ಕಲಬುರಗಿ | ಮಕ್ಕಳಿಗೆ ಹಾಲು ಕುಡಿಸುವ ಮೂಲಕ ಬಸವ ಪಂಚಮಿ ಆಚರಣೆ

Date:

ಕಲಬುರಗಿ ನಗರದ ಶಹಾಬಾದ ರಸ್ತೆಯ ನೃಪತುಂಗ ಕಾಲೋನಿಯ ತಳ ಸಮುದಾಯ ಬುಡುಗ ಜಂಗಮ ಬಡವಾಣೆಯಲ್ಲಿ ಮಕ್ಕಳಿಗೆ ಹಾಲು ಕುಡಿಸುವ ಮೂಲಕ ಬಸವ ಪಂಚಮಿ ಕಾರ್ಯಕ್ರಮ ಆಚರಿಸಲಾಯಿತು.

ದಿನೇಶ ದೊಡ್ಡಮನಿ ಅವರು ಮಾತನಾಡಿ, “ನಾಗರ ಪಂಚಮಿ ಹಬ್ಬ ಭಾರತ ದೇಶದ ಮೂಲ ನಿವಾಸಿಗಳಾದ ನಾಗಾ ಸಮುದಾಯ ಜನರನ್ನು ಕೊಂದಿರುವ ದಿನವನ್ನು ಹಾಗೂ ಸಾಂಸ್ಕೃತಿಕ ನಾಯಕ ವಿಶ್ವ ಗುರು ಬಸವಣ್ಣನವರ ಲಿಂಗೈಕ್ಯ ಆದ ದಿನದಲ್ಲಿ ಸಂಪ್ರದಾಯವಾದಿ ವೈದಿಕರು ಶತಮಾನಗಳಿಂದ ನಾಗರ ಹಾವಿಗೆ ಹಾಲು ಎರೆಯುವ ಮೂಲಕ ನಾಗರ ಪಂಚಮಿ ಹಬ್ಬ ಆಚರಣೆ ಮಾಡುತ್ತಿದ್ದಾರೆ. ಇದನ್ನು ನೋಡಿದರೆ ನಮ್ಮ ಹಿರಿಯರನ್ನು ಕೊಂದಿರುವ ದಿನವನ್ನು ಖುಷಿ ಪಡುವಂತೆ ಮಾಡಿದ್ದಾರೆ. ಇದು ನಿಲ್ಲಬೇಕು. ನಿಜವಾದ ಇತಿಹಾಸ ಅರಿತು ಬಾಳಬೇಕು ಎಂದರು.

ಸುನಿಲ್ ಮಾರುತಿ ಮಾನ್ಪಡೆ ಮಾತನಾಡಿ, “ನಾಡಿನಲ್ಲಿ ಮೌಢ್ಯತೆ, ಕಂದಾಚಾರ, ನಂಬಿಕೆಗಳ ಹೆಸರಿನಲ್ಲಿ ಪೌಷ್ಠಿಕ ಆಹಾರವನ್ನು ನೆಲಕ್ಕೆ ಚೆಲ್ಲುವ ಮೂಲಕ ಅಜ್ಞಾನ ಬೆಳಸುವುದು ನಿಲ್ಲಿಸಬೇಕು. ವಿಜ್ಞಾನ, ಮಾಹಿತಿ ತಂತ್ರಜ್ಞಾನ ಬೆಳೆಯುತ್ತಿರುವ ದಿನಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು. ಬಸವಣ್ಣನವರು 12ನೇ ಕಾಯಕ ದಾಸೋಹದ ಮೂಲಕ ಆಹಾರದ ಮಹತ್ವ ಸಾರಿ ಹೇಳಿದ್ದಾರೆ. ಬಸವ ತತ್ವ ಚಿಂತನೆ ಮೈಗೂಡಿಸಿಕೊಳ್ಳಬೇಕು” ಎಂದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ವಿಠ್ಠಲ ಚಿಕಣಿ ಮಾತನಾಡಿ, “ಕಳೆದ 15 ವರ್ಷಗಳಿಂದ ಬಸವ ಪಂಚಮಿ ಹಬ್ಬ ಆಚರಿಸುತ್ತಾ ಬಡ ಮಕ್ಕಳಿಗೆ ಹಾಲು ಕುಡಿಸುವ ಮೂಲಕ ಅಪೌಷ್ಟಿಕತೆ ನಿವಾರಣೆ ಹಾಗು ಮೌಢ್ಯತೆ ನಿವಾರಣೆಗೆ ಶ್ರಮಿಸುತ್ತಿದ್ದೇವೆ” ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಭುಲಿಂಗ ಮಹಾಗಾಂವಕರ್ ವಹಿಸಿದ್ದರು. ಸಂತೋಷ ಮೇಲಿನಮನಿ ಪ್ರಾಸ್ತಾವಿಕ ಮಾತನಾಡಿದರು

ಮಾನವ ಬಂಧುತ್ವ ವೇದಿಕೆ ನಾಗೇಂದ್ರ ಜವಳಿ, ಮೈಲಾರಿ ದೊಡ್ಡಮನಿ, ಜಾಗತಿಕ ಲಿಂಗಾಯತ ಮಹಾ ಸಭಾದ ಸಂಗಮೇಶ ಗುಬ್ಬೇವಾಡ, ಶಶಿಕಾಂತ್, ಬುಡುಗ ಜಂಗಮ ಮುಖಂಡರಾದ ಮಾರೆಪ್ಪ ಇತರರು ಇದ್ದರು.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧಾರವಾಡ | ಸೆ. 15ಕ್ಕೆ ಪ್ರಜಾಪ್ರಭುತ್ವ ದಿನ; ಅಧಿಕಾರಿಗಳು ಪಾಲ್ಗೊಳ್ಳುವುದು ಕಡ್ಡಾಯ: ಸಂತೋಷ್ ಲಾಡ್

ರಾಜ್ಯ ಸರಕಾರವು ಸೆಪ್ಟೆಂಬರ್ 15 ರಂದು 'ಪ್ರಜಾಪ್ರಭುತ್ವ ದಿನ'ವನ್ನು ವಿಶೇಷವಾಗಿ ಆಚರಿಸಲು...

ರಾಯಚೂರು | ಒಳ ಮೀಸಲಾತಿ ಅನುಷ್ಠಾನಕ್ಕೆ ನಿರ್ಲಕ್ಷ್ಯ: ಸೆ.12ರಂದು ರಾಜ್ಯಾದ್ಯಂತ ತಮಟೆ ಚಳವಳಿ

ಪರಿಶಿಷ್ಟ ಜಾತಿಯಲ್ಲಿನ ಉಪಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಲು ಸುಪ್ರೀಂ ಕೋರ್ಟ್ ತೀರ್ಪು...

ಮಂಡ್ಯ | ಸೆ.8ರಂದು ಪೂರ್ಣಚಂದ್ರ ತೇಜಸ್ವಿ-86 ರ ‘ಕಾಡು ಹಕ್ಕಿಯ ನೆನಪಲ್ಲಿ ಒಂದು ದಿನ’ ಕಾರ್ಯಕ್ರಮ

ಚಿತ್ರಕೂಟ ಬಳಗ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ 'ಪೂರ್ಣಚಂದ್ರ...