ರಾಯಚೂರು | ವರ್ಣಾಶ್ರಮ ಪೋಷಣೆಗೆ ಕರೆ ನೀಡಿದ ಕನೇರಿ ಶ್ರೀ ವಿರುದ್ಧ ಕ್ರಮ ಜರುಗಿಸಿ : ಆರ್. ಮಾನಸಯ್ಯ

Date:

ವರ್ಣಾಶ್ರಮ ವ್ಯವಸ್ಥೆ ಪೋಷಣೆಗೆ ಸಾರ್ವಜನಿಕವಾಗಿ ಕರೆ ನೀಡಿರುವ ಕನೇರಿ ಮಠದ ಶ್ರೀ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಸರ್ಕಾರ ಜಾರಿಗೆ ತರುವುದಾಗಿ ಘೋಷಿಸಿರುವ ದ್ವೇಷ ಭಾಷಣ ತಡೆ ಮಸೂದೆಯನ್ನು ಯಾವುದೇ ವಿಳಂಬವಿಲ್ಲದೆ ಜಾರಿಗೊಳಿಸಬೇಕು ಎಂದು ಪ್ರಗತಿಪರ ಚಿಂತಕ ಆರ್.ಮಾನಸಯ್ಯ ಆಗ್ರಹಿಸಿದರು.

- Advertisement -

ಭೀಮಾ ಕೋರೆಗಾಂವ್ ಯುದ್ಧ ವಿಜಯೋತ್ಸವದ 208ನೇ ಶೌರ್ಯ ದಿನದ ಅಂಗವಾಗಿ ಲಿಂಗಸೂಗೂರು ನಗರದಲ್ಲಿ ಅದ್ದೂರಿಯಾಗಿ ಆಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

ʼದೇಶದ ಚರಿತ್ರೆಯನ್ನು ಒಂದಲ್ಲಾ ಒಂದು ರೀತಿಯಲ್ಲಿ ವಿಕೃತಗೊಳಿಸಿ ನಾಶಪಡಿಸುವ ಪ್ರಯತ್ನಗಳು ನಡೆಯುತ್ತಿವೆ. ದಮನಿತರ ಮೇಲೆ ನಡೆಯುತ್ತಿರುವ ಅನ್ಯಾಯ ಮತ್ತು ದೌರ್ಜನ್ಯಗಳ ವಿರುದ್ಧ ದಮನಿತ ವರ್ಗಗಳು ಒಗ್ಗೂಡಿ ಹಿಮ್ಮೆಟಿಸಬೇಕಾಗಿದೆ. ಆರ್‌ಎಸ್‌ಎಸ್ ಕಾರ್ಯಕರ್ತರು ಭೀಮಾ ಕೊರೆಂಗಾವ್ ಯುದ್ದದ ಬಗ್ಗೆ ಅಪಪ್ರಚಾರ ಮಾಡುತ್ತಾರೆ. ಈ ಯುದ್ದದ ಗೆಲುವು ನಮಗೆ ಸ್ವಾಭಿಮಾನ ತಂದುಕೊಟ್ಟಿದೆ. ಸಂವಿಧಾನವಾದಿಗಳು ಅಸಮಾನತೆ ವಿರುದ್ಧ ಹೋರಾಡಬೇಕಿದೆʼ ಎಂದು ಕರೆ ನೀಡಿದರು.

WhatsApp Image 2026 01 02 at 6.26.51 PM

ʼಹಿಂದೂ ರಾಷ್ಟ್ರ ನಿರ್ಮಾಣದ ಹೆಸರಿನಲ್ಲಿ ಮನೆ-ಮನೆಗೆ ತೆರಳಿ ತಲವಾರ್‌ಗಳನ್ನು ವಿತರಿಸುತ್ತಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಈ ರೀತಿಯ ಚಟುವಟಿಕೆಗಳು ದೇಶದ ಯುವ ಜನತೆಗೆ ಯಾವ ಸಂದೇಶವನ್ನು ನೀಡುತ್ತಿವೆ. ಶಸ್ತ್ರಾಸ್ತ್ರಗಳ ಮೂಲಕ ಸಮಾಜ ನಿರ್ಮಾಣ ಸಾಧ್ಯವಿಲ್ಲ. ಗಾತ್ರದ ವಿರುದ್ಧ ಗುಣತನ ಗೆಲ್ಲಬೇಕು, ಅಸಮಾನತೆ ವಿರುದ್ಧ ಸಮಾನತೆ ಗೆಲ್ಲಬೇಕುʼ ಎಂದು ತಿಳಿಸಿದರು.

ನಗರದ ಪ್ರವಾಸಿ ಮಂದಿರದಿಂದ ಮೆರವಣಿಗೆ ಆರಂಭಗೊಂಡು ಗಡಿಯಾರ ಚೌಕ್, ಬಸವ ಸರ್ಕಲ್ ಮೂಲಕ ಸಾಗುತ್ತಾ ಅಂಬೇಡ್ಕರ್ ವೃತ್ತವನ್ನು ತಲುಪಿತು. ನೂರಾರು ಜನರು ಕೈಯಲ್ಲಿ ನೀಲಿ ಧ್ವಜಗಳನ್ನು ಹಿಡಿದು, ವಿಜಯೋತ್ಸವ ಘೋಷಣೆಗಳನ್ನು ಕೂಗುತ್ತಾ ಸಂಭ್ರಮದಿಂದ ಮೆರವಣಿಗೆ ನಡೆಸಿದರು. ಬಳಿಕ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.

ಇದನ್ನೂ ಓದಿ : ಬೀದರ್‌ | 10 ತಿಂಗಳಲ್ಲಿ 800ಕ್ಕೂ ಅಧಿಕ ರಸ್ತೆ ಅಪಘಾತ : 263 ಮಂದಿ ಸಾವು

ಈ ವೇಳೆ ಪ್ರಮುಖರಾದ ಸಿ.ದಾನಪ್ಪ ನಿಲೊಗಲ್, ದೊಡ್ಡಪ್ಪ ಮುರಾರಿ, ಎಚ್ ಬಿ ಮುರಾರಿ, ಪಾಮಯ್ಯ ಮುರಾರಿ, ಹೆಚ್.ಎನ್ ಬಡಿಗೇರ, ಚಿದಾನಂದ ನಾಯಕ, ಮೀನಾ ಕುಮಾರಿ, ಗಂಗಾಧರ ನೀರಲಕೇರಿ ಸೇರಿ ಅನೇಕರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | SIR : ನೈಜ ಮತದಾರರನ್ನೇ ಗುರಿಯಾಗಿಸಿ ಫಾರ್ಮ್-7 ಸಲ್ಲಿಕೆ, ಎಸ್‌ಐಟಿ ತನಿಖೆಗೆ ಆಗ್ರಹ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ನಡೆಯುತ್ತಿರುವ ಬೆನ್ನಲ್ಲೇ,...

ರಾಯಚೂರು | ಸೂರ್ಯಕಾಂತಿ ಬೆಂಬಲ ಬೆಲೆ ಕ್ವಿಂಟಾಲ್‌ಗೆ ₹8,343: ಖರೀದಿ ಕೇಂದ್ರ ಆರಂಭ; ಡಿಸಿ

ಸರ್ಕಾರದ ಆದೇಶದಂತೆ 2026-27ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಮುಂಗಾರು...

ರಾಯಚೂರು | ಹತ್ತಿ ಮಿಲ್ ಗೆ ಆಕಸ್ಮಿಕ ಬೆಂಕಿ: 60 ಲಕ್ಷದ ಹತ್ತಿ ಭಸ್ಮ

ಹತ್ತಿ ಮಿಲ್‌ಗೆ ಅಕಸ್ಮಿಕ ಬೆಂಕಿ ತಗುಲಿ ಸುಮಾರು 60ಲಕ್ಷ ಮೌಲ್ಯದ ಬೆಂಕಿ...

ರಾಯಚೂರು | ವಿದ್ಯುತ್ ಅವಘಡದಲ್ಲಿ ರೈತ ಸಾವು: ಕುಟುಂಬಕ್ಕೆ ಬೋಸರಾಜು, ಹಂಪಯ್ಯ ನಾಯಕ್ ಸಾಂತ್ವನ

ಮಾನ್ವಿ ತಾಲ್ಲೂಕಿನ ಕಾತರಕಿ ಗ್ರಾಮದಲ್ಲಿ ಮೋಟಾರ್ ಸ್ಟಾರ್ಟ್ ಮಾಡಲು...