ಈ ದಿನ ಸಂಪಾದಕೀಯ | ಯುವಜನರನ್ನು ಕಾಡುತ್ತಿರುವ ಖಿನ್ನತೆ; ಸೂಕ್ಷ್ಮಗೊಳ್ಳಬೇಕಿದೆ ಸಮಾಜ, ಸರ್ಕಾರ

Date:

ಮಾನಸಿಕ ಖಿನ್ನತೆ ಎಂಬುದು ವ್ಯಕ್ತಿಯೊಬ್ಬನ ವೈಯಕ್ತಿಕ ಸಮಸ್ಯೆಯಾಗಿ ಉಳಿದಿಲ್ಲ. ಅದು ಸಾಮಾಜಿಕ ಪಿಡುಗಾಗಿ ಬದಲಾಗಿದೆ. ಖಿನ್ನತೆಗೆ ಒಳಗಾದ ಯುವಜನರು ಆತ್ಮಹತ್ಯೆ, ಕೊಲೆಯಂತಹ ಅಪಾಯಕಾರಿ ಮಾರ್ಗ ಹಿಡಿಯುತ್ತಿದ್ದಾರೆ. ಯುವ ಸಮುದಾಯವನ್ನು ಖಿನ್ನತೆಯಿಂದ ಹೊರ ತರುವುದು ಪೋಷಕರು ಮಾತ್ರವಲ್ಲ ಇಡೀ ಸಮಾಜದ ಜವಾಬ್ದಾರಿ ಎಂದು ಅರಿಯಬೇಕಿದೆ

- Advertisement -

ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ಖಾವಧ್ಯಾ ಬೆಟ್ಟದ ಅಂಚಿನಿಂದ ಸುಮಾರು 250 ಅಡಿ ಆಳದ ಕಂದಕಕ್ಕೆ ಹಾರಿ 18 ವರ್ಷದ ಕುನಾಲ್ ಚಂದ್ವಾಡೆ, ಆತನ ತಾಯಿ, ತಂದೆ ಮೃತಪಟ್ಟ ಘಟನೆಯ ಹಿಂದಿನ ಕಾರಣ ಭಾರೀ ಚರ್ಚೆಗೆ ಕಾರಣವಾಗಿತ್ತು. ಪೋಷಕರು ಐಫೋನ್‌ ಕೊಡಿಸಲಿಲ್ಲ ಎಂಬ ಕಾರಣಕ್ಕೆ ಯುವಕ ಬೆಟ್ಟದ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆತನನ್ನು ತಡೆಯುವ ಪ್ರಯತ್ನದಲ್ಲಿ ತಂದೆ ಮಗನ ಕೈ ಹಿಡಿದುಕೊಂಡೇ ಕಂದಕಕ್ಕೆ ಬಿದ್ದಿದ್ದಾರೆ. ಈ ಘಟನೆಯನ್ನು ಕಣ್ಣಾರೆ ಕಂಡ ತಾಯಿಯೂ ಹಾರಿದ್ದಾರೆ ಎಂಬುದು ಮೊದಲಿಗೆ ಬಂದ ಮಾಹಿತಿಯಾಗಿತ್ತು. ಆದರೆ, ಹಿಂದಿ ಯುಟ್ಯೂಬರ್‌ಗಳು ಆ ಕುಟುಂಬದ ಹತ್ತಿರದ ಸಂಬಂಧಿಗಳನ್ನು ಮಾತನಾಡಿಸಿದಾಗ ಬಂದ ವಿಚಾರವೇ ಬೇರೆ. ಅದು ನಿಜಕ್ಕೂ ಮೊದಲ ಕಾರಣಕ್ಕಿಂತಲೂ ಆಘಾತಕಾರಿ. ಅದುವೇ ಖಿನ್ನತೆ!

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...

ಯುವಕನ ತಂದೆ ಟ್ರಕ್‌ ಡ್ರೈವರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ತಾಯಿ ಗೃಹಿಣಿ, ಆದರೆ ಆಕೆಗೆ ರೀಲ್ಸ್‌ ಮಾಡುವ ಅಭ್ಯಾಸವಿದೆ. ಕುನಾಲ್‌ ಕಲಿಕೆಯಲ್ಲಿ ಮುಂದಿದ್ದ. ತಾಯಿಯನ್ನು ಅತಿಯಾಗಿ ಪ್ರೀತಿಸುತ್ತಿದ್ದ. ತಂದೆ ಮತ್ತು ತಾಯಿಯ ಮಧ್ಯೆ ಮನಸ್ತಾಪ ಇತ್ತು. ತಂದೆ ಟ್ರಕ್‌ ಡ್ರೈವರ್‌ ಆಗಿರುವ ಕಾರಣ ದಿನವೂ ಮನೆಗೆ ಬರುತ್ತಿರಲಿಲ್ಲ. ಬಂದಾಗಲೆಲ್ಲ ಪತ್ನಿ ಜೊತೆಗೆ ಜಗಳ ಆಗುತ್ತಿತ್ತು. ಇದರಿಂದ ಮಗ ಖಿನ್ನತೆಗೆ ಒಳಗಾಗಿದ್ದ. ತಂದೆ ತಾಯಿ ಅನ್ಯೋನ್ಯವಾಗಿ ಇರಬೇಕು ಎಂದು ಆತ ಬಯಸಿದ್ದ. ಆದರೆ, ಮತ್ತೆ ಮತ್ತೆ  ಇಬ್ಬರ ಮಧ್ಯೆ ಜಗಳ ನಡೆಯುತ್ತಿತ್ತು. ಇದರಿಂದ ಆತ ನೊಂದು ಆತ್ಮಹತ್ಯೆ ಮಾಡಿಕೊಳ್ಳುವ ತೀರ್ಮಾನಕ್ಕೆ ಬಂದಿದ್ದ ಎಂದು ಆ ಕುಟುಂಬದ ಸಂಬಂಧಿಗಳು ಹೇಳಿದ್ದಾರೆ. ವರ್ಷದ ಹಿಂದೆಯೂ ಕುನಾಲ್‌ ಆತ್ಮಹತ್ಯೆಗೆ ಯತ್ನಿಸಿದ್ದ. ಮಗನ ಮನಸ್ಥಿತಿಯ ಗಂಭೀರತೆಯನ್ನು ತಿಳಿಯುವಲ್ಲಿ ಪೋಷಕರು ವಿಫಲರಾಗಿದ್ದಾರೆ. 

ಪೋಷಕರು ತಮ್ಮ ಸ್ವಾರ್ಥ, ಪ್ರತಿಷ್ಠೆ, ಸಣ್ಣಪುಟ್ಟ  ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳದೇ, ಅದು ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಎಳೆ ವಯಸ್ಸಿನ ಮಕ್ಕಳು ಆತ್ಮಹತ್ಯೆಯಂತಹ ದುಡುಕಿನ ನಿರ್ಧಾರ ಮಾಡುತ್ತಿದ್ದಾರೆ. ತಂದೆ, ತಾಯಿ, ಒಡಹುಟ್ಟಿದವರನ್ನು ಒಂದೇ ಏಟಿಗೆ ಕೊಂದು ಮುಗಿಸುವ ಪ್ರಕರಣಗಳು ಹೆಚ್ಚುತ್ತಿವೆ.

ಪತ್ನಿಯ ಮೇಲಿನ ಸಿಟ್ಟಿಗೆ ಪತಿಯೊಬ್ಬ ತನ್ನ ಇಬ್ಬರು ಮಕ್ಕಳನ್ನು ಐಷಾರಾಮಿ ಹೋಟೆಲಿನ ರೂಮಿನಲ್ಲಿ ಕತ್ತು ಹಿಸುಕಿ ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿ ಬದುಕುಳಿದಿದ್ದಾನೆ. ಬಹುತೇಕ ಮಂದಿ ಕೌಟುಂಬಿಕ ಸಮಸ್ಯೆಯನ್ನು ನಿಭಾಯಿಸಲಾಗದೇ ಬದುಕು ಮುಗಿಸಿಕೊಳ್ಳುತ್ತಿದ್ದಾರೆ. ಆತ್ಮಹತ್ಯೆ ಅಥವಾ ಸಂಗಾತಿಗಳ ಕೊಲೆಯಲ್ಲಿ ಅಂತ್ಯವಾಗುತ್ತಿದೆ.

ತಂದೆ, ತಾಯಿ, ತಂಗಿಯನ್ನು ಗೆಳೆಯನ ಜೊತೆ ಸೇರಿ ಕೊಂದು ಮುಗಿಸಿದ ಯುವತಿ ಕೂಡಾ ತಾಯಿಯ ಮಾನಸಿಕ ಹಿಂಸೆ ತಡೆಯಲಾರದೆ ಆಕೆಯನ್ನು ಕೊಲ್ಲುವ ನಿರ್ಧಾರ ಮಾಡಿರುವುದಾಗಿ ಪೊಲೀಸರಿಗೆ ಹೇಳಿದ್ದಳು. ತಾಯಿಯ ಕೊಲೆಯ ಬಗ್ಗೆ ತಂದೆ ಸಹೋದರಿಗೆ ಅನುಮಾನ ಬಂದಾಗ ಸಾಕ್ಷಿಗಳನ್ನು ಮುಗಿಸುವ ಉದ್ದೇಶದಿಂದ ಮತ್ತೆರಡು ಕೊಲೆ ಮಾಡಿದ್ದಾಳೆ. ಶಿಸ್ತಿನ ಹೆಸರಿನಲ್ಲಿ ಪೋಷಕರು ಬುದ್ಧಿವಾದ ಹೇಳುವುದನ್ನೂ ಮಕ್ಕಳು ಸಹಿಸುತ್ತಿಲ್ಲ. ಹೆತ್ತವರನ್ನೇ ದ್ವೇಷ ಮಾಡುವ ಮನಸ್ಥಿತಿ ಹೆಚ್ಚುತ್ತಿದೆ. ಸಣ್ಣ ಪುಟ್ಟ ವಿಚಾರಕ್ಕೆಲ್ಲ ವಿಪರೀತ ಪ್ರತಿಕ್ರಿಯೆ ಬರುತ್ತಿದೆ.  

ನಾಲ್ಕು ದಿನಗಳ ಹಿಂದೆ ಉಡುಪಿಯಲ್ಲಿ ಯುವಕನೊಬ್ಬ ತಂದೆ ಮತ್ತು ತಾಯಿಯನ್ನು ಸುತ್ತಿಗೆಯಿಂದ ಹೊಡೆದು ಕೊಂದು ಪೊಲೀಸರಿಗೆ ಶರಣಾಗಿದ್ದಾನೆ. ಫುಡ್‌ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡುತ್ತಿದ್ದ ಶಾಹಿದ್‌ ಅಲಿ ತಂದೆ ಲಾರಿ ಡ್ರೈವರ್‌ ಆಗಿ ಕೆಲಸ ಮಾಡುತ್ತಿದ್ದರು. ತಂದೆ ಮಾನಸಿಕ ಹಿಂಸೆ ನೀಡುತ್ತಿದ್ದರು. ಆ ಕಾರಣಕ್ಕೆ ಕೊಲೆ ಮಾಡಿರುವುದಾಗಿ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ. ಆತನೂ ಖಿನ್ನತೆಗೆ ಒಳಗಾಗಿದ್ದ ಎಂದು ವರದಿಯಾಗಿದೆ.

ನಾನಾ ಕಾರಣಗಳಿಂದ ಬಹುತೇಕ ಯುವಜನರು ಖಿನ್ನತೆಯೆಂಬ ಗಂಭೀರ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಅದನ್ನು ಗುರುತಿಸುವಲ್ಲಿ ಜೊತೆಗೇ ಇರುವ ಪೋಷಕರು, ಸಹೋದ್ಯೋಗಿಗಳು, ಸಹಜೀವಿಗಳೂ ವಿಫಲರಾಗುತ್ತಿದ್ದಾರೆ. ಸರ್ಕಾರಗಳು ಇದನ್ನೊಂದು ಗಂಭೀರ ಮಾನಸಿಕ ಸಮಸ್ಯೆ ಎಂದು ಪರಿಗಣಿಸಿಯೇ ಇಲ್ಲ. ಯುವಜನರು ಕೆಲಸದ ಒತ್ತಡ, ಸಂಬಂಧಗಳ ಗೋಜಲು, ಕೌಟುಂಬಿಕ ಸಮಸ್ಯೆ, ಆರ್ಥಿಕ ಸಂಕಷ್ಟಗಳಿಂದಾಗಿ ಮಾನಸಿಕ ಒತ್ತಡಕ್ಕೆ ಒಳಗಾಗಿ ಖಿನ್ನತೆಗೆ ಜಾರುತ್ತಿದ್ದಾರೆ. ಖಿನ್ನತೆ ಎಂಬುದು ಇಷ್ಟೊಂದು ಸಾಮಾನ್ಯವಾಗಿ ಎಲ್ಲರಲ್ಲೂ ಕಾಣಿಸಿಕೊಳ್ಳುತ್ತಿದೆ ಎಂದರೆ ಅಪಾಯಕಾರಿ ಮಟ್ಟ ತಲುಪಿದೆ ಎಂದೇ ಅರ್ಥ.

ಭಾರತದಲ್ಲಿ ಪ್ರತಿ ಇಪ್ಪತ್ತು ಮಂದಿಯಲ್ಲಿ ಒಬ್ಬರಿಗೆ ಖಿನ್ನತೆಯ ಸಮಸ್ಯೆ ಇದೆ ಎಂದು ನಿಮಾನ್ಸ್‌ ಸಮೀಕ್ಷಾ ವರದಿ ಹೇಳುತ್ತದೆ.  ಬಡತನ, ನಿರುದ್ಯೋಗ ಮತ್ತು ಸಾಲದ ಬಾಧೆ, ಕುಟುಂಬ ಕಲಹ, ಪ್ರೀತಿ-ವಿಶ್ವಾಸದ ಕೊರತೆ ಅಥವಾ ಒಂಟಿತನ, ವಿಪರೀತ ಕೆಲಸದೊತ್ತಡ ಮತ್ತು ನಿದ್ರೆಯಿಲ್ಲದಿರುವುದು ಯುವಜನರ ಖಿನ್ನತೆಗೆ ಪ್ರಮುಖ ಕಾರಣ ಎಂದು ತಜ್ಞರು ಹೇಳುತ್ತಾರೆ.

ಶಾಲೆ, ಕಾಲೇಜು, ಕೆಲಸದ ಸ್ಥಳಗಳಲ್ಲಿ ಆಪ್ತ ಸಮಾಲೋಚಕರು ಇರಬೇಕು ಎಂಬುದು ಆಗಾಗ ಕೇಳಿ ಬರುತ್ತಿರುವ ಸಲಹೆ. ಯುವಜನರಿಗೆ ಮಾನಸಿಕ ಒತ್ತಡಕ್ಕೆ ಒಳಗಾಗದಂತೆ ತಡೆಯುವ ಜವಾಬ್ದಾರಿ ಪೋಷಕರದ್ದು ಮಾತ್ರವಲ್ಲ, ಸಮಾಜದ್ದು, ಸರ್ಕಾರದ್ದು ಕೂಡ.  

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಜಿಪಂ, ತಾಪಂ ಚುನಾವಣೆ: ಸಾಮಾಜಿಕ ಜಾಲತಾಣದಲ್ಲಿ ಆಕಾಂಕ್ಷಿಗಳ ಪ್ರಚಾರ ಜೋರು!

ರಾಜ್ಯದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರವಾರು ಮೀಸಲಾತಿ ಪ್ರಕಟವಾಗುತ್ತಿದ್ದಂತೆ, ಬೀದರ್‌...

ಈ ದಿನ ಸಂಪಾದಕೀಯ | ಏರಿದ ಬೆಲೆ; ಇಳಿದ ಜೀವನಮಟ್ಟ; ಇದೇನಾ ಮೋದಿಯವರ ಆರ್ಥಿಕ ಅಭಿವೃದ್ಧಿ?

ಬ್ಲೂಮ್‌ಬರ್ಗ್ ವೇದಿಕೆ ಮೇಲೆ ನಿಂತು ಪ್ರಧಾನಿ ಮೋದಿಯವರು, ಜಿಡಿಪಿ ಶೇ.7.8ರಷ್ಟು ಜಿಗಿದಿದೆ,...

ಸಿಜೆಪಿ ನಾಯಕರ ಬಂಧನಕ್ಕೆ ತೀವ್ರ ಖಂಡನೆ: ತಕ್ಷಣ ರಾಂಕಾ, ಸೌರವ್ ಬಿಡುಗಡೆಗೆ ವಿಪಕ್ಷಗಳ ಆಗ್ರಹ

ಏಕಪಕ್ಷೀಯ ನಿರ್ಧಾರ ಕೈಗೊಂಡ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್...

ಪತಿಯನ್ನು ಕೊಂದು ಕಾಂಕ್ರೀಟ್ ಡ್ರಮ್‌ನಲ್ಲಿ ಹೂತಿಟ್ಟ ಪ್ರಕರಣ: ಪತ್ನಿ, ಪ್ರಿಯಕರನಿಗೆ ಗಲ್ಲು ಶಿಕ್ಷೆ

ಮರ್ಚೆಂಟ್ ನೇವಿ ಅಧಿಕಾರಿ ಸೌರಭ್ ರಜಪೂತ್ ಅವರನ್ನು ಬರ್ಬರವಾಗಿ ಹತ್ಯೆಗೈದು, ಮೃತದೇಹವನ್ನು...