ಭೀಮಾ ನದಿಯಲ್ಲಿ ಕಾಲುಜಾರಿ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿರುವ ದುರ್ಘಟನೆ ಮಂಗಳವಾರ ನಡೆದಿದೆ. ಮೃತರನ್ನು ವಿಜಯರಾಜು ಸುಬ್ಬರಾವ್ ಬಳ್ಳಾರಿ (44) ಜೇವರ್ಗಿ ತಾಲೂಕಿನ ಕಟ್ಟಿಸಂಗಾವಿ ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದೆ
ಮೃತರು ತಮ್ಮ ಮಗನೊಂದಿಗೆ ಭೀಮಾ ನದಿ ದಡದಲ್ಲಿ ಮೇಯುತ್ತಿದ್ದ ಎಮ್ಮೆಯನ್ನು ಕರೆತರಲು ತೆರಳಿದ್ದರು. ಈ ವೇಳೆ ನದಿಯಿಂದ ಎಮ್ಮೆ ಹೊಡೆದುಕೊಂಡು ಬರುವಾಗ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಮುಳುಗಿದ್ದಾರೆ ಎನ್ನಲಾಗಿದೆ.
ಘಟನೆ ಕುರಿತು ಮೃತರ ಪತ್ನಿ ಶಾಂತಮ್ಮ ಫರಹತಾಬಾದ್ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ, “ಪತಿ ಮತ್ತು ಮಗ ಎಮ್ಮೆ ಕರೆತರಲು ಹೋಗಿದ್ದರು. ಸಂಜೆ ಮಗ ಕರೆ ಮಾಡಿ, ತಂದೆ ಕಾಲುಜಾರಿ ನದಿಗೆ ಬಿದ್ದಿರುವುದಾಗಿ ತಿಳಿಸಿದನು. ಬಳಿಕ ಸ್ಥಳಕ್ಕೆ ತೆರಳಿ ಮೀನುಗಾರರ ಸಹಾಯದಿಂದ ಶವವನ್ನು ಹೊರತೆಗೆದಿದ್ದೇವೆ” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಯಾದಗಿರಿ | ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹ
ಈ ಸಂಬಂಧ ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.





