ಹಾವೇರಿ | ಎಸ್ಎಫ್ಐ, ಡಿವೈಎಫ್ಐ ಕಚೇರಿಯಲ್ಲಿ ಬಾಲ ಸಂಘಂ ಮಕ್ಕಳ ಗ್ರಂಥಾಲಯ ಉದ್ಘಾಟನೆ 

Date:

“ವೃತ್ತಿ ಜೀವನದ ಜೊತೆಗೆ ಓದುವ ಹವ್ಯಾಸ ಹೆಚ್ಚಿಸಿಕೊಳ್ಳಲು ಮನೆಗೊಂದು ಗ್ರಂಥಾಲಯ ಅತ್ಯಂತ ಸಹಕಾರಿಯಾಗಿದೆ”ಎಂದು ಎಸ್ಎಫ್ಐ, ಡಿವೈಎಫ್ಐ ಕಚೇರಿಯಲ್ಲಿ ಬಾಲ ಸಂಘಂ ಮಕ್ಕಳ ಗ್ರಂಥಾಲಯ ಉದ್ಘಾಟಿಸಿ ಕಲಾವಿದೆ ನೇತ್ರಾ ಅಂಗಡಿ ಮಾತನಾಡಿದರು.

- Advertisement -

ಹಾವೇರಿ ನಗರದ ಶಿವಾಜಿನಗರ 2ನೇ ಕ್ರಾಸ್ ನಲ್ಲಿರುವ ಎಸ್ಎಫ್ಐ ಡಿವೈಎಫ್ಐ ಕಚೇರಿಯಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ ಜಿಲ್ಲಾ ಜಾಗೃತಿ ಸಮಿತಿ ಸಹಾಯಹಸ್ತದಿಂದ ಪುಸ್ತಕಗಳನ್ನು ಹಸ್ತಾಂತರ ಮಾಡುವ ಮೂಲಕ ಬಾಲ ಸಂಘಂ ಮಕ್ಕಳ ಗ್ರಂಥಾಲಯವನ್ನು ಉದ್ಘಾಟನೆ ಮಾಡಿ ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಡಿ.ಡಿ. ಕೋಸಾಂಬಿ | ಜ್ಞಾನದ ಹಲವು ಜಗತ್ತುಗಳನ್ನು ಶೋಧಿಸಿದ...

ಡಿ.ಡಿ. ಕೋಸಾಂಬಿಯವರ ಬದುಕು ಕೇವಲ ಯಶಸ್ಸಿನ ಕಥೆಯಷ್ಟೇ ಅಲ್ಲ; ಅದು ಅಸಾಧಾರಣ ಪ್ರತಿಭೆ ಹಾಗೂ ಮನುಷ್ಯ ಸಹಜ ಭಾವನೆಗಳ ನಡುವಿನ ಸುಂದರ ಪಯಣ. ತಮಿಳು ಇತಿಹಾಸಕಾರ ಎ.ಆರ್. ವೆಂಕಟಾಚಲಪತಿ ಅವರಂತಹ ವಿಮರ್ಶಕರು ಈ...

ಒಂದು ಬದಿ ಅಧಿಕಾರ ನಿರಾಕರಣೆ, ಮತ್ತೊಂದು ಬದಿ ಕರ್ತವ್ಯದ...

ಸೋನಿಯಾ ಗಾಂಧಿ ಅವರ ಈ ಆತ್ಮಕಥೆಯ ಆಯ್ದ ಭಾಗಗಳು ಕೇವಲ ರಾಜಕೀಯ ಇತಿಹಾಸದ ದಾಖಲೆಯಷ್ಟೇ ಅಲ್ಲ, ಬದಲಿಗೆ ಮನುಷ್ಯನ ಮನಸ್ಸಿನ ಆಳದ ಸಂವೇದನೆಗಳ ಕನ್ನಡಿ. ಅಧಿಕಾರ ಸಿಕ್ಕ ಕೂಡಲೇ ಅದನ್ನು ಬಾಚಿಕೊಳ್ಳಲು ಹಾತೊರೆಯುವ...

ಕಾಲಜ್ಞಾನ ಸಾರಿದ ಮಂಟೇದಲಿಂಗಯ್ಯ’: ನೀಲಗಾರರ ಸ್ವರವಚನಗಳಲ್ಲಿ ಅಡಗಿರುವ ಜನಪದ...

ಕಾಲದ ಬದಲಾವಣೆಯನ್ನು ಗ್ರಹಿಸುವ ಕಾಲಜ್ಞಾನ, ಎಲ್ಲರೊಳಗೂ ಬೆಳಗುವ ಪರಂಜ್ಯೋತಿಯ ತತ್ವ, ಕಪಟ ಧಾರ್ಮಿಕ ಆಚರಣೆಗಳನ್ನು ಪ್ರಶ್ನಿಸುವ ಮಂಟೇಸ್ವಾಮಿಯ ನಿಲುವು ಮತ್ತು ತಲೆಮಾರುಗಳಿಂದ ಈ ಮಹಾಕಾವ್ಯವನ್ನು ಜೀವಂತವಾಗಿಟ್ಟಿರುವ ನೀಲಗಾರರ ಗಾಯನ ಪರಂಪರೆ ತಂಬೂರಿಯ ನಾದ ಮೊಳಗುತ್ತದೆ....

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಹಿರಿಯ ಸಾಹಿತಿ ಸತೀಶ್ ಕುಲಕರ್ಣಿ ಮಾತನಾಡಿ, “ಪ್ರಯೋಗಶೀಲ ಮನೋಭಾವ ಹೊಂದಿದ್ದ ವಿದ್ಯಾರ್ಥಿ ಯುವಜನ ಹೋರಾಟದ ಸಂಗಾತಿಗಳು ಅಭ್ಯಾಸ ಹೋರಾಟವನ್ನು ಮೈಗೂಡಿಸಿಕೊಂಡು ಜೀವನ ರೂಪಿಸಿಕೊಂಡು ಸಮಾಜದಲ್ಲಿ ಮಾದರಿಯಾಗಿದ್ದಾರೆ. ಬಾಲ ಸಂಘಂ ಹೆಸರಿನ ಸಂಘ ರಚಿಸಿ ಮಕ್ಕಳಿಗೆ ಹಾಡು, ಕವಿತೆ, ಕವನ, ಚಿತ್ರಕಲೆ ನಾಟಕ, ಓದುವ ಹವ್ಯಾಸ ಬೆಳೆಸುತ್ತಿದ್ದಾರೆ. ಇದಕ್ಕೆ ಇನ್ನಷ್ಟು ಪುಷ್ಟಿಗಾಗಿ ಪುಸ್ತಕ ಪ್ರಾಧಿಕಾರ ಜಿಲ್ಲಾ ಜಾಗೃತಿ ಸಮಿತಿ ವತಿಯಿಂದ ಮಕ್ಕಳ ದಿನಾಚರಣೆ ವಿಶೇಷ ಗ್ರಂಥಾಲಯಕ್ಕೆ ಪುಸ್ತಕಗಳನ್ನು ವಿತರಣೆ ಮಾಡುತ್ತಿದ್ದೇವೆ” ಎಂದರು.

ಅಧ್ಯಕ್ಷತೆ ವಹಿಸಿದ ಡಿವೈಎಫ್ಐ ರಾಷ್ಟ್ರೀಯ ಮುಖಂಡರಾದ ಬಸವರಾಜ ಪೂಜಾರ ಮಾತನಾಡಿ, “ಇಡೀ ಜಿಲ್ಲೆಯಲ್ಲಿಯೇ ಕನ್ನಡ ಪುಸ್ತಕ ಪ್ರಾಧಿಕಾರ ಜಿಲ್ಲಾ ಜಾಗೃತ ಸಮಿತಿಯು ಬಹಳಷ್ಟು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ. ಪುಸ್ತಕಗಳನ್ನು ಎಲ್ಲಿ ತಲುಪಿಸಬೇಕು ಅಲ್ಲಿಗೆ ಈ ಪುಸ್ತಕ ಅಭಿಯಾನ ತಲುಪುತ್ತಿದೆ. ಸಮಿತಿ ಒಂದು ತಂಡವಾಗಿ ಕಾರ್ಯನಿರ್ವಹಿಸುತ್ತಿರುವ ಹೆಮ್ಮೆಯ ಸಂಗತಿ ಹೀಗೆ ನಿರಂತರವಾಗಿ ನಡೆಯಲಿ ನಾವು ನಿಮ್ಮೊಂದಿಗೆ ಕೈ ಜೋಡಿಸುತ್ತೇವೆ” ಎಂದರು.

ಪ್ರಾಸ್ತಾವಿಕವಾಗಿ ಕನ್ನಡ ಪುಸ್ತಕ ಪ್ರಾಧಿಕಾರ ಜಿಲ್ಲಾ ಜಾಗೃತ ಸಮಿತಿ ಸಂಚಾಲಕರಾದ ಎಸ್.ಆರ್ ಹಿರೇಮಠ, ಕಾರ್ಯಕ್ರಮ ಉದ್ದೇಶಿಸಿ ಡಿವೈಎಫ್ಐ ಜಿಲ್ಲಾ ಖಜಾಂಚಿ ರೇಣುಕಾ ಕಹಾರ ಮಾತನಾಡಿದರು. ಡಿವೈಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಪುಸ್ತಕ ಜಾಗೃತಿ ಸಮಿತಿಯ ವಿರೂಪಾಕ್ಷಪ್ಪ ವಿರೂಪಾಕ್ಷಪ್ಪ ಹಾವನೂರು, ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಖಲಂದರ್ ಅಲ್ಲಿಗೌಡ್ರು, ಎಸ್ಎಫ್ಐ ಜಿಲ್ಲಾಧ್ಯಕ್ಷ ಅರುಣ್ ಕುಮಾರ್ ನಗವತ, ಜಿಲ್ಲಾ ಉಪಾಧ್ಯಕ್ಷ ಶಂಭುಲಿಂಗ ಸವದತ್ತಿ, ಎಸ್ಎಫ್ಐ ಡಿವೈಎಫ್ಐ ಮುಖಂಡರಾದ ಪರಶುರಾಮ ಎಸ್, ಕಾಂತೇಶ್ ಹಳ್ಳೇರ, ಕುಮಾರ ಹಡಪದ, ಹನುಮಂತಗೌಡ,  ಸ್ವಪ್ನ ಕಬ್ಬೇರ್, ಲೋಕೇಶ್ ಎ, ಬಾಲ ಸಂಘಂನ ಧನುಷ್ ದೊಡ್ಡಮನಿ, ಮೈನುದೀನ್ ಇಲಿಬುಡ್ಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

WhatsApp Image 2024 10 05 at 15.43.57 586b60ff min e1728123396595
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉತ್ತರ ಕನ್ನಡ | ಕರಾವಳಿ ಭದ್ರತೆಗೆ ‘ಸೀ ವಿಜಿಲ್-2026’ ಸಮರಾಭ್ಯಾಸ

ಕರಾವಳಿ ಪ್ರದೇಶದ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಭಾರತೀಯ ನೌಕಾಪಡೆಯು...

ಜನರ ಮನೆ ಬಾಗಿಲಿಗೆ ಸರ್ಕಾರವೇ ಬಂದಿದೆ, ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಿ: ಕೊತ್ತೂರು ಮಂಜುನಾಥ್

ಕೋಲಾರ: ಸರ್ಕಾರಿ ಕಚೇರಿಗಳಿಗೆ ಅಲೆದಾಡಿದರೂ ಜನರ ಕೆಲಸಗಳು ಸಮರ್ಪಕವಾಗಿ ಆಗುತ್ತಿಲ್ಲ ಎಂಬ...

ವಿಜಯಪುರ |ಆಲಮಟ್ಟಿಯಿಂದ ನಾರಾಯಣಪುರಕ್ಕೆ ನೀರು ಹರಿಸುವುದನ್ನು ನಿಲ್ಲಿಸಿ: ರೈತ ಸಂಘಟನೆಗಳ ಆಗ್ರಹ

ಆಲಮಟ್ಟಿ ಜಲಾಶಯದಿಂದ ಕೆಪಿಸಿಎಲ್ ಮೂಲಕ ನಾರಾಯಣಪುರ ಜಲಾಶಯಕ್ಕೆ ಹರಿಸುತ್ತಿರುವ ನೀರನ್ನು ತಕ್ಷಣ...

ಉತ್ತರ ಕನ್ನಡ | ನಾಳೆ ಕೆಪಿಎಸ್‌ಸಿ ಪರೀಕ್ಷೆ; 4 ಕೇಂದ್ರಗಳಲ್ಲಿ 1,970 ಅಭ್ಯರ್ಥಿಗಳು ಭಾಗಿ

ಉತ್ತರ ಕನ್ನಡ ಜಿಲ್ಲೆಯಲ್ಲಿ ನವೆಂಬರ್ 15ರಂದು ನಡೆಯಲಿರುವ ಕೆಪಿಎಸ್‌ಸಿ ಗೆಜೆಟೆಡ್ ಪ್ರೊಬೇಷನರ್ಸ್...