ಹೊಸನಗರ | ಮುಸಲ್ಮಾನ ಕುಟುಂಬದಿಂದ ದೀಪಾವಳಿ ಆಚರಣೆ

Date:

ಹೊಸನಗರ ತಾಲ್ಲೂಕಿನ ರಿಪ್ಪನ್‌ಪೇಟೆಯ ಆಟೋ ಚಾಲಕರಾದ ‘ಆಟೋ ಗಫೂರ್’ ಎಂಬುವವರು ತಮ್ಮ ಕುಟುಂಬ ಸದಸ್ಯರೊಂದಿಗೆ ದೀಪಾವಳಿ ಆಚರಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಹಬ್ಬದ ಪ್ರಯುಕ್ತ ಗೋಪೂಜೆಯನ್ನು ನೆರವೇರಿಸಿ ಸಡಗರ ಹಾಗೂ ಭಕ್ತಿಭಾವದಿಂದ ಆಚರಿಸುವ ಮೂಲಕ ಕೋಮು ಸೌಹಾರ್ದತೆಗೆ ಸಾಕ್ಷಿಯಾಗಿದ್ದಾರೆ.​

- Advertisement -

ದೀಪಾವಳಿ ಹಬ್ಬದ ವಿಶೇಷ ದಿನದಂದು ಆಟೋ ಗಫೂರ್ ಅವರ ನಿವಾಸದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಮುಂಜಾನೆಯೇ ಗೋವುಗಳನ್ನು ಸ್ವಚ್ಛವಾಗಿ ತೊಳೆದು, ಅರಿಶಿನ, ಕುಂಕುಮ ಹಾಗೂ ವಿಭೂತಿಯನ್ನು ಹಚ್ಚಿ, ಬಣ್ಣಬಣ್ಣದ ಹೂವಿನ ಹಾರಗಳನ್ನು ಹಾಕಿ ಅಲಂಕರಿಸಲಾಯಿತು.​ ಬಳಿಕ, ಗಫೂರ್ ಮತ್ತು ಅವರ ಕುಟುಂಬ ಸದಸ್ಯರು ಒಟ್ಟಾಗಿ ಸೇರಿ ಗೋವುಗಳನ್ನು ಪೂಜಿಸಿದರು. ಗೋವುಗಳಿಗೆ ನೆಚ್ಚಿನ ಅಕ್ಕಿ, ಬೆಲ್ಲ, ಬಾಳೆಹಣ್ಣು ಹಾಗೂ ಸಿಹಿ ತಿನಿಸುಗಳನ್ನು ತಿನ್ನಿಸಿ ಸಂಭ್ರಮಿಸಿದರು.​

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಎಲ್ಲವನ್ನೂ ಕಣ್ಣುಮುಚ್ಚಿ ಪಾಲಿಸುವ ವಿಭೀಷಣನೆ ಈ ಸಮಾಜಕ್ಕೆ ಸೂಕ್ತ,...

ರಾಮಾಯಣವನ್ನು ಗೌರವಿಸುವ ನಾವು ರಾವಣನ ದೃಷ್ಟಿಕೋನದಿಂದಲೂ ಕಥೆಯನ್ನು ಓದಬೇಕು. ಈ ಕಾಲಕ್ಕೆ ರಿಟೆಲ್ಲಿಂಗ್ಸ್, ಕೌಂಟರ್ ನರೇಟಿವ್ಸ್ ಹಾಗೂ ಹ್ಯೂಮನೈಸಿಂಗ್ ಸ್ಟೋರಿಸ್ ಅಗತ್ಯತೆ ಬಹಳವಾಗಿದೆ. ಶಿವ ನಮ್ಮ ಅಚ್ಚುಮೆಚ್ಚಿನ ದೇವನಾಗಿದ್ದ. ಅವನನ್ನ ನಾವು ಅತಿಯಾಗಿ ಪ್ರೀತಿಸುತಿದ್ದೆವು....

ರಾಷ್ಟ್ರೀಯ ಶಿಕ್ಷಣ ದಿನ | ಶಿಕ್ಷಣ ಕ್ರಾಂತಿಯ ಹರಿಕಾರ-ಮೌಲಾನ...

ಮೌಲಾನಾ ಅಬುಲ್ ಕಲಾಂ ಆಜಾದ್ ಇದು ಅಪರೂಪದ ರಾಷ್ಟ್ರೀಯ ವ್ಯಕ್ತಿತ್ವ. ಅವರ ಹೆಸರು ಆಜಾದ್. ಅವರ ಕನಸು ಸ್ವತಂತ್ರ ಭಾರತ. ಅವರ ಹೋರಾಟ ರಾಷ್ಟ್ರೀಯ ಏಕತೆ. ಅವರ ನಂಬಿಕೆ ಶಿಕ್ಷಣ. ಅವರ ವೈಚಾರಿಕ...

ಕಿವೀಸ್ ಕೋಟೆಯಲ್ಲಿ ಇತಿಹಾಸ ಬರೆಯುವತ್ತ ಶುಭಮನ್ ಗಿಲ್ ಪಡೆ:...

ನವೆಂಬರ್ 13 ಮತ್ತು 15ರಂದು ನಡೆಯಲಿರುವ ಕಿವೀಸ್ ವಿರುದ್ಧದ ನಾಲ್ಕು ಹಾಗೂ ಐದನೇ ಏಕದಿನ ಪಂದ್ಯಗಳಲ್ಲಿ ನಾಯಕ ಶುಭಮನ್ ಗಿಲ್ ಅವರ ನಾಯಕತ್ವದ ಕೌಶಲ ಮತ್ತೊಮ್ಮೆ ಒರೆಗಲ್ಲಿಗೆ ಹಚ್ಚಲ್ಪಡಲಿದೆ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ...
Muslim deepavali 2 1

ಧರ್ಮ, ಜಾತಿಗಳ ಹೆಸರಿನಲ್ಲಿ ಸಮಾಜದಲ್ಲಿ ಒಡಕು ಮೂಡುತ್ತಿರುವ ಇಂದಿನ ದಿನಗಳಲ್ಲಿ ಮುಸ್ಲಿಂ ಸಮುದಾಯದ ಆಟೋ ಗಫೂರ್ ಅವರ ಕುಟುಂಬದ ಈ ನಡೆ ಎಲ್ಲರಿಗೂ ಮಾದರಿಯಾಗಿದೆ. ಇದು ಕೇವಲ ಈ ವರ್ಷದ ಆಚರಣೆಯಲ್ಲ, ಹಲವು ವರ್ಷಗಳಿಂದಲೂ ಗಫೂರ್ ಅವರ ಕುಟುಂಬ ತಪ್ಪದೇ ದೀಪಾವಳಿ ಹಬ್ಬದಂದು ಗೋಪೂಜೆಯನ್ನು ನೆರವೇರಿಸಿಕೊಂಡು ಬರುತ್ತಿದೆ.

ಹೈನುಗಾರಿಕೆ ಹಾಗೂ ಗೋವುಗಳ ಮೇಲೆ ವಿಶೇಷ ಪ್ರೀತಿ ಹೊಂದಿರುವ ಈ ಮುಸ್ಲಿಂ ಕುಟುಂಬವು, ಗೋವನ್ನು ಪೂಜಿಸುತ್ತಿರುವುದು ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದೆ.

+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಪೋಷಕರಾಗಲು ಅಡ್ಡದಾರಿಯಲ್ಲ; ಕಾನೂನು ಬದ್ಧ ದತ್ತು ಸ್ವೀಕಾರವೇ ಸರಿಯಾದ ಮಾರ್ಗ

ಮಕ್ಕಳ ಮಾರಾಟವು ಗಂಭೀರ ಸ್ವರೂಪದ ಅಪರಾಧವಾಗಿದ್ದು, ಯಾವುದೇ ಅನಧಿಕೃತವಾಗಿ ಮಗುವನ್ನು ನೀಡುವುದು...

ಸೊರಬ | ಕುರಿ ಶೆಡ್‌ ಬೆಂಕಿಗಾಹುತಿ; 150ಕ್ಕೂ ಹೆಚ್ಚು ಕೋಳಿ, ಕುರಿಗಳು ಸುಟ್ಟು ಕರಕಲು!

ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಸೂರಣಗಿ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್...

ತೀರ್ಥಹಳ್ಳಿ | ಈಜಲು ಹೋಗಿ ತುಂಗೆ ಪಾಲಾದ ಕೂಲಿ ಕಾರ್ಮಿಕರು!

ತೀರ್ಥಹಳ್ಳಿ ತಾಲೂಕಿನ ಬಾಳೆಬೈಲು ಹೊಸ ಸೇತುವೆ ಸಮೀಪ ತುಂಗಾ ನದಿಯಲ್ಲಿ ಈಜಲು...

ಶಿವಮೊಗ್ಗ | ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿಗೆ 10 ವರ್ಷ ಕಠಿಣ ಕಾರಾಗೃಹ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ, 16 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ...