ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಮಳಲಿ ಗ್ರಾಮದಲ್ಲಿ ಕುಡಿಯೋ ನೀರಿನ ಸಮಸ್ಯೆ ಎದುರಾಗಿದೆ.
ಮಳಲಿ ಗ್ರಾಮದಲ್ಲಿರುವ ಬೋರ್ ವೆಲ್ ಹಾಳಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಗಮನವಹಿಸಿ ದುರಸ್ಥಿ ಮಾಡಿಲ್ಲ. ಹೀಗಾಗಿ ಬಹಳಷ್ಟು ತೊಂದರೆ ಉಂಟಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಇದನ್ನು ಓದಿದ್ದೀರಾ?ಆಲೂರು | ಸಾರ್ವಜನಿಕ ಆಸ್ಪತ್ರೆ: ಔಷಧಿಗಳಿಲ್ಲವೆಂದು ಅಪಪ್ರಚಾರ ಮಾಡಿದ್ದಾರೆ; ವೈದ್ಯಾಧಿಕಾರಿಗಳು
ಈ ಸಮಸ್ಯೆ ಬಗ್ಗೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯವರಿಗೆ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ಅವರಿಗೂ ಗಮನಕ್ಕೆ ತಂದರು. 15 ದಿನದಿಂದ ಈ ವ್ಯವಸ್ಥೆಯನ್ನು ಸರಿಪಡಿಸಲು ಮೀನಾ ಮೇಷ ಎಣಿಸುತ್ತಿದ್ದು, ಇದೇ ರೀತಿ ಸಮಸ್ಯೆಯನ್ನು ಉಲ್ಬಣಗೊಳಿಸಿದರೆ ಶುಕ್ರವಾರದಂದು ಗ್ರಾಮಸ್ಥರು ಗ್ರಾಮ ಪಂಚಾಯತಿ ಎದುರು ಧರಣಿ ನಡೆಸುತ್ತೇವೆಂದು ಸ್ಥಳೀಯರು ತಿಳಿಸಿದ್ದಾರೆ.





