ಬೀದರ್‌ | ಕುಂದು ಕೊರತೆ : ಚರಂಡಿಯಲ್ಲಿರುವ ನೀರಿನ ವಾಲ್‌ ಸ್ವಚ್ಛಗೊಳಿಸಿ, ರಸ್ತೆ, ಶಾಲಾ ಕೋಣೆ ನಿರ್ಮಿಸಿ

Date:

ಜಿಲ್ಲೆಯ ವಿವಿಧ ತಾಲೂಕಿನ ಗ್ರಾಮೀಣ ಭಾಗದಲ್ಲಿ ರಸ್ತೆ, ಚರಂಡಿ, ಶುದ್ಧ ಕುಡಿಯುವ ನೀರು, ಶಾಲಾ ಕಟ್ಟಡ ಸೇರಿದಂತೆ ಅನೇಕ ಸಮಸ್ಯೆಗಳು ತಲೆದೋರಿವೆ. ಈ ದಿಸೆಯಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ ದನಿಯಾಗಿ ಬೆಳಕು ಚೆಲ್ಲುವ ಕಾರ್ಯ ʼಈದಿನ.ಕಾಮ್‌ʼ ನಿರಂತರವಾಗಿ ಮಾಡುತ್ತದೆ.

ಈ ಬಗ್ಗೆ ಈದಿನ.ಕಾಮ್‌ ಬೀದರ್‌ ಸಹಾಯವಾಣಿಗೆ ಸಾರ್ವಜನಿಕರು ಕಳುಹಿಸಿದ ಕುಂದು ಕೊರತೆ ವರದಿ ಇಲ್ಲಿದೆ.

ಔರಾದ್‌ | ಚರಂಡಿ ನೀರಿನಲ್ಲಿದೆ ಕುಡಿಯುವ ನೀರಿನ ವಾಲ್‌ :

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಔರಾದ್‌ ತಾಲೂಕಿನ ಬೆಳಕುಣಿ(ಚೌ) ಗ್ರಾಮದಲ್ಲಿ ಕುಡಿಯುವ ನೀರಿನ ಘಟಕದಿಂದ ಸರಬರಾಜಾಗುವ ಪೈಪ್‌ಲೈನ್ ಗೆ ಅಳವಡಿಸಲಾದ ಮೂರು ವಾಲ್‌ಗಳು ರಸ್ತೆ ಬದಿಯಲ್ಲಿ ಸಂಗ್ರಹಗೊಂಡ ಚರಂಡಿ ನೀರಿನಲ್ಲಿಯೇ ಇವೆ. ಆದರೆ ಅದನ್ನು ಸ್ವಚ್ಛಗೊಳಿಸದೇ ಹಾಗೇ ಬಿಟ್ಟ ಕಾರಣ ಕುಡಿಯುವ ನೀರಿನಲ್ಲಿ ಹೊಲಸು ನೀರು ಸೇರಿ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಗ್ರಾಮ ಪಂಚಾಯತ್‌ ಕೇಂದ್ರ ಸ್ಥಾನ ಹೊಂದಿರುವ ಬೆಳಕುಣಿಯಲ್ಲಿ ಎರಡು ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಎರಡೂ ಘಟಕಗಳು ಜನರಿಗೆ ಉಪಯುಕ್ತವಿಲ್ಲದೆ ಧೂಳು ತಿನ್ನುತ್ತಿವೆ. ಶುದ್ಧ ನೀರಿನ ಘಟಕದ ಎದುರಗಡೆಯೇ ಇರುವ ಮೂರು ವಾಲ್ ಹೊಲಸು ನೀರಿನಲ್ಲಿವೆ.

ಈಗಲಾದರೂ ಗ್ರಾಮ ಪಂಚಾಯತ್‌ ಅಧಿಕಾರಿಗಳು ಎಚ್ಚೆತುಕೊಂಡು ವಾಲ್‌ ಸುತ್ತಮುತ್ತಲೂ ಸ್ವಚ್ಛಗೊಳಿಸಬೇಕು. ವಾಲ್‌ ಸುತ್ತಲೂ ಗೋಡೆ ನಿರ್ಮಿಸಿ ವಾಲ್‌ನಲ್ಲಿ ಕಲುಷಿತ ನೀರು ಹೋಗದಂತೆ ಎಚ್ಚರಿಕೆ ಕ್ರಮ ವಹಿಸಬೇಕೆಂದು ಸ್ಥಳೀಯರು ಮನವಿ ಮಾಡಿದ್ದಾರೆ.

‌ಈ ಬಗ್ಗೆ ಬೆಳಕುಣಿ(ಚೌ) ಗ್ರಾಮ ಪಂಚಾಯತ್‌ ಪಿಡಿಒ ಶ್ರೀಪತರಾವ್‌ ಚಿಟಗಿರೆ ಈದಿನ.ಕಾಮ್ ಮಾತನಾಡಿ, ʼಹೊಲಸು ನೀರಿನಲ್ಲಿರುವ ವಾಟರ್‌ ವಾಲ್‌ ಕೂಡಲೇ ಸ್ವಚ್ಛಗೊಳಿಸಲಾಗುವುದು. ಒಂದು ಶುದ್ಧ ಕುಡಿಯುವ ನೀರಿನ ಘಟಕ ಈಗಾಗಲೇ ದುರಸ್ತಿ ಮಾಡಲಾಗಿದೆʼ ಎಂದು ಮಾಹಿತಿ ನೀಡಿದರು.

ಬೀದರ್‌ ದಕ್ಷಿಣ | ಹದೆಗೆಟ್ಟ ರಸ್ತೆ ದುರಸ್ತಿಗೆ ಮನವಿ

ಬೀದರ್ ದಕ್ಷಿಣ ಕ್ಷೇತ್ರದ ಚಾಂಗಲೆರಾ ವೀರಭದ್ರೇಶ್ವರ ಮಂದಿರದಿಂದ ವ್ಹಾಯಾ ಕಾರಪಾಕಪಳ್ಳಿ ಮಾರ್ಗವಾಗಿ ಉಡಮನಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹದಗೆಟ್ಟು ರಸ್ತೆ ಮಧ್ಯೆ ಗುಂಡಿ ಬಿದ್ದು ಜನರ ಓಡಾಡಕ್ಕೆ ತೊಂದರೆಯಾಗುತ್ತಿದೆ.

ʼಸುಮಾರು 5-6 ಕಿ.ಮೀ ರಸ್ತೆಯು 10 ವರ್ಷಗಳೇ ಹಿಂದೆ ನಿರ್ಮಿಸಲಾಗಿದೆ. ರಸ್ತೆ ದುರಸ್ತಿ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿ ಗಮನಕ್ಕೆ ತರಲಾಗಿದೆ. ಆದರೆ ಯಾರೊಬ್ಬರೂ ಸ್ಪಂದಿಸುತ್ತಿಲ್ಲ. ವಿವಿಧ ಕೆಲಸ ಕಾರ್ಯಗಳಿಗೆ ತೆರಳಲು ಕಾರಪಾಕಪಳ್ಳಿ ಗ್ರಾಮಸ್ಥರಿಗೆ ಇದೊಂದೇ ರಸ್ತೆ ಇದೆʼ ಎನ್ನುತ್ತಾರೆ ನಿವಾಸಿಗಳು.

ʼರಸ್ತೆ ಹಾಳಾದ ಕಾರಣ ಸರಿಯಾದ ಸಮಯಕ್ಕೆ ಸಾರಿಗೆ ಬಸ್‌ಗಳು ಕೂಡ ಬರುತ್ತಿಲ್ಲ. ಇದರಿಂದ ರೈತರು, ವಿದ್ಯಾರ್ಥಿಗಳು, ಮಹಿಳೆಯರ ಸಂಚಾರಕ್ಕೆ ತುಂಬಾ ಸಮಸ್ಯೆಯಾಗಿದೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು ರಸ್ತೆ ದುರಸ್ತಿಗೊಳಿಸಿ ಸಾರ್ವಜನಿಕರ ಓಡಾಡಕ್ಕೆ ಅನುಕೂಲ ಮಾಡಿಕೊಡಬೇಕೆಂದು ಎಂದು ವಿದ್ಯಾರ್ಥಿ ಸಚಿನ್‌ ಮೇತ್ರೆ ಮನವಿ ಮಾಡಿದ್ದಾರೆ.

ಭಾಲ್ಕಿ | ಜೆಜೆಎಂ ಕಾಮಗಾರಿಯಿಂದ ಹಾಳಾದ ರಸ್ತೆ ದುರಸ್ತಿಗೊಳಿಸಿ

ಭಾಲ್ಕಿ ತಾಲೂಕಿನ ಹಲಬರ್ಗಾ ಗ್ರಾಮದ ವಾರ್ಡ್‌ ನಂ. 2ರಲ್ಲಿ ಜೆಜೆಎಂ ಕಾಮಗಾರಿ ನಡೆಸಲು ತೋಡಿರುವ ತಗ್ಗುಗಳು ಸಂಪೂರ್ಣವಾಗಿ ಮುಚ್ಚದೇ ಹಾಗೇ ಬಿಟ್ಟಿದ್ದಾರೆ. ಇದರಿಂದ ರಸ್ತೆ ಸಂಪೂರ್ಣ ಹಾಳಾಗಿದ್ದು, ಮಳೆ ಬಂದರೆ ಕೆಸರು ಗದ್ದೆಯಾಗುತ್ತದೆ. ಈ ರಸ್ತೆಯಲ್ಲಿ ಓಡಾಡಲು ನಿತ್ಯ ಪರದಾಡುತ್ತಿದ್ದೇವೆ ಎಂದು ಸ್ಥಳೀಯರು ಹೇಳುತ್ತಾರೆ.

ʼಗ್ರಾಮ ಪಂಚಾಯತ್‌ ಕೇಂದ್ರ ಸ್ಥಾನವಾಗಿರುವ ಹಲಬರ್ಗಾದಲ್ಲಿ ಜಲ ಜೀವನ ಮಿಷನ್‌ ಯೋಜನೆಯಡಿ ಕಾಮಗಾರಿ ಕೈಗೊಳ್ಳಲು ಎಲ್ಲಾ ವಾರ್ಡಿನಲ್ಲಿ ರಸ್ತೆಗಳು ಕೆದರಿದ್ದಾರೆ. ವಾರ್ಡ್‌ -2ರಲ್ಲಿ ಜೆಜೆಎಂ ಯೋಜನೆಯಡಿಯ ನಲ್ಲಿ ಕೂಡಿಸಲು ರಸ್ತೆ ಮಧ್ಯೆ ತಗ್ಗು ತೋಡಿದ್ದಾರೆ. ಆದರೆ, ಸಿಮೆಂಟ್‌ನಿಂದ ತಗ್ಗು ಮುಚ್ಚದೇ ಹಾಗೇ ಬಿಟ್ಟಿದ್ದಾರೆ. ಇನ್ನು ಚರಂಡಿ ವ್ಯವಸ್ಥೆ ಕೂಡ ಇಲ್ಲದ ಕಾರಣ ಮನೆಗಳಿಂದ ಬರುವ ಹೊಲಸು ನೀರು ರಸ್ತೆ ಮೇಲೆಯೇ ಹರಿಯುತ್ತದೆʼ ಎಂದು ನಿವಾಸಿಗಳು ಗೋಳು ತೋಡಿಕೊಂಡಿದ್ದಾರೆ.

ಈ ಬಗ್ಗೆ ಗ್ರಾಮ ಪಂಚಾಯತ್‌ ಪಿಡಿಒ ಅವರಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಈಗಲಾದರೂ ಅಧಿಕಾರಿಗಳು ಎಚ್ಚೆತ್ತು ಹಾಳಾದ ರಸ್ತೆ ದುರಸ್ತಿಗೊಳಿಸಿ, ಹೊಸ ಚರಂಡಿ ನಿರ್ಮಾಣಕ್ಕೆ ಮುಂದಾಗಬೇಕೆಂದು ಒತ್ತಾಯಿಸಿದ್ದಾರೆ.

ಕಮಲನಗರ | ಈ ರಸ್ತೆ ಡಾಂಬರ್‌ ಎಂಬುದೇ ಕಾಣಲ್ಲ

ಕಮಲನಗರ ತಾಲೂಕಿನ ಬಸನಾಳ-ಕೋರಿಯಾಳ ಗ್ರಾಮಗಳಿಗೆ ಸಂಪರ್ಕಿಸುವ ಮುಖ್ಯ ರಸ್ತೆ ಸಂಪೂರ್ಣ ಹಾಳಾಗಿದ್ದು, ಸ್ವಲ್ಪ ಮಳೆಯಾದರೆ ಸಾಕು ಕೆಸರು ಗದ್ದೆಯಂತಾಗುತ್ತದೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.

ʼಸುಮಾರು 2-3 ಕಿ.ಮೀ ಇರುವ ಈ ರಸ್ತೆಯಲ್ಲಿ ತಗ್ಗು, ಗುಂಡಿಗಳೇ ತುಂಬಿಕೊಂಡಿವೆ. ರಸ್ತೆಯಲ್ಲಿ ಡಾಂಬರ್‌ ಎಂಬುದು ಮಾಯವಾಗಿ ಬರೀ ಕೆಸರು ತುಂಬಿಕೊಂಡಿದೆ. ರಸ್ತೆ ಗುಂಡಿಗಳಲ್ಲಿ ಮಳೆ ನೀರು ಸಂಗ್ರಹವಾಗಿ ವಾಹನ ಸವಾರರ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಇನ್ನು ದ್ವಿಚಕ್ರ ವಾಹನ ಸವಾರರ ಪರದಾಟ ಹೇಳತೀರದುʼ ಎಂಬುದು ಪ್ರಯಾಣಿಕರ ಅಭಿಪ್ರಾಯ.

ಭಾಲ್ಕಿಯಿಂದ ದಿನಕ್ಕೆ ಒಂದು ಸಲ ಬರುವ ಸಾರಿಗೆ ಬಸ್‌ ಕೂಡ ರಸ್ತೆ ಸಮಸ್ಯೆ ಕಾರಣಕ್ಕೆ ಕೆಲ ದಿನಗಳಿಂದ ಬರುತ್ತಿಲ್ಲ. ಇದರಿಂದ ಶಾಲಾ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು, ಸುತ್ತಲಿನ ಗ್ರಾಮಗಳ ರೈತರು, ಪ್ರಯಾಣಿಕರು ಸಕಾಲಕ್ಕೆ ತಲುಪದೇ ಸಮಸ್ಯೆಯಾಗುತ್ತಿದೆ.

ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ರಸ್ತೆ ದುರಸ್ತಿಗೆ ಮುಂದಾಗಬೇಕು ಎಂದು ಬಸನಾಳ ಗ್ರಾಮದ ನಿವಾಸಿ ಸದಾನಂದ ಪಾಟೀಲ್‌ ಆಗ್ರಹಿಸಿದ್ದಾರೆ.

ಭಾಲ್ಕಿ | ಶಿಥಿಲಗೊಂಡ ಕೋಣೆಗಳು; ಆತಂಕದಲ್ಲೇ ಮಕ್ಕಳಿಗೆ ಪಾಠ

ಭಾಲ್ಕಿ ತಾಲೂಕಿನ ರಾಚಪ್ಪ ಗೌಡಗಾಂವ್‌ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೋಣೆಗಳು ಶಿಥಿಲಗೊಂಡ ಕಾರಣ ವಿದ್ಯಾರ್ಥಿಗಳು ನಿತ್ಯ ಆತಂಕದಲ್ಲೇ ಪಾಠ ಕೇಳಬೇಕಾದ ಪರಿಸ್ಥಿತಿ ಇದೆ.

ಇಲ್ಲಿ 1ರಿಂದ 7ನೇ ತರಗತಿವರೆಗೆ ಶಾಲೆಯಲ್ಲಿದ್ದು, 30ಕ್ಕೂ ಹೆಚ್ಚು ಮಕ್ಕಳು ಓದುತ್ತಿದ್ದಾರೆ. ಆದರೆ ತರಗತಿಗೆ ಅನುಗುಣವಾಗಿ ಅಗತ್ಯ ಕೊಠಡಿಗಳಿಲ್ಲ, ಇರುವ ಕೊಠಡಿಗಳು ಶಿಥಿಲಾವಸ್ಥೆಗೆ ತಲುಪಿವೆ. ಇದರಿಂದ ಮಕ್ಕಳಿಗೆ ಸುಸಜ್ಜಿತ ಕಟ್ಟಡ ಇಲ್ಲದಂತಾಗಿ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ.

ʼಶಾಲಾ ಕೋಣೆಗಳು ಶಿಥಿಲಗೊಂಡಿದ್ದು, ಹೊಸ ಕೋಣೆ ನಿರ್ಮಿಸಿಕೊಡುವ ಬಗ್ಗೆ ಶಾಲೆಯ ಮುಖ್ಯಗುರು 2021ರಿಂದ ಶಿಕ್ಷಣ ಇಲಾಖೆಗೆ ಪತ್ರ ಬರೆಯುತ್ತಲೇ ಇದ್ದಾರೆ. ಆದರೆ ಇಲ್ಲಿಯವರೆಗೆ ಹೊಸ ಕಟ್ಟಡ ನಿರ್ಮಿಸಲು ಇಲಾಖೆಯಾಗಲಿ, ಜನಪ್ರತಿನಿಧಿಗಳಾಗಲಿ ಇಚ್ಚಾಶಕ್ತಿ ತೋರುತ್ತಿಲ್ಲʼ ಎಂದು ಗ್ರಾಮದ ಲೋಕೇಶ ಕಾಂಬಳೆ ಅಸಮಧಾನ ವ್ಯಕ್ತಪಡಿಸುತ್ತಾರೆ.

ಮಳೆಗೆ ಶಾಲಾ ಮೇಲ್ಛಾವಣಿ ಕುಸಿದು ಬೀಳುವ ಭೀತಿಯಲ್ಲೇ ಶಿಕ್ಷಕರು ಬೋಧನೆ ಮಾಡುತ್ತಿದ್ದಾರೆ. ಏನಾದರೂ ಅನಾಹುತ ಜರುಗುವ ಮುನ್ನ ಇಲಾಖೆ ಎಚ್ಚೆತುಕೊಂಡು ಮಕ್ಕಳ ಹಿತದೃಷ್ಟಿಯಿಂದ ಹೊಸ ಕಟ್ಟಡ ನಿರ್ಮಿಸಲು ಮುಂದಾಗಬೇಕು ಎಂದು ಕೋರಿದ್ದಾರೆ.

ನಿಮ್ಮ ಊರು, ನಗರ, ಪಟ್ಟಣದ ಕುಂದು ಕೊರತೆಗಳ ಪೋಟೋ, ವಿಡಿಯೋ ಮಾಹಿತಿಯನ್ನು
ಈದಿನ.ಕಾಮ್ ನ್ಯೂಸ್ ಬೀದರ್ ಸಹಾಯವಾಣಿ 9035053805 ವಾಟ್ಸಪ್ ನಂಬರ್‌ಗೆ ಕಳುಹಿಸಿ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗೇಪಲ್ಲಿ | ಸಿಪಿಎಂ ಸಂಘಟಿಸುವ ಜವಾಬ್ದಾರಿ ಎಲ್ಲರ ಮೇಲಿದೆ; ಎಂ.ಪಿ.ಮುನಿವೆಂಕಟಪ್ಪ

ಆಧುನಿಕ ಶೋಷಣೆಯಂತಹ ದಬ್ಬಾಳಿಕಾ ಪ್ರವೃತ್ತಿಯನ್ನು ತಡೆದು, ಸಿಪಿಎಂ ಪಕ್ಷದ ಬಲಿಷ್ಟ ಸಂಘಟನೆಯ...

ಗುಬ್ಬಿ | ಬಡ್ಡಿ ದಂಧೆಗೆ ಮತ್ತೋರ್ವ ಬಲಿ : ನಿಟ್ಟೂರು ವಾಸಿ ನೇಣಿಗೆ ಶರಣು; ಆತಂಕದಲ್ಲಿ ಜನತೆ

ಮೀಟರ್ ಬಡ್ಡಿ ದಂಧೆಗೆ ಬೇಕರಿ ಮಾಲೀಕ ಬಲಿಯಾದ ಘಟನೆ ಮಾಸುವ ಮುನ್ನವೇ...

ರಾಮನಗರ | ಸಾಲ ತೀರಿಸಲು ನೆರೆಮನೆಯ ಬಾಲಕಿಯ ಅಪಹರಣಕ್ಕೆ ಯತ್ನ: ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಯುವಕ

ಮನೆ ಬಾಡಿಗೆ ಸೇರಿದಂತೆ ಕೈ ಸಾಲ ತೀರಿಸಲು ಪಕ್ಕದ ಮನೆಯಲ್ಲಿನ ಬಾಲಕಿಯನ್ನೇ...

ಚಿಂತಾಮಣಿ | ಬೊಲೆರೋ ಟೆಂಪೋ ಬಸ್ ನಡುವೆ ಅಪಘಾತ; ಚಾಲಕ ಸಾವು

ಬೊಲೆರೋ ಟೆಂಪೊಗೆ ಖಾಸಗಿ ಬಸ್‌ ಡಿಕ್ಕಿ ಹೊಡೆದ ಪರಿಣಾಮ ಟೆಂಪೋ ಚಾಲಕ...