ಕೊಪ್ಪಳ ನಗರದ ಪ್ರಮುಖ ಹೋಟೆಲ್ಗಳ ಮೇಲೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಅಧಿಕಾರಿಗಳಿಂದ ದಿಢೀರ್ ದಾಳಿ ನಡೆಸಲಾಗಿದೆ.
ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್ ಅವರ ನಿರ್ದೇಶನದಂತೆ ದಾಳಿ ಮಾಡಿರುವ ಅಧಿಕಾರಿಗಳು ಗುಣಮಟ್ಟವಿಲ್ಲದ, ಬಣ್ಣಯುಕ್ತ ಹಾಗೂ ಅವಧಿ ಮೀರಿದ ಅಪಾರ ಪ್ರಮಾಣದ ಆಹಾರ ಪದಾರ್ಥಗಳನ್ನು ವಶಪಡಿಸಿಕೊಂಡರು. ಸ್ವಚ್ಛತೆಯಿಲ್ಲದ ಪ್ರಯುಕ್ತ ನೋಟಿಸ್ ಜಾರಿಮಾಡಿ, ತಪ್ಪಿತಸ್ತರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಕೊಪ್ಪಳ ನಗರದಲ್ಲಿನ ಮಾಲತೇಶ ಹೋಟೆಲ್, ಅಕ್ಷಯ ಹೋಟೆಲ್, ಉಡುಪಿ ಉಪಹಾರ, ಜಿ.ಕೆ.ಎಸ್. ಹೋಟೆಲ್, ಹಂಪಿ ಎಕ್ಸ್ಪ್ರೆಸ್ ಕೆಫೆ ಹಾಗೂ ಸಂಧ್ಯಾ ಹೋಟೆಲ್ಗಳಿಗೆ ಪ್ರವೇಶಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಯ ತಂಡವು ಈ ಹೋಟೆಲ್ ಗಳಲ್ಲಿರುವ ಅವಧಿ ಮೀರಿದ ಆಹಾರ ಪದಾರ್ಥಗಳನ್ನು ಹಾಗೂ ಲೆಬಲ್ ಇಲ್ಲದ ಆಹಾರ ಪದಾರ್ಥಗಳನ್ನು ವಶಪಡಿಸಿಕೊಂಡರು.
ಇದನ್ನೂ ಓದಿ : ಈ ದಿನ ಸಂಪಾದಕೀಯ | ಯುವಜನರನ್ನು ಕಾಡುತ್ತಿರುವ ಖಿನ್ನತೆ; ಸೂಕ್ಷ್ಮಗೊಳ್ಳಬೇಕಿದೆ ಸಮಾಜ, ಸರ್ಕಾರ
ಬಣ್ಣಯುಕ್ತ ಆಹಾರ ಪದಾರ್ಥಗಳಾದ ಸುಮಾರು 14 ಕೆಜಿ ಚಿಕನ್, 2 ಕೆಜಿ ಮೀನು, 8 ಕೆಜಿ ಪನ್ನೀರ್ ಮತ್ತು ಮೀರಿಂಡಾ, ಪೆಪ್ಪಿ, ಸೆವನ್ ಅಪ್ 36 ಬಾಟಲ್ಗಳನ್ನು, ಬ್ರೂ ಕಾಫಿ ಪುಡಿ 4 ಪ್ಯಾಕೇಟ್, ಸಲಾಡ್ ಎಣ್ಣೆ 800 ಎಂಎಲ್, ಗೋಬಿ 3 ಕೆಜಿ, 1 ಕೆಜಿ ಫಿಜ್ಜಾ ಬ್ರೇಡ್ ಮತ್ತು ಉಪ್ಪಿನಕಾಯಿ 4 ಕೆಜಿ ಜಪ್ತಿ ಮಾಡಿ ಹೋಟೆಲ್ ಗಳ ಮಾಲೀಕರಿಗೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ.




