ಜಿಲ್ಲೆಯ ಸಕಲೇಶಪುರ ವಲಯ ಅರಣ್ಯಾಧಿಕಾರಿ (ಆರ್ಎಫ್ಒ) ಹೇಮಂತ್ಕುಮಾರ್, ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಅವರ ಆಸ್ತಿಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಹೇಮಂತ್ಕುಮಾರ್ ಸಕಲೇಶಪುರ ವಲಯ ಅರಣ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು,
ಹಾಸನ, ಸಕಲೇಶಪುರ ಹಾಗೂ ಆಲೂರು ಸೇರಿದಂತೆ ಒಟ್ಟು ಐದು ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಹಾಸನ ನಗರದ ಚಿಕ್ಕಹೊನ್ನೇನಹಳ್ಳಿಯಲ್ಲಿರುವ ಹೇಮಂತ್ಕುಮಾರ್ ಅವರ ನಿವಾಸ, ಸಕಲೇಶಪುರದಲ್ಲಿರುವ ಬಾಡಿಗೆ ಮನೆ, ಸಕಲೇಶಪುರದ ಅರಣ್ಯ ಇಲಾಖೆ ಕಚೇರಿ, ಆಲೂರು ತಾಲ್ಲೂಕಿನ ದೊಡ್ಡಮಗ್ಗೆ ಗ್ರಾಮದಲ್ಲಿರುವ ಹೇಮಂತ್ಕುಮಾರ್ ಅವರ ಮಾವನ ಮನೆ ಹಾಗೂ ಹಾಸನದ ಕುವೆಂಪು ನಗರದಲ್ಲಿರುವ ಗುತ್ತಿಗೆದಾರ ಹರೀಶ್ ಅವರ ಮನೆ ಮೇಲೆ ದಾಳಿ ನಡೆಸಲಾಗಿದೆ.
ಇದನ್ನೂ ಓದಿದ್ದೀರಾ?ಹಾಸನ | ಮದುವೆ ಭರವಸೆ: 27ಲಕ್ಷ ರೂ. ವಂಚನೆ; ಕಲಾವಿದೆಯ ಗಂಭೀರ ಆರೋಪ
ಗುತ್ತಿಗೆದಾರ ಹರೀಶ್, ಹೇಮಂತ್ಕುಮಾರ್ ಅವರ ಆಪ್ತರು ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ನಿವಾಸದಲ್ಲಿಯೂ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿ, ಲೋಕಾಯುಕ್ತ ಎಸ್ಪಿ ನಂದಿನಿ, ಡಿವೈಎಸ್ಪಿ ಸುರೇಶ್ ಹಾಗೂ ಇನ್ಸ್ಪೆಕ್ಟರ್ಗಳಾದ ಶಿಲ್ಪಾ, ಗವಿರಾಜು ಮತ್ತು ಚಂದ್ರಶೇಖರ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.



