ಸೋನಿಯಾ ನೆನಪಿನಂಗಳದಲ್ಲಿ ರಾಜಕೀಯದ ಹೊಸ ಹೆಜ್ಜೆಗುರುತು; ಪಂಜಾಬ್ ರಾಜಕಾರಣದ ಹೊಸ ಮಂಥನ,‘ಇಂಡಿಯಾ’ ಒಗ್ಗಟ್ಟಿನ ಪ್ರದರ್ಶನ

Date:

ಸೋನಿಯಾ ಗಾಂಧಿಯವರ ‘ಬಿಲಾಂಗಿಂಗ್’ ಆತ್ಮಕಥೆ ಬಿಡುಗಡೆ ಸಮಾರಂಭ ಕೇವಲ ಭಾವನಾತ್ಮಕ ಕಥನವಾಗದೆ, ವಿರೋಧ ಪಕ್ಷಗಳ ಪ್ರಬಲ ಒಗ್ಗಟ್ಟಿನ ವೇದಿಕೆಯಾಯಿತು. ಇದೆಲ್ಲದರ ನಡುವೆ, ಮುಂಚೂಣಿ ಸಾಲಿನಲ್ಲಿ ಮಿಂಚಿದ ಬಿಜೆಪಿ ನಾಯಕ ಕ್ಯಾಪ್ಟನ್ ಅಮರಿಂದರ್ ಸಿಂಗ್ ಉಪಸ್ಥಿತಿಯು, 2027ರ ಪಂಜಾಬ್ ಚುನಾವಣೆಗೆ ಮುನ್ನ ಹಳೆಯ ಬಾಂಧವ್ಯ ಹಾಗೂ ಹೊಸ ರಾಜಕೀಯ ಲೆಕ್ಕಾಚಾರಗಳ ರೋಚಕ ಅಧ್ಯಾಯಕ್ಕೆ ಮುನ್ನುಡಿ ಬರೆದಿದೆ.

- Advertisement -

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಬಹುನಿರೀಕ್ಷಿತ ಆತ್ಮಕಥೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ (Belonging: A Journey of Love) ಬಿಡುಗಡೆ ಸಮಾರಂಭವು ಕೇವಲ ಸಾಹಿತ್ಯಿಕ ವೇದಿಕೆಯಾಗದೆ, ರಾಷ್ಟ್ರ ರಾಜಕಾರಣದ ಹಲವು ಕುತೂಹಲಕಾರಿ ಬೆಳವಣಿಗೆಗಳಿಗೆ ಸಾಕ್ಷಿಯಾಯಿತು. ನವೆಂಬರ್ 16ರಂದು ದೆಹಲಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ಒಂದೆಡೆ ವಿರೋಧ ಪಕ್ಷಗಳ ‘ಇಂಡಿಯಾ’ (INDIA) ಮೈತ್ರಿಕೂಟದ ನಾಯಕರ ದಂಡೇ ಸೇರಿದ್ದು ಒಗ್ಗಟ್ಟಿನ ಪ್ರಬಲ ಸಂದೇಶವನ್ನು ರವಾನಿಸಿದರೆ, ಮತ್ತೊಂದೆಡೆ ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ ಹೊಸ ರಾಜಕೀಯ ಲೆಕ್ಕಾಚಾರಗಳಿಗೂ ಈ ವೇದಿಕೆ ಮುನ್ನುಡಿ ಬರೆದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸಾಮಾಜಿಕ ಜಾಲತಾಣದಲ್ಲಿ Belonging ಆತ್ಮಕಥನ ಬಿಡುಗಡೆ ಸಮಾರಂಭದ ಪಟಗಳದೇ...

ಒಬ್ಬ ತಾಯಿಯ ಬದುಕಿನ ಪುಟಗಳು ಪುಸ್ತಕವಾಗಿ ಹೊರಬಂದ ದಿನ, ಮಕ್ಕಳ ಕಣ್ಣಲ್ಲಿ ಹೆಮ್ಮೆ ಮತ್ತು ವಾತ್ಸಲ್ಯ ಒಟ್ಟಿಗೆ ತುಂಬಿಕೊಂಡಿತ್ತು. ತಾಯಿಯ ಮಾತುಗಳನ್ನು ತದೇಕಚಿತ್ತದಿಂದ ಆಲಿಸುತ್ತಿದ್ದ ರಾಹುಲ್ ಗಾಂಧಿ, ತನ್ನ ಬದುಕಿನ ಅಮೋಘ ಕ್ಷಣಗಳನ್ನು...

ತಂಬೂರಿಯ ನಾದದಲ್ಲಿ ಜೀವಂತ ಮಂಟೇಸ್ವಾಮಿ ಪರಂಪರೆ: ಶಿಷ್ಯರು, ಮಹಿಳಾ...

ಧರೆಗೆ ದೊಡ್ಡವರ ತತ್ವ, ಶಿಷ್ಯರ ಸಾಮಾಜಿಕ ಕೊಡುಗೆ, ಜನಪದ ಜ್ಞಾನದ ಉಳಿವು ಮತ್ತು ಮುಂದಿನ ಪೀಳಿಗೆಯ ಜವಾಬ್ದಾರಿ. ಒಂದು ಪರಂಪರೆಯ ಮಹತ್ವವನ್ನು ಅದರ ಸ್ಥಾಪಕನ ಜೀವನದಿಂದ ಮಾತ್ರ ಅಳೆಯಲಾಗದು. ಆ ಪರಂಪರೆಯ ವಿಚಾರಗಳನ್ನು...

ಸಿಜೆಐ ವಿರುದ್ಧ ವಕೀಲರ ಆಕ್ರೋಶ: ನ್ಯಾಯಾಂಗದ ಘನತೆಗೆ ಧಕ್ಕೆ...

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ವಿರುದ್ಧ ನ್ಯಾಯಾಲಯದಲ್ಲೇ ವಕೀಲರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆ ನ್ಯಾಯಾಂಗದ ಘನತೆ, ನ್ಯಾಯಾಧೀಶರ ನಿಷ್ಪಕ್ಷಪಾತತೆ ಹಾಗೂ ಜನಸಾಮಾನ್ಯರಿಗೆ ನ್ಯಾಯಾಂಗದ ಮೇಲಿರುವ ವಿಶ್ವಾಸದ ಕುರಿತು ಮಹತ್ವದ ಚರ್ಚೆಗೆ...

​ಈ ಸಮಾರಂಭದಲ್ಲಿ ಎಲ್ಲರ ಹುಬ್ಬೇರುವಂತೆ ಮಾಡಿದ್ದು ಹಾಗೂ ಅತಿ ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದು, ಗಾಂಧಿ ಕುಟುಂಬದ ಕಟು ಟೀಕಾಕಾರರಾಗಿ 2021ರಲ್ಲಿ ತೀವ್ರ ಕಹಿಯೊಂದಿಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಅಚ್ಚರಿಯ ಉಪಸ್ಥಿತಿ. ರಾಜಕೀಯ ವೈರತ್ವದ ನಡುವೆಯೂ ವಿರೋಧ ಪಕ್ಷದ ಘಟಾನುಘಟಿ ನಾಯಕರ ನಡುವೆ ಮುಂಚೂಣಿ ಸಾಲಿನಲ್ಲಿ ಅವರು ಆಸೀನರಾಗಿದ್ದರು. ಭಾಷಣದ ವೇಳೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಕ್ಯಾಪ್ಟನ್ ಅವರನ್ನು ವಿಶೇಷವಾಗಿ ಉಲ್ಲೇಖಿಸಿದ್ದು ಈ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿತು.

102432

​”ನನ್ನ ತಂದೆ-ತಾಯಿ ತಮ್ಮ ಜೀವಿತಾವಧಿಯಲ್ಲಿ ಜಗಳವಾಡಿದ್ದನ್ನು ನಾನು ನೋಡಿದ್ದು ಕೇವಲ ಒಮ್ಮೆ ಮಾತ್ರ. ಕಾಕತಾಳೀಯವೆಂದರೆ, ಆ ಸಮಯದಲ್ಲಿ ನನ್ನ ತಂದೆ ರಾಜೀವ್ ಗಾಂಧಿ ಅವರು ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದರು” ಎಂದು ರಾಹುಲ್ ನಗುನಗುತ್ತಲೇ ನೆನಪಿಸಿಕೊಂಡರು. ರಾಜೀವ್ ಗಾಂಧಿ ಹಾಗೂ ಅಮರಿಂದರ್ ಸಿಂಗ್ ಅವರ ನಡುವಿನ ಹಳೆಯ ದಶಕಗಳ ಬಾಂಧವ್ಯವನ್ನು ನೆನಪಿಸುವ ಈ ಘಟನೆ ಸಭಿಕರಲ್ಲಿ ನಗು ಮೂಡಿಸಿತು.

​ಸಮಾರಂಭದ ಬಳಿಕ ‘ಆಜ್ ತಕ್’ ವರದಿಗಾರ್ತಿಯೊಂದಿಗೆ ಚಿಟ್-ಚಾಟ್ ನಡೆಸಿದ ಕ್ಯಾಪ್ಟನ್ ಅಮರಿಂದರ್ ಸಿಂಗ್, ತಮ್ಮ ಭೇಟಿಯ ಕುರಿತ ಊಹಾಪೋಹಗಳಿಗೆ ತೆರೆ ಎಳೆಯುವ ಯತ್ನ ಮಾಡಿದರು. “ನಾನು ಈ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಬಂದಿರುವುದು ಸಂಪೂರ್ಣವಾಗಿ ವೈಯಕ್ತಿಕ ಕಾರಣಗಳಿಗಾಗಿ. ಗಾಂಧಿ ಕುಟುಂಬದೊಂದಿಗೆ, ವಿಶೇಷವಾಗಿ ರಾಜೀವ್ ಗಾಂಧಿ ಅವರ ಕಾಲದಿಂದಲೂ ನನ್ನದು ದಶಕಗಳ ಹಳೆಯ ಬಾಂಧವ್ಯ. ಸೋನಿಯಾ ಗಾಂಧಿ ಅವರು ಈ ಹಿಂದೆ ನನ್ನ ಎರಡು ಪುಸ್ತಕಗಳ ಬಿಡುಗಡೆ ಸಮಾರಂಭಕ್ಕೆ ಬಂದಿದ್ದರು. ಹೀಗಾಗಿ ಅವರ ಆಹ್ವಾನ ಮನ್ನಿಸಿ ನಾನೂ ಬಂದಿದ್ದೇನೆ. ಆದರೆ, ನಾನು ಕಾಂಗ್ರೆಸ್‌ಗೆ ಮರಳುವ ಪ್ರಶ್ನೆಯೇ ಇಲ್ಲ” ಎಂದು ಅವರು ಸ್ಪಷ್ಟಪಡಿಸಿದರು.

​ಆದರೆ, ಕ್ಯಾಪ್ಟನ್ ಅವರ ಈ ಸ್ಪಷ್ಟನೆಯ ನಡುವೆಯೂ, 2027ರ ಪಂಜಾಬ್ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ ಅವರ ಉಪಸ್ಥಿತಿ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ದೆಹಲಿಯಲ್ಲಿ ಭೇಟಿಯಾಗಿದ್ದ ಅಮರಿಂದರ್ ಸಿಂಗ್, ಪಂಜಾಬ್‌ನ ಭದ್ರತೆ, ಗ್ಯಾಂಗ್‌ಸ್ಟರ್‌ಗಳ ಹಾವಳಿ ಹಾಗೂ ಮಾದಕವಸ್ತು ಜಾಲದ ಕುರಿತು ಸುದೀರ್ಘವಾಗಿ ಚರ್ಚಿಸಿದ್ದರು. ಆಮ್ ಆದ್ಮಿ ಪಕ್ಷದ (AAP) ಆಡಳಿತವಿರುವ ಪಂಜಾಬ್‌ನಲ್ಲಿ ಪ್ರಬಲ ನಾಯಕತ್ವದ ಕೊರತೆಯನ್ನು ತುಂಬುವ ನಿಟ್ಟಿನಲ್ಲಿ ಕ್ಯಾಪ್ಟನ್ ಹೆಜ್ಜೆ ಇಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿರುವಾಗಲೇ ಅವರು ಕಾಂಗ್ರೆಸ್ ವೇದಿಕೆಯಲ್ಲಿ ಕಾಣಿಸಿಕೊಂಡಿರುವುದು ವಿಶೇಷವಾಗಿದೆ.

102433

​ರಾಜಕೀಯ ವಿಶ್ಲೇಷಕರ ಪ್ರಕಾರ, ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಎಂದಿಗೂ ವೈಯಕ್ತಿಕ ಸಂಬಂಧಗಳನ್ನು ಕಡಿದುಕೊಳ್ಳದ ‘ಹಳೇ ಕಾಲದ ರಾಜಕಾರಣಿ’ (Old-school politician). ಶಿರೋಮಣಿ ಅಕಾಲಿದಳ ಮತ್ತು ಬಿಜೆಪಿ ಮೈತ್ರಿಯ ಬಗ್ಗೆ ಈ ಹಿಂದೆಯೇ ಅವರು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು. ಇದೀಗ ಬಿಜೆಪಿ ಹೈಕಮಾಂಡ್‌ಗೆ ತಮ್ಮದೇ ಆದ ರಾಜಕೀಯ ತೂಕವನ್ನು ಮನವರಿಕೆ ಮಾಡಿಕೊಡುವ ಜೊತೆಗೆ, 2027ರ ಚುನಾವಣೆಗೆ ಮುನ್ನ ಪಂಜಾಬ್ ರಾಜಕಾರಣದಲ್ಲಿ ತಮಗೆ ಎಲ್ಲಾ ಆಯ್ಕೆಗಳೂ ಮುಕ್ತವಾಗಿವೆ ಎಂಬ ಸಂದೇಶವನ್ನು ರವಾನಿಸಲು ಈ ವೇದಿಕೆಯನ್ನು ಅವರು ಬಳಸಿಕೊಂಡಿದ್ದಾರೆಯೇ ಎಂಬ ಚರ್ಚೆಗಳು ದೆಹಲಿಯ ರಾಜಕೀಯ ಪಡಸಾಲೆಯಲ್ಲಿ ಶುರುವಾಗಿವೆ.

​ಈ ರಾಜಕೀಯ ಲೆಕ್ಕಾಚಾರಗಳಾಚೆಗೆ, ಸಮಾರಂಭವು ಸೋನಿಯಾ ಗಾಂಧಿ ಅವರ ಭಾವುಕ ನುಡಿಗಳಿಗೆ ಸಾಕ್ಷಿಯಾಯಿತು. ಪ್ರಕಾಶಕಿ ಪೌಲೋಮಿ ಚಟರ್ಜಿ ಅವರೊಂದಿಗಿನ ಸಂವಾದದಲ್ಲಿ ಮಾತನಾಡಿದ ಸೋನಿಯಾ, “ನನ್ನ ಮಕ್ಕಳು ಅನೇಕ ವರ್ಷಗಳಿಂದ ಆತ್ಮಕಥೆ ಬರೆಯುವಂತೆ ಒತ್ತಾಯಿಸುತ್ತಲೇ ಇದ್ದರು. ಗಾಂಧಿ ಕುಟುಂಬದ ಬಗ್ಗೆ ಹರಡಲಾಗಿರುವ ಅಸತ್ಯ ಹಾಗೂ ಕಾಲ್ಪನಿಕ ಕಥೆಗಳಿಗೆ ಉತ್ತರ ನೀಡಲು, ನನ್ನ ನೈಜ ಅನುಭವಗಳನ್ನು ದಾಖಲಿಸಲು ನಾನು ಈ ಪುಸ್ತಕ ಬರೆಯಲು ನಿರ್ಧರಿಸಿದೆ. ನನ್ನ ಆಂತರಿಕ ಭಾವನೆಗಳನ್ನು ಹೊರಹಾಕಲು ನನಗೆ ಸದಾ ಹಿಂಜರಿಕೆ ಇತ್ತು, ಆದರೆ ಕಾಲಘಟ್ಟ ಅದಕ್ಕೆ ಒಗ್ಗಿಕೊಳ್ಳುವಂತೆ ಮಾಡಿತು” ಎಂದು ಪುಸ್ತಕದ ಹಿಂದಿನ ಪ್ರೇರಣೆಯನ್ನು ಬಿಚ್ಚಿಟ್ಟರು.

​ಇಟಲಿಯಿಂದ ಬಂದು ಭಾರತದಲ್ಲಿ ನೆಲೆಸಿದ ಆರಂಭಿಕ ದಿನಗಳನ್ನು ಸ್ಮರಿಸಿದ ಸೋನಿಯಾ ಗಾಂಧಿ, ತಾವು ಹೇಗೆ ಈ ನೆಲದ ಒಡನಾಡಿಯಾದೆ ಎಂಬುದನ್ನು ಮಾರ್ಮಿಕವಾಗಿ ವಿವರಿಸಿದರು. “ಆರಂಭದಲ್ಲಿ ನಾನೊಬ್ಬಳು ಹೊರಗಿನವಳು (Outsider), ಎಲ್ಲರೂ ನನ್ನನ್ನೇ ಗಮನಿಸುತ್ತಿದ್ದಾರೆ ಎಂಬ ಭಾವನೆ ಕಾಡುತ್ತಿತ್ತು. ಆದರೆ, ನನ್ನ ಪತಿಯ ಕ್ಷೇತ್ರವಾದ ಅಮೇಠಿ, ರಾಯಬರೇಲಿಯ ಹಳ್ಳಿಗಳಿಗೆ ಹೋದಾಗ ಅಲ್ಲಿನ ಜನ ತೋರಿದ ಪ್ರೀತಿ ನನ್ನನ್ನು ಬದಲಾಯಿಸಿತು. ನನ್ನ ಉಡುಗೆ, ಭಾಷೆ ಏನೇ ಇದ್ದರೂ ಅವರು ನನ್ನನ್ನು ಸ್ವೀಕರಿಸಿದರು. ಕೆಲವೊಮ್ಮೆ ಪ್ರೀತಿಯಿಂದಲೇ ‘ಸುಮ್ಮನಿರಿ, ನಿಮಗೇನೂ ಗೊತ್ತಿಲ್ಲ, ನಾವೇ ನಿರ್ಧರಿಸುತ್ತೇವೆ’ ಎಂದು ಗದರುತ್ತಿದ್ದರು. ಆ ಮುಕ್ತ ಒಪ್ಪಿಕೊಳ್ಳುವಿಕೆಯೇ ನನ್ನನ್ನು ಈ ದೇಶದವಳನ್ನಾಗಿ ಮಾಡಿತು” ಎಂದು ಭಾವುಕರಾದರು.

102434

​ತಾಯಿಯ ಪುಸ್ತಕ ಬಿಡುಗಡೆ ವೇದಿಕೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ರಾಜೀವ್ ಮತ್ತು ಸೋನಿಯಾ ನಡುವಿನ ಅಗಾಧ ಪ್ರೇಮವನ್ನು ಮೆಲುಕು ಹಾಕಿದರು. “ಅವರಿಬ್ಬರು ಕೇಂಬ್ರಿಡ್ಜ್‌ನ ‘ವಾರ್ಸಿಟಿ’ ರೆಸ್ಟೊರೆಂಟ್‌ನಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದರು. ವರ್ಷಗಳ ನಂತರ ನಾನು ಅಲ್ಲಿಗೆ ಓದಲು ಹೋದಾಗ, ನನ್ನ ಗೆಳತಿಯೊಂದಿಗೆ ಅದೇ ರೆಸ್ಟೊರೆಂಟ್‌ಗೆ ಹೋಗಿದ್ದೆ. ಅಲ್ಲಿನ ಊಟ, ವಿಶೇಷವಾಗಿ ‘ಚಿಕನ್ ಚಾಸೂರ್’ ಕಳಪೆಯಾಗಿತ್ತು. ಯಾರಿಗಾದರೂ ಪ್ರೀತಿಯಲ್ಲಿ ಬೀಳಬೇಕೆಂದರೆ ಆ ರೆಸ್ಟೊರೆಂಟ್‌ಗೆ ಹೋಗಿ, ಆದರೆ ಅಲ್ಲಿನ ಚಿಕನ್ ಮಾತ್ರ ತಿನ್ನಬೇಡಿ” ಎಂದು ರಾಹುಲ್ ಚಟಾಕಿ ಹಾರಿಸಿದಾಗ ಇಡೀ ಸಭೆ ನಗೆಗಡಲಲ್ಲಿ ತೇಲಿತು.

​ತಮ್ಮ ಪೋಷಕರ ನಡುವಿನ ಅನ್ಯೋನ್ಯತೆಯನ್ನು ವಿವರಿಸಿದ ರಾಹುಲ್, “ನಾನು ಬೆಳೆದ ವಾತಾವರಣದಲ್ಲಿ, ಊಟದ ಸಮಯದಲ್ಲಿ ಅಪ್ಪನ ಮಡಿಲಲ್ಲಿ ಅಮ್ಮ ಕೂರುತ್ತಿದ್ದದ್ದು ನನಗೆ ಅತ್ಯಂತ ಸಹಜ ಎನಿಸಿತ್ತು. ಬೇರೆ ಸ್ನೇಹಿತರ ಮನೆಗೆ ಹೋದಾಗ ಅವರ ಪೋಷಕರು ಹಾಗೆ ಕೂರುತ್ತಿರಲಿಲ್ಲ. ಆಕೆ ನನ್ನ ತಂದೆಗೆ ಸೇರಿದವಳು, ನನ್ನ ತಂದೆ ಆಕೆಗೆ ಸೇರಿದವರು” ಎಂದು ಬಣ್ಣಿಸಿದರು. ಜೊತೆಗೆ, ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಅವರ ಹತ್ಯೆಯ ಭೀಕರ ದುರಂತಗಳನ್ನು ಸ್ಮರಿಸಿದ ಅವರು, “ಆ ಘಟನೆಗಳು ಸದಾ ನಗುನಗುತ್ತಿದ್ದ ತಾಯಿಯನ್ನು ಸಂಪೂರ್ಣವಾಗಿ ಬದಲಾಯಿಸಿದವು. ಬರೋಬ್ಬರಿ 4 ಬಾರಿ ಕ್ಯಾನ್ಸರ್ ಮಹಾಮಾರಿಯನ್ನು ಎದುರಿಸಿದರೂ, ನನ್ನ ತಾಯಿ ಎಂದಿಗೂ ಹೆದರಿದ್ದನ್ನು ನಾನು ನೋಡಿಲ್ಲ” ಎಂದು ತಾಯಿಯ ಧೈರ್ಯವನ್ನು ಕೊಂಡಾಡಿದರು.

ಇದನ್ನೂ ಓದಿ ಸಾಮಾಜಿಕ ಜಾಲತಾಣದಲ್ಲಿ Belonging ಆತ್ಮಕಥನ ಬಿಡುಗಡೆ ಸಮಾರಂಭದ ಪಟಗಳದೇ ಸದ್ದು…

​ಈ ಭಾವನಾತ್ಮಕ ಕ್ಷಣಗಳ ನಡುವೆಯೂ, ಕಾರ್ಯಕ್ರಮದ ಮುಂಚೂಣಿ ಸಾಲುಗಳು ರಾಷ್ಟ್ರ ಮಟ್ಟದಲ್ಲಿ ವಿರೋಧ ಪಕ್ಷಗಳ ಒಗ್ಗಟ್ಟಿನ ಸ್ಪಷ್ಟ ನಿದರ್ಶನವಾಗಿತ್ತು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್, ಡಿಂಪಲ್ ಯಾದವ್, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್, ನ್ಯಾಷನಲ್ ಕಾನ್ಫರೆನ್ಸ್‌ನ ಫಾರೂಕ್ ಮತ್ತು ಉಮರ್ ಅಬ್ದುಲ್ಲಾ, ಟಿಎಂಸಿಯ ಅಭಿಷೇಕ್ ಬ್ಯಾನರ್ಜಿ, ಎನ್‌ಸಿಪಿಯ ಸುಪ್ರಿಯಾ ಸುಳೆ, ತಮಿಳುನಾಡು ಮುಖ್ಯಮಂತ್ರಿ ವಿಜಯ್, ಹಿಮಾಚಲ ಪ್ರದೇಶದ ಸಿಎಂ ಸುಖ್ವಿಂದರ್ ಸಿಂಗ್ ಸುಖು ಕರ್ನಾಟಕದ ಸಿಎಂ ಡಿ.ಕೆ. ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ‘ಇಂಡಿಯಾ’ ಒಕ್ಕೂಟದ ಘಟಾನುಘಟಿ ನಾಯಕರು ಉಪಸ್ಥಿತರಿದ್ದು, ಮುಂಬರುವ ರಾಜಕೀಯ ಹೋರಾಟಗಳಿಗೆ ಒಟ್ಟಾಗಿ ಹೆಜ್ಜೆ ಹಾಕುವ ಸಂದೇಶ ನೀಡಿದರು.

102435

​ ಸೋನಿಯಾ ಗಾಂಧಿ ಅವರ ‘ಬಿಲಾಂಗಿಂಗ್’ ಪುಸ್ತಕ ಬಿಡುಗಡೆ ಸಮಾರಂಭವು ಕೇವಲ ಒಂದು ಸಾಹಿತ್ಯಿಕ ಕಾರ್ಯಕ್ರಮವಾಗಿ ಉಳಿಯಲಿಲ್ಲ. ರಾಹುಲ್ ಗಾಂಧಿ ಅವರ ಭಾವುಕ ನುಡಿಗಳು ಗಾಂಧಿ ಕುಟುಂಬದ ಮಾನವೀಯ ಮುಖವನ್ನು ಪರಿಚಯಿಸಿದರೆ, ‘ಇಂಡಿಯಾ’ ಒಕ್ಕೂಟದ ನಾಯಕರ ಹಾಜರಿಯು ವಿರೋಧ ಪಕ್ಷಗಳ ಅಚಲ ಒಗ್ಗಟ್ಟನ್ನು ಪ್ರದರ್ಶಿಸಿತು. ಇದೆಲ್ಲದರ ಜೊತೆಗೆ, ‘ವೈಯಕ್ತಿಕ ಭೇಟಿ’ಯ ಹೆಸರಿನಲ್ಲಿ ಆಗಮಿಸಿದ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಉಪಸ್ಥಿತಿಯು, 2027ರ ಪಂಜಾಬ್ ಚುನಾವಣೆಯ ದೃಷ್ಟಿಯಿಂದ ಪರದೆಯ ಹಿಂದಿನ ರಾಜಕೀಯ ಲೆಕ್ಕಾಚಾರಗಳು, ಪಕ್ಷಾತೀತ ಬಾಂಧವ್ಯಗಳು ಹಾಗೂ ಭವಿಷ್ಯದ ಮೈತ್ರಿ ಸಾಧ್ಯತೆಗಳ ದಿಕ್ಸೂಚಿಯಂತೆಯೂ ಗೋಚರಿಸಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಷೇರುದಾರರ ಇಂದಿನ ಜಾಗತಿಕ ಮಂತ್ರ- ‘ಅಮೆರಿಕವನ್ನು ನಂಬಿ ಹಣ ಹೂಡಿ’

ಅಮೆರಿಕನ್ನರು ಮಾತ್ರವಲ್ಲ, ವಿದೇಶಗಳ ಸಾಮಾನ್ಯ ಜನರೂ ಮುಗಿಬಿದ್ದು ಅಮೆರಿಕದ ಷೇರುಗಳನ್ನು ಕೊಳ್ಳುತ್ತಿದ್ದಾರೆ....

ನ್ಯಾಯಾಂಗ ನಿಂದನೆ ಪ್ರಕರಣ: ಕೇಜ್ರಿವಾಲ್, ಸಿಸೋಡಿಯಾಗೆ 3 ವಾರಗಳ ಗಡುವು

ದೆಹಲಿ ಅಬಕಾರಿ ನೀತಿ ಹಗರಣದ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಧೀಶರ ವಿರುದ್ಧ ವಿವಾದಾತ್ಮಕ...

ನಾಡಿನ ಸಂಸ್ಕೃತಿ, ಜನಪದ ಕಲೆಗಳ ಉಳಿವಿಗೆ ಯುವಜನೋತ್ಸವ ಪ್ರೇರಣೆ: ನಾರಾಯಣಸಾ ಭಾಂಡಗೆ

ನಾಡಿನ ಸಂಸ್ಕೃತಿ, ಪರಂಪರೆ ಹಾಗೂ ಜನಪದ ಕಲೆಗಳನ್ನು ಉಳಿಸಿ ಬೆಳೆಸುವಲ್ಲಿ ಯುವಜನತೆಯ...