ಉಡುಪಿ | ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಸಮೀಕ್ಷೆ ಶೇ.87.93 ಪೂರ್ಣ

Date:

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ರಾಜ್ಯಾದ್ಯಂತ ನಡೆಯುತ್ತಿರುವ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವಿಸ್ತರಿತ ಗಣತಿಯಲ್ಲಿ ಸೋಮವಾರ ಸಂಜೆವರೆಗೆ ಉಡುಪಿ ಜಿಲ್ಲೆಯಲ್ಲಿ ಶೇ.87.93ರಷ್ಟು ಮನೆಗಳ ಸಮೀಕ್ಷೆ ಪೂರ್ಣಗೊಂಡಿದೆ. ರಾಜ್ಯದ ಮಟ್ಟದಲ್ಲಿ ಶೇ.90.23ರಷ್ಟು ಸರ್ವೆ ಮುಗಿದಿರುವ ಮಾಹಿತಿ ಲಭ್ಯವಾಗಿದೆ.

- Advertisement -

ಉಡುಪಿ ಜಿಲ್ಲೆಯಲ್ಲಿ ಒಟ್ಟು 3,62,093 ಮನೆಗಳ ಗಣತಿ ನಡೆಯಬೇಕಿದ್ದು, ಇದುವರೆಗೆ 2,54,463 ಮನೆಗಳ ಸಮೀಕ್ಷೆ ಮುಗಿದಿದೆ. ಜಿಲ್ಲೆಯ ಏಳು ತಾಲೂಕುಗಳಲ್ಲಿ ಸೋಮವಾರದಂದು 2,786 ಮನೆಗಳ ಸರ್ವೆ ಕಾರ್ಯ ಮುಗಿದಿದೆ. 63,923 ಮನೆಗಳ ಯುಎಚ್‌ಐಡಿ (ಪ್ರತಿ ಮನೆಗೆ ನೀಡುವ ವಿಶಿಷ್ಟ ಗುರುತು) ಮನೆಯಲ್ಲಿ ಯಾರೂ ಇಲ್ಲದಿರುವುದು ಹಾಗೂ ಇತರ ತಾಂತ್ರಿಕ ಕಾರಣಗಳಿಂದ ಕೊನೆಗೊಳಿಸಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಿಡಿಗಾಸು ಬರ ಪರಿಹಾರ! ಹಿಂಗಾರು ಬಿತ್ತನೆಗೆ ಸಾಲದ ಮೊರೆ...

ಮುಂಗಾರು ಮಳೆ ಕೈಕೊಟ್ಟು ಬೆಳೆ ನಷ್ಟ ಅನುಭವಿಸಿರುವ ಬೆಳಗಾವಿಯ ರೈತರು ಇದೀಗ ಹಿಂಗಾರು ಬಿತ್ತನೆಯ ಸಿದ್ಧತೆಯಲ್ಲಿದ್ದಾರೆ. ಆದರೆ ಕೈಯಲ್ಲಿ ಹಣವಿಲ್ಲದ ಕಾರಣ ಬಿತ್ತನೆಗೆ ಅಗತ್ಯವಾದ ಬೀಜ, ಗೊಬ್ಬರ, ಔಷಧಿ ಸೇರಿದಂತೆ ಕೃಷಿ ಪರಿಕರಗಳನ್ನು...

ಭಾರತಕ್ಕೆ ಬರದ ಬುಲೆಟ್ ಟ್ರೈನ್: ತಡವಾಗುತ್ತಿರುವುದು ಮೋದಿಯಿಂದಲೋ, ಜಪಾನ್‌ನವರಿಂದಲೋ?

ಮುಂಬೈ ಮತ್ತು ಅಹಮದಾಬಾದ್ ನಡುವಿನ 508 ಕಿ.ಮೀ ಉದ್ದದ ಈ ಮಾರ್ಗವು ಭಾರತೀಯ ರೈಲ್ವೆಯನ್ನು ಆಧುನೀಕರಿಸುವ ಯೋಜನೆಯ ಭಾಗವಾಗಿ ನರೇಂದ್ರ ಮೋದಿಯವರು ಘೋಷಿಸಿದ್ದರು. ಅದಾಗಿ ಹತ್ತು ವರ್ಷವಾದರೂ ಸುದ್ದಿಯೇ ಇಲ್ಲ. ಬುಲೆಟ್ ಟ್ರೈನ್...

ನೊಬೆಲ್‌ ಪ್ರಶಸ್ತಿ ಸರಣಿ | ರಸಾಯನವಿಜ್ಞಾನದ ʼಅಸಮಮಿತಿʼ (Chirality)ಯ...

ರಸಾಯನವಿಜ್ಞಾನದ ನೊಬೆಲ್ ಪ್ರಶಸ್ತಿಯನ್ನು ಈ ಬಾರಿ ಹೆನ್ರಿ ಕಗಾನ್‌ ಮತ್ತು ಕೆನ್ಸೊ ಸುಆಯ್‌ ಅವರಿಗೆ ನೀಡಲಾಗಿದೆ. ಅವರ ಸಂಶೋಧನೆಯ ಕೇಂದ್ರ ಬಿಂದು ರಸಾಯನವಿಜ್ಞಾನದಲ್ಲಿ ಶತಮಾನಗಟ್ಟಲೆ ಅತ್ಯಂತ ಕುತೂಹಲಕಾರಿ ಪ್ರಶ್ನೆಯಾಗಿದ್ದ- ಒಂದಕ್ಕೊಂದು ಕನ್ನಡಿಯ ಪ್ರತಿಬಿಂಬದಂತಿರುವ...

ಜಿಲ್ಲೆಯಲ್ಲಿ ಉಡುಪಿಯನ್ನು ಹೊರತುಪಡಿಸಿ ಉಳಿದ ತಾಲೂಕುಗಳಲ್ಲಿ ಗಣತಿ ಶೇ.80 ಕ್ಕಿಂತ ಮೇಲು ಮುಗಿದಿದೆ. ಉಡುಪಿ ತಾಲೂಕಿನಲ್ಲಿ ಮಾತ್ರ ಸರ್ವೆ ನಿಧಾನಗತಿಯಲ್ಲಿದ್ದು, ಶೇ.74.36ರಷ್ಟು ಮಾತ್ರ ಪೂರ್ಣಗೊಂಡಿದೆ. ಉಡುಪಿ ತಾಲೂಕಿನಲ್ಲೇ ಅತ್ಯಧಿಕ 21,620 ಮನೆಗಳ ಯುಎಚ್‌ಐಡಿ ಮುಕ್ತಾಯಗೊಂಡಿದೆ.

ಬೈಂದೂರಿನಲ್ಲಿ ಗುರಿಯಾದ 26,623 ಮನೆಗಳಲ್ಲಿ 25,111 ಮನೆಗಳ ಸರ್ವೆ ಮುಗಿದು ಶೇ.108 ಸಾಧನೆಯಾಗಿದೆ. ಇಲ್ಲಿ 3,084 ಮನೆಗಳ ಯುಎಚ್‌ಐಡಿ ಮುಚ್ಚಲಾಗಿದೆ. ಹೆಬ್ರಿಯಲ್ಲಿ 13,422 ಮನೆಗಳ ಗುರಿಯಲ್ಲಿ 11,585 ಮನೆಗಳ ಸಮೀಕ್ಷೆ ಪೂರ್ಣಗೊಂಡು ಶೇ.105.23 ಸಾಧನೆಯಾಗಿದೆ. ಇಲ್ಲೂ 2,539 ಮನೆಗಳ ಯುಎಚ್‌ಐಡಿ ಮುಕ್ತಾಯಗೊಂಡಿದೆ.

ಬ್ರಹ್ಮಾವರ ತಾಲೂಕಿನಲ್ಲಿ ಶೇ.97, ಕುಂದಾಪುರದಲ್ಲಿ ಶೇ.95, ಕಾರ್ಕಳದಲ್ಲಿ ಶೇ.85 ಹಾಗೂ ಕಾಪುವಿನಲ್ಲಿ ಶೇ.81ರಷ್ಟು ಸಮೀಕ್ಷೆ ಪೂರ್ಣಗೊಂಡಿದೆ. ಈ ಸಮೀಕ್ಷೆ ಅಕ್ಟೋಬರ್‌ 18ರಂದು ಕೊನೆಗೊಳ್ಳಲಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

OBC ವಿದ್ಯಾವಂತ ನಿರುದ್ಯೋಗಿಗಳ ಕುರಿತು ಅಧ್ಯಯನ; ಪ್ರವೀಣ ಪತ್ತಾರಗೆ ಕವಿವಿ ಪಿಎಚ್‌ಡಿ

ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದ ಸಮಾಜಶಾಸ್ತ್ರ ವಿಭಾಗದ ಸಂಶೋಧಕರಾದ ಪ್ರವೀಣ ಪತ್ತಾರ ಅವರು...

ಆಲಗೂರ ಪುನರ್ವಸತಿ ಕೇಂದ್ರವನ್ನು ಮರಳಿ ಗ್ರಾಮ ಪಂಚಾಯತಿಗೆ ಸೇರಿಸಲು ಆಗ್ರಹ

ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರಸಭೆ ವ್ಯಾಪ್ತಿಗೆ ಸೇರಿಸಲಾಗಿರುವ ಆಲಗೂರ ಪುನರ್ವಸತಿ ಕೇಂದ್ರವನ್ನು...

ಬಾಗಲಕೋಟೆ | ಬೆಂಬಲ ಬೆಲೆಯಲ್ಲಿ ಧಾನ್ಯ ಖರೀದಿ; ಯೋಜನೆ ಸದುಪಯೋಗಕ್ಕೆ ಜಿಲ್ಲಾಧಿಕಾರಿ ಸಂಗಪ್ಪ ಕರೆ

ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಬಾಗಲಕೋಟೆ ಜಿಲ್ಲೆಯ ರೈತರಿಂದ ಸೂರ್ಯಕಾಂತಿ,...

ಹಾವೇರಿ | ಕವಲೆತ್ತು ನದಿ ಪಕ್ಕ ಮೆಟ್ಟಿಲು ನಿರ್ಮಿಸಲು ಡಿಸಿಗೆ ಗ್ರಾಮಸ್ಥರು ಮನವಿ

ರಾಣಿಬೆನ್ನೂರ ತಾಲೂಕಿನ ಕವಲೆತ್ತು ಗ್ರಾಮದ ರಾಷ್ಟ್ರೀಯ ಹೆದ್ದಾರಿ-48 ಸರ್ವೀಸ್ ರಸ್ತೆಯ ತುಂಗಭದ್ರಾ...