ಕಲಬುರಗಿ | ಮೈಕ್ರೊ ಫೈನಾನ್ಸ್‌ ಕಿರುಕುಳ : ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

Date:

ಮೈಕ್ರೊ ಫೈನಾನ್ಸ್‌ ಸಿಬ್ಬಂದಿ ಕಿರುಕುಳಕ್ಕೆ ಬೇಸತ್ತು ಬೇಕರಿ ಕಾರ್ಮಿಕರೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಕುರಿತು ಮೃತರ ಪತ್ನಿ ನಸೀಮಾ ಬೇಗಂ ನೀಡಿದ ದೂರಿನ ಅನ್ವಯ ಸುಲೇಪೇಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

- Advertisement -

ಚಿಂಚೋಳಿ ತಾಲ್ಲೂಕಿನ ಸುಲೇಪೇಟದಲ್ಲಿ ಸಲೀಂ ಕಾಸಿಂ ಸಾಬ್ (46) ಆತ್ಮಹತ್ಯೆ ಮಾಡಿಕೊಂಡವರು. ಮೂಲತಃ ಸೇಡಂನವರಾದ ಸಲೀಂ ಹಲವಾರು ವರ್ಷಗಳಿಂದ ಸುಲೇಪೇಟದಲ್ಲಿಯೇ ನೆಲೆಸಿದ್ದರು. ಸುಮಾರು ₹20 ಲಕ್ಷಕ್ಕೂ ಅಧಿಕ ಸಾಲ ಮಾಡಿದ್ದರು ಎನ್ನಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಶಿಕಾರಿಪುರ | ಬೀಗರೂಟ ಹಾಕಿದ್ರೆ 1 ಲಕ್ಷ, ಉಂಡ್ರೆ...

ಮದುವೆ ಅಂದರೆ ಕೇವಲ ಎರಡು ಮನಸುಗಳ ಮಿಲನ ಮಾತ್ರವಲ್ಲ, ಬಂಧು-ಬಳಗದ ಸಂಭ್ರಮ. ಆದರೆ ಇತ್ತೀಚಿನ ದಿನಗಳಲ್ಲಿ ಮದುವೆ ಮತ್ತು ಆದಾದ ಬಳಿಕ ಅದ್ದೂರಿಯಾಗಿ ಹಮ್ಮಿಕೊಳ್ಳುವ 'ಬೀಗರ ಊಟ' (ಬಾಡೂಟ) ಕೇವಲ ಸಂಪ್ರದಾಯವಾಗಿ ಉಳಿಯದೆ,...

ನಾಳೆ ಜಿಎಸ್‌ಟಿ ಮಂಡಳಿ ಸಭೆ: ಅಧಿಕಾರ ಹಂಚಿಕೆಯ ಅಸಮತೋಲನ;...

ಜಿಎಸ್‌ಟಿ ಮಂಡಳಿಯು ದೇಶದ 'ಸಹಕಾರ ಒಕ್ಕೂಟ ವ್ಯವಸ್ಥೆ'ಗೆ ಒಂದು ಉದಾಹರಣೆಯಾಗಿದ್ದರೂ, ಮತದಾನದ ಪ್ರಕ್ರಿಯೆಯಲ್ಲಿ ಕೇಂದ್ರಕ್ಕಿರುವ ಮೇಲುಗೈ ರಾಜ್ಯಗಳ ಸ್ವಾಯತ್ತತೆಗೆ ಧಕ್ಕೆ ತರುತ್ತಿದೆ ಎಂಬುದು ಸ್ಪಷ್ಟ. ಜಿಎಸ್‌ಟಿ ಜಾರಿಗೆ ಬಂದ ನಂತರ ರಾಜ್ಯಗಳು ತಮ್ಮ...

ತನ್ನ ಕಾದಂಬರಿಗಳ ಪಾತ್ರಗಳಂತೆಯೇ ಜೀವಿಸಿದ್ದ ಜನಪ್ರಿಯ ಕಾದಂಬರಿಕಾರ ಜೆಫ್ರಿ...

ಜನಪ್ರಿಯ ಕಾದಂಬರಿಕಾರ ಜೆಫ್ರಿ ಆರ್ಚರ್, ತಮ್ಮ 86ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಸೇನೆ, ಪೊಲೀಸ್, ದೈಹಿಕ ಶಿಕ್ಷಣ ಶಿಕ್ಷಕ, ರಾಜಕಾರಣಿ, ಕಾದಂಬರಿಕಾರ... ಅವರ ಬದುಕೇ ಕಾದಂಬರಿಯ ಕಥಾವಸ್ತುವಾಗಿತ್ತು. ತಮ್ಮ ಬದುಕಿನ ಕೊನೆಯ ದಿನವೂ ಅವರು...

ಪರಿಹಾರಕ್ಕೆ ಆಗ್ರಹ:

ಸಲೀಂ ಆತ್ಮಹತ್ಯೆ ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು, ನಾಗರಿಕ ಹೋರಾಟ ಸಮಿತಿ ನೇತೃತ್ವದಲ್ಲಿ ಹೆದ್ದಾರಿಯಲ್ಲಿ ಸಂಚಾರ ತಡೆದು ಸುಲೇಪೇಟದಲ್ಲಿ ಪ್ರತಿಭಟನೆ ನಡೆಸಿದರು.

ಮೃತನ ಕುಟುಂಬಕ್ಕೆ ₹1 ಕೋಟಿ ಪರಿಹಾರ ಹಾಗೂ ಒಬ್ಬರಿಗೆ ಸರ್ಕಾರಿ ಉದ್ಯೋಗ ಮತ್ತು ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಕಂದಾಯ ನಿರೀಕ್ಷಕ ಕೇಶವ ಕುಲಕರ್ಣಿ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಇದನ್ನೂ ಓದಿ : ಕಲಬುರಗಿ | ದಲಿತರಿಗೆ ಕ್ಷೌರ ಮಾಡಲು ನಕಾರ; ಕ್ಷೌರಿಕನ ವಿರುದ್ಧ ಜಾತಿ ದೌರ್ಜನ್ಯ ಪ್ರಕರಣ ದಾಖಲು

ಪ್ರತಿಭಟನೆಯಲ್ಲಿ ತಾಹೇರ್ ಪಟೇಲ್, ರಜಾಕ್ ಪಟೇಲ್, ಮೋಯಿನ್ ಮೋಮಿನ್, ನಸೀರ್ ಮದ್ದರಗಿ, ಲಾಡಲೆಸಾಬ್, ಫಾರುಕ್, ರುದ್ರಮುನಿ ರಾಮತೀರ್ಥಕರ್, ಮಲ್ಲಿಕಾರ್ಜುನ ಗುಲಗುಂಜಿ, ಫಕ್ರೊದ್ದಿನ್ ಚಾಂಗಲೇರಾ, ಮಹಮದ್ ಫಾಜಿಲ್, ನವಾಜ್ ಪಟೇಲ್‌ ಬುರಾನ ಪಟೇಲ್, ಜಮೀರ್ ಮಿಯಾ, ರಸೂಲ್ ಮೊದಲಾದವರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಂತಾಮಣಿ | ಕಾರು ಡಿವೈಡರ್‌ಗೆ ಡಿಕ್ಕಿ:ಎರಡು ವರ್ಷದ ಕಂದಮ್ಮ ಸಾವು, ಐವರಿಗೆ ಗಂಭೀರ ಗಾಯ

ಜೋರು ಮಳೆಯಿಂದಾಗಿ ರಸ್ತೆ ಮಧ್ಯದಲ್ಲಿದ್ದ ಡಿವೈಡರ್ ಸರಿಯಾಗಿ ಕಾಣಿಸದೆ,ಚಾಲಕನ ನಿಯಂತ್ರಣ ತಪ್ಪಿದ...

ರಾಯಚೂರು | ನಾಳೆ ಜಿಲ್ಲೆಗೆ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಭೇಟಿ

ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರು ನಾಳೆ (ಅಕ್ಟೋಬರ್ 8ರಂದು) ರಾಯಚೂರು ಹಾಗೂ...

ಮಂಗಳೂರು | 350 ಪೊಲೀಸ್ ಠಾಣೆಗಳಲ್ಲಿ ಹುಡುಕಿದರೂ ‘ಲವ್ ಜಿಹಾದ್’ ದೂರು ಸಿಗಲಿಲ್ಲ : ಎಂ.ಜಿ. ಹೆಗಡೆ

‘ಲವ್ ಜಿಹಾದ್’ ಕುರಿತು ಕಳೆದ ಎರಡು ದಶಕಗಳಿಂದ ನಡೆಯುತ್ತಿರುವ ಚರ್ಚೆ, ಪ್ರಚಾರ...

ಕಲಬುರಗಿ | ಹಳೆಯ ನೆನಪುಗಳಿಗೆ ಮರುಜೀವ: ಹಳೆಯ ವಿದ್ಯಾರ್ಥಿಗಳ ಗುರುವಂದನಾ, ಸ್ನೇಹ ಸಮ್ಮಿಲನ ಕಾರ್ಯಕ್ರಮ

ಅಫಜಲಪುರ ತಾಲ್ಲೂಕಿನ ಮಾಶಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ...