿನಿಮಾ 'ರಾಮಾಯಣ: ಭಾಗ-1' ಬಿಡುಗಡೆಯಾದ ಕೇವಲ 17 ದಿನಗಳಲ್ಲಿ ಜಾಗತಿಕವಾಗಿ ₹1,600 ಕೋಟಿಗೂ ಅಧಿಕ ಕಮಾಯಿ ಮಾಡಿ ದಾಖಲೆ ಬರೆದಿದೆ. ಈ ಮೂಲಕ 'ದಂಗಲ್', 'ಧುರಂಧರ್-2', 'ಬಾಹುಬಲಿ-2' ಹಾಗೂ...

ರಾಯಚೂರು | ಉದ್ಘಾಟನೆಗಾಗಿ ಕಾಯುತ್ತಿರುವ ಶಾಲೆ; ವರಾಂಡದಲ್ಲೇ ಮಕ್ಕಳಿಗೆ...

ರಾಯಚೂರು ಜಿಲ್ಲೆ, ಜಾಲಹಳ್ಳಿಯ ಬೊಮ್ಮನಹಳ್ಳಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ, ಶುದ್ಧ ಕುಡಿಯುವ ನೀರಿನ ಅಭಾವ, ಕಾಂಪೌಂಡ್ ಇಲ್ಲದಿರುವುದು ಹಾಗೂ ಶಾಲಾ ಜಾಗದ ವಿವಾದ ಸೇರಿದಂತೆ ಹಲವು ಸಮಸ್ಯೆಗಳು ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗಿವೆ....

‘ಹುಟ್ಟಿಗೂ, ಸಾವಿಗೂ ನಾವೇ ಬೇಕು… ನಮ್ಮ ಜೊತೆ ನಿಲ್ಲೋಕೆ...

ಪೆಂಡಾಲಿನ ಒಂದು ಮೂಲೆಯಿಂದ ಆಶಾ ಕಾಯಕರ್ತೆಯರು " ರೂಪ ರೂಪಗಳನು ದಾಟಿ, ನಾಮ ಕೋಟಿಗಳನು ಮೀಟಿ, ಎದೆಯ ಬಿರಿಯೆ ಭಾವದೀಟಿ, ಓ ನನ್ನ ಚೇತನ... ಆಗು ಅನಿಕೇತನ" ಕವಿತೆಯ ಸಾಲುಗಳನ್ನು ಎದೆತುಂಬಿ ಹಾಡುತ್ತಿದ್ದರು....

ಇದನ್ನು ಓದಿದ್ದೀರಾ? ಸೋತರೂ ಕ್ರೀಡಾಭಿಮಾನಿಗಳ ಮನಗೆದ್ದ ಗುರ್ಬಾಜ್: ಆಫ್ರಿಕಾ ಪಡೆಗೆ ನಡುಕ ಹುಟ್ಟಿಸಿದ ಅಫ್ಘಾನ್ ಆಟಗಾರ

ಇಂದಿನ ಇನಿಂಗ್ಸ್‌ನ ಪ್ರಮುಖ ಆಕರ್ಷಣೆ ಇಶಾನ್ ಕಿಶನ್ ಅವರ ಬ್ಯಾಟಿಂಗ್ ವೈಭವ. ಕೇವಲ 40 ಎಸೆತಗಳಲ್ಲಿ 10 ಬೌಂಡರಿ ಹಾಗೂ 3 ಸಿಕ್ಸರ್‌ಗಳೊಂದಿಗೆ 77 ರನ್ ಸಿಡಿಸಿದ ಅವರು, ಪಾಕ್ ಬೌಲರ್‌ಗಳನ್ನು ಕಂಗೆಡಿಸಿದರು. ವಿಶೇಷವೆಂದರೆ, ಕೇವಲ 27 ಎಸೆತಗಳಲ್ಲಿ ಅರ್ಧಶತಕ ಪೂರೈಸುವ ಮೂಲಕ, ಟಿ-20 ಮಾದರಿಯಲ್ಲಿ ಪಾಕಿಸ್ತಾನದ ವಿರುದ್ಧ ವೇಗದ ಅರ್ಧಶತಕ ಸಿಡಿಸಿದ ಯುವರಾಜ್ ಸಿಂಗ್ (29 ಎಸೆತ) ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದರು. ಇದು ಭಾರತ-ಪಾಕ್ ಟಿ-20 ಪಂದ್ಯಗಳ ಇತಿಹಾಸದಲ್ಲಿ ಭಾರತೀಯನೊಬ್ಬನ ಅತಿ ವೇಗದ ಅರ್ಧಶತಕವಾಗಿದೆ.

ಕಿಶನ್ ಅಬ್ಬರದ ನಂತರ, ಮಧ್ಯಮ ಕ್ರಮಾಂಕದಲ್ಲಿ ನಾಯಕ ಸೂರ್ಯಕುಮಾರ್ ಯಾದವ್ (32) ಮತ್ತು ತಿಲಕ್ ವರ್ಮಾ (25) ತಂಡಕ್ಕೆ ಚೇತರಿಕೆ ನೀಡಿದರು. ಪಾಕಿಸ್ತಾನದ ಸ್ಪಿನ್ನರ್ ಸೈಮ್ ಅಯೂಬ್ (3 ವಿಕೆಟ್) ಅವರ ದಾಳಿಗೆ ಭಾರತದ ರನ್ ವೇಗಕ್ಕೆ ಕೊಂಚ ಕಡಿವಾಣ ಬಿತ್ತು. ಹಾರ್ದಿಕ್ ಪಾಂಡ್ಯ (0) ನಿರಾಸೆ ಮೂಡಿಸಿದರು. ಕೊನೆಯ ಓವರ್‌ಗಳಲ್ಲಿ ಶಿವಂ ದುಬೆ (17 ಎಸೆತಗಳಲ್ಲಿ 27 ರನ್) ಮತ್ತು ರಿಂಕು ಸಿಂಗ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ 175ರ ಗಡಿ ದಾಟಿತು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸತತ ಎರಡನೇ ಅವಧಿಗೆ ಐಸಿಸಿ ಅಧ್ಯಕ್ಷರಾಗಿ ಜಯ್ ಶಾ ಅವಿರೋಧ ಆಯ್ಕೆ

ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ಅಧ್ಯಕ್ಷರಾಗಿ ಜಯ್ ಶಾ ಅವರು ಸತತ...

IND vs NZ | 3-1 ಅಂತರದಲ್ಲಿ ಏಕದಿನ ಸರಣಿ ಗೆದ್ದ ಭಾರತ; ಕೊನೆಯ ಪಂದ್ಯದಲ್ಲಿ 22 ರನ್‌ಗಳ ರೋಚಕ ಜಯ!

ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯನ್ನು ಭಾರತ ತಂಡ...

ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸಿದ ಮೋಹಿತ್ ಉಲ್ವಾ; ಪಾಕ್ ಮಣಿಸಿ 9ನೇ ಬಾರಿ ಅಂಡರ್-19 ಏಷ್ಯಾ ಕಪ್ ಗೆದ್ದ ಭಾರತ

ಕೊನೆಯ ಎಸೆತದವರೆಗೂ ತೀವ್ರ ಕುತೂಹಲ ಕೆರಳಿಸಿದ್ದ 'ಎಸಿಸಿ ಪುರುಷರ ಅಂಡರ್-19 ಏಷ್ಯಾ...

ನ್ಯೂಜಿಲೆಂಡ್ ಟೆಸ್ಟ್ ಸರಣಿ: ಕುಲದೀಪ್ ಯಾದವ್‌ಗೆ ಕೊಕ್, ಗುರ್ನೂರ್ ಬ್ರಾರ್‌ಗೆ ಮಣೆ!

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮುಂಬರುವ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ...