ರಾಯಚೂರು | ಶೌಚಾಲಯ ನಿರ್ಮಾಣದ ಜತೆಗೆ ನಿರ್ವಹಣೆಗೂ ಆದ್ಯತೆ ಅಗತ್ಯ: ಸಿಡ್ನಿ ನೋವು

Date:

ಶೌಚಾಲಯ ನಿರ್ಮಿಸುವುದಷ್ಟೇ ಸ್ವಚ್ಛತೆಯ ಗುರಿಯಾಗಬಾರದು. ಅವು ವರ್ಷಪೂರ್ತಿ ಬಳಕೆಗೆ ಯೋಗ್ಯವಾಗಿರುವುದು, ಸಮರ್ಪಕ ನೀರಿನ ವ್ಯವಸ್ಥೆ ಸ್ವಚ್ಛತೆ ಹಾಗೂ ಮಹಿಳೆಯರ ಸುರಕ್ಷತೆ ಮತ್ತು ಗೌಪ್ಯತೆಗೆ ಆದ್ಯತೆ ನೀಡುವುದು ಮುಖ್ಯ ಎಂದು ಜಿಂಬಾಬೈ ಮೂಲದ ಸಂಶೋಧಕ ಹಾಗೂ ಅಮೃತ ವಿಶ್ವವಿದ್ಯಾಪೀಠಂನ ಪಿಎಚ್‌ಡಿ ಸಂಶೋಧಕ ಸಿಡ್ನಿ ನೋವು ಹೇಳಿದರು.

- Advertisement -

ವಿಶ್ವ ಶೌಚಾಲಯ ದಿನದ ಅಂಗವಾಗಿ ರಾಯಚೂರು ಪ್ರೆಸ್‌ ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮೃತ ವಿಶ್ವವಿದ್ಯಾಪೀಠಂನ ಲಿವ್-ಇನ್-ಲ್ಯಾಟ್ಸ್ ಕಾರ್ಯಕ್ರಮದಡಿ ಜಿಲ್ಲೆಯ ಕುರವಕುಡ ಮತ್ತು ಮಮದದೊಡ್ಡಿ ಗ್ರಾಮಗಳಲ್ಲಿ ನಡೆಸಿದ ಸಂಶೋಧನೆಯ ವಿವರಗಳನ್ನು ಹಂಚಿಕೊಂಡರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಈ ದಿನ ಕವಿತೆ | ನಾನು, ರಸ್ತೆ ಹಾಗೂ...

ವಾರಕ್ಕೊಂದು ಅನುವಾದಿತ ಕವಿತೆ ಮಾಲಿಕೆಯಲ್ಲಿ ಈ ಬಾರಿ ಮರಾಠಿ ಕವಿ ವಸಂತ್ ಆಬಾಜಿ ದಹಾಕೆ ಅವರ "ನಾನು, ರಸ್ತೆ ಹಾಗೂ ಕಪ್ಪು ಹಕ್ಕಿ" ಕವಿತೆಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಹಿರಿಯ ಅನುವಾದಕಿ ಸಿ...

ಶಿವಮೊಗ್ಗ | 40 ವರ್ಷ ದುಡಿದರೂ ಗಜಾನನ ಸಂಸ್ಥೆ...

ಮಲೆನಾಡಿನ ಸಾರಿಗೆ ಕ್ಷೇತ್ರದಲ್ಲಿ ತನ್ನದೇ ಆದ ಗುರುತನ್ನು ಮೂಡಿಸಿದ್ದ ಸಾಗರ ತಾಲೂಕಿನ ಹೆಸರಾಂತ ಗಜಾನನ ಬಸ್ ಸಂಸ್ಥೆ ಒಂದು ಕಾಲದಲ್ಲಿ ಸುಮಾರು 150ಕ್ಕೂ ಹೆಚ್ಚು ಬಸ್‌ಗಳ ಮೂಲಕ ಜನಪ್ರಿಯತೆ ಗಳಿಸಿತ್ತು. ಸಂಸ್ಥೆಯ ಬೆಳವಣಿಗೆಯಲ್ಲಿ...

ರಾಜಕೀಯ ಪಕ್ಷಗಳಿಗೆ ಪ್ರವೇಶವಿಲ್ಲ: ಚುನಾವಣೆ ಬಹಿಷ್ಕರಿಸಿದ ಹೊನ್ನಗುಂಡಿ ಗ್ರಾಮಸ್ಥರು!

ಅದೆಷ್ಟೋ ಚುನಾವಣೆ ನಡೆದು ಹೋದವು, ಆದರೆ ನಮ್ಮೂರಿಗೆ ಮೂಲಭೂತ ಸೌಕರ್ಯಗಳಿಲ್ಲ. ಕನಿಷ್ಠ ಸೌಲಭ್ಯವಾದ ಡಾಂಬರ್ ರಸ್ತೆ ಕಾಣದೆ ಅದೆಷ್ಟೋ ವರ್ಷ ಕಳೆದಿದೆ. ನಮ್ಮ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿದೆ ಯಾವ ರಾಜಕೀಯ ಪಕ್ಷಗಳು...

ಎರಡು ಗ್ರಾಮಗಳ 459 ಕುಟುಂಬಗಳ ಸಮೀಕ್ಷೆಯಲ್ಲಿ ಶೇ.66ರಷ್ಟು ಕುಟುಂಬಗಳು ಬಯಲು ಶೌಚ ಪದ್ಧತಿಯನ್ನು ಅನುಸರಿಸುತ್ತಿರುವುದು ಕಂಡುಬಂದಿದೆ. ಶೌಚಾಲಯ ಹೊಂದಿರುವ ಕುಟುಂಬಗಳ ಪೈಕಿ ಕೇವಲ ಶೇ.40ರಷ್ಟು ಕುಟುಂಬಗಳು ಮಾತ್ರ ಅವುಗಳನ್ನು ನಿಯಮಿತವಾಗಿ ಬಳಸುತ್ತಿವೆ. ಕಾರ್ಯನಿರ್ವಹಣೆ, ನೀರಿನ ಲಭ್ಯತೆ ಮತ್ತು ಸ್ವಚ್ಛತೆ ಎಂಬ ಮೂರು ಮಾನದಂಡಗಳನ್ನು ಕೇವಲ ಶೇ.27ರಷ್ಟು ಶೌಚಾಲಯಗಳು ಮಾತ್ರ ಪೂರೈಸಿವೆ ಎಂದು ತಿಳಿಸಿದರು.

ಶೌಚಾಲಯ ಬಳಕೆಯಾಗದಿರಲು ನೀರಿನ ಕೊರತೆ, ದುರ್ವಾಸನೆ, ಹಾನಿಗೊಳಗಾದ ಬಾಗಿಲುಗಳು ಹಾಗೂ ನಿರ್ವಹಣೆಯ ಕೊರತೆ ಪ್ರಮುಖ ಕಾರಣಗಳಾಗಿವೆ. ಶೌಚಾಲಯ ಹೊಂದಿರುವ ಕುಟುಂಬಗಳ ಪೈಕಿ ಕೇವಲ ಶೇ.29ರಷ್ಟು ಕುಟುಂಬಗಳಿಗೆ ಮಾತ್ರ ವಿಶ್ವಾಸಾರ್ಹ ನೀರಿನ ವ್ಯವಸ್ಥೆಯಿದೆ ಎಂದರು.

ಮಹಿಳೆಯರ ಸುರಕ್ಷತೆ ಮತ್ತು ಗೌಪ್ಯತೆಯೂ ಪ್ರಮುಖ ಸಮಸ್ಯೆಯಾಗಿದ್ದು, ಸಮೀಕ್ಷೆಯಲ್ಲಿ ಶೇ.84ರಷ್ಟು ಮಹಿಳೆಯರು ಈ ಸಮಸ್ಯೆಗಳನ್ನು ಗುರುತಿಸಿದ್ದಾರೆ. ಮಹಿಳೆಯರಿಗೆ ಸುರಕ್ಷಿತ ಶೌಚಾಲಯ, ನೀರು, ಬೆಳಕು ಹಾಗೂ ಸೂಕ್ತ ಬೀಗದ ವ್ಯವಸ್ಥೆ ಕಲ್ಪಿಸಬೇಕು. ಶೌಚಾಲಯಗಳ ನಿರ್ವಹಣೆಯಲ್ಲಿ ಮಹಿಳೆಯರ ಅಭಿಪ್ರಾಯಕ್ಕೂ ಆದ್ಯತೆ ನೀಡಬೇಕು ಎಂದು ಹೇಳಿದರು.

ಕೇವಲ ಶೇ.15ರಷ್ಟು ಜನರು ಮಾತ್ರ ನೈರ್ಮಲ್ಯ ಜಾಗೃತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವುದು ಸಮೀಕ್ಷೆಯಿಂದ ತಿಳಿದುಬಂದಿದೆ. ಆದ್ದರಿಂದ ಗ್ರಾಮ ಪಂಚಾಯಿತಿಗಳು, ಸಮುದಾಯದ ಮುಖಂಡರು ಹಾಗೂ ಸಾರ್ವಜನಿಕರು ಒಟ್ಟಾಗಿ ಬಳಕೆಗೆ ಯೋಗ್ಯವಲ್ಲದ ಶೌಚಾಲಯಗಳನ್ನು ದುರಸ್ತಿಗೊಳಿಸಿ, ನೀರಿನ ವ್ಯವಸ್ಥೆ ಕಲ್ಪಿಸಬೇಕು. ಕುಟುಂಬಗಳನ್ನು ದೂಷಿಸುವ ಬದಲು ಅವರಿಗೆ ಅಗತ್ಯ ನೆರವು ನೀಡಬೇಕು ಎಂದು ಸಲಹೆ ನೀಡಿದರು.

ಈ ಸುದ್ದಿ ಓದಿದ್ದೀರಾ? ರಾಯಚೂರು | ಬಸವಣ್ಣನವರ ಬಗ್ಗೆ ಅವಹೇಳನಕಾರಿ ಹೇಳಿಕೆ: ರವಿಹಂಜ ಬಂಧನಕ್ಕೆ ಲಿಂಗಾಯತ ಮಹಾಸಭಾ ಆಗ್ರಹ

ಶೌಚಾಲಯ ನಿರ್ಮಾಣದಿಂದ ಹಿಡಿದು ಅದರ ಸಮರ್ಪಕ ಬಳಕೆಯವರೆಗೆ ಗಮನಹರಿಸಿದಾಗ ಮಾತ್ರ ಗೌರವಯುತ ಮತ್ತು ಸುರಕ್ಷಿತ ನೈರ್ಮಲ್ಯ ವ್ಯವಸ್ಥೆ ಸಾಧ್ಯ ಸುರಕ್ಷಿತ ಶೌಚಾಲಯಗಳು, ಸಮಾನ ಭವಿಷ್ಯ ಎಂಬ ಆಶಯ ಸಾಕಾರಗೊಳ್ಳಲು ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ |ಬಾಕಿ ಪ್ರಕರಣಗಳ ತ್ವರಿತ ವಿಲೇವಾರಿಗೆ ಅಧಿಕಾರಿಗಳಿಗೆ ಸೂಚನೆ

ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಲೋಕಾಯುಕ್ತ...

ಬಾಗಲಕೋಟೆ |ಪಟ್ಟದಕಲ್ಲಿನಲ್ಲಿ ಎರಡು ದಿನಗಳ ‘ಕಲಾಧಾರ’ ಸಂಗೀತೋತ್ಸವ

ವಿಶ್ವ ಪರಂಪರೆ ಸಪ್ತಾಹದ ಅಂಗವಾಗಿ ಐತಿಹಾಸಿಕ ಪಟ್ಟದಕಲ್ಲಿನಲ್ಲಿ ಇಂದು ಮತ್ತು ನಾಳೆ...

ಬಾಗಲಕೋಟೆ |ಗ್ರಾಮೀಣ ಆಸ್ತಿ ಮಾಲೀಕರಿಗೆ ಭೂ ಗ್ಯಾರಂಟಿ ಅಭಿಯಾನ: ನ. 2ರಿಂದ ಜಾರಿ

ಗ್ರಾಮೀಣ ಪ್ರದೇಶದ ಆಸ್ತಿ ಮಾಲೀಕರಿಗೆ ಅಧಿಕೃತ ದಾಖಲೆ ಒದಗಿಸಿ ಆಸ್ತಿ ಹಕ್ಕುಗಳನ್ನು...

ಬಾಗಲಕೋಟೆ |ಕಲ್ಲಿನಿಂದ ದಂಪತಿಗಳ ಮೇಲೆ ಹಲ್ಲೆ; ಆರೋಪಿಗೆ 2 ವರ್ಷ ಜೈಲು, ₹25 ಸಾವಿರ ದಂಡ

ಪತಿ-ಪತ್ನಿಯ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಪ್ರಕರಣದಲ್ಲಿ...