ಉಡುಪಿ | ಆರ್‌ಎಸ್‌ಎಸ್‌ 100 ವರ್ಷ – ಹಿಂದುತ್ವದ ಹೆಸರಿನಲ್ಲಿ ವಿಭಜನೆಯ ರಾಜಕೀಯ : ಕೋಟ ನಾಗೇಂದ್ರ ಪುತ್ರನ್

Date:

ರಾಜ್ಯ ಹಾಗೂ ದೇಶದಾದ್ಯಂತ ನಿನ್ನೆ ಆರ್‌ಎಸ್‌ಎಸ್‌ ಪತ ಸಂಚಲನವನ್ನು ಆಯೋಜಿಸಲಾಗಿದ್ದು, ದೇಶದ ಸ್ವಾತಂತ್ರ್ಯ ಪೂರ್ವ 25 ವರ್ಷಗಳ ಹಿಂದೆಯೇ ಹುಟ್ಟಿದ ಆರ್‌ಎಸ್‌ಎಸ್‌ ಈಗ 100 ವರ್ಷಗಳ ಆಚರಣೆಗೆ ತಲುಪಿದೆ” ಎಂಬ ಹೆಮ್ಮೆ ವ್ಯಕ್ತವಾಗುತ್ತಿದೆ. ಆದರೆ, ಈ ಸಂತೋಷದ ಹಿನ್ನಲೆಯಲ್ಲಿ ಒಂದು ಮೂಲಭೂತ ಪ್ರಶ್ನೆ ಎದ್ದಿದೆ ಬ್ರಿಟಿಷರ ವಿರುದ್ಧ ಒಂದೇ ಒಂದು ಹೋರಾಟ ಮಾಡದೆ, ಸ್ವಾತಂತ್ರ್ಯ ಚಳುವಳಿಯಲ್ಲಿ ಯಾವುದೇ ಪಾತ್ರವಹಿಸದೆ, ದೇಶದ ರಕ್ಷಣೆಗೆ ಬದಲು ಗುಲಾಮಗಿರಿಯ ನೆರಳಲ್ಲಿ ಬದುಕಿದ ಆರ್‌ಎಸ್‌ಎಸ್‌ ನಿಜಕ್ಕೂ ದೇಶಕ್ಕಾಗಿ ಮಾಡಿದಾದರೂ ಏನು? ಎಂಬುದು ಸಾಮಾನ್ಯ ಪ್ರಜೆಯ ಪ್ರಶ್ನೆಯಾಗಿದೆ ಎಂದು ಉಡುಪಿ ಜಿಲ್ಲಾ ಹಿಂದುಳಿದ ವರ್ಗದ ಉಪಾಧ್ಯಕ್ಷ ನಾಗೇಂದ್ರ ಪುತ್ರನ್ ಕೋಟ ಪ್ರಶ್ನಿಸಿದ್ದಾರೆ.

- Advertisement -

ಬ್ರಿಟಿಷರ “ಒಡೆದು ಆಳುವ” ನೀತಿಗೆ ತಾವೇ ಸಮರ್ಪಿಸಿಕೊಂಡು, ಹಿಂದುತ್ವದ ಹೆಸರಿನಲ್ಲಿ ಸನಾತನ ಧರ್ಮಕ್ಕೆ ಹಿಂಸೆ ಹಾಗೂ ದ್ವೇಷದ ಬಣ್ಣ ಹಚ್ಚುವ ಮೂಲಕ ದೇಶದಲ್ಲಿ ಸೌಹಾರ್ದತೆ ಹಾಗೂ ಏಕತೆಗೆ ಧಕ್ಕೆಯುಂಟುಮಾಡುತ್ತಿರುವ ಆರ್‌ಎಸ್‌ಎಸ್‌ ಸಂಘಟನೆ, ಶಾಂತಿಯ ತೋಟವೆನಿಸಿರುವ ಭಾರತವನ್ನು ಸಂಘರ್ಷದ ಅಂಗಳವಾಗಿ ರೂಪಿಸುತ್ತಿದೆ. “ಹಿಂದುತ್ವ ಅಪಾಯದಲ್ಲಿದೆ” ಎಂಬ ಸುಳ್ಳು ಪ್ರಚಾರದ ಮೂಲಕ ದೇಶದ ಜನತೆಯ ಮನಸ್ಸಿಗೆ ಮಂಕುಬೂದಿ ಎರಚಿ, ಬಿಜೆಪಿ ಮುಖಾಂತರ ಅಧಿಕಾರವನ್ನು ಹಿಡಿದಿರುವ ಈ ಸಂಘಟನೆ, ಕೇವಲ ಲಾಠಿ ಹಿಡಿದು ಮೆರವಣಿಗೆ ನಡೆಸುವುದರ ಹೊರತಾಗಿ ದೇಶಕ್ಕಾಗಿ ಮಾಡಿದ ಯಾವುದೇ ತ್ಯಾಗ ಅಥವಾ ಸೇವೆಯ ದಾಖಲೆ ಇಲ್ಲವೆಂಬುದು ಸ್ಪಷ್ಟವಾಗಿದೆ. ಇದರಿಂದಾಗಿ ಇಂದು ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕನ ಮನದಲ್ಲಿ ಒಂದೇ ಪ್ರಶ್ನೆ ಮೂಡುತ್ತಿದೆ — ಆರ್‌ಎಸ್‌ಎಸ್‌ ದೇಶಕ್ಕಾಗಿ ಮಾಡಿದಾದರೂ ಏನು? ಎಂಬುದಾಗಿ ಪ್ರಶ್ನಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆಡಳಿತದಲ್ಲಿ ಪಾರದರ್ಶಕತೆಗೆ ಮಾಹಿತಿ ಹಕ್ಕು ಕಾಯ್ದೆ ಪ್ರಮುಖ ಅಸ್ತ್ರ: ಹಣಮಂತ ಶಿಂದೆ

ಮಾಹಿತಿ ಹಕ್ಕು ಕಾಯ್ದೆಯ ಪರಿಣಾಮಕಾರಿ ಬಳಕೆ, ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಸಾಮಾಜಿಕ...

ಯತ್ನಾಳ್ ವಿರುದ್ಧ ಹೊರ್ತಿ ವಾಗ್ದಾಳಿ; ಅರ್ಜಿ ವಾಪಸ್ ಪಡೆದ ಹಿಂದಿನ ಸತ್ಯ ಬಹಿರಂಗಪಡಿಸಲು ಸವಾಲು

ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬರೆದಿರುವ...

ಆರೋಗ್ಯ ಸುರಕ್ಷತೆಗೆ ಆದ್ಯತೆ ನೀಡಿ: ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ

ಕೊಡಗು ಜಿಲ್ಲೆಯಲ್ಲಿ ಡೆಂಗ್ಯೂ, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಅಗತ್ಯ...

ಉಡುಪಿ | ಯುವಜನರೇ, ನಿರಂತರ ಪರಿಶ್ರಮದಿಂದ ಯಶಸ್ಸಿನ ಮೆಟ್ಟಿಲೇರಿ: ಪ್ರಕಾಶ್ ಶೆಟ್ಟಿ

ಯುವಜನರು ನಿರಂತರ ಪ್ರಯತ್ನದ ಮೂಲಕ ಜೀವನದಲ್ಲಿ ಒಂದೊಂದೇ ಮೆಟ್ಟಿಲು ಏರುತ್ತಾ ಸಾಗಿದರೆ...