ಮುಂಡಗೋಡು | ಶಿಕ್ಷಣಕ್ಕೆ ಗಡಿಗಳಿಲ್ಲ: ಸಚಿವ ಮಧು ಬಂಗಾರಪ್ಪ

Date:

ಶಿಕ್ಷಣವು ಭಾಷೆ, ಧರ್ಮ, ರಾಜ್ಯ ಅಥವಾ ದೇಶದ ಗಡಿಗಳನ್ನು ಮೀರಿ ಸಾಗುವ ಶಕ್ತಿಯಾಗಿದೆ. ಶಾಂತಿ ಮತ್ತು ಅಭಿವೃದ್ಧಿಗೆ ಶಿಕ್ಷಣ ಹಾಗೂ ಮಾನವೀಯ ಮೌಲ್ಯಗಳು ಅತ್ಯಗತ್ಯ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದರು.

- Advertisement -

ಮುಂಡಗೋಡಿನ ಟಿಬೆಟಿಯನ್ ಕಾಲನಿಯಲ್ಲಿರುವ ಗಾಡೆನ್ ಶಾರ್ಟ್ಸೆ ಥೋಸೆಸಂ ನಾರ್ಲಿಂಗ್ ಶಾಲೆಯ ಸ್ಥಾಪನೆಯ 55ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌...

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಕಾರ್ಯಕ್ರಮದ ವೇಳೆ 14ನೇ ಬೌದ್ಧ ಧಮ್ಮ ಗುರು ದಲೈಲಾಮಾ ಅವರ ಆಶೀರ್ವಾದ ಸ್ಮರಿಸಿ, ಭಿಕ್ಷುಗಳು, ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಗಣ್ಯರಿಗೆ ಶುಭಾಶಯಗಳನ್ನು ತಿಳಿಸಿದರು.

WhatsApp Image 2025 12 29 at 3.15.25 PM

“ರಾಜ್ಯ ಸರ್ಕಾರದ ವತಿಯಿಮದ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟ, ಮೊಟ್ಟೆ, ಹಾಲು, ರಾಗಿ ಮಾಲ್ಟ್, ಉಚಿತ ಪಠ್ಯಪುಸ್ತಕ, ನೋಟುಪುಸ್ತಕ, ಯೂನಿಫಾರ್ಮ್, ಶೂ ಹಾಗೂ ಸಾಕ್ಸ್‌ಗಳನ್ನು ಒದಗಿಸಲಾಗುತ್ತಿದೆ. ರಾಜ್ಯದ ಶಿಕ್ಷಣ ನೀತಿ ವ್ಯವಸ್ಥೆಯಡಿ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳನ್ನು ಸೇರಿಸಿ ಸುಮಾರು 1.16 ಕೋಟಿ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಮುಂದಿನ ಶೈಕ್ಷಣಿಕ ವರ್ಷದಿಂದ ನೈತಿಕ ಶಿಕ್ಷಣ (Moral Science)ವನ್ನು ಕಡ್ಡಾಯ ವಿಷಯವಾಗಿ ಜಾರಿಗೆ ತರಲಾಗುವುದು. ಇದು ಮಾನವೀಯ ಮೌಲ್ಯಗಳು, ಆರೋಗ್ಯ, ಪರಿಸರ ಜಾಗೃತಿ, ಸಂಚಾರ ಶಿಸ್ತು ಮತ್ತು ನಾಗರಿಕ ಜವಾಬ್ದಾರಿಯನ್ನು ಬೆಳೆಸಲಿದೆ” ಎಂದರು.

Advertisements

ಇದನ್ನೂ ಓದಿ: ಮುಂಡಗೋಡ-ಹಳಿಯಾಳದ ಮದ್ಯ-ಮಟ್ಕಾ ಅಡ್ಡೆಗಳ ಮೇಲೆ ಪೊಲೀಸ್ ದಾಳಿ; ಪಾಳಾ ಭಾಗದ ಮಟ್ಕಾ ದಂಧೆಗೆ ಬೀಳುತ್ತಾ ಬ್ರೇಕ್?

ಕಾರ್ಯಕ್ರಮದಲ್ಲಿ ಗಾಡೆನ್ ಶಾರ್ಟ್ಸೆ ಥೋಸೆಸಂ ನಾರ್ಲಿಂಗ್ ಶಾಲೆಯ ಪ್ರಾಂಶುಪಾಲ ಗೆಶೆ ಲೋಬ್ಸಾಂಗ್ ಛೆರಿಂಗ್, ಕೇಂದ್ರ ಟಿಬೆಟಿಯನ್ ಆಡಳಿತ (CTA)ದ ಮುಖ್ಯ ಪ್ರತಿನಿಧಿ ಅಧಿಕಾರಿ ಜಿಗ್ಮೆ ತುಲ್ತ್ರಿಮ್, ಭದ್ರತಾ ಇಲಾಖೆಯ ಗೌರವಾನ್ವಿತ ಕಲೋನ್ (ಸಚಿವೆ) ಗ್ಯಾರಿ ಡೋಲ್ಮಾ, CTA, ಧರ್ಮಶಾಲಾ ಹಾಗೂ ಅನೇಕ ಭಿಕ್ಷುಗಳು, ಶಿಕ್ಷಕರು ಮತ್ತು ಸಮುದಾಯದ ಮುಖಂಡರು ಭಾಗವಹಿಸಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾವೇರಿ‌| ಕಬ್ಬಿಗೆ ದರ ನಿಗದಿ ಆಗುವ ತನಕ ಕಾರ್ಖಾನೆ ಆರಂಭಿಸುವಂತಿಲ್ಲ: ರೈತರು ಆಗ್ರಹ

"ಕಬ್ಬಿಗೆ ದರ ನಿಗದಿ‌ ಆಗುವ ತನಕ ಕಾರ್ಖಾನೆಗಳನ್ನು ಆರಂಭಿಸಬಾರದು" ಎಂದು ರೈತ...

ಬೀಳಗಿ | ಕಬ್ಬಿಗೆ ರೂ.5,000 ದರ ಆಗ್ರಹಿಸಿ ಭಾರತೀಯ ಕಿಸಾನ್‌ ಸಂಘದ ಪ್ರತಿಭಟನೆ

ಕಬ್ಬು ಬೆಳೆಗಾರರಿಗೆ ಪ್ರತಿ ಟನ್‌ಗೆ ರೂ. 5,000 ದರ ನಿಗದಿಪಡಿಸುವುದು ಸೇರಿದಂತೆ...

ಕೋಲಾರ | ಕ್ರೀಡೆ ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆ: ಮೈಲಾಂಡಹಳ್ಳಿ ಮುರಳಿ

ಕ್ರೀಡೆಯಲ್ಲಿ ಗ್ರಾಮೀಣ ಭಾಗದ ಯುವಕರಿಗೆ ಉತ್ತಮ ಅವಕಾಶಗಳು ದೊರೆಯಬೇಕು. ಕ್ರೀಡೆ ದೈಹಿಕ...

ಜಮಖಂಡಿ | ದಲಿತ ಸಾಹಿತ್ಯ ಶೋಷಣೆಯ ವಿರುದ್ಧದ ಧ್ವನಿ: ಪರಶುರಾಮ ಮಹಾರಾಜನವರ

ಅಸ್ಪೃಶ್ಯತೆ, ಸಾಮಾಜಿಕ ತಾರತಮ್ಯ ಹಾಗೂ ಶೋಷಣೆಯ ವ್ಯವಸ್ಥೆಯ ವಿರುದ್ಧ ಪ್ರಶ್ನೆ ಎತ್ತಿ,...