ಹಾವೇರಿ | ದೇಶದಲ್ಲಿ ಹೊಸ ಸೃಷ್ಟಿಗೆ ಯುವ ಮನಸು ಪಲ್ಲಟವನ್ನು ನಿರೀಕ್ಷಿಸುತ್ತಿದೆ: ಹಿರಿಯ ಸಾಹಿತಿ ಸತೀಶ್ ಕುಲಕರ್ಣಿ

Date:

“ದೇಶದ ಯುವ ಮನಸುಗಳು ಪಲ್ಲಟದ ನಿರೀಕ್ಷೆಯಲ್ಲಿದೆ. ಆ ಪಲ್ಲಟದ ಭೂಮಿಕೆಯಾಗಿ ಇಡೀ ದೇಶಾದ್ಯಂತ ಇಂದು ವಿವಿಧ ತೊರೆಗಳಾಗಿ ಹೋರಾಟಗಳು ನಡೆಯುತ್ತಿವೆ” ಎಂದು ಹಿರಿಯ ಸಾಹಿತಿಗಳಾದ ಸತೀಶ ಕುಲಕರ್ಣಿ ಅಭಿಪ್ರಾಯಪಟ್ಟರು.

- Advertisement -

ಹಾವೇರಿ ನಗರದ ಪ್ರವಾಸಿಮಂದಿರದ ಸಭಾಂಗಣದಲ್ಲಿ ಶನಿವಾರ ಅಭಿಮತ ಬಳಗ ಹಾವೇರಿ ಆಯೋಜಿಸಿದ್ದ, ಜನನುಡಿ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಮಾಡಿ ಮಾತ‌ನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಎನ್‌ವಿಡಿಯಾ ಗೂಢಚರ್ಯೆ ಭೀತಿ: ಚೀನಾದ ಮೇಲಿನ ಚಿಪ್ ದಿಗ್ಬಂಧನ...

ನವೆಂಬರ್ 18-19ರಂದು ಚೀನಾದ ಶೆನ್‌ಜೆನ್‌ನಲ್ಲಿ ನಡೆಯಲಿರುವ ಶೃಂಗಸಭೆಯಲ್ಲಿ ಟ್ರಂಪ್ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಭೇಟಿಯಾಗಲಿದ್ದಾರೆ. ಅದಕ್ಕೆ ಕೆಲವೇ ದಿನಗಳ ಮೊದಲು ಈ ಹನಿ ಟ್ರ್ಯಾಪ್ ಹಗರಣ ಸ್ಫೋಟಗೊಂಡಿದೆ.‌ ಎರಡೂ ದೇಶಗಳಲ್ಲಿ...

ಹೊಸ ಓದು | ಶ್ರೀನಿವಾಸರಾಜು ದೊಡ್ಡೇರಿ ಅವರ ‘ಬಾಬಾ...

ಕನ್ನಡದ ಅಪರೂಪದ ಬರಹಗಾರ, ಅನುವಾದಕರಾದ ಶ್ರೀನಿವಾಸರಾಜು ದೊಡ್ಡೇರಿ ಅವರು ಅನುವಾದಿಸಿರುವ 'ಬಾಬಾ ಸಾಹೇಬ್' ಕೃತಿಯು ಇಂದು ಭಾನುವಾರ ಚಿತ್ರದುರ್ಗದ ಪತ್ರಕರ್ತರ ಭವನದಲ್ಲಿ ಲೋಕಾರ್ಪಣೆಗೊಳ್ಳಲಿದೆ. ಈ ಕೃತಿಯ ಒಂದು ಆಯ್ದ ಭಾಗ... ಈದಿನ ಓದುಗರಿಗಾಗಿ... 'ಭಾರತದಲ್ಲಿ...

ಒಬಿಸಿ ಮೀಸಲಾತಿ ಮತ್ತು ಕೆನೆಪದರ: ಸುಪ್ರೀಂನ ಮಾರ್ಚ್ ತೀರ್ಪಿನ...

ಒಬಿಸಿ ಮೀಸಲಾತಿ ಸೌಲಭ್ಯ ಪಡೆಯಲು 'ಕೆನೆಪದರ' ನಿರ್ಧರಿಸುವಾಗ ಕೇವಲ ಪೋಷಕರ ವಾರ್ಷಿಕ ವೇತನವನ್ನೇ ಏಕೈಕ ಮಾನದಂಡವಾಗಿ ಪರಿಗಣಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ತನ್ನ ಮಾರ್ಚ್ ತೀರ್ಪನ್ನು ಪುನರುಚ್ಚರಿಸಿದೆ. 1993ರ ಮೂಲ ನಿಯಮಗಳೇನು? ಕೆಳಹಂತದ...

“70 ರ ದಶಕದಲ್ಲಿ ಬಿಹಾರದಲ್ಲಿ ಛಾತ್ರ ಸಂಘರ್ಷ ಪರಿಷತ್ ಆಂದೋಲನ ನಡೆಯಿತು. ಜಯಪ್ರಕಾಶ್ ನಾರಾಯಣ ಮುಂಚೂಣಿಯಲ್ಲಿ ಚಳುವಳಿಯು ದೇಶದ ಗಮನ ಸೆಳೆದಿತ್ತು. ಅಲ್ಲದೇ ಯುವಜನರು ಹಚ್ಚಿದ ಕಿಡಿ ದೇಶದಲ್ಲಿ ಬದಲಾವಣೆ ತಂದಿತು ಎಂಬುದನ್ನು ನೋಡಿದ್ದೇವೆ” ಎಂದು ಸ್ಮರಿಸಿದರು.

“ಪ್ರಸ್ತುತ ಜನಮುಖಿ ಒಳ್ಳೆಯ ಉದ್ದೇಶದಿಂದ ಸಮಾಜದ ಪರವಾಗಿ ಮತ್ತು ವ್ಯಕ್ತಿ ಘನತೆಯನ್ನು ಕಾಪಾಡಿಕೊಂಡು ಬರುತ್ತಿದೆ. ಜೊತೆಗೆ ರಾಜಕೀಯ ಹುನ್ನಾರವನ್ನು ಬಯಲುಗೊಳಿಸಿ ಹೊಸದನ್ನು ಸೃಷ್ಟಿಸುವ ಉದ್ದೇಶದಿಂದ ಜನನುಡಿ ಕಾರ್ಯಕ್ರಮ ನಡೆಯುತ್ತಿರುವುದು ಸೂಕ್ತವಾಗಿದೆ. ನಾವೆಲ್ಲರೂ ಜನನುಡಿ ಕಾರ್ಯಕ್ರಮದ ಆಶಯದೊಟ್ಟಿಗೆ ಇದ್ದಿವಿ. ಪ್ರಸಕ್ತ ದುರಿತ ಸಂದರ್ಭದಲ್ಲಿ ಜರುಗುತ್ತಿರುವ ಯುವಜನ ರಾಜಕಾರಣದ ಕುರಿತಾಗಿ ಜರುಗುತ್ತಿರುವ ಜನನುಡಿ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಿದೆ. ಜನನುಡಿ ಕಾರ್ಯಕ್ರಮ ಯಶಸ್ವಿಯಾಗಲಿ” ಎಂದು ಹಾರೈಸಿದರು.

ಯುವ ಲೇಖಕರಾದ ದೇವರಾಜ ಹುಣಸಿಕಟ್ಟಿ ಮಾತನಾಡಿ, “ನುಡಿಯು ಸಿರಿಯಲ್ಲ ಬದುಕು ಧ್ಯೇಯ ಸಾಕಾರವಾಗಲಿ. ಆಳುವ ವ್ಯವಸ್ಥೆಗೆ ಆಳ್ವಿಕೆಗೆ ಬರುವ ಮುಂಚೆ ಕಣ್ಣು ಮೂಗು ಕಿವಿ ಎಲ್ಲವೂ ಚನ್ನಾಗಿ ಕೆಲಸ ಮಾಡುತ್ತಿರುತ್ತವೆ. ಅಧಿಕಾರಕ್ಕೆ ಬಂದ ತಕ್ಷಣವೇ ಕಿವಿನೂ ಕೇಳೊಲ್ಲ, ಕಣ್ಣೂ ಕಾಣಲ್ಲ. ಅಲ್ಲದೇ ಇಡೀ ಆಳುವ ವ್ಯವಸ್ಥೆಯೇ ಬಹು ಅಂಗ ವೈಫಲ್ಯ ಆವರಿಸುತ್ತದೆ‌. ಇದಕ್ಕೆ ಚುಚ್ಚುಮದ್ದು ನೀಡುವರಾರು? ಇಲ್ಲಿ ಬದುಕುವ ಜನರೇ ಪ್ರತಿರೋಧದ ಚುಚ್ಚುಮದ್ದು ನೀಡಲು ಮುಂದಾಗಬೇಕು” ಎಂದರು.

ಡಿಎಸ್ಎಸ್ ರಾಜ್ಯ ಕಾರ್ಯದರ್ಶಿ ಉಡಚಪ್ಪ ಮಾಳಗಿ ಮಾತನಾಡಿ, “ದೇಶದಲ್ಲಿ ಯುವಜನರು ಹತಾಶೆಗೊಳಗಾಗಿದ್ದಾರೆ. ಜನರ ಹಕ್ಕುಗಳು ಸುಲಭವಾಗಿ ಸಿಗುತ್ತಿಲ್ಲ. ತಮ್ಮ ಬದುಕಿನ ಭದ್ರತೆಗಾಗಿ ಜಾಗೃತರಾಗಿ ಐಕ್ಯ ಚಳುವಳಿಗೆ ಮುಂದಾಗಬೇಕಿದೆ” ಎಂದರು.

ಕಲಾವಿದರ ಸಂಘದ ಜಿಲ್ಲಾಧ್ಯಕ್ಷ ಡಾ. ತಿಪ್ಪೇಸ್ವಾಮಿ ಹೊಸಮನಿ, “ಉತ್ತಮ ಸಮಾಜ ನಿರ್ಮಾಣಕ್ಕೆ ಹೋರಾಟ ಮಾಡಬೇಕಾದ ಅನಿವಾರ್ಯತೆ ಬಂದಿದೆ. ಉತ್ತಮ ಬದುಕಿಗಾಗಿ ಜನ ಜಾಗೃತಿಗೊಂಡು ಪ್ರತಿರೋಧದ ಧ್ವನಿ ಎತ್ತಬೇಕಿದೆ” ಎಂದರು.

ಅಧ್ಯಕ್ಷತೆ ವಹಿಸಿದ್ದ ಹಾವೇರಿ ಅಭಿಮತ ಬಳಗದ ಮುಖ್ಯಸ್ಥರು ಬಸವರಾಜ ಪೂಜಾರ ಮಾತನಾಡಿ, “ಸಂವಿಧಾನ, ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಬಹುತ್ವದ ಆಶಯಗಳ ಎದುರು ಹಲವು ಬಗೆಯ ಸವಾಲುಗಳು ಎದುರಾಗುತ್ತಿರುವ ಇಂದಿನ ಸಂದರ್ಭದಲ್ಲಿ, ಯುವಜನರ ರಾಜಕೀಯ ಪ್ರಜ್ಞೆ, ಸಾಮಾಜಿಕ ಹೊಣೆಗಾರಿಕೆ ಮತ್ತು ಭವಿಷ್ಯದ ಭಾರತವನ್ನು ಕುರಿತ ಚರ್ಚೆಗಳಿಗೆ ವೇದಿಕೆಯಾದ ‘ಜನನುಡಿ–2026’ ನವಂಬರ್ 28 – 29 ರಂದು ಮಂಗಳೂರಿನಲ್ಲಿ ಎರಡು ದಿನಗಳ ಕಾಲ ನಡೆಯಲಿದೆ” ಎಂದರು.

“ಈ ದುರಿತ ಕಾಲದಲ್ಲಿ ಯುವಜನರು ಕೇವಲ ಪ್ರೇಕ್ಷಕರಾಗಿ ಉಳಿಯಬೇಕೇ ಅಥವಾ ದೇಶದ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ದಿಕ್ಕನ್ನು ನಿರ್ಧರಿಸುವ ಸಕ್ರಿಯ ಶಕ್ತಿಯಾಗಬೇಕೇ ಎಂಬ ಪ್ರಶ್ನೆಯನ್ನು ಜನನುಡಿ ಮುನ್ನೆಲೆಗೆ ತರಲಿದೆ. ಯುವಜನರ ಉದ್ಯೋಗ, ಶಿಕ್ಷಣ, ಬದುಕು, ಘನತೆ, ಹಕ್ಕುಗಳು ಮತ್ತು ರಾಜಕೀಯ ಭಾಗವಹಿಸುವಿಕೆಯನ್ನು ಕೇಂದ್ರವಾಗಿಟ್ಟುಕೊಂಡು ಸಮಕಾಲೀನ ಭಾರತದ ಸವಾಲುಗಳನ್ನು ವಿವಿಧ ಆಯಾಮಗಳಲ್ಲಿ ಜನನುಡಿ – 2026 ರಲ್ಲಿ ಚರ್ಚಿಸಲಾಗುತ್ತಿದ್ದು, ಸಮತೆ ಬಯಸುವ ಮನಸುಗಳೆಲ್ಲರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು” ಎಂದರು.

ಡಿವೈಎಫ್ಐ ಜಿಲ್ಲಾಧ್ಯಕ್ಷರಾದ ಬಸವರಾಜ ಎಸ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್ಎಫ್ಐ ಜಿಲ್ಲಾಧ್ಯಕ್ಷರಾದ ಅರುಣ ನಗವತ ವಂದಿಸಿದರು. ಈ ಸಂದರ್ಭದಲ್ಲಿ ಕವಿಗಳು ಚಂಸು ಪಾಟೀಲ, ಸಿಐಟಿಯು ಜಿಲ್ಲಾ ಸಂಚಾಲಕರು ಎ.ಕೆ ಹೆಬಸೂರು, ಭಗತ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಸತೀಶ್ ಎಂ.ಬಿ, ಬಿಎಸ್ಪಿ ಜಿಲ್ಲಾಧ್ಯಕ್ಷ ಎಂ.ಕೆ ಮಕಬುಲ್, ಸಹಮತ ಸಂಸ್ಥೆ ಕಾರ್ಯದರ್ಶಿ ಲಕ್ಷ್ಮೀಪ್ರಭ ಹುಲ್ಲೂರು, ಮಕ್ಕಳ ತೆರೆದ ತಂಗುದಾಣದ ಪುಟ್ಟಪ್ಪ ಹರವಿ, ಡಿಎಸ್ಎಸ್ ಜಿಲ್ಲಾ ಮುಖಂಡರಾದ ಶಂಭು ಕಳಸದ, ವಿಶ್ವಾಸ್ ಸಂಸ್ಥೆಯ ಚಂದ್ರು ಬಡಿಗೇರ, ಎಐಎಲ್.ಯು ಜಿಲ್ಲಾ ಮುಖಂಡರಾದ ನಾರಾಯಣ ಕಾಳೆ, ಅಮ್ಮ ಸಂಸ್ಥೆಯ ನಿಂಗಪ್ಪ ಆರೇರ, ಜನವಾದಿ ಮಹಿಳಾ ಸಂಘಟನೆಯ ಸಂಚಾಲಕಿ ಹಸೀನಾ ಹೆಡಿಯಾಲ, ಡಿವೈಎಫ್ಐ-ಎಸ್ಎಫ್ಐ ಜಿಲ್ಲಾ ಮುಖಂಡರು, ತಸ್ಲಿಮ್ ಕೆ.ಸಿ ಖಲಂದರ ಅಲ್ಲಿಗೌಡ್ರ, ರೇಣುಕಾ ಕಹಾರ, ಅರುಣ ನಗವತ, ಮಂಜುಳಾ ಹಾನಗಲ್, ದಿವ್ಯ ಪ್ರಶಾಂತ, ಅರ್ಚನಾ ದೇವತಿ, ಸರಸ್ವತಿ ಕಬ್ಬೂರು, ಸ್ವಪ್ನಾ, ದೀಕ್ಷಾ, ಶೃತಿ, ನಿಂಗರಾಜ ಪೂಜಾರ, ಶಂಭು ಸವದತ್ತಿ, ಪರಶು ಎಸ್, ಕಾಂತೇಶ್, ಧನುಷ್ ದೊಡ್ಮನಿ, ಮೈನುದ್ದೀನ್ ಇಲಿಬುಡ್ಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

WhatsApp Image 2024 10 05 at 15.43.57 586b60ff min e1728123396595
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪೊಲೀಸ್ ಎಸ್ಕಾರ್ಟ್‌ನಲ್ಲಿ ಉಡುಪಿಗೆ ಬಂದ ರವಿ ಪೂಜಾರಿ; ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗಿ

ಪೊಲೀಸ್ ಎಸ್ಕಾರ್ಟ್‌ನ ಬಿಗಿ ಭದ್ರತೆಯಲ್ಲಿ ಉಡುಪಿಗೆ ಆಗಮಿಸಿದ ಭೂಗತ ಪಾತಕಿ ರವಿ...

ಉಡುಪಿ | ಕುಂದಾಪುರದಲ್ಲಿ ಜನನುಡಿ–2026ರ ಸಿದ್ಧತಾ ಸಭೆ; ಪೋಸ್ಟರ್ ಬಿಡುಗಡೆ

ನವೆಂಬರ್ 28 ಮತ್ತು 29ರಂದು ಮಂಗಳೂರಿನಲ್ಲಿ ನಡೆಯಲಿರುವ ಜನನುಡಿ–2026 ಕಾರ್ಯಕ್ರಮವನ್ನು ಬೆಂಬಲಿಸಿ,...

ಚಿಕ್ಕಮಗಳೂರು | ಕಾಣೆಯಾಗಿದ್ದ ವಿದ್ಯಾರ್ಥಿ: ಮೃತದೇಹ ಪತ್ತೆ 

ಬಿಎಸ್‌ಸಿ ನರ್ಸಿಂಗ್ ವಿದ್ಯಾರ್ಥಿಯ ಮೃತದೇಹ ನಗರದ ಹೊರವಲಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ...

ಶಿರಸಿ | ಸಂಚಾರ ಪೊಲೀಸ್ ಠಾಣೆಯ ಮೂವರು ಹೆಡ್ ಕಾನ್ಸ್‌ಟೇಬಲ್‌ಗಳು ಅಮಾನತು

ಶಿರಸಿ: ಕರ್ತವ್ಯದ ವೇಳೆ ಮೇಲಧಿಕಾರಿಯೊಂದಿಗೆ ಅನುಚಿತವಾಗಿ ವರ್ತಿಸಿ, ಬೆದರಿಕೆ ಹಾಕಿದ ಆರೋಪದ...