ಸೋನಿಯಾ ಗಾಂಧಿ ಆತ್ಮಕಥೆ ಪ್ರಕಟಕ್ಕೆ ಪೆಂಗ್ವಿನ್ ನಕಾರ; ‘ಅಭಿವ್ಯಕ್ತಿ ಸ್ವಾತಂತ್ರ್ಯದ ಹತ್ಯೆ’ ಎಂದ ಕಾಂಗ್ರೆಸ್

Date:

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಆತ್ಮಕಥನ ‘Belonging: A Journey of Love’ ಪುಸ್ತಕವನ್ನು ಪ್ರಕಟಿಸಲು ‘ಪೆಂಗ್ವಿನ್ ರ್ಯಾಂಡಮ್ ಹೌಸ್ ಇಂಡಿಯಾ’ (PRHI) ನಿರಾಕರಿಸಿದೆ. ಪೆಂಗ್ವಿನ್ ಇಂಡಿಯಾದ ಈ ನಡೆಯನ್ನು ಕಾಂಗ್ರೆಸ್‌ ತೀವ್ರವಾಗಿ ಖಂಡಿಸಿದೆ. “ಪುಸ್ತಕ ಪ್ರಕಟಿಸದೇ ಇರಲು ‘ಸರ್ಕಾರದ ಒತ್ತಡವಿದೆಯೇ?’ ಎಂದು ಅನುಮಾನ ವ್ಯಕ್ತಪಡಿಸಿರುವ ಕಾಂಗ್ರೆಸ್‌, ಈ ಬೆಳವಣಿಗೆಯನ್ನು ‘ಅಭಿವ್ಯಕ್ತಿ ಸ್ವಾತಂತ್ರ್ಯದ ಹತ್ಯೆ’ ಎಂದೂ ಟೀಕಿಸಿದೆ.

- Advertisement -

ಸೋನಿಯಾ ಗಾಂಧಿ ಅವರ ಪುಸ್ತಕವನ್ನು ಪ್ರಕಟಿಸಲು ಪುಸ್ತಕದಲ್ಲಿ ಕೆಲವು ಅಂಶಗಳನ್ನು ಅಳಿಸುವಂತೆ ಮತ್ತು ಬದಲಾವಣೆ ಮಾಡುವಂತೆ ಪೆಂಗ್ವಿನ್ ಇಂಡಿಯಾ ಕೇಳಿತ್ತು. ಆದರೆ, ಪ್ರಕಾಶಕರ ಬೇಡಿಕೆಗೆ ಸೋನಿಯಾ ಗಾಂಧಿ ಒಪ್ಪದ ಕಾರಣ, ಪುಸ್ತಕವನ್ನು ಪ್ರಕಟಿಸಲು ಪೆಂಗ್ವಿನ್ ಇಂಡಿಯಾ ಹಿಂದೆ ಸರಿದಿದೆ ಎಂದು ವರದಿಯಾಗಿವೆ. ಆದರೆ, ವಿವಾದದ ಕುರಿತು ಪ್ರತಿಕ್ರಿಯಿಸಿರುವ ಪ್ರಕಾಶನ ಸಂಸ್ಥೆ, “ಸೋನಿಯಾ ಗಾಂಧಿ ಅವರ ಕೃತಿಯ ಭಾರತದ ಪ್ರಕಾಶಕರು ನಾವಲ್ಲ. ಸೋನಿಯಾ ಗಾಂಧಿ ಅವರು ಪುಸ್ತಕದಲ್ಲಿನ ಬದಲಾವಣೆಗಳನ್ನು ಒಪ್ಪದ ಕಾರಣ ನಾವು ಪುಸ್ತಕವನ್ನು ಕೈಬಿಟ್ಟೆವು ಎಂಬ ಹೇಳಿಕೆ ವಾಸ್ತವಕ್ಕೆ ದೂರವಾದುದು” ಎಂದು ಹೇಳಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...

ಇದಕ್ಕೆ ಪ್ರತಿಕ್ರಿಯಿಸಿದ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, “ಜಗತ್ತಿನಾದ್ಯಂತ ಮುದ್ರಣವಾಗುತ್ತಿರುವ ಪುಸ್ತಕವನ್ನು ಭಾರತದಲ್ಲಿ ಮುದ್ರಿಸಲು ಯಾವ ಕಾರಣ ಅಥವಾ ಯಾವ ಒತ್ತಡ ತಡೆಯುತ್ತಿದೆ” ಎಂದು ಪ್ರಶ್ನಿಸಿದ್ದಾರೆ.

“ಮೋದಿ ಸರ್ಕಾರದ ಅವಧಿಯಲ್ಲಿ ಚೀನಾ ಭಾರತೀಯ ಭೂಪ್ರದೇಶವನ್ನು ಆಕ್ರಮಿಸಿಕೊಂಡಿರುವ ಕುರಿತು ಬರೆಯಲಾಗಿರುವ ಭಾಗಗಳನ್ನು ತೆಗೆದುಹಾಕುವಂತೆ ಪೆಂಗ್ವಿನ್ ಇಂಡಿಯಾ ಮೇಲೆ ಪ್ರಧಾನಿ ನರೇಂದ್ರ ಮೋದಿ, ಆರ್‌ಎಸ್ಎಸ್‌ನಿಂದ ಒತ್ತಡ ಹಾಕಲಾಗಿದೆ” ಎಂದು ಗೆಹ್ಲೋಟ್ ದೂರಿದ್ದಾರೆ.

“ಸೋನಿಯಾ ಗಾಂಧಿಯಂತಹ ಹಿರಿಯ ರಾಜಕಾರಣಿಯ ಪುಸ್ತಕವನ್ನು ಒತ್ತಡದ ಮೂಲಕ ತಡೆಯುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಹತ್ಯೆಗೆ ಸಮಾನ. ಇದು ಪ್ರಜಾಪ್ರಭುತ್ವದ ಮೇಲಿನ ದಾಳಿ. ಸತ್ಯವನ್ನು ಭಾರತೀಯ ಜನರಿಂದ ಏಕೆ ಮರೆಮಾಡಲಾಗುತ್ತಿದೆ? ಸರ್ಕಾರವು ಪ್ರಕಾಶಕರ ಮೇಲೂ ಒತ್ತಡ ಹೇರಿ ವಾಸ್ತವಾಂಶಗಳನ್ನು ಬದಲಾಯಿಸಲು ಪ್ರಯತ್ನಿಸುತ್ತಿದೆಯೇ” ಎಂದೂ ಅವರು ಪ್ರಶ್ನಿಸಿದ್ದಾರೆ.

ಅಂತೆಯೇ, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಕೂಡ ಇದೇ ವಿಚಾರವನ್ನು ‘ಗಂಭೀರ ಕಳವಳದ ವಿಷಯ’ ಎಂದು ಬಣ್ಣಿಸಿದ್ದಾರೆ. “ಸೋನಿಯಾ ಗಾಂಧಿಯಂತಹ ಹಿರಿಯ ವ್ಯಕ್ತಿ ಏನು ಬರೆಯಬೇಕು, ಏನು ಬರೆಯಬಾರದು ಎಂದು ಪ್ರಕಾಶಕರೇ ತೀರ್ಮಾನಿಸಬೇಕೇ? ಅಥವಾ ಪ್ರಕಾಶಕರ ಮೇಲೆ ಬೇರೆ ಯಾರಾದರೂ ಒತ್ತಡ ಹಾಕುತ್ತಿದ್ದಾರೆಯೇ” ಎಂದು ಪ್ರಶ್ನಿಸಿದ್ದಾರೆ.

ಲೋಕಸಭೆಯ ಕಾಂಗ್ರೆಸ್ ಉಪನಾಯಕ ಗೌರವ್ ಗೊಗೊಯ್ ಅವರು ಪೆಂಗ್ವಿನ್ ಇಂಡಿಯಾದ ಸ್ಪಷ್ಟನೆಯನ್ನು ‘ದುರ್ಬಲ’ ಎಂದು ಟೀಕಿಸಿದ್ದಾರೆ. “ಪೆಂಗ್ವಿನ್ ಇಂಡಿಯಾ ಪ್ರಧಾನಿ ಮೋದಿಯ ‘ಎಕ್ಸಾಂ ವಾರಿಯರ್’ ಸೇರಿದಂತೆ RSS ಕುರಿತ ಹಲವು ಪುಸ್ತಕಗಳನ್ನು ಪ್ರಕಟಿಸಲು ಸಿದ್ಧವಾಗಿದ್ದು, ಸೋನಿಯಾ ಗಾಂಧಿಯವರ ಪುಸ್ತಕ ಪ್ರಕಟಿಸಲು ಮಾತ್ರ ಹಿಂದೆ ಸರಿಯುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ” ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್ ಸೇವಾದಳ, ಯುವ ಕಾಂಗ್ರೆಸ್ ಮತ್ತು ಮಹಿಳಾ ಕಾಂಗ್ರೆಸ್ ಕೂಡ ಪೆಂಗ್ವಿನ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಕಟುವಾಗಿ ಟೀಕಿಸಿವೆ. ಇದನ್ನು ಬ್ಲ್ಯಾಕ್‌ಮೇಲ್ ತಂತ್ರವೆಂದು ಬಣ್ಣಿಸಿವೆ.

ಇದೇ ವೇಳೆ, ಪೆಂಗ್ವಿನ್ ರ್ಯಾಂಡಮ್ ಹೌಸ್ ಇಂಡಿಯಾ ತನ್ನ ನಿಲುವನ್ನು ಮತ್ತೊಮ್ಮೆ ಸಮರ್ಥಿಸಿಕೊಂಡಿದೆ. ಪುಸ್ತಕ ಪ್ರಕಟಣೆಯಲ್ಲಿ ವಾಸ್ತವ ಪರಿಶೀಲನೆ, ತಿದ್ದುಪಡಿ ಸಲಹೆ ಮತ್ತು ಬದಲಾವಣೆ ಶಿಫಾರಸುಗಳು ಸಾಮಾನ್ಯ ಪ್ರಕ್ರಿಯೆಯ ಭಾಗ ಎಂದು ಹೇಳಿಕೊಂಡಿದೆ. “ಲೇಖಕರಿಗೆ ತಿದ್ದುಪಡಿ ಶಿಫಾರಸುಗಳನ್ನು ನೀಡುವುದು ನಮ್ಮ ಹಕ್ಕು ಮಾತ್ರವಲ್ಲ, ಹೊಣೆಗಾರಿಕೆಯೂ ಹೌದು. ಇದು ಸಾಮಾನ್ಯ ಪ್ರಕಾಶನ ಪ್ರಕ್ರಿಯೆ” ಎಂದು PRHI ಹೇಳಿದೆ.

79 ವರ್ಷದ ಸೋನಿಯಾ ಗಾಂಧಿ ಅವರ ಈ ಆತ್ಮಕಥೆಯಲ್ಲಿ ಅವರು ಇಟಲಿಯಿಂದ ಭಾರತದ ಪ್ರಮುಖ ರಾಜಕೀಯ ಕುಟುಂಬಕ್ಕೆ ಬಂದ ತಮ್ಮ ಜೀವನಯಾನ, ರಾಜೀವ್ ಗಾಂಧಿಯವರೊಂದಿಗೆ ವಿವಾಹ, ಅವರ ಹತ್ಯೆಯ ನಂತರ ರಾಜಕೀಯದ ಸಾರ್ವಜನಿಕ ಬದುಕಿಗೆ ತಳ್ಳಲ್ಪಟ್ಟದ್ದು, ಕಾಂಗ್ರೆಸ್ ನಾಯಕತ್ವ ಹಾಗೂ 2004ರಲ್ಲಿ ಪ್ರಧಾನಮಂತ್ರಿ ಹುದ್ದೆಯನ್ನು ತಿರಸ್ಕರಿಸಿದ ನಿರ್ಧಾರ ಸೇರಿದಂತೆ ಹಲವು ಪ್ರಮುಖ ರಾಜಕೀಯ ವಿದ್ಯಾಮಾನಗಳನ್ನು ನಮೂದಿಸಿದ್ದಾರೆ ಎಂದು ಪ್ರಕಾಶಕರು ತಿಳಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಡಿಬಿಐ ಬ್ಯಾಂಕ್ ಮಾರಾಟಕ್ಕೆ ಕೇಂದ್ರ ಸಂಪುಟ ಅಸ್ತು: ₹52,878 ಕೋಟಿಗೆ ಫೇರ್‌ಫ್ಯಾಕ್ಸ್ ತೆಕ್ಕೆಗೆ

ಐಡಿಬಿಐ (IDBI) ಬ್ಯಾಂಕ್‌ನ ‘ಕಾರ್ಯತಂತ್ರದ ಪುನರ್‌ರಚನೆ’ಗೆ (Strategic Restructuring) ಕೇಂದ್ರ ಸಚಿವ...

ಬೀದರ್‌ | ಜಿಪಂ, ತಾಪಂ ಚುನಾವಣೆ: ಸಾಮಾಜಿಕ ಜಾಲತಾಣದಲ್ಲಿ ಆಕಾಂಕ್ಷಿಗಳ ಪ್ರಚಾರ ಜೋರು!

ರಾಜ್ಯದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರವಾರು ಮೀಸಲಾತಿ ಪ್ರಕಟವಾಗುತ್ತಿದ್ದಂತೆ, ಬೀದರ್‌...

ಸಿಜೆಪಿ ನಾಯಕರ ಬಂಧನಕ್ಕೆ ತೀವ್ರ ಖಂಡನೆ: ತಕ್ಷಣ ರಾಂಕಾ, ಸೌರವ್ ಬಿಡುಗಡೆಗೆ ವಿಪಕ್ಷಗಳ ಆಗ್ರಹ

ಏಕಪಕ್ಷೀಯ ನಿರ್ಧಾರ ಕೈಗೊಂಡ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್...

ಪತಿಯನ್ನು ಕೊಂದು ಕಾಂಕ್ರೀಟ್ ಡ್ರಮ್‌ನಲ್ಲಿ ಹೂತಿಟ್ಟ ಪ್ರಕರಣ: ಪತ್ನಿ, ಪ್ರಿಯಕರನಿಗೆ ಗಲ್ಲು ಶಿಕ್ಷೆ

ಮರ್ಚೆಂಟ್ ನೇವಿ ಅಧಿಕಾರಿ ಸೌರಭ್ ರಜಪೂತ್ ಅವರನ್ನು ಬರ್ಬರವಾಗಿ ಹತ್ಯೆಗೈದು, ಮೃತದೇಹವನ್ನು...