ರಾಜ್ಯದಲ್ಲಿ ಎಲ್ಲೆಡೆ ಗ್ಯಾಸ್ ಸಿಲಿಂಡರ್ ಅಭಾವ ಉಂಟಾಗುತ್ತಿದ್ದು, ಜನರಿಗೆ ಸಿಲಿಂಡರ್ ನೀಡಬೇಕಿದ್ದ ಏಜೆನ್ಸಿ ಸಿಬ್ಬಂದಿ ಫುಲ್ ಕುಡಿದು ಟೈಟ್ ಆಗಿ ಸಿಲಿಂಡರ್ ಕಚೇರಿಯಲ್ಲೇ ಮಲಗಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ
ಅಡುಗೆ ಗ್ಯಾಸ್ ಇಲ್ಲದೇ ಗ್ರಾಮೀಣ ಪ್ರದೇಶದ ಜನ ಪರದಾಟ ನಡೆಸಿದ್ದಾರೆ. ಆದರೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕೇರವಾಡ ಗುಂಡೆನಟ್ಟಿ ಗ್ರಾಮದಲ್ಲಿ ಇರುವ ಗ್ಯಾಸ್ ಸಿಲಿಂಡರ್ ಕಚೇರಿಯಲ್ಲಿ ಸಾರಾಯಿ ಸೇವಿಸಿ ಕಚೇರಿಯಲ್ಲೇ ಸಿಬ್ಬಂದಿ ಮಲಗಿದ್ದಾನೆ..
ಏಜೆನ್ಸಿ ಸಿಬ್ಬಂದಿಯ ವರ್ತನೆಗೆ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ. ಕುಡಿದ ಮತ್ತಿನಲ್ಲಿ ಸಾರ್ವಜನಿಕರ ಗ್ಯಾಸ್ ಪಾಸ್‌ಬುಕ್ ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿಯಾಗಿದೆ. ಈ ಸಿಬ್ಬಂದಿ ಪ್ರಶ್ನೆ ಮಾಡಿದವರಿಗೆ ಅವಾಚ್ಯ ಶಬ್ದಗಳ ಬಳಕೆ ಮಾಡಿರುವ ಆರೋಪ ಕೇಳಿ ಬಂದಿದೆ. ಈ ವೇಳೆ ಸಾರ್ವಜನಿಕರಿಂದ ಧರ್ಮದೇಟು ನೀಡಲಾಗಿದೆ.



