ಮಂಡ್ಯ | ಯಶಸ್ವಿಯಾಗಿ ನಡೆದ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ

Date:

ಮಂಡ್ಯ ತಾಲೂಕು ಹೊಳಲು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿ. ಆದಿಚುಂಚನಗಿರಿ ಆಸ್ಪತ್ರೆ, ಬೆಂಗಳೂರು ಕಿಮ್ಸ್ ಆಸ್ಪತ್ರೆ ಕಿದ್ವಾಯಿ ಗ್ರಂಥಿ ಆಸ್ಪತ್ರೆ ಇವರ ಸಹಯೋಗದೊಂದಿಗೆ “ಬೃಹತ್ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ”ವು ಈ ದಿನ ಹೊಳಲು ಗ್ರಾಮದಲ್ಲಿ ಯಶಸ್ವಿಯಾಗಿ ನಡೆಯಿತು
ಶತಮಾನೋತ್ಸವ ಸಂಭ್ರಮದ ಪ್ರಯುಕ್ತ ಉಚಿತ ಆರೋಗ್ಯ ಶಿಬಿರವು ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ನಡೆಯಿತು.
ಆದಿಚುಂಚನಗಿರಿ ಶಾಖ ಮಠದ ಪುರುಷೋತ್ತಮ ನಂದನಾಥ ಸ್ವಾಮೀಜಿ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ನಂತರ ಮಾತನಾಡುತ್ತಾ ಈ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ನೂರು ವರ್ಷ ಪೂರೈಸಿದ ಪ್ರಯುಕ್ತ ಸಂಘದ ಪದಾಧಿಕಾರಿಗಳನ್ನು ಶ್ಲಾಘಿಸಿ ಅನ್ನದಾನ ವಿದ್ಯಾದಾನ ಸಮಾಜ ಸೇವೆ ಇನ್ನೂ ಮುಂತಾದ ಅನೇಕ ಸಮಾಜಮುಖಿ ಕಾರ್ಯವನ್ನು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮಿಜಿ ರವರ ಮಾರ್ಗದರ್ಶನದಲ್ಲಿ ಆದಿಚುಂಚನಗಿರಿ ಮಠವು ಹಳ್ಳಿಗಾಡಿನ ಜನರಿಗೆ ಉಪಯೋಗವಾಗಲೆಂದು ಹಾಗೂ ಒಳ್ಳೆಯ ಸಮಾಜಮುಖಿ ಕೆಲಸವನ್ನು ಮಾಡುತ್ತಾ ಬಂದಿದೆ ಆದ್ದರಿಂದ ಹೊಳಲು ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಉಪಯುಕ್ತವಾದ ಕಾರ್ಯಕ್ರಮವನ್ನು ಹಮ್ಮಿ ಕೊಂಡಿದ್ದೀರಿ ಇದೇ ರೀತಿ ಈ ಕಾರ್ಯಕ್ರಮದ ಸದುಪಯೋಗಗಳನ್ನ ಅಕ್ಕಪಕ್ಕದ ಗ್ರಾಮಸ್ಥರು ಸದುಪಯೋಗಪಡಿಸಿಕೊಳ್ಳಬೇಬೇಕು ಇವತ್ತು ಎಷ್ಟೇ ಶ್ರೀಮಂತರಾಗಲಿ ಐಶ್ವರ್ಯವಂತರಾಗಲಿ ಆರೋಗ್ಯವಿಲ್ಲದಿದ್ದರೆ ಜೀವನ ವ್ಯರ್ಥ ಪ್ರತಿಯೊಬ್ಬರೂ ತಮ್ಮ ತಮ್ಮ ಆರೋಗ್ಯವನ್ನು ಸರಿಯಾಗಿ ನೋಡಿಕೊಳ್ಳಬೇಕೆಂದು ಹೇಳಿದರು.
ನಂತರ ಮಾಜಿ ಶಾಸಕರಾದ ಎಚ್ ಬಿ.ರಾಮುನವರು ಮಾತನಾಡುತ್ತಾ ಪ್ರಾಥಮಿಕ ಕೃಷಿ ಪತ್ತಿನ ಸಂಘವು 100 ವರ್ಷ ಪೂರೈಸಿದೆ ಪದಾಧಿಕಾರಿಗಳು ಒಳ್ಳೆಯ ಕೆಲಸವನ್ನು ಹಮ್ಮಿಕೊಂಡಿದ್ದೀರಿ ಎಂದು ಹೇಳಿದರು. ರಾಜ್ಯ ಒಕ್ಕಲಿಗ ಸಂಘದ ಮಾಜಿ ಉಪಾಧ್ಯಕ್ಷರಾದ ಎಚ್ ಎಲ್ ಶಿವಣ್ಣನವರು
ಮಾತನಾಡಿದರು.
ಮಾಜಿ ಸಚಿವರಾದ ಸಿ.ಎಸ್ ಪುಟ್ಟರಾಜರವರು ಆರೋಗ್ಯ ಶಿಬಿರಕ್ಕೆ ಭೇಟಿ ನೀಡಿ ತಮ್ಮ ತಪಾಸಣೆಯನ್ನು ಮಾಡಿಸಿಕೊಂಡು ರಾಜ್ಯದ ನಾನಾ ಭಾಗಗಳಿಂದ ನುರಿತ ವೈದ್ಯರು ಹಾಗೂ ಒಳ್ಳೆಯ ಆಸ್ಪತ್ರೆಯ ಸಿಬ್ಬಂದಿಗಳು ಈ ಒಂದು ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ ಆದರಿಂದ ಈ ಭಾಗದ ಜನರು ಸದುಪಯೋಗಪಡಿಸಿಕೊಳ್ಳಬೇಕೆಂದು ಹೇಳಿದರು ಹಾಗೂ ಸಂಘವು ನೂರು ವರ್ಷ ತುಂಬಿದ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ಹೃದಯ ತಜ್ಞ ಡಾಕ್ಟರ್ ಕೆ ಎಂ ಶಿವಕುಮಾರ್ ಹಾಗೂ ಡಾಕ್ಟರ್ ಆಶಾಲತಾ ರವರು ಆರೋಗ್ಯ ಶಿಬಿರಕ್ಕೆ ಭೇಟಿ ನೀಡಿ ಶುಭ ಹಾರೈಸಿದರು
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಎಚ್‌.ಪಿ. ಸಚ್ಚಿದಾನಂದ (ಪಪ್ಪಿ) ಉಪಾಧ್ಯಕ್ಷರಾದ ಸುಧಾಮಣಿ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ. ಎಚ್ .ಹರ್ಷವರ್ಧನ್, ಹಾಗೂ ಸಂಘದ ಕಾರ್ಯಕಾರಿ ಮಂಡಳಿಯ ಸದಸ್ಯರುಗಳು ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಆಶಾ ಕಾರ್ಯಕರ್ತರು ಗ್ರಾಮದ ಮುಖಂಡರು ಸ್ಥಳೀಯ ಸಂಘ ಸಂಸ್ಥೆಯ ಪದಾಧಿಕಾರಿಗಳು ಯುವ ಮುಖಂಡರು ಹಾಜರಿದ್ದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯುವಜನತೆ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಲಿ: ಸಂತೋಷ್ ಹೆಗ್ಡೆ

ಭ್ರಷ್ಟಾಚಾರದಿಂದ ದೂರವಿದ್ದು, ಯುವಜನತೆ ಮಾನವೀಯತೆ ಹಾಗೂ ನೈತಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು...

ರಾಯಚೂರು | ಶೌಚಾಲಯ ನಿರ್ಮಾಣದ ಜತೆಗೆ ನಿರ್ವಹಣೆಗೂ ಆದ್ಯತೆ ಅಗತ್ಯ: ಸಿಡ್ನಿ ನೋವು

ಶೌಚಾಲಯ ನಿರ್ಮಿಸುವುದಷ್ಟೇ ಸ್ವಚ್ಛತೆಯ ಗುರಿಯಾಗಬಾರದು. ಅವು ವರ್ಷಪೂರ್ತಿ ಬಳಕೆಗೆ ಯೋಗ್ಯವಾಗಿರುವುದು, ಸಮರ್ಪಕ...

ಸಂಬಂಧಿಗಳ ನಡುವಿನ ವಿವಾಹ ತಡೆಯಲು ಕಾನೂನು ರೂಪಿಸಿ: ಸರ್ಕಾರಕ್ಕೆ ಸುಪ್ರೀಂ ನಿರ್ದೇಶನ!

ಹತ್ತಿರದ ರಕ್ತಸಂಬಂಧಿಗಳ ನಡುವಿನ ವಿವಾಹಗಳನ್ನು ನಿಯಂತ್ರಿಸಲು ಅಥವಾ ತಡೆಯಲು ಸೂಕ್ತ ಕಾನೂನು...

ಬೈಕ್ ಟ್ಯಾಕ್ಸಿ ಪರ ಸುಪ್ರೀಮ್ ತೀರ್ಪು; ಆಟೋ ಯೂನಿಯನ್ ವಿರೋಧ, ರಾಜ್ಯ ಸರ್ಕಾರದ ನಿಲುವೇನು?

ಆ್ಯಪ್ ಆಧಾರಿತ ಬೈಕ್‌ ಟ್ಯಾಕ್ಸಿ ಸೇವೆಗೆ ಅನುಮತಿ ನೀಡಿದ್ದ ಹೈಕೋರ್ಟ್ ಆದೇಶದ...