ರಾಯಚೂರು | ರಾಜಕೀಯ ಲಾಭಕ್ಕಾಗಿ ಒಳಮೀಸಲಾತಿ ನೀಡಲು ಕೇಂದ್ರಕ್ಕೆ ಶಿಫಾರಸು; ಕಾಂಗ್ರೆಸ್‌ ವಿರುದ್ಧ ಆರೋಪ

Date:

ರಾಜ್ಯದ ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ನೀಡಲು ಕೇಂದ್ರಕ್ಕೆ ಶಿಫಾರಸು ಮಾಡುವ ಮೂಲಕ ರಾಜಕೀಯ ಲಾಭ ಪಡೆದು ಘೋರ ಅನ್ಯಾಯ ಮಾಡಲು ಹೊರಟಿದೆ ಎಂದು ಮಾದಿಗ ಸಮಾಜದ ಹಿರಿಯ ಮುಖಂಡ ಎಂ ವಿರೂಪಾಕ್ಷಿ ಆರೋಪಿಸಿದರು.

- Advertisement -

ರಾಯಚೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. “ಹಿಂದಿನ ಸರ್ಕಾರದ ಅವಧಿಯಲ್ಲಿ ಸಚಿವ ಸಂಪುಟ ಉಪಸಮಿತಿ ಮಾಧುಸ್ವಾಮಿ ನೇತೃತ್ವದಲ್ಲಿ ಕೇಂದ್ರಕ್ಕೆ ಈಗಾಗಲೇ ಶಿಫಾರಸು ಮಾಡಲಾಗಿದೆ. ಕಾಂಗ್ರೆಸ್ ಸರ್ಕಾರ ನ್ಯಾಯಮೂರ್ತಿ ಎ ಜೆ ಸದಾಶಿವ ಆಯೋಗ ವರದಿ ಜಾರಿಗೊಳಿಸುವುದಾಗಿ ಪ್ರಣಾಳಿಕೆಯಲ್ಲಿ ಹೇಳಿತ್ತು. ಆದರೆ ವರದಿಯನ್ನು ಅಂಗೀಕರಿಸದೆ ಸಂವಿಧಾನ ತಿದ್ದುಪಡಿ ಮಾಡುವುದಕ್ಕೆ ಮಾತ್ರ ಶಿಫಾರಸು ಮಾಡಿದೆ. ಆದರೆ ಈಗಾಗಲೇ ಸುಪ್ರಿಂಕೋರ್ಟಿನಲ್ಲಿ ಏಳು ನ್ಯಾಯಾಧೀಶರ ಪೀಠ ರಚಿಸಲಾಗಿದೆ. ಇದೇ ತಿಂಗಳಲ್ಲಿ ವಿಚಾರಣೆ ಪ್ರಾರಂಭವಾಗಲಿದೆ. ಕಾನೂನಾತ್ಮಕ ಸಮಸ್ಯೆಗಳು ಗೊತ್ತಿದ್ದರೂ, ನೆಪ ಮಾತ್ರಕ್ಕೆ ಶಿಫಾರಸು ಮಾಡಿದೆ” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನೊಬೆಲ್‌ ಪ್ರಶಸ್ತಿ ಸರಣಿ | ಕಣ ಭೌತವಿಜ್ಞಾನ-ಖಗೋಳವಿಜ್ಞಾನಗಳೆರಡರ ಸಮ್ಮಿಳನದ...

ಫ್ರಾನ್ಸಿಸ್ ಹಾಲ್ಜೆನ್ ಅವರ ಮೂಲ ಆಲೋಚನೆ ಕೇವಲ ಹಿಮದೊಳಗೆ ಸಂವೇದಕಗಳನ್ನು ಇಡುವ ಯೋಜನೆಯಾಗಿರಲಿಲ್ಲ. ಅದು ವಿಶ್ವವನ್ನು ನೋಡುವ ಹೊಸ ವಿಧಾನಕ್ಕೆ ಬಾಗಿಲು ತೆರೆಯುವ ಆಲೋಚನೆಯಾಗಿತ್ತು. ಅಗೋಚರವಾಗಿರುವ ಕಣಗಳನ್ನು ಹಿಡಿಯುವ ಮೂಲಕ, ವಿಶ್ವದ ಅತ್ಯಂತ...

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌...

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

“2008ರಲ್ಲಿಯೇ ನ್ಯಾಯಮೂರ್ತಿ ಉಷಾ ಮೆಹರ್ ವರದಿಯಂತೆ 341 ತಿದ್ದುಪಡಿಗೆ ಶಿಫಾರಸು ಮಾಡಿದೆ. ಆದರೂ ರಾಜ್ಯ ಸರ್ಕಾರ ಮತ್ತೊಮ್ಮೆ ತಿದ್ದುಪಡಿ ಶಿಫಾರಸು ಮಾಡಿ ಗೊಂದಲ ಸೃಷ್ಟಿಸಲು ಹೊರಟಿದೆ. ಈ ಹಿಂದೆ ಬಾದಾಯಲ್ಲಿ ʼನ್ಯಾಯಮೂರ್ತಿ ಸದಾಶಿವ ಆಯೋಗ ವರದಿ ಅವೈಜ್ಞಾನಿಕವಾಗಿದೆ. ಅದಕ್ಕಾಗಿ ಜಾರಿಗೊಳಿಸಿಲ್ಲʼವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಹೇಳಿದ್ದರು. ಕೇಂದ್ರ ಸರ್ಕಾರ ಒಳಮೀಸಲಾತಿ ಜಾರಿಗೊಳಿಸುವ ಆತಂಕದಿಂದ ಚರ್ಚೆ ಮಾಡದೇ ಕೇಂದ್ರಕ್ಕೆ ಶಿಫಾರಸು ಮಾಡಿರುವುದಾಗಿ ಹೇಳುತ್ತಿದೆ. ಭೋವಿ, ಬಂಜಾರ, ಕೊರವ, ಕೊರಚ ಸಮೂದಾಯಗಳನ್ನು ಹಾಗೇ ಉಳಿಸಿಕೊಂಡು ಒಳ ಮೀಸಲಾತಿ ಜಾರಿಗೊಳಿಸುವುದಾಗಿ ಹೇಳುತ್ತಿದೆ” ಎಂದರು.

“ನ್ಯಾಯಮೂರ್ತಿ ನಾಗಮೋಹನ ದಾಸ್ ಆಯೋಗ ವರದಿಯಂತೆ ಶೇ.17 ರಷ್ಟು ಎಸ್‌ಸಿ ಹಾಗೂ ಶೇ.7 ರಷ್ಟು ಎಸ್‌ಟಿಗಳಿಗೆ ಮೀಸಲಾತಿ ಒದಗಿಸಲು ಶಿಫಾರಸು ಮಾಡಿದೆ. ಆದರೆ ರಾಜ್ಯದ ಸರ್ಕಾರ ಸಚಿವ ಸಂಪುಟದಲ್ಲಿ 341 ತಿದ್ದುಪಡಿ ಮಾಡಲು ಶಿಫಾರಸು ಎಂದಷ್ಟೇ ಹೇಳುತ್ತಿದೆ. ಸಮೂದಾಯದ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಕೆಲ ಸಮಾಜ ಮುಖಂಡರುಗಳ ಕಾಂಗ್ರೆಸ್ ಗೊಂದಲ ಒಳಮರ್ಮ ಅರಿಯಬೇಕಿದೆ. ಚರ್ಚೆಗೆ ಬಂದರೆ ಚರ್ಚಿಸಲು ಸಿದ್ದ” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಪರಿಶಿಷ್ಟರ ಮೇಲೆ ನಿಲ್ಲದ ಶೋಷಣೆ; ವರ್ಷದಲ್ಲಿ 461 ದೌರ್ಜನ್ಯ ಪ್ರಕರಣಗಳು ದಾಖಲು

ಈ ಸಂದರ್ಬದಲ್ಲಿ ರವೀಂದ್ರ ಜಲ್ದಾರ, ಸುಭಾಷ ಅಸ್ಕಿಹಾಳ, ಭೀಮಯ್ಯ ಮಂಚಾಲ ,ಶಂಶಾಲ, ಎನ್ ಕೆ ನಾಗರಾಜ, ಆರ್ ಅಂಜಿನೇಯ, ಚಂದ್ರು ಭಂಡಾರಿ, ರಾಘವೇಂದ್ರ ಬೋರೆಡ್ಡಿ ಸೇರಿದಂತೆ ಬಹುತೇಕರು ಇದ್ದರು.

ವರದಿ : ಹಫೀಜುಲ್ಲ

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ನಗರ ಸಂಚಾರಕ್ಕೆ ಪ್ರತ್ಯೇಕ ಠಾಣೆ, ಹತ್ತಿಗೂಡೂರಿಗೆ ಗ್ರಾಮೀಣ ಠಾಣೆ ಆರಂಭಿಸುವಂತೆ ಆಗ್ರಹಿಸಿ ಮನವಿ

ನಗರದಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆ ಹಾಗೂ ಪೊಲೀಸ್‌ ಇಲಾಖೆಯ ಮೇಲಿನ ಕಾರ್ಯಭಾರ...

ಯಾದಗಿರಿ | ನಿವೇಶನಕ್ಕಾಗಿ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ನಿರಂತರ ಧರಣಿ

ನಗರದಲ್ಲಿರುವ ನಿವೇಶನ ರಹಿತರಿಗೆ ನಿವೇಶನ ಒದಗಿಸುವಂತೆ ಆಗ್ರಹಿಸಿ ಕರ್ನಾಟಕ ಸ್ಲಂ ಜನಾಂದೋಲನ...

ಚಿಕ್ಕಮಗಳೂರು | ಸಾಮಾಜಿಕ ಜಾಲತಾಣ; ಶಾಸಕ ಟಿ.ಡಿ ರಾಜೇಗೌಡರಿಗೆ ಅವಹೇಳನ, ಬೆದರಿಕೆ; ಪ್ರಕರಣ ದಾಖಲು 

ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಕ್ಷೇತ್ರದ ಶಾಸಕ ಸನ್ಮಾನ್ಯ ಶ್ರೀ ಟಿ. ಡಿ...

ಕಲಬುರಗಿ | ನಕಲಿ ಸುಪ್ರೀಂ ಕೋರ್ಟ್ ಆದೇಶ ಸೃಷ್ಟಿಸಿ ಜೀವಾವಧಿ ಕೈದಿ ಬಿಡುಗಡೆ; ಕಾರಾಗೃಹ ಡಿಐಜಿ ಬಂಧನ

ಬೆಂಗಳೂರು ಸುಪ್ರೀಂ ಕೋರ್ಟ್‌ ಆದೇಶದ ಮಾದರಿಯನ್ನು ಅನುಕರಿಸಿ ನಕಲಿ ಆದೇಶವೊಂದನ್ನು ಸಿದ್ಧಪಡಿಸಿ...