ಮರ್ಯಾದೆಗೇಡು ಹತ್ಯೆ | ತಂಗಿಯನ್ನೇ ಕೆರೆಗೆ ತಳ್ಳಿ ಹತ್ಯೆಗೈದ ಕೋಮುವಾದಿ ಸಹೋದರ

Date:

ಮತ್ತೊಂದು ಸಮುದಾಯದ ಯುವಕನನ್ನು ಪ್ರೀತಿಸುತ್ತಿದ್ದಾಳೆಂಬ ಕಾರಣಕ್ಕೆ ಕೋಮುವಾದಿ, ವಿಕೃತ ಮನಸ್ಸಿನ ಯುವಕನೊಬ್ಬ ತನ್ನ ತಂಗಿಯನ್ನೇ ಕೆರೆಗೆ ದೂಡಿ ಹತ್ಯೆಗೈದಿದ್ದಾನೆ. ತಂಗಿಯನ್ನು ರಕ್ಷಿಸಲು ಹೋದ ತಾಯಿಯೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ದುರ್ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಹಿರಿಕ್ಯಾತನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಧನುಶ್ರೀ ಮತ್ತು ಆಕೆಯ ತಾಯಿ ಅನಿತಾ ಹತ್ಯೆಗೀಡಾದ ದುರ್ದೈವಿಗಳು. ನಿತೀಶ್‌ ಹತ್ಯೆಗೈದ ವಿಕೃತ ಆರೋಪಿ ಎಂದು ವರದಿಯಾಗಿದೆ.

ಧನುಶ್ರೀ ಅಂತಿಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದರು. ಆಕೆ ಮತ್ತೊಂದು ಕೋಮಿನ ಯುವಕನನ್ನು ಪ್ರೀತಿಸುತ್ತಿದ್ದರು. ಆತನೊಂದಿಗಿನ ಪ್ರೀತಿಯನ್ನು ಬಿಟ್ಟುಬಿಡುವಂತೆ ಮನೆಯವರು ಒತ್ತಾಯಿಸಿದ್ದರು. ಆದರೂ, ಆಕೆ ಪ್ರೀತಿಯನ್ನು ಮುಂದುವರೆಸಿದ್ದರು. ಇತ್ತೀಚೆಗೆ ನಡೆದ ದೊಡ್ಡಹೆಜ್ಜೂರು ಜಾತ್ರೆಯಲ್ಲಿ ಪ್ರೇಮಿಗಳನ್ನು ನೋಡಿದ್ದ ನಿತೀಶ್ ಕೋಪಗೊಂಡಿದ್ದ. ಇದರಿಂದಾಗಿಯೇ ಆಕೆಯನ್ನು ಕೊಲೆ ಮಾಡಿದ್ದಾನೆ ಎಂದು ಹೇಳಲಾಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಧನುಶ್ರೀ ಕೊಲೆಗೆ ಸಂಚು ಹಾಕಿದ್ದ ನಿತೀಶ್, ಮಂಗಳವಾರ ರಾತ್ರಿ, ಆಕೆಯನ್ನು ಮಾತ್ರ ಕರೆದರೆ ಬರುವುದಿಲ್ಲವೆಂದು ತಮ್ಮ ತಾಯಿಯನ್ನೂ ಸಂಬಂಧಿಕರ ಮನೆಗೆ ಹೋಗಲೆಂದು ಬೈಕ್‌ನಲ್ಲಿ ಕರೆದೊಯ್ದಿದ್ದಾನೆ. ಆದರೆ, ಮರೂರು ಗ್ರಾಮದ ಕೆರೆಯ ಬಳಿ ಅವರನ್ನು ಇಳಿಸಿದ್ದು, ಧನುಶ್ರೀಯನ್ನು ಕೆರೆಗೆ ತಳ್ಳಿದ್ದಾನೆ. ಆಕೆಯನ್ನು ರಕ್ಷಿಸಲು ಹೋದ ತಾಯಿ ಅನಿತಾ ಕೂಡ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ರಾತ್ರಿ 10 ಗಂಟೆಗೆ ಮನೆಗೆ ಮರಳಿದ ಆರೋಪಿ ನಿತೀಶ್‌, ತಾನು ಎಸಗಿದ ಕೃತ್ಯದ ಬಗ್ಗೆ ತಂದೆ ಸತೀಶ್‌ಗೆ ತಿಳಿಸಿದ್ದಾನೆ. ಸತೀಶ್ ಅವರು ಮಗನ ವಿರುದ್ಧ ಹುಣಸೂರು ಗ್ರಾಮಾಂತರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

“ಧನುಶ್ರೀ ಪ್ರೀತಿಸುತ್ತಿದ್ದ ಯುವಕನನ್ನು ಬಿಟ್ಟುಬಿಡುವಂತೆ ಮನವೊಲಿಸಲು ಯತ್ನಿಸಿದ್ದೆವು. ಆದರೆ, ಆಕೆ ಪ್ರೀತಿಯನ್ನು ಮುಂದುವರೆಸಿದ್ದಳು. ಹೀಗಾಗಿ, ಕಳೆದ ಏಳು ತಿಂಗಳಿಂದ ಆಕೆಯ ಜೊತೆ ನಿತೀಶ್ ಮಾತು ಬಿಟ್ಟಿದ್ದ” ಎಂದು ಸತೀಶ್ ಅವರು ತಮ್ಮ ದೂರಿನಲ್ಲಿ ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

“ಆರೋಪಿ ಮರ್ಯಾದೆಗೇಡು ಹತ್ಯೆ ಎಸಗಿದ್ದಾನೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ” ಎಂದು ಪೊಲೀಸರು ತಿಳಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‌ರಾಯಚೂರು | ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧೆ: ಬಿ.ವಿ ನಾಯಕ

ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ರಾಯಚೂರು ಕ್ಷೇತ್ರದಲ್ಲಿ ಸ್ಪರ್ಧಿಸಲು ನಾನು ಆಕಾಂಕ್ಷಿಯಾಗಿದ್ದೇನೆ....

ತುಮಕೂರು | ಕಲೆಯ ಗ್ರಹಿಕೆ ಮೇಲೆ ನಿರ್ಬಂಧ ಹೇರುವುದು ಅಪಾಯಕಾರಿ: ವಿಮರ್ಶಕ ರಾಘವೇಂದ್ರರಾವ್

ಕಲೆಯ ಗ್ರಹಿಕೆ ಮೇಲೆ ನಿರ್ಬಂಧಗಳನ್ನು ಹೇರುವುದು ಅಪಾಯಕಾರಿಯಾಗಿದೆ. ಗ್ರಹಿಕೆಯು ನಿಯಮಬದ್ಧವಾಗಿದ್ದರೂ ನಿರ್ಬಂಧ...

ಗದಗ | ಪ್ರತಿಯೊಬ್ಬರಿಗೂ ಮುಖ್ಯವಾದ ಸಂಪತ್ತು ಆರೋಗ್ಯ; ಎಂಎಲ್‌ಸಿ ಸಂಕನೂರ

ಪ್ರತಿಯೊಬ್ಬರಿಗೂ ಆರೋಗ್ಯ ಸಂಪತ್ತು ಮುಖ್ಯವಾದ ಸಂಪತ್ತಾಗಿದೆ. ನೌಕರರು ತಮ್ಮ ಆರೋಗ್ಯ ಸಂರಕ್ಷಣೆಗೆ...

ತುಮಕೂರಿನಲ್ಲಿ ನೊಳಂಬ ಲಿಂಗಾಯತರಿಗೆ ಟಿಕೆಟ್ ನೀಡುವಂತೆ ಸ್ವಾಮೀಜಿಗಳ ಒತ್ತಾಯ

ಮುಂದಿನ ಲೋಕಸಭಾ ಚುನಾವಣೆಗೆ ತುಮಕೂರು ಕ್ಷೇತ್ರದಲ್ಲಿ ನೊಳಂಬ ಲಿಂಗಾಯತರಿಗೆ ಟಿಕೆಟ್ ಕೊಡುವಂತೆ...