ಬೀದರ್‌ | ಸಚಿನ್‌ ಪಾಂಚಾಳ್‌ ಆತ್ಮಹತ್ಯೆ ಪ್ರಕರಣ : ಐದು ಆರೋಪಿಗಳು 5 ದಿನ ಸಿಐಡಿ ವಶಕ್ಕೆ

Date:

ಬೀದರ್‌ನ ಯುವ ಗುತ್ತಿಗೆದಾರ ಸಚಿನ್‌ ಪಾಂಚಾಳ್‌ ಆತ್ಮಹತ್ಯೆ ಪ್ರಕರಣದಲ್ಲಿ ಬಂಧಿತರಾದ ಐದು ಜನ ಆರೋಪಿಗಳನ್ನು ಜೆಎಂಎಫ್‌ಸಿ ನ್ಯಾಯಾಲಯವು ಐದು ದಿನ ಸಿಐಡಿ ಕಸ್ಟಡಿಗೆ ವಹಿಸಿ ಶುಕ್ರವಾರ ರಾತ್ರಿ ಆದೇಶಿಸಿತು.

- Advertisement -

ಸಚಿವ ಪ್ರಿಯಾಂಕ್‌ ಖರ್ಗೆ ಆಪ್ತ ಕಲಬುರಗಿಯ ಮಾಜಿ ಕಾರ್ಪೊರೇಟರ್ ರಾಜು ಕಪನೂರ್, ನಂದಕುಮಾರ್ ನಾಗಭುಜಂಗೆ, ಗೋರಖನಾಥ್, ರಾಮನಗೌಡ ಪಾಟೀಲ್ ಹಾಗೂ ಸತೀಶ್ ಅವರನ್ನು ಸಿಐಡಿ ವಶಕ್ಕೆ ಒಪ್ಪಿಸಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸುದ್ದಿ ವಿವರ | ಇವಿಎಂ vs ಬ್ಯಾಲೆಟ್‌ ಪೇಪರ್‌:...

ಇವಿಎಂ ಮೇಲಿನ ವಿಶ್ವಾಸದ ಪ್ರಶ್ನೆ ಮತ್ತೆ ದೇಶದ ಚುನಾವಣಾ ಚರ್ಚಾ ಕೇಂದ್ರವಾಗಿದೆ. ಪಾರದರ್ಶಕತೆ ಮತ್ತು ಮತದಾರರ ನಂಬಿಕೆಯನ್ನು ಮುಂದಿಟ್ಟುಕೊಂಡು, ಬ್ಯಾಲೆಟ್‌ ಪೇಪರ್ ವ್ಯವಸ್ಥೆಗೆ ಮರಳಬೇಕೆಂಬ ಬೇಡಿಕೆಯನ್ನು ವಿಪಕ್ಷಗಳು ಮುಂದೆ ತಂದಿವೆ. ಬುಧವಾರ (ಸೆ.30), ದೆಹಲಿಯಲ್ಲಿ...

ಪೈಲಟ್ ಗಾಯಗೊಂಡ ನಂತರ ʼಫ್ಲೈದುಬೈʼ ವಿಮಾನ ನಡೆಸಿದವರು ಯಾರು?...

ಬುಧವಾರ ದುಬೈನಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ಹಾರಾಟದಲ್ಲಿದ್ದ FZ1073 ವಿಮಾನದಲ್ಲಿ ನಡೆದ ಪ್ರಕರಣವು ಕಾಕ್‌ಪಿಟ್‌ನೊಳಗಿನ ಸುರಕ್ಷತೆ ಕುರಿತು ಪ್ರಶ್ನೆಗಳನ್ನು ಹುಟ್ಟಿ ಹಾಕಿದೆ.ಈ ವಿಮಾನದ ಯೆಮೆನ್ ಮೂಲದ ಸಹ-ಪೈಲಟ್‌, ಹರಿತ ವಸ್ತುವಿನಿಂದ ಪೈಲಟ್ ಮೇಲೆ...

ಜಾಗತಿಕ ಬಿಕ್ಕಟ್ಟಿನ ನೆಪ, ಮರೆಯಾದ ದೇಶದ ಹಿತ: ಜೈಶಂಕರ್...

ಬೆಲೆ ಏರಿಕೆಯ ಬೇಗೆಯಲ್ಲಿ ಜನಸಾಮಾನ್ಯರು ನರಳುತ್ತಿದ್ದರೆ, ಗದ್ದೆಯಲ್ಲಿ ರೈತ ರಸಗೊಬ್ಬರಕ್ಕಾಗಿ ಕಣ್ಣೀರು ಸುರಿಸುತ್ತಿದ್ದಾನೆ. ಆದರೆ, ಇದಕ್ಕೆ ಸ್ಪಂದಿಸಬೇಕಾದ ಮೋದಿ ಸರ್ಕಾರ, ವಿದೇಶಾಂಗ ಸಚಿವ ಎಸ್. ಜೈಶಂಕರ್ ಮೂಲಕ ಜಾಗತಿಕ ವೇದಿಕೆಗಳಲ್ಲಿ ವಿದೇಶಿ ಯುದ್ಧಗಳತ್ತ...

ಬೀದರ್‌ ರೈಲ್ವೆ ಪೊಲೀಸ್ ಠಾಣೆಯಲ್ಲಿ‌ ತಾತ್ಕಾಲಿಕವಾಗಿ ತೆಗೆದಿರುವ ಸಿಐಡಿ ಕಚೇರಿಯಲ್ಲಿ ಡಿಐಜಿಪಿ ಶಾಂತನು ಸಿನ್ಹಾ ಅವರ ಎದುರು ಐದು ಜನ ವಿಚಾರಣೆಗೆ ಹಾಜರಾದರು. ಅವರ ಹೇಳಿಕೆ ದಾಖಲಿಸಿದ ನಂತರ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದು, ನಗರದ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು.

ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ನ್ಯಾಯಾಧೀಶ ರಾಮಮೂರ್ತಿ ಅವರು ರಾಜು ಕಪನೂರ್ ಸೇರಿ ಇತರ ಆರೋಪಿಗಳನ್ನು ತೀವ್ರ ವಿಚಾರಣೆ ನಡೆಸಿ ವಾದ ಪ್ರತಿವಾದ ಆಲಿಸಿ ನಂತರ ಹೆಚ್ಚಿನ ವಿಚಾರಣೆಗಾಗಿ ಆರೋಪಿಗಳನ್ನು 5 ದಿನ ಸಿಐಡಿ ವಶಕ್ಕೆ ನೀಡಲಾಗಿದೆ ಎಂದು ತಿಳಿದುಬಂದಿದೆ.

ಈ ಸುದ್ದಿ ಓದಿದ್ದೀರಾ? ಬೀದರ್‌ | ಸಚಿನ್‌ ಪಾಂಚಾಳ್ ಆತ್ಮಹತ್ಯೆ ಪ್ರಕರಣ : ರಾಜು ಕಪನೂರ್‌ ಸೇರಿ ಐವರ ಬಂಧನ

ಕೊಲೆ ಬೆದರಿಕೆ ಇದೆ ಎಂದು ಆರೋಪಿಸಿ ಸಚಿನ್ ಪಾಂಚಾಳ್ ಡಿ.26 ರಂದು ರಾಜು ಕಪನೂರ್‌ ಸೇರಿದಂತೆ ಎಂಟು ಜನರು ಹೆಸರು ಉಲ್ಲೇಖಿಸಿದ ಮರಣಪತ್ರ ಬರೆದಿಟ್ಟು ಬೀದರ್-‌ ಹೈದರಾಬಾದ್ ಮಾರ್ಗದ ರೈಲು ಹಳಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣವನ್ನು ಸಿಐಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದ ಹಿನ್ನಲೆಯಲ್ಲಿ ಜ.6ರಂದು ಸಿಐಡಿ ತನಿಖಾ ತಂಡವು ವಿಚಾರಣೆಗೆ ಹಾಜರಾಗುವಂತೆ ಐವರು ಆರೋಪಿಗಳಿಗೆ ನೋಟಿಸ್ ನೀಡಿದ್ದರು. ಶುಕ್ರವಾರ ವಿಚಾರಣೆಗೆ ಆಗಮಿಸಿದ ಐವರು ಇದೀಗ ಸಿಐಡಿ ವಶಕ್ಕೆ ಕಳುಹಿಸಲಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಾರತ–ಜಪಾನ್ ತಂತ್ರಜ್ಞಾನ ಸಹಕಾರದಿಂದ ಹೊಸ ಉದ್ಯಮ ಅವಕಾಶ: ನವತಾ ಹಿರೋಷಿ

ಜಪಾನ್‌ನ ತಂತ್ರಜ್ಞಾನ ಹಾಗೂ ಕೈಗಾರಿಕಾ ಅನುಭವಕ್ಕೆ ಭಾರತದ ಯುವಶಕ್ತಿ ಮತ್ತು ಡಿಜಿಟಲ್...

ಕೋಲಾರ | ತಡೆಹಿಡಿದಿದ್ದ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಮರುಸ್ಥಾಪನೆ

ಕೋಲಾರ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಅಫ್ರೀದ್ ಪಾಷಾ ಅವರ...

ಉಡುಪಿ | ಹಿರಿಯ ನಾಗರಿಕರನ್ನು ಗೌರವಯುತವಾಗಿ ನೋಡಿಕೊಳ್ಳಿ: ಎಂ.ಎ. ಗಫೂರ್

ಸಮಾಜದಲ್ಲಿ ಹಿರಿಯ ನಾಗರಿಕರು ತಮ್ಮದೇ ಆದ ಸ್ಥಾನಮಾನ ಹೊಂದಿದ್ದು, ಅವರನ್ನು ಗೌರವಯುತವಾಗಿ...

ಎಂಆರ್‌ಪಿಎಲ್ ದುರಂತ: ಮೃತ ಮನೀಶ್ ಕುಟುಂಬಕ್ಕೆ ₹1.20 ಕೋಟಿ ಪರಿಹಾರ

ಎಂಆರ್‌ಪಿಎಲ್‌ನ ಕೋಕರ್ ಹೈಡ್ರೋಟ್ರೀಟರ್ ಯುನಿಟ್ (ಸಿಎಚ್‌ಟಿಯು)ನಲ್ಲಿ ಬುಧವಾರ ಸಂಭವಿಸಿದ ದುರಂತದಲ್ಲಿ ಮೃತಪಟ್ಟ...