​ದೇವರ ಹೆಸರಲ್ಲಿ ನಡೆಯುವ ಸುಲಿಗೆ ತಡೆಗೆ ಬಸವಣ್ಣನ ಅರಿವಿನ ಹಾದಿ ಅನಿವಾರ್ಯ: ಎಂ ಸಿ ಬಸವರಾಜು

Date:

ಇಂದು ಸಮಾಜದಲ್ಲಿ ದೇವರ ಹೆಸರಿನಲ್ಲಿ ನಡೆಯುತ್ತಿರುವ ಮೋಸ, ವಂಚನೆ ಮತ್ತು ಸುಲಿಗೆಗಳನ್ನು ತಡೆಯಲು ಬಸವಣ್ಣನವರು ತೋರಿದ ‘ಅರಿವಿನ ಹಾದಿ’ ನಮಗೆ ದಾರಿದೀಪವಾಗಬೇಕಿದೆ ಎಂದು ಕರಾವೈಸಂ ಪರಿಷತ್ತಿನ ಗೌರವಾಧ್ಯಕ್ಷ ಎಂ ಸಿ ಬಸವರಾಜು ಪ್ರತಿಪಾದಿಸಿದರು.

- Advertisement -

​ಪಟ್ಟಣದ ಸಂಜಯ ಪ್ರಕಾಶನದಲ್ಲಿ ಭಾನುವಾರ ಸಂಜೆ ಆಯೋಜಿಸಲಾಗಿದ್ದ ʼವೈಜ್ಞಾನಿಕ ಚಿಂತನೆಗಳಿಗೆ ಮೌಢ್ಯತೆಯ ತೊಡಕುಗಳುʼ ಕಾರ್ಯಕ್ರಮದರಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಬಸವಣ್ಣನವರು ಮಂತ್ರಿಯಾಗಿದ್ದ ಕಾಲದಲ್ಲಿ ದೇಶ ಪರ್ಯಟನೆ ಮಾಡುವಾಗ, ಭಕ್ತರಿಂದ ಚಿನ್ನ, ಬೆಳ್ಳಿ, ನಾಣ್ಯಗಳನ್ನು ಕಿತ್ತುಕೊಂಡು ಅವರನ್ನು ನೀರಿನಲ್ಲಿ ಮುಳುಗಿಸಿ, ತಲೆಯ ಮೇಲೆ ಕಾಲಿಟ್ಟು ಸುಲಿಗೆ ಮಾಡುತ್ತಿದ್ದ ದೃಶ್ಯಗಳನ್ನು ಕಂಡು ಮಮ್ಮಲ ಮರುಗಿದ್ದರು. ಭಕ್ತ ಮತ್ತು ದೇವರ ನಡುವೆ ದಳ್ಳಾಳಿಗಳ ಅವಶ್ಯಕತೆಯಿಲ್ಲ ಎಂಬ ಸತ್ಯವನ್ನು ಅವರು ಅಂದೇ ಸಾರಿದ್ದರು” ಎಂದು ನೆನಪಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ವಿಜಯಪುರ | ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ: 9...

ಬೀದಿ ನಾಯಿ ನಿಯಂತ್ರಣಕ್ಕೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಬೀದಿ ನಾಯಿಗಳ ಹಾವಳಿ ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಶಾಲೆ, ಆಸ್ಪತ್ರೆ,...

ದಿವಾಳಿ ಕಂಪನಿಗಳ ಬಿಡ್‌ನಲ್ಲಿ ಅದಾನಿಯದ್ದೇ ಮೇಲುಗೈ; ಸಾಲಗಾರರಿಗೆ ₹97,700...

ಭಾರತದ ದಿವಾಳಿ ಹಂತದಲ್ಲಿದ್ದ ಕಂಪನಿಗಳ ಬಿಡ್‌ ಪ್ರಕ್ರಿಯೆಗಳಲ್ಲಿ ಅದಾನಿ ಗ್ರೂಪ್‌ನ ಅಸಾಧಾರಣ ಯಶಸ್ಸಿನ ಹಿಂದೆ ರಹಸ್ಯವೊಂದಿದೆ! ಪ್ರತಿ ಐದರಲ್ಲಿ ಮೂರು ಬಿಡ್‌ಗಳನ್ನು ಗೆದ್ದು, ದೇಶದ ಅತಿ ದೊಡ್ಡ ಕಾರ್ಪೊರೇಟ್ ಸ್ವಾಧೀನದಾರನಾಗಿ ಹೊರಹೊಮ್ಮಿರುವ ಅದಾನಿ...

ಇದು ಕೇವಲ ಒಂದು ಪಕ್ಷದ ಹೋರಾಟವಲ್ಲ, ವ್ಯವಸ್ಥೆಯ ಮೇಲಿನ...

ಜೆಪಿಯ ಟೀಕೆಗಳು ತೀಕ್ಷ್ಣವಾಗಿದ್ದರೂ, ಅದು ಅಹಿಂಸಾತ್ಮಕವಾಗಿದೆ. ಹೆದ್ದಾರಿ ತಡೆಗಳಿಲ್ಲ, ಬಲವಂತದ ಬಂದ್‌ಗಳಿಲ್ಲ. ವಾಸ್ತವವಾಗಿ, ಶಾಂತಿಯುತ ಸಭೆಗೆ ಜಾಗ ನೀಡದೆ ಸರ್ಕಾರವೇ ಅಡೆತಡೆಗಳನ್ನು ಸೃಷ್ಟಿಸುತ್ತಿದೆ. ಈ ಉದ್ದೇಶವನ್ನು ಬೆಂಬಲಿಸುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬೀದಿಗೆ...

“ಜಗತ್ತಿನ ಮಹಾಪುರುಷರೆಲ್ಲರೂ ಜನರಿಗೆ ಅರಿವು ಮೂಡಿಸಿದ್ದು ಅವರವರ ಆಡುಭಾಷೆಯಲ್ಲೇ ಹೊರತು, ಜನಸಾಮಾನ್ಯರಿಗೆ ತಿಳಿಯದ ಸಂಸ್ಕೃತದಂತಹ ‘ದೇವ ಭಾಷೆ’ಯಲ್ಲಲ್ಲ. ಸಾಮಾನ್ಯ ಜನರಿಗೆ ಸತ್ಯ ದರ್ಶನವಾಗಬಾರದು ಎಂಬ ಕಾರಣಕ್ಕೆ ಅಂದು ಸಂಸ್ಕೃತವನ್ನು ದೇವ ಭಾಷೆ ಎಂದು ಕರೆದು ಜನರನ್ನು ದೂರ ಇಡಲಾಗಿತ್ತು. ಆದರೆ ಬಸವಣ್ಣನವರು ಜನಸಾಮಾನ್ಯರ ಆಡುನುಡಿಯಲ್ಲೇ ವಚನಗಳ ಮೂಲಕ ಜ್ಞಾನದ ಜ್ಯೋತಿ ಬೆಳಗಿದರು” ಎಂದು ವಿವರಿಸಿದರು.

“ಬ್ಲಾಕ್ ಹೋಲ್ ಕುರಿತು ಮೊದಲ ಬಾರಿಗೆ ವೈಜ್ಞಾನಿಕ ವ್ಯಾಖ್ಯಾನ ನೀಡಿದವರು ಭಾರತೀಯ ಮೂಲದ ಸುಬ್ರಹ್ಮಣ್ಯಂ ಚಂದ್ರಶೇಖರ್. ಅವರು ಈ ಸಿದ್ಧಾಂತ ಮಂಡಿಸಿದಾಗ ಪಾಶ್ಚಾತ್ಯ ಜಗತ್ತು ಅದನ್ನು ಒಪ್ಪಲು ಸಿದ್ಧವಿರಲಿಲ್ಲ. ಒಬ್ಬ ಭಾರತೀಯ ಬಂದು ನಮಗೆ ವಿಜ್ಞಾನ ಹೇಳಿಕೊಡುವುದೇ ಎಂಬ ಅಹಂಕಾರ ಅವರಲ್ಲಿತ್ತು. ಆದರೆ ಇಂದು ವಿಜ್ಞಾನ ಅದೆಷ್ಟೋ ಮುಂದುವರಿದಿದ್ದು, ಅಂದು ಅವರು ಹೇಳಿದ ಸತ್ಯವನ್ನೇ ಜಗತ್ತು ಒಪ್ಪಿಕೊಂಡಿದೆ” ಎಂದು ಡಾ. ಸುಜಯ್ ಕುಮಾರ್ ಸ್ಮರಿಸಿದರು.

ಮುಂದುವರಿದು, “ನಮ್ಮ ಕಲ್ಪನೆಯ ದೇವರು ಮತ್ತು ವಿಜ್ಞಾನಿಗಳ ದೃಷ್ಟಿಕೋನದ ನಡುವೆ ವ್ಯತ್ಯಾಸವಿದೆ. ಎ.ಎನ್. ಮೂರ್ತಿರಾಯರಂತಹ ಚಿಂತಕರು ಸತ್ಯವನ್ನು ನಿರಾಕರಿಸಲಿಲ್ಲ, ಆದರೆ ಮೂರ್ತಿ ಪೂಜೆಯ ಕಲ್ಪನೆಯನ್ನು ಒಪ್ಪಲಿಲ್ಲ. ಸುಬ್ರಹ್ಮಣ್ಯಂ ಚಂದ್ರಶೇಖರ್ ಪ್ರಕಾರ, ದೇವರು ಎನ್ನುವುದು ‘ಡಿಸ್ಕವರಿ ಆಫ್ ಲೈಟ್’ ಅಥವಾ ಬೆಳಕಿನ ಆವಿಷ್ಕಾರದ ಕಲ್ಪನೆ. ಬದುಕಿನಲ್ಲಿ ಏನೋ ಒಂದು ಶಕ್ತಿ ಇದೆ ಎಂದು ನಂಬಲು ನಮಗೆ ಈ ‘ಟೈಟಲ್’ ಅವಶ್ಯಕತೆ ಇದೆ” ಎಂದು ಅವರು ಅಭಿಪ್ರಾಯಿಸಿದರು.

ಇದನ್ನೂ ಓದಿ: ಮಂಡ್ಯ | ಪ್ರೇಮ ವಿವಾಹ; ಯುವಕನ ಮನೆಗೆ ಬೆಂಕಿ ಹಚ್ಚಿದ ಯುವತಿ ತಂದೆ

“ನಮ್ಮ ಸಮಾಜವನ್ನು ಕಾಡುತ್ತಿರುವ ಜಾತಿ ಎಂಬ ಹುಳಗಳನ್ನು ಎಲ್ಲಿಯವರೆಗೆ ಹೊತ್ತು ತಿರುಗುತ್ತೀರಿ? ಮೊದಲು ವಾಸ್ತವತೆಯ ಅರಿವನ್ನು ನಮ್ಮೊಳಗೆ ನಾವು ಬೆಳೆಸಿಕೊಳ್ಳಬೇಕಿದೆ. ನಮ್ಮೊಳಗಿನ ವಿಚಾರಗಳನ್ನು ನಾವೇ ಸರಿಪಡಿಸಿಕೊಳ್ಳದಿದ್ದರೆ ಯಾವ ದೇವರು ಬಂದು ಸರಿ ಮಾಡಲು ಸಾಧ್ಯ? ದೇವರು ಎನ್ನುವುದೇ ಒಂದು ಪರಿಕಲ್ಪನೆ. ‘ದೇವರು ಸತ್ತ’ ಎನ್ನುವ ಪುಸ್ತಕದ ಬಗ್ಗೆ ಚರ್ಚೆ ನಡೆಸುವವರು ಕೆಲವರು ನಕ್ಷತ್ರ ಎನ್ನುತ್ತಾರೆ, ಇನ್ನು ಕೆಲವರು ಗ್ರಹ ಎನ್ನುತ್ತಾರೆ. ಆದರೆ ನಾವು ಯಾವುದನ್ನು ನಂಬಬೇಕು? ಸೂರ್ಯನೂ ಒಂದು ನಕ್ಷತ್ರ ಎಂಬ ವೈಜ್ಞಾನಿಕ ಸತ್ಯ ತಿಳಿದ ಮೇಲೂ, ಹೊಟ್ಟೆಪಾಡಿಗಾಗಿ ಸುಳ್ಳು ಹೇಳುವವರ ಮಾತುಗಳನ್ನು ನಂಬುವುದು ಎಷ್ಟು ಸರಿ? ನಿಮಗೆ ಯಾವುದು ಸತ್ಯ ಎಂದು ಅನಿಸುತ್ತದೋ ಅದನ್ನು ಮಾತ್ರ ನಂಬಿ. ಸತ್ಯ ತಿಳಿದ ಮೇಲೆಯೂ ಮೌಢ್ಯಕ್ಕೆ ಶರಣಾಗಬೇಡಿ” ಎಂದು ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ (ಕ.ರಾ.ವೈ.ಸಂ. ಪರಿಷತ್ತು) ಪ್ರಧಾನ ಕಾರ್ಯದರ್ಶಿಗಳಾದ ಜಿ. ಎಸ್. ಕೆಂಪರಾಜು ಕಿವಿಮಾತು ಹೇಳಿದರು.

ಈ ಸಮಾರಂಭದಲ್ಲಿ ಸಮಾಜದ ವಿವಿಧ ರಂಗಗಳ ಪ್ರಮುಖರು ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಜಿಲ್ಲಾ ವೈಜ್ಞಾನಿಕ ಸಂಶೋಧನಾ ಪರಿಷತ್ ಅಧ್ಯಕ್ಷ ಶಿವಲಿಂಗಯ್ಯ, ಪ್ರಜ್ಞಾವಂತ ವೇದಿಕೆಯ ಅಧ್ಯಕ್ಷ ಸಿ.ಎಸ್. ವೆಂಕಟೇಶ್, ಯೋಗ ಶಿಕ್ಷಕ ಕೆ. ಶೆಟ್ಟಹಳ್ಳಿ ಅಪ್ಪಾಜಿ, ಸಂಜಯ ಪ್ರಕಾಶನದ ಎಸ್.ಎಂ. ಶಿವಕುಮಾರ್, ಮತ್ತು ಸಮರ್ಪಣಾ ಟ್ರಸ್ಟ್ ಅಧ್ಯಕ್ಷ ಕೆ.ಎಸ್. ಜಯಶಂಕರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ​ವಕೀಲರಾದ ಎಸ್.ಆರ್. ಸಿದ್ದೇಶ್, ಬಾಲರಾಜ್, ವಿರೂಪಾಕ್ಷಪ್ಪ, ಪ್ರೊ. ಮಹಾದೇವು, ಶಿಕ್ಷಕಿ ಎಚ್.ಜೆ. ಶೀಲಾ, ಸುಜಾತಾ, ಚಿಕ್ಕ ತಮ್ಮೇಗೌಡ ಹಾಗೂ ಕ್ಯಾತನಹಳ್ಳಿ ಚಂದ್ರಣ್ಣ ಮುಂತಾದ ಗಣ್ಯರ ಸಮ್ಮುಖದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಂಡ್ಯ | ಅಂಬೇಡ್ಕರ್ ಅವಹೇಳನ ಆರೋಪ: ವೇದಮೂರ್ತಿ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಪೊಲೀಸ್ ಇಲಾಖೆಯ ಬಗ್ಗೆ ಅವಹೇಳನಕಾರಿ ಹೇಳಿಕೆ...

ತಮಿಳು ಕಾಲೊನಿ ನಿವಾಸಿಗಳನ್ನು ‘ಭಯೋತ್ಪಾದಕರು’ ಎಂದಿರುವ ಆರೋಪ: ರವೀಂದ್ರ ವಿರುದ್ಧ FIR ದಾಖಲಿಸಲು ಆಗ್ರಹ

ಮಂಡ್ಯ ನಗರದ ತಮಿಳು ಕಾಲೊನಿ ನಿವಾಸಿಗಳನ್ನು ‘ತಮಿಳುನಾಡಿನಿಂದ ಬಂದವರು’, ‘ಭಯೋತ್ಪಾದಕರು’ ಎಂದು...

ಮಂಡ್ಯದ ನ್ಯೂ ತಮಿಳು ಕಾಲೊನಿಯಲ್ಲಿ ‘SIR’ ಗೊಂದಲ: 207 ಮತದಾರರು ಎಲ್ಲಿ ಹೋದರು?

ವಿಶೇಷ ತೀವ್ರ ಪರಿಷ್ಕರಣೆ (Special Intensive Revision–SIR) ಹಿನ್ನೆಲೆಯಲ್ಲಿ ಮತದಾರರ ಪಟ್ಟಿಯ...

ಬರದ ನೆರಳಲ್ಲಿ 101 ತಾಲ್ಲೂಕುಗಳು; ಮೈಸೂರು-ಚಾಮರಾಜನಗರ-ಮಂಡ್ಯದಲ್ಲಿ ರೈತರ ಬದುಕಿಗೆ ಕಠಿಣ ಸವಾಲು

ಕರ್ನಾಟಕದಲ್ಲಿ 101 ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳೆಂದು ಘೋಷಿಸಿರುವುದು ಕೇವಲ ಮಳೆ ಕಡಿಮೆಯಾಗಿದೆ...