ವನಸಿರಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹಾಗೂ ರೋಟರಿ ಕ್ಲಬ್ ಸಂಯುಕ್ತಾಶ್ರಯದಲ್ಲಿ ಹೆಣ್ಣು ಮಕ್ಕಳ ಶಿಕ್ಷಣದ ಮೂಲಕ ಸಶಕ್ತೀಕರಣ ಹಾಗೂ ಶೈಕ್ಷಣಿಕ ಕಲಿಕಾ ಸಾಮಗ್ರಿಗಳ ವಿತರಣೆ ಕಾರ್ಯಕ್ರಮ ಹಾವೇರಿ ಜಿಲ್ಲೆಯ ರಾಣಿಬೆನ್ನೂರು ಪಟ್ಟಣದ ರೋಟರಿ ಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮದ ಮುಖ್ಯ ಅಥಿತಿಗಳು ಎಸ್. ಜಯರಾಮನ್ ಸಾಮಾಜ ಸೇವಕರು: ಮುಖ್ಯವಾಗಿ ಹೆಣ್ಣು ಮಕ್ಕಳಿಗೆ ಶಿಕ್ಷಣದ ಅವಶ್ಯಕತೆ ಇದೆ. ಹಾಗಾಗಿ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸುವ ಕೆಲಸವನ್ನು ರೋಟರಿ ಹಾಗೂ ವನಸಿರಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮೂಲಕ ಮಾಡುತ್ತಿದ್ದೇವೆ. ಇವರು ಮುಂದಿನ ಪೀಳಿಗೆಗೆ ಸ್ಪೂರ್ತಿ ಆಗಬೇಕು. ಉತ್ತಮ ಶಿಕ್ಷಣ ಪಡೆದು, ಐಎಎಸ್, ಐಪಿಎಸ್ ಆದೇವೆಂದು ಹೇಳಬೇಕು. ಅವಾಗ ನಮಗೆ ಹೆಮ್ಮೆ ಆಗುತ್ತದೆ” ಎಂದರು.
ಕಾರ್ನಾಟಕ ಅಲ್ಪಸಂಖ್ಯಾತರ ಆಯೋಗದ ಸದಸ್ಯರು ಪರಿಮಳ ಜೈನ್ ಅವರು ಉಪನ್ಯಾಸದ ಕುರಿತು ಮಾತನಾಡ, “ಹಿಂದೆ ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಪ್ರೀತಿ, ವಾತ್ಸಲ್ಯ, ಜೊತೆಗೆ ಆಸ್ತಿಯನ್ನು ಕೊಡುತ್ತಿರಲಿಲ್ಲ. ಅವರಿಗೆ ಬಾಲ್ಯದಲ್ಲಿಯೇ ವಿವಾಹ ಮಾಡುತ್ತಿದ್ದರು. ಇದರಿಂದ ವರದಕ್ಷಿ ಪಿಡುಗು, ಬಾಲ ಕಾರ್ಮಿಕ ಪದ್ದತಿಗಳು, ದೌರ್ಜನ್ಯಗಳು ಜಾಸ್ತಿ ಆಗುತ್ತಿದ್ದವು. ಇವುಗಳನ್ನು ತಡೆಗಟ್ಟಲು ಕಾಯ್ದೆಗಳು ಜಾರಿಯಾದರೆ ಅಷ್ಟೆ ಇಲ್ಲ, ಪಾಲಕರಿಗೆ ಅರಿವು ಮುಖ್ಯ” ಎಂದರು.
“ಸಮಾಜದಲ್ಲಿ ಬದಲಾವಣೆ ಮಾಡಿದ ಮಹಾನ್ ಮಹಿಳಾ ಸಾಧನಕರು ಇದ್ದಾರೆ. ಅವರನ್ನು ಅನುಸರಿಸಬೇಕು. ಅವರಂತೆ ಎಲ್ಲರೂ ಶಿಕ್ಷಣ ಪಡೆಯಬೇಕು. ಆಗ ಇಂತಹ ಪದ್ದತಿಗಳು ತಡೆಯಲು ಸಾಧ್ಯ” ಎಂದು ಹೇಳಿದರು.
ಸ್ವಾಗತ ಹಾಗೂ ಪ್ರಸ್ತಾವಿಕ ಮಾತನಾಡಿದ ವನಸಿರಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ನಿರ್ದೇಶಕರು ಎಸ್.ಬಿ.ಬಳಿಗಾರ ಅವರು, ” ಸಮಾಜದಲ್ಲಿ ಒಂಟಿ ಮಹಿಳೆಯರು ಸಾಕಷ್ಟು ಇದ್ದಾರೆ. ಅವರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹಾಗೆ ದೇವದಾಸಿ ಮಹಿಳೆಯರರೂ ಕೂಡ ಸಮಾಜದಲ್ಲಿ ಅವಮಾನಗಕಲನ್ನು ಅನುಭವಿಸುತ್ತಿದ್ದಾರೆ. ಅವರ ಮಕ್ಕಳಗೆ ಶಿಕ್ಷಣ ಕೊಡಿಸುವುದು ನಮ್ಮ ಉದ್ದೇಶ” ಎಂದರು.
“ಬಡ ಕುಟುಂಬದ ಹೆಣ್ಣು ಮಕ್ಕಳನ್ನು ಗುರುತಿಸಿ ಅವರಿಗೆ ಅವರು ಉನ್ನತ ಶಿಕ್ಣ ಪಡೆಯಬೇಕು. ಹೆಣ್ಣು ಮಕ್ಕಳು ಮನೆಗೆ ಆದಾರವಾಗಬೇಕು. ಹಾಗಾಗಿ ಅಂತಹ ಮಕ್ಕಳನ್ನು ಶಾಲೆಗಳಿಗೆ ಹೋಗಿ ಬೇಟಿ ಮಾಡಿ, ಮನೆಗಳಿಗೆ ಭೇಟಿ ಮಾಡಿ, ಅವರನ್ನು ಗುರುತಿಸಿ ಆ ಮಕ್ಕಳಿಗೆ ಶಿಕ್ಷಣಕ್ಕೆ ಅನೂಕೂಲ ಆಗುವಂತೆ ಮಾಡುವುದೆ ಈ ಕಾರ್ಯಕ್ರಮ ಮೂಲ ಉದ್ದೇಶ ಆಗಿದೆ.
“ನೂರಾ ಹತ್ತು ಕುಟುಂಬಗಳ ಹೆಣ್ಣು ಮಕ್ಕಳಿಗೆ ಒಂದು ವರ್ಷ ಆಗುವಷ್ಟು ಶಿಕ್ಷಣಕ್ಕೆ ಆಗುವ ಎಲ್ಲ ಸಾಮಗ್ರಿಗಳನ್ನು ಕಿಟ್ ಕೊಡುವ ಮೂಲಕ ಪ್ರೋತ್ಸಾಹ ನೀಡುತ್ತಿದ್ದೇವೆ.” ಎಂದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಲಿಕಾ ಸಾಮಗ್ರಿಗಳನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ರೊಟರಿ ಕ್ಲಬ್ ಅಧ್ಯಕ್ಷರು ಕ್ಯಾಪ್ಟನ್ ಬಿ.ಜೆ.ಹಿರೇಮಠ ವಹಿಸಿದ್ದರು. ಉದ್ದಿಮೆದಾರರು ಪರಮೇಶಪ್ಪ ಕಾಗಿನಲ್ಲಿ, ಬಸವರಾಜ ಕೆಲಗಾರ, ಜಿ.ಎಸ್.ಸಿಂಹ ಪಿ.ವಿ.ಲಿಂಗನಗೌಡ್ರ ಉಪಸ್ಥಿತರಿದ್ದರು. ಕಾರ್ಯಕ್ರಮ ನಿರೂಪಣೆಯನ್ನು ಡಾ. ನಾರಾಯಣ ಪವಾರ ನಿರ್ವಹಿಸಿದರು.




