ಕೊಪ್ಪಳ | ಮಠಾಧೀಶರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು: ತೋಂಟದಾರ್ಯ ಶ್ರೀ

Date:

ಮಠದ ಸ್ವಾಮಿಗಳಾದವರು ತಮ್ಮನ್ನು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳದಿದ್ದಲ್ಲಿ ಅವರ ಬದುಕು ನಿಷ್ಪಲವಾಗಲಿದೆ ಎಂದು ಗದುಗಿನ ತೋಂಟದಾರ್ಯ ಸ್ವಾಮಿಗಳು ಅಭಿಮತ ವ್ಯಕ್ತಪಡಿಸಿದರು.

- Advertisement -

ಕೊಪ್ಪಳ ನಗರವನ್ನು ಸುತ್ತುವರೆದಿರುವ ಕಾರ್ಖಾನೆಗಳ ವಿಸ್ತರಣೆ ಹಾಗೂ ನೂತನ ಕಾರ್ಖನೆಗಳ ವಿರೋಧಿ ಜಂಟಿ ಕ್ರಿಯಾ ವೇದಿಕೆಯ ಅನಿರ್ಧಿಷ್ಟಾವಧಿ ಧರಣಿಯ 18ನೇ ದಿನದಂದು ತೋಂಟದಾರ್ಯ ಶ್ರೀಗಳು ಧರಣಿ ಸ್ಥಳಕ್ಕೆ ಭೇಟಿ ಕೊಟ್ಟು ಬೆಂಬಲ ಸೂಚಿಸಿಸದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗ್ರಾಮೀಣ ಜಾನಪದ ಪರಂಪರೆಯನ್ನು ಜೀವಂತವಾಗಿರಿಸಿದ ಚಾಮರಾಜನಗರದ ಗೌರಮ್ಮ

ಹಳ್ಳಿಗಳ ಮಣ್ಣಿನ ಸೊಗಡು, ಮಹಿಳೆಯರ ಬದುಕಿನ ಅನುಭವ, ಕುಟುಂಬದ ಸಂಪ್ರದಾಯ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಹಾಡಿನ ಮೂಲಕ ಅಭಿವ್ಯಕ್ತಿಸುವ ಸೋಬಾನೆ ಪದಗಳ ಗಾಯನಕ್ಕೆ ದಶಕಗಳಿಂದ ತಮ್ಮ ಬದುಕನ್ನೇ ಮುಡಿಪಾಗಿಟ್ಟಿರುವ ಚಾಮರಾಜನಗರದ ಹಿರಿಯ ಜಾನಪದ...

ನವೆಂಬರ್ 1 | ಕರ್ನಾಟಕ ರಾಜ್ಯೋತ್ಸವ ಮಾತ್ರವಲ್ಲ; ಭಾರತದ...

ನವೆಂಬರ್ 1 ಕನ್ನಡಿಗರ ಹೆಮ್ಮೆಯ ಕರ್ನಾಟಕ ರಾಜ್ಯೋತ್ಸವ. ಇದೇ ದಿನ ದೇಶದ ಎಂಟು ರಾಜ್ಯಗಳು ಮತ್ತು ಐದು ಕೇಂದ್ರಾಡಳಿತ ಪ್ರದೇಶಗಳ ರಚನೆ, ಮರುರಚನೆ ಹಾಗೂ ವಿಮೋಚನೆಯ ಇತಿಹಾಸವೂ ಇದೆ. ಭಾಷಾವಾರು ರಾಜ್ಯಗಳಿಗಾಗಿ ನಡೆದ...

ರಾಜ್ಯೋತ್ಸವ ವಿಶೇಷ | ಕನ್ನಡಕ್ಕೊಂದು ವಿಜ್ಞಾನದ ಓದು

ವಿಜ್ಞಾನ ಓದು ಎಂದರೇನು? ಕನ್ನಡಕ್ಕಾಗಿ ಅಂತಹದೊಂದು ಬೇಕಾ? ಇಂತಹದ್ದೊಂದರ ಚರ್ಚೆ ಇಂದಿನ ಅಗತ್ಯಗಳಲ್ಲೊಂದು. ಏಕೆಂದರೆ ನಮ್ಮಲ್ಲಿ ಓದು ಎನ್ನುವುದು ಬಹುಪಾಲು ಸಾಹಿತ್ಯಕವಾದ ಓದೇ ಆಗಿದೆ. ಸಾಹಿತ್ಯದಲ್ಲಿ ಸಹಜವಾಗಿ ಕಾಣಬರುವ ಒಂದು ಬಗೆಯ ಎಲ್ಲವೂ...

ಈ ವೇಳೆ ಮಾತನಾಡಿ, “ಮನುಷ್ಯನಿಗೆ ಉಸಿರಾಟಕ್ಕೆ ಬಹುಮುಖ್ಯವಾಗಿ ಬೇಕಾದುದ್ದು, ಪರಿಶುದ್ಧವಾದ ಗಾಳಿ, ನೀರು. ಇದು ಇದ್ದರೆ ಮಾತ್ರ ಆರೋಗ್ಯಕರವಾಗಿರಲು ಸಾಧ್ಯ. ಕೊಪ್ಪಳ ಜಿಲ್ಲೆ ಕಾರ್ಖಾನೆಗಳಿಂದ ಆವರಿಸಿರುವುದರಿಂದ ಎಲ್ಲವೂ ಅಶುದ್ಧವಾಗಿದೆ. ಹಿರೇಬಗನಾಳ, ಚಿಕ್ಕ ಬಗನಾಳ, ಕಾಸನಕಿಂಡಿ, ಅಲ್ಲನಗರ ಹಾಗೂ ಗಿಣಿಗೇರಾ ಮುಂತಾದ ಹಳ್ಳಿಗಳಿಗೆ ಹೋಗಿ ಬಂದೆ; ಅಲ್ಲಿಯ ವಾತಾವರಣ ಗಮನಿಸಿದಾಗ ನನಗೆ ಭಯವಾಯ್ತು. ಬೇರೆಬೇರೆ ಮಾರಕ ರೋಗಗಳಿಗೆ ತುತ್ತಾದ ಜನರನ್ನೂ ಮಾತಾಡಿಸಿದಾಗ ಅವರ ನೋವು, ಸಂಕಟ ವ್ಯಕ್ತವಾದದ್ದು ಭಯವೆನಿಸಿತು” ಎಂದು ಅತಂಕ ವ್ಯಕ್ತಪಡಿಸಿದರು.

“ಕಾರ್ಖಾನೆ ವಾಹನಗಳ ದಟ್ಟಣೆಯಿಂದ ಜನ ಕಂಗೆಟ್ಟಿದ್ದಾರೆ. ಜನಪ್ರತಿನಿಧಿಗಳು ಬಂಡವಾಳಶಾಹಿಗಳ ಹಿಡಿತದಲ್ಲಿದ್ದಾರೆ. ಮಠಾದೀಶರು ಇಂತಹ ಜನರ ಬದುಕಿಗಾಗಿ ಹೋರಾಟದ ಮುನ್ನಲೆಗೆ ಬಂದರೆ ‘ಅವರಿಗ್ಯಾಕೆ ಬೇಕು ಇದೆಲ್ಲ?’ ಎಂದು ವ್ಯಂಗ್ಯ ಮಾಡುತ್ತಾರೆ. ಆದರೆ, ನಾವೂ ಕೂಡ ಇದೆ ಅಶುದ್ಧ ಗಾಳಿಯನ್ನೇ ಸೇವಿಸುತ್ತುದ್ದೇವೆ ಎಂಬುದನ್ನು ಮರೆಯಬಾರದು.
‘ಕೊಪ್ಪಳ ಪರಿಶುದ್ಧ ಗಾಳಿಯನ್ನು ಸೂಸುವಲ್ಲಿ 4ನೇ ಸ್ಥಾನ’ದಲ್ಲಿದೆ ಎಂದು ಪತ್ರಿಕೆಯಲ್ಲಿ ಸುದ್ಧಿ ಬಂದಿದೆ; ಆದರೆ, ರಾಷ್ಟ್ರೀಯ ಮಾಧ್ಯಮಗಳು ಬಾಧಿತ ಗ್ರಾಮಗಳಿಗೆ ಹೋಗಿಲ್ಲ; ಹೋಗಿದ್ದರೆ ಇಂತಹ ಸುದ್ಧಿ ಪ್ರಕಟಿಸುತ್ತಿರಲಿಲ್ಲ. ಈ ಹೋರಾಟ ಜನಾಂದೋಲನವಾಗಿ ರೂಪುಗೊಳ್ಳಬೇಕು” ಎಂದರು.

ಇದನ್ನೂ ಓದಿ: ಕೊಪ್ಪಳ | ಪಟ್ಟಣಕ್ಕೆ ಹೊಂದಿಕೊಂಡ ಹಳ್ಳದ ಸ್ವಚ್ಛತೆಗೆ ಪ್ರಗತಿಪರ ಸಂಘಟನೆಗಳ ಒಕ್ಕೂಟ ಆಗ್ರಹ

“ಜಿಲ್ಲೆಯ ನಾಗರಿಕರ ಹಿತಕ್ಕಾಗಿ, ಆರೋಗ್ಯಕ್ಕಾಗಿ ನಡೆಯುತ್ತಿರುವ ಈ ಹೋರಾಟವನ್ನು ವ್ಯಾಪಕವಾಗಿ ಮಾದ್ಯಮಗಳು ಸುದ್ಧಿ ಮಾಡಬೇಕು. ಇದರಿಂದ ಮಾಧ್ಯಮಗಳು ಜನರಪರ ಮಾಧ್ಯಮವಾಗುತ್ತವೆ. ಪರಿಸರದ ಬಗ್ಗೆ ಕಾಳಜಿವುಳ್ಳವರು ಸಾತ್ವಿಕ ಶಕ್ತಿಯಾಗಿ, ಜೀವಪರ ಕಾಳಜಿ ಹಾಗೂ ಪರಿಸರ ಕಾಳಜಿವುಳ್ಳವರು ಒಟ್ಟಾಗಿ ಜನಾಂದಾಲೋನ ಹೋರಾಟವನ್ನಾಗಿ ಬೃಹತ್‌ ಪ್ರಮಾಣದಲ್ಲಿ ಕಟ್ಟಬೇಕು. ಗವಿ ಶ್ರೀಗಳನ್ನು ಭೇಟಿಯಾಗಿ ಹೊಗೆ ಸೂಸುವ ಕಾರ್ಖಾನೆಗಳ ವಿರುದ್ಧ ದೊಡ್ಡ ಮಟ್ಟದಲ್ಲಿ ಹೋರಾಟವನ್ನು ಮತ್ತೊಮ್ಮ ಹಮ್ಮಿಕೊಳ್ಳಲು ಆಹ್ವಾನ ನೀಡೋಣ. ಅವರ ಮುಂದಾಳತ್ವದಲ್ಲಿಯೇ ಈ ಹೋರಾಟ ಸಜ್ಜುಗೊಳಿಸೋಣ. ಎಲ್ಲ ಮಠಾದೀಶರನ್ನು ಕರೆದುಕೊಂಡು ಬರುವ ಕೆಲಸ ಮಾಡೋಣ. ಅದರ ಜವಾಬ್ದಾರಿ ನಾನೂ ವಹಿಸಿಕೊಳ್ಳುತ್ತೇನೆ. ಶಾಲೆ-ಕಾಲೇಜ್ ವಿದ್ಯಾರ್ಥಿಗಳು ಭಾಗವಹಿಸಬೇಕು. ಹೋರಾಟಗಾರರನ್ನ ಕಂಪನಿಗಳ ಗೂಂಡಾಗಳು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಒಬ್ಬ ರೈತನ ಕಾಲು ಮುರಿದಿರುವ ಘಟನೆ ಕೇಳಿದೆ ಇದರಿಂದ ಕುಗ್ಗಬೇಡಿ” ಎಂದು ಹೋರಾಟಗಾರರಿಗೆ ಆತ್ಮಸ್ಥೈರ್ಯ ತುಂಬಿದರು.

ಈ ಸಂದರ್ಭದಲ್ಲಿ ಅಲ್ಲಮಪ್ರಭು ಬೆಟ್ಟದೂರು, ಜ್ಯೋತಿ ಗೊಂಡಬಾಳ, ಮಂಜುನಾಥ ಗೊಂಡಬಾಳ, ಕೆ ಬಿ ಗೋನಾಳ, ಗಾಳೆಪ್ಪ ಮುಳಗಿ, ಶಿವಪ್ಪ ಹಡಪದ, ಬಸವರಾಜ್ ಶೀಲವಂತರ, ಮಂಗಳೇಶ ರಾಠೋಡ್, ಮೆಹಬೂಬ್ ರಾಯಚೂರು, ಮಾದೇವಪ್ಪ, ಶರಣು ಗಡ್ಡಿ, ಶರಣು ಪಾಟೀಲ್, ವಿಜಯ ಲಕ್ಷ್ಮೀ ಹಾಗೂ ಇತರರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಂತಾಮಣಿ | ಯಾದವ ಸಮುದಾಯದ ಶೈಕ್ಷಣಿಕ,ಆರ್ಥಿಕ ಹಾಗೂ ರಾಜಕೀಯ ಅಭಿವೃದ್ಧಿಗೆ ಒತ್ತು : ಮುನೇಗೌಡ

ಯಾದವ ಸಂಘದ ಜಿಲ್ಲಾಧ್ಯಕ್ಷರು ಹಾಗೂ ವಕೀಲರಾದ ಮುನೇಗೌಡ ಅವರು ಚಿಂತಾಮಣಿ ತಾಲ್ಲೂಕಿನ...

ಕಬ್ಬು ಬೆಳೆಗಾರರಿಂದ ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿ ಬಂದ್

ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ...

ಹಾಲು, ಬಸ್ ಪ್ರಯಾಣ ದರ ಏರಿಕೆ ಪ್ರಸ್ತಾಪಕ್ಕೆ ವಿರೋಧ; ವಿಜಯಪುರದಲ್ಲಿ ಎಸ್‌ಯುಸಿಐಸಿ ಪ್ರತಿಭಟನೆ

ನವೆಂಬರ್ 1ರಿಂದ ಜಾರಿಗೆ ಬರುವಂತೆ ಜಾರಿಗೊಳಿಸಿರುವ, ಪ್ರತಿ ಲೀಟರ್‌ ಹಾಲಿಗೆ ₹8...