ರಾಜ್ಯದಲ್ಲಿ 60 ಲಕ್ಷ ಅರ್ಹ ಮತದಾರರ ಮತದಾನದ ಹಕ್ಕು ಕಸಿದುಕೊಳ್ಳಲಾಗಿದೆ ಎಂದು ಆರೋಪಿಸಿ, 44 ಲಕ್ಷ ಮತದಾರರಿಗೆ ನಾಗರಿಕತ್ವದ ಕುರಿತು ನೋಟಿಸ್ ನೀಡಲು ಮುಂದಾಗಿರುವ ಕೇಂದ್ರ ಚುನಾವಣಾ ಆಯೋಗದ ಕ್ರಮವನ್ನು ಖಂಡಿಸಿ ಸೆ.1ರಂದು ನಾಗರಿಕ ಸಂಘಟನೆಗಳ ವತಿಯಿಂದ ‘ಎಲೆಕ್ಷನ್ ಕಮಿಷನ್ ಚಲೋ’ ಹೋರಾಟ ನಡೆಸಲಾಗುವುದು ಎಂದು ಸಮಿತಿ ಸಂಚಾಲಕ ಶರಣಕುಮಾರ ತಿಳಿಸಿದ್ದಾರೆ. ಸಾಕ್ಷ್ಯಾಧಾರಗಳೊಂದಿಗೆ ಹೋರಾಟ ನಡೆಸಲಾಗುವುದು ಎಂದು ಅವರು ಹೇಳಿದರು.
ಅವರಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಹೆಸರಿನಲ್ಲಿ ಚುನಾವಣಾ ಆಯೋಗ ಮಂಡಿಸಿರುವ ಕರಡು ಮತದಾರರ ಪಟ್ಟಿ ಒಪ್ಪಲು ಸಾಧ್ಯವಿಲ್ಲ. ದೋಷಪೂರಿತವಾದ ಅವೈಜ್ಞಾನಿಕ ಪ್ರಕ್ರಿಯೆಯಾಗಿದೆ ಎಂದರು.
ಎಸ್ಐಆರ್ ಕುರಿತಂತೆ ನಾಗರೀಕರ ಅನುಮಾನಗಳು, ಆತಂಕಗಳನ್ನು ದೂರ ಮಾಡಬೇಕಿದ್ದ ಚುನಾವಣಾ ಆಯೋಗ ಮರೆಮಾಚಿ ತಪ್ಪು ಮಾಹಿತಿಯನ್ನು ನೀಡುತ್ತಲೇ ಬಂದಿದೆ. ಜನಜಾಗೃತಿ ಮಧ್ಯೆಯೂ ಅರ್ಹರನ್ನು ಮತದಾರರ ಪಟ್ಟಿಯಿಂದ ಹೊರಗಿಟ್ಟಿದೆ, ಬಿಎಲ್ಓಗಳಿಗೆ ಸಮರ್ಪಕ ತರಬೇತಿ ನೀಡದೇ ತರಾತುರಿಯಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಿರುವದಾಗಿ ಹೇಳುತ್ತಿದೆ. ಲಾಜಿಕಲ್ ಡಿಸ್ಕ್ಯಪೆನ್ಸಿ ಕುರಿತು ಬಿಎಲ್ಓಗಳಿಗೆ ಯಾವುದೇ ಸೂಚನೆ ನೀಡದೇ ಮತದಾರರನ್ನು ದೂರು ಉಳಿಸುವಂತಾಯಿತು ಎಂದು ಆರೋಪಿಸಿದರು.
ಎನ್ಯುಮೇಷನ್ ಫಾರಂ ಎಲ್ಲರಿಗು ನೀಡದೇ ತಪ್ಪು ಗಣತಿ ಅರ್ಜಿಗಳನು ಭರ್ತಿ ಮಾಡಿಕೊಂಡು ಸಾಧನೆಯೆಂಬಂತೆ ಬಿಂಬಿಸಿಕೊಂಡ ಚುನಾವಣಾ ಆಯೋಗ ನಡೆಯದೇ ಅವೈಜ್ಞಾನಿಕವಾಗಿದೆ. ಹೊಸಬರ ಸೇರ್ಪಡೆ ಫಾರಂ 6, ಮೃತಪಟ್ಟವರಿಗೆ ಫಾರಂ 7 ,ಸ್ಥಳಾಂತರ, ತಿದ್ದುಪಡಿ ಇದ್ದರೆ ಫಾರಂ 8 ಕೊಟ್ಟು ಭರ್ತಿಗೆ ಸೂಚಿಸಲಾಗಿತ್ತು. ಆದರೆ ಸ್ಥಳಾಂತರ ಮತದಾರರನ್ನು ಕಡಿತ ಮಾಡಲು ಆಯೋಗ ನಿರ್ಧರಿಸಿದೆ. 2002 ಮತದಾರರ ಪಟ್ಟಿ ಕಡ್ಡಾಯಗೊಳಿಸಿದ್ದರೂ ಮತದಾರರ ಪಟ್ಟಿಯೇ ಜನರಿಗೆ ದೊರೆಯಲೇ ಇಲ್ಲ. ಉದ್ದೇಶ ಪೂರಕವಾಗಿಯೇ ಆಯೋಗ ನಡೆದುಕೊಂಡಿದೆ ಎಂದರು.
ಕೇಂದ್ರ ಬಿಜೆಪಿ ಸರ್ಕಾರ ಮತ್ತು ಆಯೋಗ ಎರಡು ಸೇರಿಕೊಂಡು ಅರ್ಹ ಮತದಾರರನ್ನು ವಂಚಿತಗೊಳಿಸಿದೆ. 20 ಲಕ್ಷ ಮತದಾರರನ್ನು ಅನುಮಾನಸ್ಪದ ಗುರುತಿಸಿರುವ ಆಯೋಗ ಇವರೆಲ್ಲ ಯಾರು ಎಂದು ಹೇಳಲು ಸಿದ್ದವಿಲ್ಲ. ವಲಸೆ ಹೋದವರು, ಅನ್ಯ ಕಾರಣಕ್ಕೆ ಲಭ್ಯವಾಗದೇ ಇರುವವರೆಲ್ಲರನ್ನು ಎಲ್ಲಿಯೂ ಇಲ್ಲದಂತಾಗಿದೆ. ಸರಿ ಸುಮಾರು 50 ಲಕ್ಷ ಜನರು ಸ್ಥಳಾಂತರ ಎಂದು ಗುರುತಿಸಲಾಗಿದೆ. ಮತದಾರರ ಪಟ್ಟಿಗೆ ಸೇರ್ಪಡೆಯಾಗಿಲ್ಲ ಎಂದರೆ ಮತದಾನ ಹಕ್ಕು ಕಸಿದುಕೊಂಡತೆಯೇ ಸರಿ. ಕೂಡಲೇ ಎಸ್ಐಆರ್ ಪ್ರಕ್ರಿಯೆ ರದ್ದುಗೊಳಿಸದೇ ಹೋದಲ್ಲಿ ನ್ಯಾಯಾಲಯದ ಮೊರೆ ಹೋಗುವದಾಗಿಯೂ ಹೇಳಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಹಟ್ಟಿ ಚಿನ್ನದ ಗಣಿ–ಲಿಂಗಸುಗೂರು ನಡುವೆ ಸಮರ್ಪಕ ಬಸ್ ಸೇವೆಗೆ ಒತ್ತಾಯ
ಈ ಸಂದರ್ಬದಲ್ಲಿ ಅಸೀಮುದ್ದೀನ್ ಅಕ್ತರ್, ಮೊಹ್ಮದ ಎಜಾಜ್, ಆಂಜಿನಯ್ಯ ಕುರಬದೊಡ್ಡಿ, ಮಾರೆಮ್ಮ ಇದ್ದರು.




