ಪರ-ವಿರೋಧ ಅಭಿಪ್ರಾಯಗಳು ತೀವ್ರ ಚರ್ಚೆಗೆ ಗ್ರಾಸವಾಗಿರುವ ಹಿನ್ನೆಲೆಯಲ್ಲಿ ವಾಸ್ತವ ಮನವರಿಕೆ ಮಾಡಲು ಜಾಗೃತ ಕರ್ನಾಟಕ ಸಂಘಟನೆಯಿಂದ ಜೂ.30ರಂದು ಸಂಜೆ 4ಕ್ಕೆ ಬೆಂಗಳೂರಿನ ನಾಗರಭಾವಿಯ ಬಾಪೂ ಸಭಾಂಗಣದಲ್ಲಿ ಬೃಹತ್ ಮುಖಾಮುಖಿ ಚರ್ಚೆ ಆಯೋಜಿಸಲಾಗಿದೆ ಎಂದು ಜಾಗೃತ ಕರ್ನಾಟಕ ರಾಜ್ಯ ಸಮಿತಿ ಸದಸ್ಯ ಮುಂಜುನಾಥ ಭೋವಿ ತಿಳಿಸಿದರು.
ಹಾವೇರಿ ಜಿಲ್ಲೆಯ ಬ್ಯಾಡಗಿ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್‌ಐಆರ್ ವಿಷಯದಲ್ಲಿ ರಾಜಕೀಯ ಪಕ್ಷಗಳು, ಸಾಮಾಜಿಕ ಸಂಘಟನೆಗಳು ಹಾಗೂ ಹಲವು ಸಮುದಾಯಗಳು ಪರ-ವಿರೋಧ ನಿಲುವು ವ್ಯಕ್ತಪಡಿಸುತ್ತಿವೆ. ಸಂಘಟನೆಗಳು, ಪ್ರತಿಪಕ್ಷಗಳು ತೀವ್ರವಾಗಿ ವಿರೋಧಿಸುತ್ತಿದ್ದರೆ, ಬಿಜೆಪಿ ಸಮರ್ಥಿಸುತ್ತಿದೆ” ಎಂದು ತಿಳಿಸಿದರು.
“ಈ ಹಿನ್ನೆಲೆಯಲ್ಲಿ ಮುಕ್ತ ಸಂವಾದ ಆಯೋಜಿಸಲಾಗಿದೆ. ಬಿಜೆಪಿಗೂ ಆಹ್ವಾನ ನೀಡಲಾಗಿದೆ. ಎಲ್ಲರೂ ವೇದಿಕೆಯಲ್ಲಿ ತಮ್ಮ ನಿಲುವು ಸ್ಪಷ್ಟಪಡಿಸಬೇಕು. ಚರ್ಚೆ ಪಾರದರ್ಶಕ, ನಿಷ್ಪಕ್ಷವಾಗಿರಲಿದೆ. ಕಾರ್ಯಕ್ರಮವನ್ನು ಆನ್‌ಲೈನ್‌ನಲ್ಲಿ ನೇರ ಪ್ರಸಾರ ಮಾಡಲಾಗುವುದು” ಎಂದರು.
ಸುದ್ದಿಗೋಷ್ಠಿಯಲ್ಲಿ ಉದಯ ಚೌಧರಿ, ಜಾವೇದ್ ಹಕೀಂ, ಮೇಲಗಿರಿಯಪ್ಪ ಕಾಕೋಳ, ಹನುಮಂತ ಕಾಟೇನಹಳ್ಳಿ, ಹೈದರ ಬೆಂಗಳೂರಿ, ರಮೇಶ ಗೌಡರ, ಮಲ್ಲಿಕಾರ್ಜುನ, ಹೊಸೂರು, ಸಂಘಟನೆ ಮುಖಂಡರು, ಕಾರ್ಯಕರ್ತರು ಇದ್ದರು.
This video cannot be played in your browser. Open the video directly





