ಕಲಬುರಗಿ | ಪರಿಷ್ಕೃತ ವೇತನಕ್ಕೆ ಗುಲ್ಬರ್ಗಾ ವಿವಿ ಗುತ್ತಿಗೆ ನೌಕರರ ಆಗ್ರಹ

Date:

ಗುಲಬರ್ಗಾ ವಿಶ್ವವಿದ್ಯಾಲಯ ಗುತ್ತಿಗೆ ನೌಕರರಿಗೆ ಸರ್ಕಾರ ಜಾರಿಗೊಳಿಸಿರುವ ಪರಿಷ್ಕೃತ ವೇತನಕ್ಕಾಗಿ ‌ಆಗ್ರಹಿಸಿ ಗುತ್ತಿಗೆ ನೌಕರರ ಕಲ್ಯಾಣ ಸಂಘದಿಂದ ಸತತ ನಾಲ್ಕು ದಿನಗಳಿಂದ ಧರಣಿ ನಡೆಸುತ್ತಿದ್ದಾರೆ.

ಕಲಬುರಗಿ ನಗರದಲ್ಲಿ ನಡೆಯುತ್ತಿರುವ ಧರಣಿ ಉದ್ದೇಶಿಸಿ ಅಧ್ಯಕ್ಷೆ ಶೀಲಪ್ರಕಾಶ್ ದೊಡ್ಡಮನಿ ಮಾತನಾಡಿ, “ವಿಶ್ವವಿದ್ಯಾಲಯದಲ್ಲಿ ಕಳೆದ 10-15 ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಒಟ್ಟು 315 ಮಂದಿ ಗುತ್ತಿಗೆ ನೌಕರರು ಕಾರ್ಯನಿರ್ಹಿಸುತ್ತಿದ್ದೇವೆ. ಕಳೆದ 2 ವರ್ಷಗಳಿಂದ ಸರ್ಕಾರ ಜಾರಿಗೊಳಿಸಿ ಪರಷ್ಕೃತ ಕನಿಷ್ಠ ವೇತನದ ಕುರಿತು ವಿ ವಿ ಕುಲಸಚಿವರಿಗೆ ಹಲವು ಬಾರಿ ಮನವಿ ಪತ್ರ ಸಲ್ಲಿಸಿದರು.

“ಸದರಿ ವಿಷಯದ ಕುರಿತು ಯಾವುದೇ ರೀತಿಯ ಕ್ರಮ ತೆಗೆದುಕೊಳ್ಳದೆ ಹಾಗೂ ಸರ್ಕಾರದ ಅಧಿಸೂಚನೆಗೆ ಕವಡೆ ಕಾಸಿನ ಕಿಮ್ಮತ್ತು ನೀಡದೆ ನಮಗೆ ಅನ್ಯಾಯವೆಸಗುತ್ತಿದ್ದಾರೆ”‌ ಎಂದು ಆರೋಪಿಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ಕಲಬುರಗಿ | ಅತಿಥಿ ಉಪನ್ಯಾಸಕರ ವೇತನ ಹೆಚ್ಚಳಕ್ಕೆ ಆಗ್ರಹ; ಅನಿರ್ದಿಷ್ಟಾವಧಿ ಸತ್ಯಾಗ್ರಹ

“ಈ ಅನ್ಯಾಯದ ವಿರುದ್ಧ ನಮ್ಮ ಹಕ್ಕಿಗಾಗಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಾಹ ನಡೆಸುತ್ತಿದ್ದು, ನಮಗೆ ನ್ಯಾಯ ಸಿಗುವವರೆಗೆ ಧರಣಿ ಸತ್ಯಾಗ್ರಹ ಮುಂದುವರೆಸುತ್ತೇವೆ” ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ವಿಜಯಕುಮಾರ ಕೆಂಗಲ್, ಪ್ರಧಾನ ಕಾರ್ಯದರ್ಶಿ ಚಂದ್ರಶಾ ಎಂ ಎಸ್, ಶೀಲಪ್ರಕಾಶ ದೊಡ್ಡಮನಿ ಇತರರು ಇದ್ದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೊಪ್ಪಳ | ಗಣಪತಿ ಮೂರ್ತಿ ಇರುವ ಟ್ರಾಕ್ಟರ್‌ಗೆ ಲಾರಿ ಡಿಕ್ಕಿ; ನಾಲ್ವರಿಗೆ ಗಂಭೀರ ಗಾಯ

ಗಣೇಶ ಚತುರ್ಥಿಯ ಅಂಗವಾಗಿ ಗಣಪತಿ ಮೂರ್ತಿಯನ್ನು ಸಾಗಿಸುತ್ತಿದ್ದ ಟ್ರ್ಯಾಕ್ಟರ್‌ಗೆ ಹಿಂಬದಿಯಿಂದ ಲಾರಿ...

ಮಂಗಳೂರು | ಶೀಘ್ರದಲ್ಲೇ ‘ಬ್ಯಾರಿ ಭವನ’ಕ್ಕೆ ಶಂಕುಸ್ಥಾಪನೆ: ಸ್ಪೀಕರ್ ಯು ಟಿ ಖಾದರ್

ಆರು ಕೋಟಿ ಅನುದಾನದಲ್ಲಿ ಬ್ಯಾರಿ ಭವನ ನಿರ್ಮಾಣವಾಗಲಿದ್ದು, ಶೀಘ್ರದಲ್ಲೇ ಶಂಕುಸ್ಥಾಪನೆ ನೆರವೇರಿಸಲಾಗುವುದು...

ಬೀದರ್‌ | ಬಸವಣ್ಣ, ವಚನಗಳು ಉಳಿದರೆ ಕನ್ನಡ ಉಳಿಯುವುದು : ಕುಂ.ವೀರಭದ್ರಪ್ಪ

ಬಸವಣ್ಣ ಹಾಗೂ ಅಕ್ಕ ಮಹಾದೇವಿ ಎಂಬ ಎರಡು ನಾಮವಾಚಕ ಕನ್ನಡದ ಬಹುದೊಡ್ಡ...