ಹಾಸನ ಜಿಲ್ಲೆ ಆಲೂರು ತಾಲೂಕಿನ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಮರಸು ಕೊಪ್ಪಲು ಹಾಗೂ ಪಟ್ಟಣದ ದೊಡ್ಡಿಬೀದಿಗೆ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು ಸುಮಾರು ಒಂದು ಕಿಲೋಮೀಟರ್ ರಸ್ತೆಗೆ ಅಂದಾಜು 80 ಲಕ್ಷ ವೆಚ್ಚ ಕಾಮಗಾರಿ ಮಾಡಲು ಭೂಮಿ ಪೂಜೆಯನ್ನು ನೆರವೇರಿಸಿದರು.
ಕ್ಷೇತ್ರದ ಶಾಸಕ ಸಿಮೆಂಟ್ ಮಂಜು ಮಾತನಾಡಿ “ನಾನು ಚುನಾವಣಾ ಪ್ರಚಾರದ ಸಂಧರ್ಭದಲ್ಲಿ ಮೂಲಭೂತ ಸೌಕರ್ಯಗಳು ಸಾರ್ವಜನಿಕರಿಗೆ ಯಾವ ರೀತಿಯಲ್ಲೂ ತೊಂದರೆ ಆಗಬಾರದು ಎಂದು ಹೇಳಿದ್ದೆ, ನನ್ನ ಕ್ಷೇತ್ರದಲ್ಲಿ ಪ್ರಾಮಾಣಿಕ ಸೇವೆ ಮಾಡುವ ಪ್ರಯತ್ನವನ್ನು ಮಾಡುತ್ತೇನೆ. ಇನ್ನೂ ಹೆಚ್ಚಿನ ಕೆಲಸ ಮಾಡಲು ತಮ್ಮ ಆಶೀರ್ವಾದ ಬೇಕಾಗಿದೆ. ಹಾಗೆಯೇ, ವಾಹನ ಸವಾರರು ಹಾಗೂ ಶಾಲಾ ಮಕ್ಕಳಿಗೆ ಅನುಕೂಲವಾಗಬೇಕೆಂದು ರಸ್ತೆ ಕಾಮಗಾರಿ ಮಾಡಲು ಅನುದಾನ ತರಲಾಯಿತು. ಅದೇ ರೀತಿ ನನ್ನ ಅವಧಿಯಲ್ಲಿ ಕ್ಷೇತ್ರಕ್ಕೆ ನನ್ನ ಕೈಯಲ್ಲಿ ಸಾಧ್ಯವಾದಷ್ಟು ಅನುದಾನವನ್ನು ತಂದು ಎಲ್ಲಾ ಕಾಮಗಾರಿಗಳನ್ನು ಮಾಡಿಸಿ, ಕ್ಷೇತ್ರವನ್ನು ಅಭಿವೃದ್ಧಿ ಮಾಡುವ ಕನಸನ್ನು ಹೊತ್ತಿದ್ದೇನೆ ಎಂದು ತಿಳಿಸಿದರು.
ಇದನ್ನೂ ಓದಿದ್ದೀರಾ?ಹಾಸನ | ಪ್ರೀವೆಡ್ಡಿಂಗ್ ಫೋಟೋಶೂಟ್; ಫೋಟೋಗ್ರಾಫರ್‌ಗಳ ಮೇಲೆ ಹಲ್ಲೆ
ಈ ವೇಳೆ ಪ. ಪಂ ಮುಖ್ಯಾಧಿಕಾರಿ ಮುಂಜುನಾಥ್.ಬಿಜೆಪಿ ಮಂಡಲ ಅಧ್ಯಕ್ಷ ಉಮಾರವಿಪ್ರಕಾಶ್, ಕಾರ್ಯದರ್ಶಿ ಅಬ್ಬನ ಕೃಷ್ಣಮೂರ್ತಿ, ನಗರ ಆಧ್ಯಕ್ಷ ಹೇಮಂತ್, ಎಸ್ಸಿ ಮೋರ್ಚಾ ದೇವರಾಜ್, ಹಿಂದುಳಿದ ಮೋರ್ಚಾ ಬಾಬು, ಧರ್ಮ ಮರಸು, ಗಣೇಶ್ ಭೈರಾಪುರ, ಹೊಸೂರು ದೊರೆ ಗೌಡ, ನವೀನ್ ದಡದಹಳ್ಳಿ,ಆನಂದ್ ಹೊಸಹಳ್ಳಿ,ಪ.ಪಂ ಮಾಜಿ ಸದಸ್ಯರಾದ ತೌಪೀಕ್, ಸ್ನೇಕ್ ಬಾಬು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.




