ಹಾವೇರಿ | ಮೂರನೇ ದಿನಕ್ಕೆ ಕಾಲಿಟ್ಟ ಕಬ್ಬು ಬೆಳೆಗಾರರ ಧರಣಿ: ಸಚಿವರ ಸ್ಪಂದನೆ ಇಲ್ಲ; ರೈತರು ಕಿಡಿ

Date:

“ಮೂರನೇ ದಿನಕ್ಕೆ ಕಬ್ಬು ಬೆಳೆಗಾರರ ಪ್ರತಿಭಟನೆ ಕಾಲಿಟ್ಟರೂ ಸಚಿವರ ಸ್ಪಂದನೆ ಇಲ್ಲ. ಜಿಲ್ಲೆಯ ಶಾಸಕರು ಇದುವರೆಗೂ ಭೇಟಿ ನೀಡಿಲ್ಲ. ನಿನ್ನೆ ಒಬ್ಬರು ಶಾಸಕರು ಬಂದು ₹3300 ಕಬ್ಬಿಗೆ ಬೆಲೆ ಸಿಗುತ್ತೆ, ಅಲ್ಲಿವರೆಗೂ ಇಲ್ಲಿಯೇ ಪ್ರತಿಭಟನೆ ಮಾಡಿ ಎಂದು ಏನೇನೋ ಹೇಳಿ ಹೋದರು. ಆ ಶಾಸಕರಿಗೆ ಎಫ್ ಆರ್ ಪಿ ಅಂದ್ರ ಏನು? ಎಫ್ ಆರ್ ಪಿ ಪ್ರಕಾರ ಎಷ್ಟು ದರ ಬರ್ತಿದೆ ಎಂಬುದರ ಕುರಿತು ಮಾಹಿತಿಯೇ ಗೊತ್ತಿಲ್ಲ. ರಾಜಕಾರಣಿಗಳೇ ರೈತರನ್ನು ಗೊಂದಲಕ್ಕೆ ಉಂಟು ಮಾಡುತ್ತಿದ್ದಾರೆ” ಎಂದು ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷರು ಭುವನೇಶ್ವರ ಶಿಡ್ಲಾಪುರ ಕಿಡಿಕಾರಿದರು. 

- Advertisement -

ಹಾವೇರಿ ಪಟ್ಟಣದ ಹುತ್ಮಾತ್ಮ ಮೈಲಾರ ಮಹದೇವಪ್ಪ ವೃತ್ತದಲ್ಲಿ ಕಬ್ಬು ಬೆಳೆಗಾರರು ಬೆಳಗಾವಿ ಜಿಲ್ಲೆಯ ಕಬ್ಬು ಬೆಳೆಗಾರರಿಗೆ ರಾಜ್ಯ ಸರಕಾರ ಕಬ್ಬಿನ ದರ ₹ 3,300 ದರ ನಿಗದಿ ಮಾಡಿದ್ದು, ಈ ದರವನ್ನು ಹಾವೇರಿ ಜಿಲ್ಲೆಯ ರೈತರಿಗೂ ನೀಡುವಂತೆ ಹಮ್ಮಿಕೊಳ್ಳಲಾಗಿದ್ದ ಧರಣಿ ಬುಧವಾರ ಮೂರನೇ ದಿನಕ್ಕೆ ಕಾಲಿಟ್ಟಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

ಧರಣಿಯಲ್ಲಿ ಮಾತನಾಡಿದ ಭುವನೇಶ್ವರ ಶಿಡ್ಲಾಪುರ, “ಸಿಎಂ ಆದೇಶ ನಿಜ ಆಗಿದ್ದರೆ, ಜಿಲ್ಲಾಧಿಕಾರಿಗಳು ಆ ಆದೇಶವನ್ನು ಪಾಲಿಸಬೇಕಿತ್ತು. ಕ್ರಮ ಕೈಗೊಳ್ಳುತ್ತಿಲ್ಲ. ಕೇವಲ ಮಾತಿನ ಮೇಲೆ ನಡೆದಿದೆ. ಕಾರ್ಖಾನೆ ಮಾಲಿಕರನ್ನು ಕರೆಸುತ್ತಿಲ್ಲ. ಸರಕಾರಕ್ಕಿಂತ ಈ ಕಾರ್ಖಾನೆ ಮಾಲಿಕರೇ ಹೆಚ್ಚಾಗಿದ್ದಾರೆ. ಸಿಎಂ ಅವರ ಆದೇಶಕ್ಕೆ ಇವರು ಕಿಮ್ಮತ್ತು ಕೊಡುತ್ತಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಜಿಲ್ಲೆಯ ಆರು ಶಾಸಕರು ಎನ್ ಮಾಡ್ತಿರಿ? ಇಲ್ಲಿಯ ಸಂಸದರು ಇಲ್ಲಿಯೇ ದಿನ ಓಡಾಡುತ್ತಾರೆ. ರೈತರು ಪ್ರತಿಭಟನೆ ಮಾಡುತ್ತಿರುವುದು ಅವರಿಗೆ ಗೊತ್ತಿದೆ. ನಾವು ಹೇಳ್ತೀವಿ ನಿಮಗ ಓಟು ಹಾಕಿದ್ದೀವಿ. ಇಲ್ಲಿಗೆ ಬಂದು ಕಬ್ಬಿಗೆ ದರ ಕೊಡಿಸಿ, ನ್ಯಾಯ ಕೊಡಿಸಲು ಸಂಸದರಿಗೂ ಹೇಳ್ತಿವಿ, ಶಾಸಕರಿಗೂ ಹೇಳ್ತೀವಿ” ಎಂದು ಹೇಳಿದರು.

“ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರೇ ಸಕ್ಕರೆ ಸಚಿವರು ಇದ್ದಾರೆ ಒಂದು ಫೋನ್ ಇಲ್ಲ, ತಮ್ಮ ಖಾತೆಯನ್ನೇ ಸರಿಯಾಗಿ ನಿಭಾಯಿಸಲು ಆಗುತ್ತಿಲ್ಲ. ಎಲ್ಲ ಕಬ್ಬಿಗಾಗಿ ಹೋರಾಟ ಮಾಡುವುದಾದರೆ ನೀವು ಏನು ಮಾಡುವಿರಿ. ರಾಜೀನಾಮೆ ಕೊಟ್ಟು ಮನೆಗೆ ಹೋಗಿ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಸರಕಾರ ಸ್ಪಂದನೆ ಮಾಡದಿದ್ದರೆ ಎಲ್ಲ ರೈತರು ತೀರ್ಮಾನ ತಗೊಂಡು ಮುಂದಿನ ಹೋರಾಟ ಹೇಗೆ ಮಾಡಬೇಕು ಅನ್ನೋದನ್ನ ಯೋಚನೆ ಮಾಡ್ತಿವಿ” ಎಂದು ತಿಳಿಸಿದರು.

ಧರಣಿಗೆ ಬೆಂಬಲಿಸಿ ಡಾ. ಪ್ರಾಣವನಂದ ಸ್ವಾಮೀಜಿ ಶರಣ ಬಸವೇಶ್ವರ ಅರೇಮಲ್ಲಾಪುರ ಅವರು ಮಾತನಾಡಿ, “ಸಿಎಂ ಸಿದ್ದರಾಮಯ್ಯ ಅವರ ಸರಕಾರ ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿದ್ದು. ಮೂರು ದಿನದಿಂದ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಸರಕಾರದಿಂದ ಯಾವುದೇ  ಸ್ಪಂದಿಸದೆ ಇರುವುದು ರೈತರ ದುರಂತ. ಇಲ್ಲಿಯ ಸಚಿವರು ಅನ್ನ ತಿನ್ನುವುದಿಲ್ಲವೇ. ಬೆಳಗಾವಿಯಲ್ಲಿ ₹3300 ಘೋಷಣೆ ಮಾಡಿದ್ದಾರೆ. ಹಾವೇರಿಯ ಕಬ್ಬು ಬೆಳೆಗರಾರಿಗೆ ಯಾಕೆ ಅದೇ ಬೆಲೆ ಕೊಡುತ್ತಿಲ್ಲ” ಎಂದು ಹೇಳಿದರು.

“ಜಿಲ್ಲಾ ಉಸ್ತುವಾರಿ ಸಚಿವರು ಶಿವಾನಂದ ಪಾಟೀಲರು ವಿಜಿಟಿಂಗ್ ಸಚಿವರು ಆರು ತಿಂಗಳಿಗೊಮ್ಮೆ ಬರುವರು ಜಿಲ್ಲೆಗೆ ಬರುವರು. ರೈತರು ಬೆಲೆ ನಿಗದಿ ಮಾಡಲು ಮನವಿ ಮಾಡಿದ್ದಾರೆ. ರೈತರನ್ನು ಬೀದಿಗಿಳಿಸುವ ಹಾಗೆ ಮಾಡಬಾರದು. ರೈತರು ಜೊತೆಗೆ ಚರ್ಚೆಸಿ. ಇಲ್ಲವಾದರೆ ಹಾವೇರಿ ಜಿಲ್ಲೆಯ ಎಲ್ಲ ಜನರು ಮಾತಾಡಿಕೊಂಡು ರಾಷ್ಟೀಯ ಹೆದ್ದಾರಿಯನ್ನು ಬಂದ ಮಾಡಲಾಗುವುದು. ಈ ರೀತಿ ಅವಕಾಶ ಮಾಡಿ ಕೊಡದೆ. ರೈತರ ಬೇಡಿಕೆಗಳನ್ನು ಈಡೇರಿಸಬೇಕು” ಎಂದು ಸ್ವಾಮೀಜಿ ಅವರು ಹೇಳಿದರು.

ಪ್ರತಿಭಟನೆಯಲ್ಲಿ ಕಬ್ಬು ಬೆಳೆಗಾರರು ರೈತರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈಸೂರು ದಸರಾ: ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿಗೆ ಅಧಿಕೃತ ಆಹ್ವಾನ

ಮೈಸೂರು ದಸರಾ ಮಹೋತ್ಸವದ ಉದ್ಘಾಟಕರಾಗಿ ಆಯ್ಕೆಯಾಗಿರುವ ಕೊಪ್ಪಳದ ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿಗೆ...

ಕೋಲಾರ | ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್ ವಜಾಕ್ಕೆ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್ ಅವರನ್ನು ವಜಾಗೊಳಿಸಬೇಕು, ಮತದಾರರ ಪಟ್ಟಿ...

ಬೆಂಗಳೂರು | ಆನೆ ದಾಳಿಗೆ ವಾಕಿಂಗ್ ತೆರಳಿದ್ದ ವ್ಯಕ್ತಿ ಬಲಿ

ಇಂದು ಮುಂಜಾನೆ ವಾಕಿಂಗ್ ತೆರಳಿದ್ದ ವ್ಯಕ್ತಿಯೊಬ್ಬರು ಆನೆ ದಾಳಿಗೆ ಮೃತಪಟ್ಟಿರುವ ಘಟನೆ...

ಮುಂಡಗೋಡ | ಮೊಬೈಲ್ ಅಂಗಡಿ ಕಳ್ಳತನ: ನಾಲ್ವರು ವಿದ್ಯಾರ್ಥಿಗಳ ಬಂಧನ

ಮೊಬೈಲ್ ಅಂಗಡಿಯ ಬೀಗ ಒಡೆದು ವಿವಿಧ ಎಲೆಕ್ಟ್ರಾನಿಕ್ ವಸ್ತುಗಳನ್ನು ಕಳವು ಮಾಡಿದ...