ಲೋಕಾಯುಕ್ತರು ಹಾಗೂ ಉಪ ಲೋಕಾಯುಕ್ತರು ಹಾವೇರಿ ಜಿಲ್ಲೆಯ ಹಲವು ಕಡೆಗಳಲ್ಲಿ ಸರ್ಕಾರಿ ಕಚೇರಿಗಳು, ಸರ್ಕಾರಿ ಆಸ್ಪತ್ರೆ, ಹಾಸ್ಟೇಲ್, ಸೇರಿದಂತೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ವೇಳೆ ಅವ್ಯವಸ್ಥೆ ಕಂಡು ಬಂದಿದ್ದು, ಸಂಬಂಧಪಟ್ಟ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ, ವಾರದೊಳಗೆ ಸಮಗ್ರ ವರದಿ ಕೊಡಲು ಸೂಚಿಸಿದರು.
ಲೋಕಾಯುಕ್ತರು ಎಸ್.ಬಿ.ಪಾಟೀಲ್ ಹಾಗೂ ಉಪ ಲೋಕಾಯುಕ್ತರು ಕೆ.ಎನ್.ಫಣೀಂದ್ರ, ಬಿ.ವೀರಪ್ಪ ಅವರ ನೇತೃತ್ವದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂಧಿಗಳನ್ನೊಳಗೊಂಡ 46 ಜನರ ಲೋಕಾಯುಕ್ತ ತಂಡ ಹಲವು ಕಡೆಗಳಲ್ಲಿ ಪರಿಶೀಲನೆ ನಡೆಸಿದರು.
71 ವಸತಿ ನಿಲಯಗಳಿಗೆ ಭೇಟಿ: ಜಿಲ್ಲೆಯ 71 ವಸತಿ ನಿಲಯಗಳಿಗೆ ಭೇಟಿ ನೀಡಿದ್ದು, ಆ ವಸತಿ ನಿಲಯಗಳ ವ್ಯವಸ್ಥೆ ತುಂಬಾ ಹಾಳಾಗಿದೆ. ಶೌಚಾಲಯ, ಸ್ನಾನಗೃಹ, ಕಟ್ಟಡ ಸ್ವಚ್ಛತೆ ಮರಿಚಿಕೆಯಾಗಿದೆ. ಮಕ್ಕಳಿಗೆ ಊಟಕ್ಕೆ ನೀಡಿದ ಅಕ್ಕಿಗಳಲ್ಲಿ ಹುಳುಗಳು ಕಂಡುಬಂದಿವೆ. ಒಂದೇ ಕೊಠಡಿಯಲ್ಲಿ 60-70 ಮಕ್ಕಳು ವಾಸ್ತವ್ಯ ಮಾಡಿರುತ್ತಾರೆ. ಟ್ಯಾಂಕ್ ನೀರು ಗಲೀಜಾಗಿವೆ. ಕೆಲವು ಮಕ್ಕಳಿಗೆ ಮೈಮೇಲೆ ಬೊಕ್ಕೆಗಳು ಬಂದಿವೆ. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಏನು ಮಾಡುತ್ತೀರಿ, ವಸತಿ ನಿಲಯಗಳಿಗೆ ಭೇಟಿ ಕುರಿತು ರಜಿಸ್ಟರ್ ನಿರ್ವಹಣೆ ಮಾಡಿಲ್ಲ” ಎಂದು ತಿಳಿದು ಬಂದಿದೆ.

“ಒಟ್ಟಾರೆ ವಸತಿ ನಿಲಯಗಳು ಅವ್ಯವಸ್ಥೆರಯ ಆಗರಗಳಾಗಿವೆ. ವಸತಿ ನಿಲಯಗಳಲ್ಲಿ ಸ್ವಚ್ಛತೆ ಹಾಗೂ ಶಿಸ್ತಿಗೆ ಆದ್ಯತೆ ನೀಡಬೇಕು. ವಸತಿ ನಿಲಯ ಪಾಲಕರು ಶಿಕ್ಷಕರು, ತಾವು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಈ ವಿಷಯಕ್ಕೆ ಸಂಬಂಧಿಸಿದಂತೆ ಕಾರಣ ತಿಂಗಳೊಳಗಾಗಿ ವ್ಯವಸ್ಥೆ ಸರಿಪಡಿಸಿ ಲಿಖಿತವಾಗಿ ಕ್ರಮವಹಿಸಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಕೆರೆಗಳ ಒತ್ತುವರಿಗೆ ಸೂಚನೆ: ಹಾವೇರಿ ನಗರದ ಎರಡು ಕೆರೆಗಳು ಒತ್ತುವರಿಯಾಗಿರುವುದಾಗಿ ದೂರು ಬಂದಿದ್ದು, ಈ ಕುರಿತು ನಗರಸಭೆ ಅಧಿಕಾರಿಗಳು ಏನು ಕ್ರಮಕೈಗೊಂಡಿದ್ದೀರಿ. ಎಷ್ಟು ಹೊಸ ಕಟ್ಟಡಗಳಿಗೆ ಅನುಮತಿ ನೀಡಲಾಗಿದೆ, ಅನಧಿಕೃತ ಕಟ್ಟಡಗಳ ವಿರುದ್ಧ ಏನು ಕ್ರಮಕೈಗೊಂಡಿರುವ ಬಗ್ಗೆ ಹಾಗೂ ಸ್ವೀಕೃತಿ ಹಾಗೂ ಇ-ಖಾತಾ ಬದಲಾವಣೆ ಅರ್ಜಿಗಳ ಸ್ವೀಕೃತಿ ಹಾಗೂ ರವಾನೆ ರಜಿಸ್ಟರ್ ನಿರ್ವಹಣೆ ಮಾಡಿಲ್ಲ” ಎಂದರು.
“ನಮ್ಮ ತಂಡ ನಗರಸಭೆ ಭೇಟಿ ನೀಡಿದ ಸಮಯದಲ್ಲಿ ಯಾವುದೇ ದಾಖಲೆಗಳನ್ನು ನೀಡಿಲ್ಲ, ಈ ಸಮಯದಲ್ಲಿ ಕೆಲವರ ಬೊಬೈಲ್ ಪರಿಶೀಲನೆ ಮಾಡಿದಾಗ ಕೆಲವರಿಂದ ಪೋನ್‌ಪೇ ಮೂಲಕ ಹಣದ ವ್ಯವಹಾರ ನಡೆಸಿದೆ. ಹಾಗಾಗಿ ಕೆಲವರ ಮೊಬೈಲ್ ವಶಕ್ಕೆ ಪಡೆಯಲಾಗಿದ್ದು, ಎಲ್ಲ ವ್ಯವಸ್ಥೆಯನ್ನು ಸರಿಪಡಿಸಿ ಸೂಕ್ತ ಮಾಹಿತಿ ನೀಡಬೇಕು” ಎಂದು ಖಡಕ್ ಸೂಚನೆ ನೀಡಿದರು.
“ಮುಲ್ಲಾನ ಕೆರೆ ಸುತ್ತು 18 ಮನೆಗಳನ್ನು ನಿರ್ಮಿಸಲಾಗಿದ್ದು, ಕೂಡಲೇ ಸರ್ವೇಮಾಡಿಸಿ ಸೂಕ್ತ ಕ್ರಮವಹಿಸಲಾಗುವುದು. ಎಲ್ಲ ವ್ಯವಸ್ಥೆ ಸರಿಪಡಿಸಲಾಗುವುದು” ಎಂದು ನಗರಸಭೆ ಅಧಿಕಾರಿಗಳು ಮಾಹಿತಿ ನೀಡಿದರು.
ಜಿಲ್ಲಾ ಆಸ್ಪತ್ರೆ ಒಳ ಆವರಣ ಹಾಗೂ ಹೊರ ಆವರಣ ಬಹಳ ಗಲೀಜಾಗಿದ್ದು, ಆಸ್ಪತ್ರೆ ಬರುವ ರೋಗಿಗಳು ರೋಗ ತಗೆದುಕೊಂಡು ಹೋಗುವಂತಿರಬಾರದು. ಸ್ವಚ್ಛತೆಗೆ ಆದ್ಯತೆ ನೀಡಬೇಕು” ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕರಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಅಪರ ಪೊಲೀಸ್ ಮಹಾ ನಿರ್ದೇಶಕರಾದ ಮನೀಶ್ ಖರ್ಚಿಕರ್, ಲೋಕಾಯುಕ್ತ ಕಾರ್ಯದರ್ಶಿ ಶ್ರೀನಾಥ್, ದಾವಣಗೆರೆ ಲೋಕಾಯುಕ್ತ ಎಸ್‌ಪಿ ಕೌಲಾಪೂರೆ, ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ್ ದಾನಮ್ಮನವರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಲ್ಟಿತ ಕುಮಾರ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಶ್ರೀಮತಿ ಯಶೋಧಾ ವಂಟಗೋಡಿ, ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ ಹಾಗೂ ಜಿ.ಪಂ.ಉಪಕಾರ್ಯದರ್ಶಿ ಡಾ.ಪುನೀತ್ ಉಪಸ್ಥಿತರಿದ್ದರು.




