ಷೇರುದಾರರ ಇಂದಿನ ಜಾಗತಿಕ ಮಂತ್ರ- ‘ಅಮೆರಿಕವನ್ನು ನಂಬಿ ಹಣ ಹೂಡಿ’

Date:

ಅಮೆರಿಕನ್ನರು ಮಾತ್ರವಲ್ಲ, ವಿದೇಶಗಳ ಸಾಮಾನ್ಯ ಜನರೂ ಮುಗಿಬಿದ್ದು ಅಮೆರಿಕದ ಷೇರುಗಳನ್ನು ಕೊಳ್ಳುತ್ತಿದ್ದಾರೆ. ಅಮೆರಿಕದ ರಾಜಕೀಯ ನಾಯಕತ್ವದ ಬಗ್ಗೆ ಅವರಿಗೆ ಅಸಮಾಧಾನವಿದ್ದಿರಬಹುದು. ಆದರೆ ಅಮೆರಿಕನ್ ಕಂಪನಿಗಳ ಷೇರುಗಳ ಮೇಲೆ ಮಾತ್ರ ಅವರೆಲ್ಲರಿಗೂ ವಿಪರೀತ ವ್ಯಾಮೋಹ ಬಂದುಬಿಟ್ಟಿದೆ.

ಜಗತ್ತಿನ ಖ್ಯಾತ ಹೂಡಿಕೆದಾರ ವಾರೆನ್ ಬಫೆಟ್ ಅವರ ‘ಅಮೆರಿಕದ ಆರ್ಥಿಕತೆಯ ವಿರುದ್ಧ ಎಂದಿಗೂ ಬಾಜಿ ಕಟ್ಟಬೇಡಿ’ ಅನ್ನುವ ಮಾತು ತುಂಬಾ ಜನಪ್ರಿಯವಾಗಿತ್ತು. ಆದರೆ ಈಗ ಜಗತ್ತಿನ ಹೂಡಿಕೆದಾರರೆಲ್ಲರ ಹೊಸ ಮಂತ್ರ ಅಂದರೆ ‘ಕೇವಲ ಅಮೆರಿಕದ ಮೇಲಷ್ಟೇ ಹಣ ಹಾಕಿ!’ ಆಗಿಬಿಟ್ಟಿದೆಯಂತೆ.

- Advertisement -

ಈಗ ಜಗತ್ತಿನಾದ್ಯಂತ ಷೇರು ಮಾರುಕಟ್ಟೆಗೆ (Equity- ಕಂಪನಿಗಳ ಷೇರುಗಳಲ್ಲಿ ಹಣ ತೊಡಗಿಸುವುದು) ಹರಿದುಬಂದ ಒಟ್ಟು ಹಣದಲ್ಲಿ ಶೇ. 80ರಷ್ಟು ಕೇವಲ ಅಮೆರಿಕದ ಮಾರುಕಟ್ಟೆಗೇ ಹೋಗಿದೆ. ಅಂದರೆ ಇಲ್ಲಿಯವರೆಗೆ ಆಗುತ್ತಿದ್ದಕ್ಕಿಂತ ಎರಡು ಪಟ್ಟು ಹೆಚ್ಚು! ಇತಿಹಾಸದಲ್ಲಿ ಬೇರೆ ಯಾವುದೇ ದೇಶಕ್ಕೂ ಜಾಗತಿಕ ಹೂಡಿಕೆಯ ಇಷ್ಟು ದೊಡ್ಡ ಪಾಲನ್ನು ಸೆಳೆದುಕೊಳ್ಳಲು ಆಗಿರಲಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮಹಿಳೆ ಮಾಡುತ್ತಿರುವ ಬಿಟ್ಟಿ ಚಾಕರಿಗಳೇನೇನು? ಇದನ್ನೇಕೆ ಅರಿಯಲು ಮುಂದಾಗಿದೆ...

2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಸರ್ಕಾರದ ಗುರಿಗೆ ಒಂದು ದೊಡ್ಡ ಅಡ್ಡಿ ಎದುರಾಗಿದೆ. ಅದೇನೆಂದರೆ; ಸಾಕಷ್ಟು ಸಂಖ್ಯೆಯ ಮಹಿಳೆಯರನ್ನು ಉದ್ಯೋಗ ಕ್ಷೇತ್ರಕ್ಕೆ ತರುವುದು. ವಿಶ್ವಬ್ಯಾಂಕ್ ಪ್ರಕಾರ, 2047ರ ವೇಳೆಗೆ...

ಭದ್ರತೆಯ ಹೆಸರಿನಲ್ಲಿ ಮಾಂಸದಂಗಡಿಗಳಿಗೆ ಬೀಗ: ಸರ್ಕಾರದ ಈ ನಿರ್ಧಾರದ...

ಈ ಬೆಳವಣಿಗೆ ಕಾಂಗ್ರೆಸ್ ಸರ್ಕಾರದ ಆಡಳಿತಾತ್ಮಕ ಹೊಣೆಗಾರಿಕೆಯನ್ನೂ ಮುನ್ನೆಲೆಗೆ ತಂದಿದೆ. ಪ್ರಧಾನಿಯ ಭೇಟಿಯ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್‌ಗಳ ಆಗಮನ ಮತ್ತು ನಿರ್ಗಮನದ ಭದ್ರತೆಯನ್ನು ನಿರ್ಬಂಧಕ್ಕೆ ಕಾರಣವೆಂದು ಸಮರ್ಥಿಸಲಾಗುತ್ತಿದ್ದರೆ, ಅದಕ್ಕೂ ಸಮಗ್ರ ವಿವರಣೆ ಬೇಕಾಗುತ್ತದೆ. ಪ್ರಧಾನಿ...

ನಿಜಕ್ಕೂ ಭಾರತದ ಬಡತನ 16%ಗೆ ಇಳಿದಿದೆಯೇ? ವಾಸ್ತವ ಹೇಳುವುದೇನು?

ವಿಶ್ವಬ್ಯಾಂಕ್ ವರದಿ ಪ್ರಕಾರ, ಭಾರತದಲ್ಲಿ ಬಡತನ 16.1%ಗೆ ಮತ್ತು ತೀವ್ರ ಬಡತನ 2.6%ಗೆ ಇಳಿದಿದೆ. ಇದೇ ಅಂಕಿಅಂಶವನ್ನು ಬಳಸಿಕೊಂಡು ತಮ್ಮ ಸಾಧನೆ ಎಂಬಂತೆ ಕೇಂದ್ರ ಸರ್ಕಾರ ಸಂಭ್ರಮಿಸುತ್ತಿದೆ. ಆದರೆ, ದೇಶದ ಸುಮಾರು 80...

ವಿಶೇಷವೆಂದರೆ, ಈ ಹಣದಲ್ಲಿ ಹೆಚ್ಚಿನ ಭಾಗವು ದೊಡ್ಡ ಕಂಪನಿಗಳಿಂದ ಬಂದಿದ್ದಲ್ಲ; ಬದಲಾಗಿ ಸಾಮಾನ್ಯ ಸಣ್ಣ ಹೂಡಿಕೆದಾರರಿಂದ (Retail Investors- ತಮ್ಮದೇ ಉಳಿತಾಯದ ಹಣವನ್ನು ನೇರವಾಗಿ ಷೇರುಗಳಲ್ಲಿ ತೊಡಗಿಸುವ ಜನಸಾಮಾನ್ಯರು) ಬಂದಿದೆ. ಅಮೆರಿಕನ್ನರು ಮಾತ್ರವಲ್ಲ, ವಿದೇಶಗಳ ಸಾಮಾನ್ಯ ಜನರೂ ಮುಗಿಬಿದ್ದು ಅಮೆರಿಕದ ಷೇರುಗಳನ್ನು ಕೊಳ್ಳುತ್ತಿದ್ದಾರೆ. ಅಮೆರಿಕದ ರಾಜಕೀಯ ನಾಯಕತ್ವದ ಬಗ್ಗೆ ಅವರಿಗೆ ಅಸಮಾಧಾನವಿದ್ದಿರಬಹುದು. ಆದರೆ ಅಮೆರಿಕನ್ ಕಂಪನಿಗಳ ಷೇರುಗಳ ಮೇಲೆ ಮಾತ್ರ ಅವರೆಲ್ಲರಿಗೂ ವಿಪರೀತ ವ್ಯಾಮೋಹ ಬಂದುಬಿಟ್ಟಿದೆ.

ಇದನ್ನು ಓದಿದ್ದೀರಾ?: ಜಿಡಿಪಿ ಅಂಕಿಅಂಶಗಳ ಆಚೆಗಿನ ವಾಸ್ತವ: ಭಾರತದ ಆರ್ಥಿಕ ಸವಾಲುಗಳ ಕುರಿತು ರಘುರಾಮ್ ರಾಜನ್ ಒಳನೋಟ

ಅಮೆರಿಕದ ಷೇರು ಮಾರುಕಟ್ಟೆ ಏರಿದಂತೆ ಅಲ್ಲಿನ ಜನರ ಸಂಪತ್ತು ಹೆಚ್ಚಾಗುತ್ತಿದೆ. ಇದರಿಂದ ಜನರು ಹೆಚ್ಚೆಚ್ಚು ಖರ್ಚು ಮಾಡುತ್ತಿದ್ದಾರೆ. ಅಮೆರಿಕೆಯ ಆರ್ಥಿಕ ಬೆಳವಣಿಗೆಯ ವೇಗ ಹೆಚ್ಚಿದೆ ಅಂತೆಲ್ಲಾ ತುಂಬಾ ಚರ್ಚೆಯಾಗಿದೆ. ಆದರೆ ಈಗ ಇಡೀ ಜಗತ್ತೇ ಅಮೆರಿಕದ ಷೇರುಗಳು ಇನ್ನಷ್ಟು ಏರುತ್ತವೆ ಎಂಬ ನಿರೀಕ್ಷೆಯಲ್ಲಿ ಭಾರಿ ಹಣ ಹೂಡಿದೆ. ಇತ್ತೀಚೆಗೆ, ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಕಂಪನಿಗಳ ಷೇರುಗಳ ಬೆಲೆ ವಾಸ್ತವಕ್ಕಿಂತ ಕೃತಕವಾಗಿ ಹಿಗ್ಗಿದ್ದರಿಂದ (Bubbly AI stocks), ಹೂಡಿಕೆದಾರರು ಅವುಗಳಿಂದ ಸ್ವಲ್ಪ ಹಣವನ್ನು ವಾಪಸ್ಸು ತೆಗೆದುಕೊಂಡಿದ್ದಾರೆ. ಆದರೆ ರುಚಿರ್‌ ಶರ್ಮ ಗುರುತಿಸುವಂತೆ ಅವರು ಅದನ್ನು ಅಮೆರಿಕಾದಲ್ಲೇ ಬೇರೆ ಕಂಪನಿಗಳ ಷೇರುಗಳಿಗೆ ಹಾಕಿದ್ದಾರೆ. ಬೇರೆ ದೇಶಗಳಿಗೆ ಆ ಹಣ ಹೋಗುತ್ತಿಲ್ಲ. ಅಮೆರಿಕದ ಮಾರುಕಟ್ಟೆಯ ಮೇಲಿನ ಈ ವ್ಯಾಮೋಹ ಕೊನೆಗೊಂಡು ಮಾರುಕಟ್ಟೆ ಕುಸಿದಾಗ, ಅದರ ಆರ್ಥಿಕ ಹೊಡೆತ ಇಡೀ ಜಗತ್ತಿಗೇ ಬೀಳಲಿದೆ.

ಮಾರುಕಟ್ಟೆಯನ್ನು ಆಳುತ್ತಿರುವ ಸಣ್ಣ ಹೂಡಿಕೆದಾರರು

ಈಗ ಷೇರು ಮಾರುಕಟ್ಟೆಯ ನಿಜವಾದ ಆಟಗಾರರು ದೊಡ್ಡ ಸಂಸ್ಥೆಗಳಲ್ಲ, ಸಾಮಾನ್ಯ ಜನರು. 2009ರ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ನಂತರ, ಅಮೆರಿಕನ್ ಷೇರು ಮಾರುಕಟ್ಟೆಯಲ್ಲಿ ಅಮೆರಿಕದ ಸಾಮಾನ್ಯ ಕುಟುಂಬಗಳ ಪಾಲು ನಿಧಾನವಾಗಿ ಏರುತ್ತಾ ಹೋಗುತ್ತಿದೆ. ಈಗ ಶೇ. 40ಕ್ಕಿಂತ ಹೆಚ್ಚಾಗಿದೆ. ಅದೇ ರೀತಿ, ವಿದೇಶಿಯರು (ವಿದೇಶಿ ಸಣ್ಣ ಹೂಡಿಕೆದಾರರೂ ಸೇರಿ) ಅಮೆರಿಕನ್ ಷೇರುಗಳನ್ನು ಖರೀದಿಸುವ ಪ್ರಮಾಣ ಕಳೆದ 12 ತಿಂಗಳಲ್ಲಿ ದಾಖಲೆ ಮಟ್ಟ ತಲುಪಿದೆ. ಮಾರುಕಟ್ಟೆಯಲ್ಲಿ ಅವರ ಪಾಲು ಈಗ ಸುಮಾರು ಶೇ. 20ಕ್ಕೆ ಹಿಗ್ಗಿದೆ.

ದೊಡ್ಡ ಮಟ್ಟದಲ್ಲಿ ಹಣ ಹೂಡುವ ಹೆಡ್ಜ್ ಫಂಡ್‌ಗಳು (Hedge Funds- ಶ್ರೀಮಂತರು ಮತ್ತು ದೊಡ್ಡ ಸಂಸ್ಥೆಗಳಿಂದ ಹಣ ಸಂಗ್ರಹಿಸಿ ಭಾರಿ ಲಾಭಕ್ಕಾಗಿ ಹೂಡಿಕೆ ಮಾಡುವ ಖಾಸಗಿ ನಿಧಿಗಳು) ಹೆಚ್ಚು ಸುದ್ದಿಯಲ್ಲಿವೆ. ಆದರೆ ಅಮೆರಿಕದ ಒಟ್ಟು ಷೇರುಗಳಲ್ಲಿ ಅವುಗಳ ಪಾಲಿರುವುದು ಕೇವಲ ಶೇ. 1ರಷ್ಟು ಮಾತ್ರ! ದೈನಂದಿನ ಷೇರು ವಹಿವಾಟಿನಲ್ಲೂ ಈ ಹೆಡ್ಜ್‌ ಫಂಡುಗಳ ಪಾಲು ಸಣ್ಣ ಹೂಡಿಕೆದಾರರಿಗೆ ಹೋಲಿಸಿದರೆ ತುಂಬಾ ಕಡಿಮೆ. ನಿಜವಾಗಿ ಮಾರುಕಟ್ಟೆಯನ್ನು ಮುನ್ನಡೆಸುತ್ತಿರುವವರು ಸಣ್ಣ ಹೂಡಿಕೆದಾರರೇ. ಈ ವರ್ಷ ಬಹುತೇಕ ಪ್ರತಿ ವಾರವೂ ಇವರು ಷೇರುಗಳನ್ನು ಕೊಳ್ಳುತ್ತಲೇ ಇದ್ದಾರೆ. ಇತ್ತೀಚೆಗೆ ಹೆಡ್ಜ್ ಫಂಡ್‌ಗಳು AI ಕಂಪನಿಗಳ ಷೇರುಗಳನ್ನು ಮಾರಾಟ ಮಾಡಲು ಶುರುಮಾಡಿದಾಗಲೂ, ಸಣ್ಣ ಹೂಡಿಕೆದಾರರು ‘ಬೆಲೆ ಇಳಿದಾಗ ಕೊಳ್ಳಿ’ ಎಂಬಂತೆ ಅವುಗಳನ್ನು ಕೊಳ್ಳುತ್ತಲೇ ಇದ್ದರು.

us stock1

ಎನ್‌ವಿಡಿಯಾ ಎಫೆಕ್ಟ್

ಈ ಇಡೀ ವಿದ್ಯಮಾನದ ನಡುವೆ ವಿಶ್ವದ ಪ್ರಮುಖ ಚಿಪ್ ತಯಾರಿಕಾ ಕಂಪನಿ ‘ಎನ್‌ವಿಡಿಯಾ’ ಸುತ್ತ ಒಂದು ಸಿನಿಮೀಯ ನಾಟಕದಂತಿರುವ ಪ್ರಕರಣ ಬಯಲುಗೊಂಡಿದೆ. ಕಂಪನಿಯ ಸಿಇಒ ಜೆನ್ಸನ್ ಹುವಾಂಗ್ ಅವರು ಚೀನಾದ ಶಂಕಿತ ಗೂಢಚಾರಿಯೊಂದಿಗೆ ಹೊಂದಿದ್ದ ಸಂಬಂಧದ ವಿವಾದ ಮತ್ತು ನಂತರ ಅವರು ರಾಜೀನಾಮೆ ನೀಡಿದ ಸುದ್ದಿ ಮಾರುಕಟ್ಟೆಯಲ್ಲಿ ತಲ್ಲಣ ಮೂಡಿಸಿತು. ಕಂಪೆನಿಯನ್ನು ಈ ಹಂತಕ್ಕೆ ಕಟ್ಟಿ ಬೆಳೆಸಿದ ಸಂಸ್ಥಾಪಕನೇ ಇಲ್ಲದೆ ಕಂಪನಿ ಹೇಗೆ ನಡೆಯುತ್ತದೆ ಎಂಬ ಭಯದಿಂದ ಎನ್‌ವಿಡಿಯಾ ಷೇರುಗಳ ಬೆಲೆ ಒಮ್ಮೆಲೇ ಕುಸಿಯಿತು. ಆದರೆ, ಸಣ್ಣ ಹೂಡಿಕೆದಾರರು ಈ ಕುಸಿತವನ್ನೂ ಷೇರು ಕೊಳ್ಳಲು ಸಿಕ್ಕ ಇನ್ನೊಂದು ಸುವರ್ಣಾವಕಾಶ ಎಂದೇ ಭಾವಿಸಿದರು!

ಹುವಾಂಗ್ ಅವರ ರಾಜೀನಾಮೆ ಸುದ್ದಿ ಹೊರಬಿದ್ದ ಗುರುವಾರದಂದು ಷೇರಿನ ಬೆಲೆ ಭಾರಿ ಕುಸಿತ ಕಂಡಿತು. ಅಂದು ಮಾರುಕಟ್ಟೆ ತೆರೆದಾಗ ಮೊದಲ 30 ನಿಮಿಷಗಳಲ್ಲೇ ಸಣ್ಣ ಹೂಡಿಕೆದಾರರು ಹಿಂದೆಂದೂ ಕಾಣದಷ್ಟು- ಅಂದರೆ ಸಾಮಾನ್ಯಕ್ಕಿಂತ 40 ಪಟ್ಟು ಹೆಚ್ಚು- ಎನ್‌ವಿಡಿಯಾ ಷೇರುಗಳನ್ನು ಖರೀದಿಸಿದರು! ಭಾರತದ ಸಣ್ಣ ಹೂಡಿಕೆದಾರರೂ ಇದಕ್ಕೆ ಹೊರತಾಗಿರಲಿಲ್ಲ. ಭಾರತೀಯರು ಅಮೆರಿಕದ ಷೇರುಗಳಲ್ಲಿ ಹೂಡಿಕೆ ಮಾಡಲು ಬಳಸುವ ಆ್ಯಪ್‌ಗಳಲ್ಲಿ ನಡೆದ ಒಟ್ಟು ವಹಿವಾಟಿನ ಶೇ. 80ರಷ್ಟು ಭಾಗವು ಕೇವಲ ಎನ್‌ವಿಡಿಯಾ ಕಂಪೆನಿಯ ಷೇರು ಖರೀದಿಯಾಗಿತ್ತು!

ಜಾಗತಿಕ ಷೇರು ಮಾರುಕಟ್ಟೆ ಈಗ ಒಂದು ಪಂಥ

ಜಾಗತಿಕ ಷೇರು ಮಾರುಕಟ್ಟೆಗಳು ಈಗ ಒಂದು ಪಂಥದಂತೆ (Cult) ಕಾಣಿಸುತ್ತಿವೆ; ಇಲ್ಲಿ ಎಲ್ಲರೂ ಸೇರಿ ‘ಅಮೆರಿಕ, ಅಮೆರಿಕ’ ಎಂಬ ಒಂದೇ ಹೆಸರನ್ನು ಜಪಿಸುತ್ತಿದ್ದಾರೆ. ರುಚಿರ್‌ ಶರ್ಮ ಹೇಳುವಂತೆ ಸಿಂಗಾಪುರದ ಕೆಫೆಗಳಲ್ಲಿ ಗೃಹಿಣಿಯರು ಒಟ್ಟಾಗಿ ಕುಳಿತು ನ್ಯೂಯಾರ್ಕ್ ಷೇರು ಮಾರುಕಟ್ಟೆಯಲ್ಲಿ ತಾವು ಮಾಡುತ್ತಿರುವ ವಹಿವಾಟುಗಳ ಬಗ್ಗೆ ಚರ್ಚಿಸುತ್ತಿರುತ್ತಾರಂತೆ! ಭಾರತದಿಂದ ವಿದೇಶಿ ಷೇರು ಮಾರುಕಟ್ಟೆಗೆ ಹೋಗುವ ಒಟ್ಟು ಹಣದಲ್ಲಿ ಶೇ. 90ಕ್ಕಿಂತ ಹೆಚ್ಚು ನೇರವಾಗಿ ಅಮೆರಿಕಕ್ಕೇ ಹೋಗುತ್ತಿದೆಯಂತೆ.
ದೇಶ-ದೇಶಗಳ ನಡುವಿನ ರಾಜಕೀಯ ತಿಕ್ಕಾಟಗಳೂ ಈ ಹುಚ್ಚನ್ನು ತಡೆಯಲು ಶಕ್ತವಾಗಿಲ್ಲ. ಟ್ರಂಪ್ ಆಡಳಿತವನ್ನು ಎಷ್ಟೇ ವಿರೋಧಿಸಬಹುದು, ಆದರೆ ಮೆಕ್ಸಿಕೋ ದೇಶದ ಜನರು ಅಮೆರಿಕನ್ ಷೇರುಗಳನ್ನು ಮುಗಿಬಿದ್ದು ಖರೀದಿಸುತ್ತಿದ್ದಾರೆ. ಅವರು ವಿದೇಶಗಳಲ್ಲಿ ಹೊಂದಿರುವ ಒಟ್ಟು ಆಸ್ತಿಯ ಶೇ. 90ಕ್ಕಿಂತ ಹೆಚ್ಚಿನ ಪಾಲು ಅಮೆರಿಕದ ಷೇರುಗಳಲ್ಲೇ ಇದೆ. ಅದೇ ರೀತಿ, ಅಮೆರಿಕ ವಿಧಿಸುವ ಆಮದು ಸುಂಕಗಳ ಬಗ್ಗೆ ಎಷ್ಟೇ ಅಸಮಾಧಾನವಿದ್ದರೂ, ಕೆನಡಾದ ಪ್ರಜೆಗಳು ಅಮೆರಿಕನ್ ಷೇರುಗಳ ಅತಿದೊಡ್ಡ ವಿದೇಶಿ ಮಾಲೀಕರ ಸಾಲಿನಲ್ಲಿದ್ದಾರೆ.

ಇದನ್ನು ಓದಿದ್ದೀರಾ?: ಎನ್‌ವಿಡಿಯಾ ಗೂಢಚರ್ಯೆ ಭೀತಿ: ಚೀನಾದ ಮೇಲಿನ ಚಿಪ್ ದಿಗ್ಬಂಧನ ವಿಫಲ, ಒಳಜಗಳಕ್ಕೆ ಇಳಿದ ಅಮೆರಿಕದ ಆಡಳಿತ ವರ್ಗ

ಹೊಸ ತಂತ್ರಜ್ಞಾನ ಮತ್ತು ಅಪಾಯಕಾರಿ ಹೂಡಿಕೆ ತಂತ್ರಗಳು

ಈ ರೀತಿಯ ಬೃಹತ್ ಹೂಡಿಕೆಗಳಿಗೆ ಹೊಸ ಮೊಬೈಲ್ ಆ್ಯಪ್‌ಗಳು ಮತ್ತು ತಂತ್ರಜ್ಞಾನಗಳು ಅವಕಾಶ ಮಾಡಿಕೊಟ್ಟಿವೆ. ಅಮೆರಿಕದಲ್ಲಿ ಜನಪ್ರಿಯವಾಗಿರುವ ಷೇರು ಟ್ರೇಡಿಂಗ್ ಆ್ಯಪ್‌ಗಳ ಮಾದರಿಯಲ್ಲೇ ಈಗ ಜಗತ್ತಿನಾದ್ಯಂತ ಆ್ಯಪ್‌ಗಳು ಬಂದಿವೆ. ದುಬೈನಲ್ಲಿ ಟ್ಯಾಕ್ಸಿ ಚಾಲಕರು ಕೂಡ ಹೊಸ ಕ್ರಿಪ್ಟೋ ವೇದಿಕೆಗಳ ಮೂಲಕ ‘ಟೋಕನೈಸ್ಡ್ ಷೇರುಗಳನ್ನು’ (Tokenised shares- ಒಂದು ಕಂಪನಿಯ ದುಬಾರಿ ಷೇರನ್ನು ಸಣ್ಣ ಡಿಜಿಟಲ್ ತುಣುಕುಗಳಾಗಿ ವಿಂಗಡಿಸಿ ಕಡಿಮೆ ಹಣಕ್ಕೂ ಕೊಳ್ಳಲು ಅನುವು ಮಾಡಿಕೊಡುವ ಬ್ಲಾಕ್‌ಚೈನ್ ತಂತ್ರಜ್ಞಾನ) ಖರೀದಿಸುತ್ತಿದ್ದಾರೆ! ಅದೂ ತಮ್ಮ ದೇಶದ ಕಂಪನಿಗಳ ಷೇರುಗಳನ್ನಲ್ಲ. ಬದಲಿಗೆ ಅಮೆರಿಕದ ದೊಡ್ಡ AI ಕಂಪನಿಗಳ ಷೇರುಗಳನ್ನು!

ನಿಯಮಗಳಲ್ಲಿ ಆದ ಬದಲಾವಣೆಗಳು ಸಾಮಾನ್ಯ ಹೂಡಿಕೆದಾರರಿಗೂ ತೀರಾ ರಿಸ್ಕ್‌ ಇರುವ ತಂತ್ರಗಳನ್ನು ಬಳಸಲು ಅವಕಾಶ ನೀಡಿವೆ. ಹಿಂದೆ ಕೇವಲ ದೊಡ್ಡ ಸಂಸ್ಥೆಗಳಿಗೆ ಮಾತ್ರ ಸೀಮಿತವಾಗಿದ್ದ ‘ಲಿವರೇಜ್’ (Leverage- ತಮ್ಮ ಬಳಿ ಇರುವ ಹಣಕ್ಕಿಂತ ಹಲವು ಪಟ್ಟು ಹೆಚ್ಚು ಹಣವನ್ನು ಸಾಲದ ರೂಪದಲ್ಲಿ ಬಳಸಿ ದೊಡ್ಡ ಮೊತ್ತದ ಷೇರುಗಳ ಮೇಲೆ ಪಂದ್ಯ ಕಟ್ಟುವ ತಂತ್ರ; ಇದರಲ್ಲಿ ಲಾಭ ಬಂದರೆ ದುಪ್ಪಟ್ಟು ಬರುತ್ತದೆ, ನಷ್ಟವಾದರೆ ಅಷ್ಟೇ ವೇಗವಾಗಿ ಇಡೀ ಮೂಲ ಬಂಡವಾಳವೇ ಕರಗಿಹೋಗುತ್ತದೆ) ಸೌಲಭ್ಯಗಳು ಈಗ ಸಾಮಾನ್ಯರಿಗೂ ಲಭ್ಯವಿವೆ. ತಮ್ಮದೇ ದೇಶದ ಷೇರು ಮಾರುಕಟ್ಟೆ ಚೆನ್ನಾಗಿ ಬೆಳೆಯುತ್ತಿದ್ದರೂ, ಅಮೆರಿಕದಲ್ಲಿ ರಿಸ್ಕ್‌ ತೆಗೆದುಕೊಳ್ಳುವ ಹೂಡಿಕೆದಾರರ ಹಸಿವು ಮಾತ್ರ ಕಡಿಮೆಯಾಗಿಲ್ಲ. ಉದಾಹರಣೆಗೆ, ದಕ್ಷಿಣ ಕೊರಿಯಾ ಈ ವರ್ಷ ಜಗತ್ತಿನಲ್ಲೇ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಆದರೂ ಅಲ್ಲಿನ ಸಣ್ಣ ಹೂಡಿಕೆದಾರರು ಇತ್ತೀಚಿನ ತಿಂಗಳುಗಳಲ್ಲಿ ತಮ್ಮ ಹಣವನ್ನು ಅಲ್ಲಿಂದ ತೆಗೆದು ಅಮೆರಿಕದ ಮಾರುಕಟ್ಟೆಗೆ (ಲಿವರೇಜ್ ಫಂಡ್‌ಗಳ ಮೂಲಕವೂ) ವರ್ಗಾಯಿಸುತ್ತಿದ್ದಾರೆ.

ಕುಸಿತ ಸಂಭವಿಸಿದರೆ ಜಗತ್ತೇ ಬೆಲೆ ತೆರಬೇಕಾಗುತ್ತದೆ!

ರುಚಿರ್‌ ಶರ್ಮ ಗುರುತಿಸುವಂತೆ ಅಮೆರಿಕದ ಷೇರು ಮಾರುಕಟ್ಟೆಗೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಹಣ ಹರಿದುಬಂದಿರುವುದು ಇದೇ ಮೊದಲು. 2000ನೇ ಇಸವಿಯ ‘ಟೆಕ್ ಬಬಲ್’ (ತಂತ್ರಜ್ಞಾನ ಷೇರುಗಳ ಕೃತಕ ಉಬ್ಬರ ಮತ್ತು ಕುಸಿತ) ಸಮಯದಲ್ಲೂ ಜಾಗತಿಕ ಹೂಡಿಕೆ ಹೆಚ್ಚಿತ್ತು. ಆದರೆ ಈಗ ಉಳಿದ ದೇಶಗಳು ತಮ್ಮ ಸಂಪತ್ತಿನ ಸಿಂಹಪಾಲನ್ನು ಒಂದೇ ಮಾರುಕಟ್ಟೆಯಲ್ಲಿ ಸುರಿದಿವೆ. ವಿದೇಶಿಯರು ಅಮೆರಿಕದ ಷೇರುಗಳಲ್ಲಿ ತೊಡಗಿಸಿರುವ ಹಣ ಸುಮಾರು ₹2,100 ಲಕ್ಷ ಕೋಟಿ ($25 ಟ್ರಿಲಿಯನ್)! ಇದು ಅಮೆರಿಕದ ಹೊರಗಿನ ಇಡೀ ಜಗತ್ತಿನ ಜಿಡಿಪಿಯ (GDP) ಶೇ. 25ಕ್ಕಿಂತ ಹೆಚ್ಚಿದ್ದು, 2000ನೇ ಇಸವಿಗೆ ಹೋಲಿಸಿದರೆ ಐದು ಪಟ್ಟು ಜಾಸ್ತಿಯಾಗಿದೆ.

AI ಷೇರುಗಳ ಕೃತಕ ಉಬ್ಬರ ಇಳಿದು ಮಾರುಕಟ್ಟೆ ಕುಸಿದಾಗ, ಅದರ ದೊಡ್ಡ ಹೊಡೆತ ಬೀಳುವುದು ಅಮೆರಿಕಕ್ಕೇ. ಏಕೆಂದರೆ, ಇಂದು ಅಮೆರಿಕನ್ನರು ಮನೆ-ಆಸ್ತಿಗಳಲ್ಲಿ ತೊಡಗಿಸುವುದಕ್ಕಿಂತ ಹೆಚ್ಚಿನ ಹಣವನ್ನು ಷೇರುಗಳಲ್ಲಿ ತೊಡಗಿಸಿದ್ದಾರೆ; ಜಗತ್ತಿನ ಪ್ರಮುಖ ದೇಶಗಳ ಪೈಕಿ ಇಂತಹ ಸ್ಥಿತಿ ಇರುವುದು ಅಮೆರಿಕದಲ್ಲಿ ಮಾತ್ರ. ಕಳೆದ ಮೂವತ್ತು ವರ್ಷಗಳಲ್ಲಿ ಅವರ ಷೇರು ಸಂಪತ್ತು, ಅವರ ವಾರ್ಷಿಕ ಖರ್ಚು ಮಾಡಬಹುದಾದ ಆದಾಯದ (Disposable income- ತೆರಿಗೆ ಕಳೆದು ಕೈಗೆ ಸಿಗುವ ನಿವ್ವಳ ಆದಾಯ) ಮೂರು ಪಟ್ಟಿಗೆ ಏರಿದೆ. ಹೀಗಾಗಿ ಷೇರು ಮಾರುಕಟ್ಟೆ ಬಿದ್ದಾಗ, ಅಮೆರಿಕನ್ನರಿಗೆ ಆಗುವ ನಷ್ಟದ ಆಘಾತವೂ ವಿಪರೀತವಾಗಿರುತ್ತದೆ.

us stocks

ರುಚಿರ್‌ ಶರ್ಮ ಅವರ ಲೆಕ್ಕಾಚಾರದ ಪ್ರಕಾರ, ಅಮೆರಿಕದ ಷೇರು ಮಾರುಕಟ್ಟೆ ಶೇ. 25ರಷ್ಟು ಕುಸಿದರೆ, ಜನರ ಸಂಪತ್ತು ಕರಗಿ ಅಮೆರಿಕದಲ್ಲಿ ಗ್ರಾಹಕರ ಖರ್ಚು ಮಾಡುವ ಪ್ರಮಾಣ ಶೇ. 2ರಷ್ಟು ಕಡಿಮೆಯಾಗುತ್ತದೆ. ಅಷ್ಟೇ ಅಲ್ಲ, ಯುರೋಪ್, ಜಪಾನ್, ಬ್ರಿಟನ್, ಕೆನಡಾ ಮತ್ತು ದಕ್ಷಿಣ ಕೊರಿಯಾಗಳಲ್ಲೂ ಜನರ ಖರ್ಚು ಶೇ. 1ರವರೆಗೆ ತಗ್ಗುತ್ತದೆ. ಬಹುತೇಕ ದೇಶಗಳ ಆರ್ಥಿಕತೆ ಬೆಳೆಯುವುದೇ ಜನರು ಮಾಡುವ ಖರ್ಚಿನಿಂದ; ಹಾಗಾಗಿ ಖರ್ಚು ಕಡಿಮೆಯಾದರೆ ಆರ್ಥಿಕತೆಗೆ ದೊಡ್ಡ ಪೆಟ್ಟು ಬೀಳುತ್ತದೆ. ಅಮೆರಿಕದ ಮಾರುಕಟ್ಟೆ ಕುಸಿದಾಗ ಉಳಿದ ದೇಶಗಳ ಷೇರು ಮಾರುಕಟ್ಟೆಗಳೂ ಕುಸಿಯುವುದರಿಂದ ಈ ನಷ್ಟ ಇನ್ನಷ್ಟು ಹೆಚ್ಚಾಗುತ್ತದೆ.

ಯುರೋಪ್‌ನ ಆರ್ಥಿಕತೆ ಸರಿ ಇಲ್ಲ, ಚೀನಾದಲ್ಲಿ ಸರ್ಕಾರದ ನಿಯಂತ್ರಣ ಜಾಸ್ತಿ- ಹೀಗಾಗಿ ನಮಗೆ ಅಮೆರಿಕ ಬಿಟ್ಟರೆ ಬೇರೆ ದಾರಿಯಿಲ್ಲ ಎಂದು ಹಲವು ಹೂಡಿಕೆದಾರರು ಹೇಳುತ್ತಾರೆ. ಆ ಮಾತು ನಿಜವೇ ಇರಬಹುದು; ಆದರೆ ಇಡೀ ಜಗತ್ತೇ ಒಂದೇ ದೇಶದ ಮಾರುಕಟ್ಟೆಯನ್ನು ನೆಚ್ಚಿಕೊಳ್ಳುವುದು ಜಾಗತಿಕ ಆರ್ಥಿಕತೆಗೆ ಅಪಾಯಕಾರಿ. ಯಾವಾಗ ಅಮೆರಿಕದ ಮಾರುಕಟ್ಟೆ ಮುಗ್ಗರಿಸುತ್ತದೋ, ಅಂದು ಜಗತ್ತಿನಾದ್ಯಂತ ಇರುವ ಈ ‘ಸಣ್ಣ ಹೂಡಿಕೆದಾರರ ಪಡೆ’ ಭಾರಿ ಬೆಲೆ ತೆರಬೇಕಾಗುತ್ತದೆ ಎನ್ನುತ್ತಾರೆ ಶರ್ಮ.

ಕೃಪೆ: ಟೈಮ್ಸ್ ಆಫ್ ಇಂಡಿಯಾ, ಮೂಲ: ರುಚಿರ್ ಶರ್ಮ, ಕನ್ನಡಕ್ಕೆ: ಟಿ.ಎಸ್. ವೇಣುಗೋಪಾಲ್

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಿರಿಯೂರು | ಕುಡಿಯುವ ನೀರಿಗೆ ಪರದಾಟ; ಸಮಸ್ಯೆ ಪರಿಹರಿಸಲು ನಗರಸಭೆಗೆ ಮನವಿ

ಅಂಬೇಡ್ಕರ್ ಸಂವಿಧಾನ ಸಂರಕ್ಷಣಾ ಸಮಿತಿಯ ಚಿತ್ರದುರ್ಗದ ಹಿರಿಯೂರು ತಾಲೂಕು ಸಮಿತಿ ವತಿಯಿಂದ...

ಓಲಾ, ಉಬರ್ ಟ್ಯಾಕ್ಸಿಗಳಿಗೂ ಮೀಟರ್ ಕಡ್ಡಾಯ: ಸಾರಿಗೆ ಇಲಾಖೆಯ ಮಹತ್ವದ ನಿರ್ಧಾರ

ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಓಲಾ, ಉಬರ್‌ನಂತಹ ಆ್ಯಪ್ ಆಧಾರಿತ ಟ್ಯಾಕ್ಸಿ...

2027ರ ಜನಗಣತಿ ‘ಪ್ರಹಸನ’ವಾಗುತ್ತಿದೆ, ಗಂಭೀರ ಪರಿಣಾಮ ಬೀರಲಿದೆ: ಕೇಂದ್ರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ!

2027ರ ಜನಗಣತಿ ಪ್ರಕ್ರಿಯೆಯು ಹಲವು ವಿಧಗಳಲ್ಲಿ ಒಂದು ‘ಪ್ರಹಸನ’ವಾಗಿ ಮಾರ್ಪಡುತ್ತಿದ್ದು, ಇದು...

ಬಿಹಾರದ ಸಚಿವರ ಮನೆಯಲ್ಲಿ ದರೋಡೆ: ಅಪಾರ ಪ್ರಮಾಣದ ಚಿನ್ನ, ಬೆಳ್ಳಿ, ನಗದು ದೋಚಿದ ಕಳ್ಳರು

ಬಿಹಾರ ರಾಜ್ಯದ ಕಾನೂನು ಸಚಿವ ಸಂಜಯ್ ಸಿಂಗ್ ಟೈಗರ್ ಅವರ ಪಾಟ್ನಾದಲ್ಲಿರುವ...