ದಾವಣಗೆರೆ | ಸುಪ್ರೀಂ ನ್ಯಾಯಮೂರ್ತಿಗಳ ಮೇಲಿನ ಹಲ್ಲೆ ಯತ್ನ: ಯುವ ಕಾಂಗ್ರೆಸ್ ಘಟಕ ಖಂಡನೆ

Date:

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿಆರ್ ಗವಾಯಿ ಅವರ ಮೇಲೆ ಶೂ ಎಸೆಯಲು ಪ್ರಯತ್ನಿಸಿ ಅವಮಾನಿಸಿದ ರಾಕೇಶ್ ಕಿಶೋರ್ನನ್ನು ಬಂಧಿಸಿ ಕಠಿಣ ಶಿಕ್ಷೆಗೆ ಆಗ್ರಹಿಸಿ ದಾವಣಗೆರೆ ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಮುಖಂಡರು, ಕಾರ್ಯಕರ್ತರು ನಗರದ ಜಯದೇವ ವೃತ್ತದಿಂದ ಡಾ. ಬಿಆರ್ ಅಂಬೇಡ್ಕರ್ ವೃತ್ತದವರೆಗೆ ಪಂಜಿನ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.‌

- Advertisement -
WhatsApp Image 2025 10 14 at 5.37.19 PM 1

ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ಮನುವಾದಿಗಳ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದರು. ಕಾಂಗ್ರೆಸ್ ಮುಖಂಡ ವಕೀಲ ಅನೀಸ್ ಪಾಷಾ ಮಾತನಾಡಿ “ಭಾರತ ಸರ್ವ ಜನಾಂಗದ ಶಾಂತಿಯ ತೋಟ. ಅಂಬೇಡ್ಕರ್ ಈ ದೇಶದ ಎಲ್ಲರಿಗೂ ಸಮಾನ ಹಕ್ಕು ನೀಡಿದ್ದಾರೆ.‌ ಇದನ್ನು ಹಾಳು ಮಾಡಿ ಕೋಮುದ್ವೇಷ ಹೊರಡಿಸಲು ಮತೀಯ ಶಕ್ತಿಗಳು ಈ ರೀತಿಯ ದುರ್ವರ್ತನೆ ತೋರಿಸುತ್ತಿವೆ.‌ ಮುಖ್ಯ ನ್ಯಾಯಾಧೀಶ ಬಿ ಆರ್ ಗವಾಯಿಗಳು ಅಂಬೇಡ್ಕರ್ ವಾದಿಗಳು. ಅವರು ನ್ಯಾಯಪರ ತೀರ್ಪು ನೀಡುತ್ತಿರುವುದು ಕೋಮುವಾದಿ, ಮನುವಾದಿಗಳು ನುಂಗಲಾರದ ತುತ್ತಾಗಿದೆ.‌ ಅವರ ಲೆಕ್ಕಾಚಾರದಂತೆ ಮುಖ್ಯ ನ್ಯಾಯಾಧೀಶರು ಇಲ್ಲದೆ, ನ್ಯಾಯ ಮತ್ತು ಸಂವಿಧಾನದ ಆಶಯದಂತೆ ನಡೆದುಕೊಳ್ಳುತ್ತಿರುವುದೇ ಈ ಹಲ್ಲೆ ಯತ್ನಕ್ಕೆ ಮುಂದಾಗಿದೆ” ಎಂದು ಅಭಿಪ್ರಾಯಪಟ್ಟರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...
1002890697

“ಮನುವಾದಿಗಳು ಅಂಬೇಡ್ಕರರ ವಿರೋಧಿಗಳು. ದೇಶವಿರೋಧಿಗಳು.‌ ಅವರ ಮೇಲೆ ಶೂ ಎಸೆತ ಯತ್ನ ದೇಶಕ್ಕೆ ಮಾಡಿದ ಅವಮಾನವಾಗಿದ್ದು. ಆರೋಪಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.

ಮುಖಂಡ ಹಲಗೇರಿ ಮಂಜಪ್ಪ ಮಾತನಾಡಿ, “ಮನುವಾದಿಗಳು ಅಂಬೇಡ್ಕರ್ ವಿರೋಧಿಗಳು. ಹಾಗಾಗಿ ಅಂಬೇಡ್ಕರ್ ವಾದಿಗಳ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಇದು ಕೇವಲ ಮುಖ್ಯ ನ್ಯಾಯಾಧೀಶರ ಮೇಲಿನ ಹಲ್ಲೆ, ಅವಮಾನ ಮಾತ್ರವಲ್ಲ, ಅಂಬೇಡ್ಕರ್ ಮತ್ತು ಸಂವಿಧಾನ ಮೇಲೆ ನಡೆದ ಕೃತ್ಯ. 3% ಪುರೋಹಿತಶಾಹಿ ಈ ದೇಶ ಆಳುತ್ತಿದೆ.‌ ಈ ದೇಶದ ಬಹುಸಂಖ್ಯಾತರು ಪಂಜಿನ ಮೆರವಣಿಗೆ ಹೋರಾಟ ಮಾಡುತ್ತಿರುವುದು ದುರಂತ” ಎಂದು ಅಭಿಪ್ರಾಯಪಟ್ಟರು.

IMG 20251013 WA0169
ಯುವ ಕಾಂಗ್ರೆಸ್ ಘಟಕ ಪ್ರತಿಭಟನೆ

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ನಿರಾಶ್ರಿತರಿಗೆ ಮನೆ ನಿರ್ಮಾಣಕ್ಕೆ ಸೌಕರ್ಯ ಒದಗಿಸಿ: ಪ್ರಗತಿಪರ ಸಂಘಟನೆಗಳ ಒತ್ತಾಯ

ಪಂಜಿನ ಮೆರವಣಿಗೆ ಮತ್ತು ಪ್ರತಿಭಟನೆಯಲ್ಲಿ ಆಪ್ ಮುಖಂಡ ಆದಿಲ್ ಖಾನ್, ಸರ್ಕಾರಿ ಶಾಲೆ ಉಳಿಸಿ ಹೋರಾಟ ಸಮಿತಿ ಮುಖಂಡ ಲಿಂಗರಾಜು ಗಾಂಧಿನಗರ, ಕಾಂಗ್ರೆಸ್ ಯುವ ಘಟಕದ ಮುಖಂಡ ವರುಣ್ ಬೆನ್ನಳ್ಳಿ, ವಕೀಲ ರಾಕೇಶ್‌, ಮಂಜುನಾಥ್‌, ಅರುಣ್‌, ಹಂಚಿನ ಮನೆ ದಯಾನಂದ, ಮಂಜುನಾಥ್ ಆರ್ ಶಾಂತಿನಗರ, ಶಿವಶಂಕರ್ ಎಸ್ಎಂ, ಸೇರಿದಂತೆ ಕಾರ್ಯಕರ್ತರು ವಿದ್ಯಾರ್ಥಿಗಳು ಹಾಜರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪುದುಚೇರಿ | ತಟ್ಟಂಚಾವಡಿ ಉಪಚುನಾವಣೆ: AINRC ಅಭ್ಯರ್ಥಿ ಅಶೋಕ್ ಆನಂದ್‌ಗೆ ಗೆಲುವು

ಪುದುಚೇರಿಯ ತಟ್ಟಂಚಾವಡಿ ವಿಧಾನಸಭೆ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಆಲ್ ಇಂಡಿಯಾ ಎನ್‌ಆರ್‌...

ಅಯೋಧ್ಯೆಯಿಂದ ಸ್ಪರ್ಧಿಸಿ ಗೆದ್ದು ತೋರಿಸಿ: ಸಿಎಂ ಯೋಗಿಗೆ ಅಖಿಲೇಶ್ ಯಾದವ್ ಬಹಿರಂಗ ಸವಾಲು

ಉತ್ತರ ಪ್ರದೇಶದ ಮುಂಬರುವ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯ ರಾಜಕೀಯದಲ್ಲಿ ಆರೋಪ-ಪ್ರತ್ಯಾರೋಪಗಳು...

ಉಪಚುನಾವಣೆ: ನಂದಿಗ್ರಾಮ, ನಗಾಂವ್‌ ಫಲಿತಾಂಶದತ್ತ ಎಲ್ಲರ ಚಿತ್ತ

ಅಸ್ಸಾಂನ ಒಂದು ಲೋಕಸಭಾ ಕ್ಷೇತ್ರ ಮತ್ತು ಪಶ್ಚಿಮ ಬಂಗಾಳ, ತಮಿಳುನಾಡು, ಕೇಂದ್ರಾಡಳಿತ...