ಎಲ್ಲವನ್ನೂ ಕಣ್ಣುಮುಚ್ಚಿ ಪಾಲಿಸುವ ವಿಭೀಷಣನೆ ಈ ಸಮಾಜಕ್ಕೆ ಸೂಕ್ತ, ಪ್ರಶ್ನಿಸುವ ನಾನಲ್ಲ- ರಾವಣ

Date:

ರಾಮಾಯಣವನ್ನು ಗೌರವಿಸುವ ನಾವು ರಾವಣನ ದೃಷ್ಟಿಕೋನದಿಂದಲೂ ಕಥೆಯನ್ನು ಓದಬೇಕು. ಈ ಕಾಲಕ್ಕೆ ರಿಟೆಲ್ಲಿಂಗ್ಸ್, ಕೌಂಟರ್ ನರೇಟಿವ್ಸ್ ಹಾಗೂ ಹ್ಯೂಮನೈಸಿಂಗ್ ಸ್ಟೋರಿಸ್ ಅಗತ್ಯತೆ ಬಹಳವಾಗಿದೆ.

ಶಿವ ನಮ್ಮ ಅಚ್ಚುಮೆಚ್ಚಿನ ದೇವನಾಗಿದ್ದ. ಅವನನ್ನ ನಾವು ಅತಿಯಾಗಿ ಪ್ರೀತಿಸುತಿದ್ದೆವು. ಆತ ಏನನ್ನೂ ಬೇಡುತ್ತಿರಲಿಲ್ಲ. ವಿಧಿ ವಿಧಾನಗಳು, ಪೂಜೆ ಪ್ರಾರ್ಥನೆ, ಹೋಮ ಹವನ ಏನನ್ನ ಕೂಡ ನಮ್ಮ ಶಿವ ಬಯಸುತ್ತಿರಲಿಲ್ಲ. ಆತ ನಮಗೆ ಮಿತ್ರ, ತಂದೆ, ಸಹೋದರ, ಮಗ ಎಲ್ಲವೂ ಆಗಿದ್ದ. ನಾವು ಕಲ್ಪಿಸಿಕೊಂಡಿದ್ದೆಲ್ಲಾ ಅವ ಆಗುತ್ತಿದ್ದ. ಅಷ್ಟೇಕೆ ನಮ್ಮ ಊರುಗಳಲ್ಲಿ ಆತ ಶಿಶ್ನ ರೂಪ ಪಡೆದು ಪುರುಷತ್ವ ಮತ್ತು ಸಂತಾನೋತ್ಪತ್ತಿ ಸಾಮರ್ಥ್ಯದ ಪ್ರತೀಕವಾಗಿದ್ದ. ಹೀಗಿದ್ದ ನಮ್ಮ ದೇವನನ್ನು ನಮ್ಮಿಂದ ಬ್ರಾಹ್ಮಣರು ಕಸಿದುಕೊಂಡರು. ಗುರು ಬ್ರಾಹ್ಮಣನನ್ನೂ ದೇವರಾಗಿಸಿದರು, ಅಷ್ಟಕ್ಕೆ ನಿಲ್ಲದೆ ಮುಂದುವರೆದು ಹೊಸ ದೇವ ವಿಷ್ಣುವನ್ನೂ ಸೃಷ್ಟಿಸಿದರು. ಆತ ರಾಮನಾದ. ನಾವು ಎಲ್ಲವನ್ನು ಕಳೆದುಕೊಂಡೆವು- ನಮ್ಮ ದೇವರು, ಸಂಸ್ಕೃತಿ, ಜೀವನ ಶೈಲಿ ಎಲ್ಲವನ್ನೂ!

- Advertisement -

ಸರಸ್ವತಿ ನದಿಯ ದಂಡೆಯ ಮೇಲಿದ್ದ ದೇವ ಮಾನವರ ರಾಜಧಾನಿ ಅಮರಾವತಿ. ಅದೆಂಥ ಊರು ನಮ್ಮ ಪಾತಾಳದ ಮುಂದೆ! ಊರು ಸೂರು ಕಳೆದುಕೊಂಡ ನಾವು ಕಟ್ಟಿಕೊಂಡ ಪಟ್ಟಣ ಪಾತಾಳ. ಅದರ ಮುಂದೆ ಅಮರಾವತಿ ಗಬ್ಬು ನಾರುತ್ತಿದ್ದ ನಗರವಾಗಿತ್ತು. ನಮ್ಮ ಪಾತಾಳ ಮಾಯನ್ ಶೈಲಿಯ ಪಟ್ಟಣ. ವಿಶ್ವಕರ್ಮ ನಿರ್ಮಿಸಿದ ಅಮರಾವತಿ ಮಾಯನ್ ನಾಗರಿಕತೆಯ ಪಾತಾಳಕ್ಕೆ ಸಾಟಿಯೇ ಇರಲಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ರಾಷ್ಟ್ರೀಯ ಶಿಕ್ಷಣ ದಿನ | ಶಿಕ್ಷಣ ಕ್ರಾಂತಿಯ ಹರಿಕಾರ-ಮೌಲಾನ...

ಮೌಲಾನಾ ಅಬುಲ್ ಕಲಾಂ ಆಜಾದ್ ಇದು ಅಪರೂಪದ ರಾಷ್ಟ್ರೀಯ ವ್ಯಕ್ತಿತ್ವ. ಅವರ ಹೆಸರು ಆಜಾದ್. ಅವರ ಕನಸು ಸ್ವತಂತ್ರ ಭಾರತ. ಅವರ ಹೋರಾಟ ರಾಷ್ಟ್ರೀಯ ಏಕತೆ. ಅವರ ನಂಬಿಕೆ ಶಿಕ್ಷಣ. ಅವರ ವೈಚಾರಿಕ...

ಕಿವೀಸ್ ಕೋಟೆಯಲ್ಲಿ ಇತಿಹಾಸ ಬರೆಯುವತ್ತ ಶುಭಮನ್ ಗಿಲ್ ಪಡೆ:...

ನವೆಂಬರ್ 13 ಮತ್ತು 15ರಂದು ನಡೆಯಲಿರುವ ಕಿವೀಸ್ ವಿರುದ್ಧದ ನಾಲ್ಕು ಹಾಗೂ ಐದನೇ ಏಕದಿನ ಪಂದ್ಯಗಳಲ್ಲಿ ನಾಯಕ ಶುಭಮನ್ ಗಿಲ್ ಅವರ ನಾಯಕತ್ವದ ಕೌಶಲ ಮತ್ತೊಮ್ಮೆ ಒರೆಗಲ್ಲಿಗೆ ಹಚ್ಚಲ್ಪಡಲಿದೆ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ...

ತುರ್ತುಪರಿಸ್ಥಿತಿ ಸರಿಯೇ- ತಪ್ಪೇ? ಸೋನಿಯಾ ತಮ್ಮ ಆತ್ಮಕಥೆಯಲ್ಲಿ ಏನಂತಾರೆ?

The Guardian ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ತುರ್ತುಪರಿಸ್ಥಿತಿ ಘೋಷಣೆಯೇ ತಪ್ಪು ನಿರ್ಧಾರವಾಗಿತ್ತು ಎಂದು ಸೋನಿಯಾ ಅಭಿಪ್ರಾಯಪಟ್ಟಿದ್ದಾರೆ. ರಾಜೀವ್ ಗಾಂಧಿ ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿ, ಮುಂದಿನ ಚುನಾವಣೆಯವರೆಗೆ ಕಾಯುವಂತೆ ಇಂದಿರಾ ಗಾಂಧಿಯವರಿಗೆ ಸಲಹೆ...

ಅಸುರರು ಯುದ್ಧ ನಿಪುಣರಾಗಿದ್ದರು. ಅವರು ಸೃಷ್ಟಿಸುತ್ತಿದ್ದ ಯುದ್ಧ ಸಲಕರಣೆಗಳು, ಆಯುಧಗಳು, ಯಂತ್ರಗಳು ಅತ್ಯುತ್ತಮ ತಂತ್ರಜ್ಞಾನದ್ದಾಗಿದ್ದವು. ನಮ್ಮ ಸೇನಾಧಿಪತಿಗಳು, ರಾಜರು ವೀರಾವೇಶದಿಂದ ಯುದ್ಧ ಭೂಮಿಯಲ್ಲಿ ಹೋರಾಡುತ್ತಿದ್ದರು. ಆದರೆ ನಾವು ಎಲ್ಲವನ್ನು ಕಳೆದುಕೊಂಡೆವು. ಹೇಗೆ ಅಂತೀರಾ. ಸುರರ ಕುಟಿಲತೆ, ಕಪಟ ತಂತ್ರಗಳು. ನಮ್ಮಲ್ಲೇ ಇದ್ದ ಒಡಕುಗಳು, ಮೇಲರಿಮೆಯಿಂದ ಗೆಲುವುಗಳು ಕೂಡ ಸೋಲಾಗಿ ಬಿಡುತ್ತಿದ್ದವು. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ನಂಬಿಕೆ ನಮ್ಮನ್ನು ಹಾಳುಮಾಡಿತು- ದೇವತೆಗಳು ನ್ಯಾಯಯುತವಾಗಿ ನಮ್ಮೊಡನೆ ಸೆಣೆಸುತ್ತಾರೆ ಎಂಬ ನಂಬಿಕೆಯದು. ನ್ಯಾಯ, ನೀತಿ, ನಿಷ್ಠೆ, ಪ್ರಾಮಾಣಿಕತೆ ಎಲ್ಲ ಅವರ ಮಾತಿನಲ್ಲಿತ್ತು ಹೊರತು ಕಾರ್ಯದಲ್ಲಲ್ಲ.

ಇದನ್ನು ಓದಿದ್ದೀರಾ?: ರಾಷ್ಟ್ರೀಯ ಶಿಕ್ಷಣ ದಿನ | ಶಿಕ್ಷಣ ಕ್ರಾಂತಿಯ ಹರಿಕಾರ-ಮೌಲಾನ ಅಬುಲ್ ಕಲಾಂ ಅಜಾದ್

ಒಂದು ಕಾಲಕ್ಕೆ ಹಳದಿ ಬಣ್ಣದ ಗಂಧರ್ವರು, ಶುದ್ಧ ಶ್ವೇತ ಬಣ್ಣದ ಕಿನ್ನರರು, ಕಡು ಕಪ್ಪು ಯಕ್ಷರು, ಕಪ್ಪು ಅಸುರರು ಮತ್ತು ಕಳೆಗುಂದಿದ ದೇವತೆಗಳು ಬೆರೆತು ಹೋದೆವು. ನಾನೇ ನೋಡಿ ಗೌರವರ್ಣದವ, ಕಡು ಕಪ್ಪು ಕಣ್ಣುಗಳು ಮತ್ತು ಅಲೆಯಂತ ಕೇಶ ರಾಶಿ. ನನ್ನ ತಂಗಿ ಶೂರ್ಪನಕಿಯದ್ದು ನಡುರಾತ್ರಿಯಷ್ಟು ಕಪ್ಪು ಮೈಬಣ್ಣ, ಉದ್ದದ ನೇರ ಕೇಶ ರಾಶಿ ಮತ್ತು ಕಂದು ಕಂಗಳು, ದಪ್ಪ ಮೈ, ಕಪ್ಪು ವರ್ಣ, ಕಪ್ಪು ಕೂದಲು ಮತ್ತು ಕಣ್ಣು ಕುಂಭಕರ್ಣನದ್ಡು. ವಿಭೀಷಣ ತಿಳಿ ಕಂದು ಮೈಬಣ್ಣ, ಕೂದಲು ಮತ್ತು ತಿಳಿ ನೀಲಿ ಕಣ್ಣುಗಳು! ಈಗಿಲ್ಲಿ ದೇವತೆಗಳು ಯಾರು? ಅಸುರರು ಯಾರು? No one can really claim to have pure Deva or Asura blood in such intermingling of the tribes.

ಬೇರೆ ರಾಜರು ವಿಲಾಸಿ ಅರಮನೆಗಳನ್ನು, ಗೋರಿಗಳನ್ನು ಕಟ್ಟಿಸುವಾಗ ನಾವು ಅಸುರರು ಪ್ರಜಾಸತ್ತಾತ್ಮಕ ಪರಿಷತ್ತು ರಚಿಸಿ ಜನರಿಗಾಗಿ ರಸ್ತೆ, ಆಸ್ಪತ್ರೆ, ಒಳಚರಂಡಿ ವ್ಯವಸ್ಥೆ ನಿರ್ಮಾಣ ಮಾಡುತ್ತಿದ್ದೆವು. ಆಗ ಕುದುರೆ ಏರಿ ಬಂದರು ನೋಡಿ ಜಂಬೂ ದ್ವೀಪದ ಲೂಟಿಕೋರರು! ಆ ಲೂಟಿಕೋರರ ನಾಯಕ ಇಂದ್ರ! ತನ್ನ ಕ್ರೌರ್ಯ, ದೌರ್ಜನ್ಯ, ಅತ್ಯಾಚಾರಿಗಳಿಗೆ ಆತ “ಪುರರೆಂದರ- ಪುರಗಳನ್ನು ನಿರ್ದಯವಾಗಿ ಹಾಳುಮಾಡುವವ” ಎಂದೇ ಪ್ರಸಿದ್ಧನಾಗಿದ್ದ. ಆತನ ಅಶ್ವ ಪಡೆಯನ್ನು ನಮ್ಮ ಹತ್ತು ಅಸುರ ರಾಜರು ಎದುರುಕೊಂಡರು. ಜೇಲಂ ನದಿಯ ತಟದಲ್ಲಿ ಭೀಕರ ಯುದ್ಧದಲ್ಲಿ ನಾವು ಸೋತೆವು. ನಮ್ಮವರನ್ನು ಅವರು ಕಗ್ಗೊಲೆಗೈದರು. ಮಕ್ಕಳು, ಮುದುಕಿಯರೆನ್ನದೇ ಅತ್ಯಾಚಾರವೆಸಗಿದರು. ಉಗ್ರಾಣಗಳನ್ನು ಲೂಟಿ ಮಾಡಿದರು. ನಮ್ಮ ಮಹಾನಗರಗಳು ಮಣ್ಣಾದವು. ನಾಗರಿಕತೆಯ ಕುರುಹುಗಳು ಅಳಿಸಿಹೋದವು. ನಾವು ದಕ್ಷಿಣಕ್ಕೆ ಬಂದೆವು. ನಾಗಗಳು ಈಶಾನ್ಯಕ್ಕೆ ಕಾಲ್ಕಿತ್ತರು. ಕಿನ್ನರ, ಯಕ್ಷರು ಎಲ್ಲವನ್ನೂ ಕಳೆದುಕೊಂಡರು. ಗಂಧರ್ವರು ಅಲೆಮಾರಿಗಳಾಗಿ ಕೊನೆಗೊಂದು ದಿನ ಇತಿಹಾಸ ಮತ್ತು ಪುರಾಣಗಳ ಪುಟಗಳಲ್ಲಿ ಲೀನವಾದರು.

Ravana Vibhishana1
ರಾವಣ ಮತ್ತು ವಿಭೀಷಣ

ಆಗ ನನಗೆ ಸ್ವಲ್ಪ ಆತ್ಮವಿಶ್ವಾಸದ ಅಗತ್ಯವಿತ್ತು. ನಾನೂ ಕೂಡ ಸಾಂಪ್ರದಾಯಿಕ ಅರ್ಥದಲ್ಲಿ ಬುದ್ಧಿವಂತನಾಗಿರಲಿಲ್ಲ. ವಿಭೀಷಣನು ಇಷ್ಟಪಟ್ಟು ಮಾಡುತ್ತಿದ್ದಂತೆ ವೇದಗಳನ್ನು ಉಲ್ಟಾ ಪಠಿಸಲು ನನಗೆ ಸಾಧ್ಯವಾಗುತ್ತಿರಲಿಲ್ಲ. ಏನೇ ಆದರೂ, ವೇದಗಳು ಕೇವಲ ಒಂದು ಅಸಂಬದ್ಧ ಮೂಢನಂಬಿಕೆಗಳ ಮೂಟೆ ಎಂದೇ ನಾನು ಭಾವಿಸಿದ್ದೆ ಮತ್ತು ಅವುಗಳನ್ನು ಯಾವ ರೀತಿಯಲ್ಲಿ ಪಠಿಸಿದರೂ ಅದರಿಂದೇನೂ ವ್ಯತ್ಯಾಸವಾಗುತ್ತಿರಲಿಲ್ಲ.

ನನ್ನ ತಂದೆಯಂತಹ ಕೆಲಸವಿಲ್ಲದ ಕೆಲವು ಬ್ರಾಹ್ಮಣರು ಸಾವಿರಾರು ವರ್ಷಗಳ ಹಿಂದೆ ಅವುಗಳನ್ನು ಸೃಷ್ಟಿಸಿದ್ದರು. ತಮ್ಮನ್ನು ತಾವು ಉಪಯುಕ್ತವಾಗಿಸಿಕೊಳ್ಳುವ ಬದಲಿಗೆ, ಬ್ರಾಹ್ಮಣರು ತಾವೇ ಸ್ವತಃ ಸೃಷ್ಟಿಸಿಕೊಂಡ ಮಳೆ, ಸೂರ್ಯ, ಕುದುರೆಗಳು, ಹಸುಗಳು, ಹಣ ಮತ್ತು ಇತರ ಅನೇಕ ದೇವತೆಗಳಿಗೆ ಪ್ರಾರ್ಥನೆ ಮಾಡುತ್ತಿದ್ದರು. ಅವರು ಯಾವ ಶಾಪಗ್ರಸ್ತ ಸ್ಥಳಗಳಿಂದ ಬಂದಿದ್ದರೋ, ಆ ಜಾಗಗಳು ಖಂಡಿತವಾಗಿಯೂ ತುಂಬಾ ಚಳಿಯಿಂದ ಕೂಡಿರಬೇಕು. ಇಲ್ಲದಿದ್ದರೆ, ನೂರಾರು ಬಗೆಬಗೆಯ ಒಣಕಡ್ಡಿಗಳನ್ನು ಬೆಂಕಿಗೆ ಹಾಕಿದ ನಂತರ, ಅವರು ಕಪ್ಪೆಗಳಂತೆ ಕೆರಕುತ್ತಾ ದೇವತೆಗಳಿಗೆ ಏಕೆ ಮೊರೆ ಇಡುತ್ತಿದ್ದರು?

ಬಹುಶಃ ನನ್ನಲ್ಲಿ ಪೂರ್ವಗ್ರಹವಿತ್ತೇನೋ. ಯಜ್ಞಗಳ ರೂಪದಲ್ಲಿ ಅವರು ಮಾಡುತ್ತಿದ್ದ ಕೆಲಸ ನಿಷ್ಪ್ರಯೋಜಕ ಎಂದು ನಾನು ಭಾವಿಸಬಾರದಾಗಿತ್ತು. ವಾಸ್ತವವಾಗಿ, ಅದು ಹಣ ಗಳಿಸಲು ಒಂದು ಅತ್ಯುತ್ತಮ ಸಾಧನವಾಗಿ ಕೆಲಸ ಮಾಡುತ್ತಿತ್ತು ಮತ್ತು ಭೌತಿಕ ಲಾಭಗಳನ್ನು ಪಡೆಯಲು ಅದು ನೆರವಾಗುತ್ತಿತ್ತು. ಈ ಬ್ರಾಹ್ಮಣರೇನೂ ಮೂರ್ಖರಲ್ಲ. ಒಣಕಡ್ಡಿಗಳನ್ನು ಸುಡುವಂತಹ ಸಾಮಾನ್ಯ ಕೆಲಸಗಳನ್ನು ಜಗತ್ತನ್ನೇ ಅಲುಗಾಡಿಸುವಂತಹ ವೈಜ್ಞಾನಿಕ ಆವಿಷ್ಕಾರಗಳಂತೆ ಬಿಂಬಿಸುವುದು ಹೇಗೆ ಮತ್ತು ಜಗತ್ತನ್ನು ನಿಯಂತ್ರಿಸುವ ಶಕ್ತಿಗಳನ್ನು ತಾವೇ ಪಳಗಿಸಿದ್ದೇವೆ ಎಂದು ಹೇಳಿಕೊಳ್ಳುವುದು ಹೇಗೆ ಎಂಬುದು ಅವರಿಗೆ ಚೆನ್ನಾಗಿ ಗೊತ್ತಿತ್ತು. ಬಡಗಿಗಳು, ಕಲ್ಲುಕುಟಿಗರು (ಮೇಸ್ತ್ರಿಗಳು) ಹಾಗೂ ರೈತರಂತಹ ನಿಜಕ್ಕೂ ಉಪಯುಕ್ತವಾದ ಅರ್ಥಪೂರ್ಣ ಕೆಲಸಗಳನ್ನು ಮಾಡುತ್ತಿದ್ದ ಬಹುಸಂಖ್ಯಾತ ಜನರೇ, ಸುಡುವ ಬಿಸಿಲಿನಲ್ಲಿ ಮುಖದಿಂದ ಬೆವರು ಸುರಿಯುತ್ತಾ, ಉರಿಯುವ ಬೆಂಕಿಯ ಮುಂದೆ ಕುಳಿತು ದೇವರಿಗೇ ಗೊತ್ತು ಏನನ್ನೋ ಜಪಿಸುತ್ತಾ ಕಪ್ಪೆಗಳಂತೆ ಕೆರಕುತ್ತಿದ್ದ ಈ ಜೋಕರ್‌ಗಳ ಮುಂದೆ ಕೈಮುಗಿದು ಬೇಡುವಂತಾಗಿದ್ದು ನಿಜಕ್ಕೂ ಒಂದು ಹಾಸ್ಯಾಸ್ಪದ ಸಂಗತಿಯಾಗಿತ್ತು.

ಈ ಜಗತ್ತಿನಲ್ಲಿರುವ ಪ್ರತಿಯೊಂದಕ್ಕೂ ಅವರ ಬಳಿ ಒಂದು ಯಜ್ಞ ಅಥವಾ ಪೂಜೆ ಇರುತ್ತಿತ್ತು. ನಿಮಗೆ ಕುಷ್ಠರೋಗವಿರಲಿ ಅಥವಾ ನೆಗಡಿಯಾಗಿರಲಿ, ಅಲ್ಲಿ ದೇವರಿಗೊಂದು ವಿಶೇಷ ಪೂಜೆ ಮಾಡಿ ಅವನನ್ನು ಪ್ರಸನ್ನಗೊಳಿಸಬೇಕಾಗಿತ್ತು. ನಿಮ್ಮನ್ನು ಸದಾ ಪೀಡಿಸುವ ಹೆಂಡತಿ, ಕಾಟ ಕೊಡುವ ನೆರೆಹೊರೆಯವನೊಂದಿಗೆ ಓಡಿಹೋಗಬೇಕೆಂದು ನೀವು ಬಯಸಿದರೆ, ಅದಕ್ಕೂ ಒಂದು ಪೂಜೆ ಇತ್ತು. ನಿಮ್ಮ ಹಸುವಿಗೆ ಕರು ಹಾಕಬೇಕೆಂದಾಗಲಿ ಅಥವಾ ನಿಮ್ಮ ಹೆಂಡತಿಗೆ ಗಂಡು ಮಗುವಾಗಬೇಕೆಂದಾಗಲಿ ನೀವು ಬಯಸಿದರೆ, ಬ್ರಾಹ್ಮಣ ನಿಮಗೆ ಸಹಾಯ ಮಾಡುತ್ತಿದ್ದ. ಅವನು ಕೇವಲ ಒಂದು ಪೂಜೆ ಮಾಡುತ್ತಿದ್ದ ಮತ್ತು ಅದರಂತೆ ಒಂದು ದೈವಿಕ ಕರು ಅಥವಾ ಮಗ ಜನಿಸುತ್ತಿದ್ದ. ನೀವು ಬ್ರಾಹ್ಮಣರನ್ನು ಓಲೈಸಿದರೆ ಸಾಕು, ನಿಮ್ಮ ಮಗ ಹದಿನಾರನೇ ವಯಸ್ಸಿನಷ್ಟರಲ್ಲಿ ಜಗತ್ತಿನ ಅತಿ ದೊಡ್ಡ ಪಂಡಿತನಾಗುತ್ತಿದ್ದ. ಇಲ್ಲದಿದ್ದರೆ, ಅವನು ಬಹುಶಃ ಬ್ರಾಹ್ಮಣರನ್ನಾಗಲಿ ಅಥವಾ ಧಾರ್ಮಿಕ ವಿಧಿವಿಧಾನಗಳನ್ನಾಗಲಿ ಗೌರವಿಸದ ನನ್ನಂತಹ ಒಬ್ಬ ರೌಡಿಯಾಗುತ್ತಿದ್ದ, ಒಬ್ಬ ರಾಕ್ಷಸನಾಗುತ್ತಿದ್ದ. ಈಗ ನಮ್ಮ ನಡುವೆ ಇನ್ನೂ ಅನೇಕ ರಾಕ್ಷಸರಿದ್ದಾರೆ ಎಂದು ನಾನು ಭಾವಿಸುತ್ತೇನೆ. ಬಹುಶಃ ಅದಕ್ಕೆ ಕಾರಣ ‘ಏಕೆ?’ why why? ಎಂದು ಎಲ್ಲವನ್ನೂ ಪ್ರಶ್ನೆ ಮಾಡುವ ವೈರಸ್ ಹರಡುತ್ತಿರುವುದು ಇರಬಹುದು. ನಮ್ಮ ತಲೆಯಿಂದ ಪಾಪದ ಆಲೋಚನೆಗಳು ದೂರವಾಗುವಂತೆ ಬ್ರಾಹ್ಮಣರು ಒಂದು ಪೂಜೆ ಮಾಡಲಾರರೇ? ನನಗೆ ಸಮಯ ಸಿಕ್ಕಾಗ ಇದರ ಬಗ್ಗೆ ನಾನು ಆಳವಾಗಿ ಯೋಚಿಸಬೇಕಾಗಿದೆ.

ನಾನು ಎಲ್ಲಿಗೇ ಹೋದರೂ “ನನಗೂ ದೇವರಿಗೂ ನೇರ ಸಂಪರ್ಕವಿದೆ” ಎಂದು ಹೇಳಿಕೊಳ್ಳುವ ಮತ್ತು ಜನರನ್ನು ದೋಚುವ ಮೋಸಗಾರರನ್ನು ನಾನು ಕಾಣುತ್ತೇನೆ. ಪ್ರಾಚೀನ ಕಾಲದ ರಾಜರುಗಳು ದಿಢೀರನೆ ವಿಶಿಷ್ಟ ದೇವತೆಗಳಾಗಿ ಹೇಗೆ ರೂಪಾಂತರಗೊಂಡರು ಎಂಬುದು ನಿಜಕ್ಕೂ ಆಶ್ಚರ್ಯ ತರುತ್ತದೆ ಮತ್ತು ಇನ್ನೂ ಹೆಚ್ಚು ತಮಾಷೆಯಾಗಿ ಕಾಣುತ್ತದೆ. ನಾನೇನೂ ನಾಸ್ತಿಕನಲ್ಲ. ನಾನು ದೇವರಲ್ಲಿ ಬಲವಾಗಿ ನಂಬಿಕೆ ಇಟ್ಟಿದ್ದೇನೆ ಮತ್ತು ನನ್ನ ಭೌತಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗಾಗಿ ಪ್ರಾರ್ಥಿಸಲು ಯಾವಾಗಲೂ ಸಿದ್ಧನಾಗಿರುತ್ತೇನೆ. ಆದರೆ ನನಗೆ, ದೇವರು ಎಂಬುದು ತುಂಬಾ ವೈಯಕ್ತಿಕವಾದ ವಿಷಯ ಮತ್ತು ಪ್ರಾರ್ಥನೆಯನ್ನು ನನ್ನ ಅಂತರಾಳದಲ್ಲಿ, ಮೌನವಾಗಿ ಮಾಡುತ್ತೇನೆ.

ನಾನೊಬ್ಬ ಕನಸುಗಾರ. ಈ ಜಗತ್ತಿನಲ್ಲಿ ಕೇವಲ ಬದುಕಿ ಕಳೆದುಹೋಗಲು ನನಗೆ ಇಷ್ಟವಿಲ್ಲ. ನಾನು ಜಗತ್ತನು ನನ್ನದಾಗಿಸಿಕೊಳ್ಳಲು, ಆಳಲು ಬಯಸುತ್ತೇನೆ. ನನ್ನ ಜನರೇಕೆ ಅಷ್ಟು ದೀನರಾಗಿ ಮತ್ತು ವಿನಮ್ರರಾಗಿ ಬದುಕುತ್ತಾರೆಂದು ಆಶ್ಚರ್ಯವಾಗುತ್ತೆ… ಕೆಲವೇ ಕೆಲವು ಜನರಿಗೆ ಮಾತ್ರ ಅಧಿಕಾರ ಮತ್ತು ಸಂಪತ್ತನ್ನು ನಿಯಂತ್ರಿಸಲು ಹೇಗೆ ಸಾಧ್ಯವಾಯಿತು? ಭಯದಿಂದಲೇ? ನನಗೆ ಗೊತ್ತಿಲ್ಲ. ಆದರೆ ನಾನು ಎಲ್ಲೇ ನೋಡಿದರೂ, ನನಗೆ ಕೇವಲ ದೌರ್ಜನ್ಯವೇ ಕಾಣಿಸುತ್ತಿತ್ತು. ಹಣ, ಜಾತಿ, ಧಾರ್ಮಿಕ ವಿಧಿವಿಧಾನಗಳು, ಸಂಪ್ರದಾಯಗಳು, ನಂಬಿಕೆಗಳು ಮತ್ತು ಮೂಢನಂಬಿಕೆಗಳು- ಇವೆಲ್ಲವೂ ಒಟ್ಟಾಗಿ ಸೇರಿ ಆ ವಿನಮ್ರ ಬಹುಸಂಖ್ಯಾತ ಜನರನ್ನು ಹತ್ತಿಕ್ಕಲು ಸಂಚು ರೂಪಿಸಿದ್ದವು. ಬದುಕಲು ಇದಕ್ಕಿಂತ ಹೆಚ್ಚು ನ್ಯಾಯಯುತವಾದ ಮಾರ್ಗವಿರಲು ಏಕೆ ಸಾಧ್ಯವಿಲ್ಲ ಎಂಬ ಪ್ರಶ್ನೆ ನನ್ನನ್ನು ಕಾಡುತಿತ್ತು.

ಇದನ್ನು ಓದಿದ್ದೀರಾ?: ಸೋನಿಯಾ ಪುಸ್ತಕ: ಸಿಖ್ಖರ ಗಾಯಗಳ ಮೇಲೆ ಉಪ್ಪು ಎರಚಿದ್ದಾರೆಂದ ಅಕಾಲಿಗಳು

ನಾನು ‘ಏಕೆ?’ ಎಂದು ಪ್ರಶ್ನಿಸಲು ಪ್ರಾರಂಭಿಸಿದ ಕ್ಷಣದಲ್ಲೇ, ನನ್ನನ್ನು ಒಬ್ಬ ಉಗ್ರವಾದಿ ಎಂದು ಕರೆಯಲಾಯಿತು. ನನ್ನ ತಂದೆಯ ಬ್ರಾಹ್ಮಣ ಸ್ನೇಹಿತರು ಒಮ್ಮೆ ನಾನು ದುಷ್ಟ ಶಕ್ತಿಗಳ ಆವಾಹನೆಗೆ ಒಳಗಾಗಿದ್ದೇನೆ ಮತ್ತು ನಾನು ಒಬ್ಬ ರಾಕ್ಷಸ ಎಂದು ಹೇಳಿ ನನ್ನನ್ನು ಹಳ್ಳಿಯಿಂದ ಬಹಿಷ್ಕರಿಸಲು ಪ್ರಯತ್ನಿಸಿದರು. ಬಹುಶಃ ಆಗ ನಾನು ಬಹಳ ಚಿಕ್ಕವನಾಗಿದ್ದೆ ಮತ್ತು ಉದ್ಧಟನಾಗಿದ್ದೆ, ಹಾಗೂ ಪ್ರಪಂಚದ ಬಗೆಗಿನ ನನ್ನ ದೃಷ್ಟಿಕೋನ ಇನ್ನೂ ಅನುಭವದಿಂದ ಹದವಾಗಿರಲಿಲ್ಲ. ನಮ್ಮಲ್ಲೇ ಅತ್ಯಂತ ಕಿರಿಯವನಾದ, ಯಾವಾಗಲೂ ಶಾಂತವಾಗಿರುತ್ತಿದ್ದ ನನ್ನ ತಮ್ಮ ವಿಭೀಷಣನನ್ನು ಹೊರತುಪಡಿಸಿ, ಉಳಿದವರೆಲ್ಲರಲ್ಲೂ ನಾನು ಅದೇ ಚಡಪಡಿಕೆಯನ್ನು ಕಾಣುತ್ತಿದ್ದೆ. ವಿಭೀಷಣ ಒಬ್ಬ ದಡ್ಡ ಎಂದು ನಾನು ಭಾವಿಸಿದ್ದೆ. ಆದರೆ ನಾವು ಬೆಳೆಯುತ್ತಿರುವಾಗ ಅವನು ನಮ್ಮ ಹಳ್ಳಿಯ ಮುದ್ದಿನ ಮಗನಾಗಿದ್ದನು. ಪುಸ್ತಕಗಳಲ್ಲಿ ಏನನ್ನು ಬರೆಯಲಾಗಿದೆಯೋ ಅದನ್ನು ಅವನು ಕಣ್ಣುಮುಚ್ಚಿ ಪಾಲಿಸುತ್ತಿದ್ದನು ಮತ್ತು ಯಾವುದೇ ಪ್ರಶ್ನೆಗಳನ್ನು ಕೇಳುತ್ತಿರಲಿಲ್ಲ. ಈ ಸಮಾಜಕ್ಕೆ ವಿಭೀಷಣನೇ ಅತ್ಯಂತ ಸೂಕ್ತವಾದವನು ಮತ್ತು ಅವನು ಜೀವನದಲ್ಲಿ ದೊಡ್ಡ ಮಟ್ಟಕ್ಕೆ ಬೆಳೆಯಲಿದ್ದಾನೆ ಎಂದು ನನಗೆ ಹಲವು ಬಾರಿ ಅನಿಸುತ್ತಿತ್ತು. ಮತ್ತು ನಾನು ಅವನನ್ನು ಪ್ರೀತಿಸುತ್ತಿದ್ದೆ. ಅವನು ತುಂಬಾ ಚಿಕ್ಕವನಾಗಿದ್ದ ಮತ್ತು ಅಸಹಾಯಕನಾಗಿದ್ದ, ಹಾಗಾಗಿ ಈ ಕ್ರೂರ ಪ್ರಪಂಚದಿಂದ ಅವನನ್ನು ರಕ್ಷಿಸಬೇಕಾದ ಅಗತ್ಯವಿದೆ ಎಂದು ನಾನು ಯಾವಾಗಲೂ ಭಾವಿಸುತ್ತಿದ್ದೆ.

Ravana Vibhishana2

ಈ ಮೇಲಿನ ಬರಹ ನನ್ನದಲ್ಲ. ಇವು ರಾವಣನ ಮಾತುಗಳು. ಆನಂದ ನೀಲಕಂಠನ್ ಅವರ “Asura: Tale of the Vanquished – The story of Ravana and His people” 2012 ಪುಸ್ತಕದ್ದು. ರಾಮಾಯಣವನ್ನು ಗೌರವಿಸುವ ನಾವು ರಾವಣನ ದೃಷ್ಟಿಕೋನದಿಂದಲೂ ಕಥೆಯನ್ನು ಓದಬೇಕು. ಕಾಲೇಜು ದಿನಗಳಲ್ಲಿ ಇರಾವತಿ ಕರ್ವೆರವರ “ಯುಗಾಂತ” ಓದಿದ್ದೆ. ಮಹಾಭಾರತವನ್ನು ಹೊಸದಾಗಿ ನೋಡುವ ಪರಿ ಅದಾಗಿತ್ತು. ನಂತರದ ದಿನಗಳಲ್ಲಿ ಚಿತ್ರ ಬ್ಯಾನರ್ಜಿ ದಿವಾಕರುಣಿಯವರ The Palace of Illusion ಓದಿ ಪಾಂಚಾಲಿಯ ಕಣ್ಣುಗಳಲ್ಲಿ ಮಹಾಭಾರತ ಅರಿತಿದ್ದೆ. ಆಮೇಲೆ ಓದಿದ್ದು ಅಸುರ. ಈ ಕಾಲಕ್ಕೆ retellings, ಕೌಂಟರ್ ನರೇಟಿವ್ಸ್ ಹಾಗೂ ಹ್ಯೂಮನೈಸಿಂಗ್ ಸ್ಟೋರಿಸ್ ಅಗತ್ಯತೆ ಬಹಳವಾಗಿದೆ.

Harish Gangadhar
‍ಹರೀಶ್ ಗಂಗಾಧರ್
+ posts

‍ಲೇಖಕ, ಪ್ರಾಧ್ಯಾಪಕ

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

‍ಹರೀಶ್ ಗಂಗಾಧರ್
‍ಹರೀಶ್ ಗಂಗಾಧರ್
‍ಲೇಖಕ, ಪ್ರಾಧ್ಯಾಪಕ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಷ್ಟ್ರೀಯ ಶಿಕ್ಷಣ ದಿನ | ಶಿಕ್ಷಣ ಕ್ರಾಂತಿಯ ಹರಿಕಾರ-ಮೌಲಾನ ಅಬುಲ್ ಕಲಾಂ ಅಜಾದ್

ಮೌಲಾನಾ ಅಬುಲ್ ಕಲಾಂ ಆಜಾದ್ ಇದು ಅಪರೂಪದ ರಾಷ್ಟ್ರೀಯ ವ್ಯಕ್ತಿತ್ವ. ಅವರ...

ಅಸ್ಸಾಂನಲ್ಲಿ ಹಳಿ ತಪ್ಪಿದ ಕೋಲ್ಕತ್ತಾ-ಸೈರಾಂಗ್ ಎಕ್ಸ್‌ಪ್ರೆಸ್‌: ಹಲವರಿಗೆ ಗಾಯ

ಅಸ್ಸಾಂನ ಕಾಮರೂಪ್ ಜಿಲ್ಲೆಯ ಗುವಾಹಟಿ ಸಮೀಪದ ಡಿಗಾರು ರೈಲು ನಿಲ್ದಾಣದ ಬಳಿ...

ಜಾತಿಯ ಗೋಡೆಗಳಾಚೆ ಪ್ರೀತಿಯ ಪಯಣ: ಸಂವಿಧಾನದ ಬೆಳಕಿನಲ್ಲಿ ಹೊಸ ಬದುಕಿಗೆ ಮುನ್ನುಡಿ!

ಜಾತಿ, ಧರ್ಮ, ಕುಲ, ಗೋತ್ರಗಳ ಕಟ್ಟುಪಾಡುಗಳನ್ನು ಮೀರಿ ಪ್ರೀತಿ, ಸಮಾನತೆ ಮತ್ತು...

ಸೋನಿಯಾ ಪುಸ್ತಕ: ಸಿಖ್ಖರ ಗಾಯಗಳ ಮೇಲೆ ಉಪ್ಪು ಎರಚಿದ್ದಾರೆಂದ ಅಕಾಲಿಗಳು

‘ಆಪರೇಷನ್ ಬ್ಲೂ ಸ್ಟಾರ್’ ಬಳಿಕ ದೆಹಲಿಯ ಬೀದಿಗಳಲ್ಲಿ ಸಿಖ್ಖರ ಕಗ್ಗೊಲೆ ನಡೆಸುವಂತೆ...