ಶಿವಮೊಗ್ಗ | ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಹೊಸ ಆಧಾರ್ ಸೇವಾ ಕೇಂದ್ರ ಲೋಕಾರ್ಪಣೆ

Date:

ಶಿವಮೊಗ್ಗದ ಸಾರ್ವಜನಿಕರಿಗೆ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಸೇವೆಗಳನ್ನು ಸುಲಭವಾಗಿ ಮತ್ತು ತ್ವರಿತವಾಗಿ ಒದಗಿಸುವ ಉದ್ದೇಶದಿಂದ ಹೊಸ ಆಧಾರ್ ಸೇವಾ ಕೇಂದ್ರವನ್ನು ಆರಂಭಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದು ಶಿವಮೊಗ್ಗ ಎಸಿ ಡಾ. ಮೈತ್ರಿ ತಿಳಿಸಿದರು.

- Advertisement -

ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಬರುವ ಯುಐಡಿಎಐ ವತಿಯಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಹೊಸ ಮಾದರಿಯ ಆಧಾರ್ ಸೇವಾ ಕೇಂದ್ರವನ್ನು (ಎಎಸ್ ಕೆ)ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಮೊದಲನೇ ಮಹಡಿಯಲ್ಲಿ ಸ್ಥಾಪಿಸಲಾಗಿದ್ದು, ಗುರುವಾರ ಇದಕ್ಕೆ ಚಾಲನೆ ನೀಡಿ ಅವರು‌ ಮಾತನಾಡಿದರು.ಸಾರ್ವಜನಿಕರು ಆಧಾರ್ ಕಾರ್ಡ್‌ಗೆ ಸಂಬಂಧಿಸಿದ ಅಗತ್ಯ ಸೇವೆಗಳನ್ನು ಈ ಕೇಂದ್ರದಲ್ಲಿ ಪಡೆದುಕೊಳ್ಳಬಹುದು. ಆಧಾರ್ ಸೇವೆಗಳನ್ನು ಜನಸ್ನೇಹಿಯಾಗಿ ಒದಗಿಸುವ ಮೂಲಕ ಸಾರ್ವಜನಿಕರ ಸಮಯ ಉಳಿತಾಯವಾಗಬೇಕು. ಅಧಿಕಾರಿಗಳು ಸೇವೆಗಳನ್ನು ಸಮರ್ಪಕವಾಗಿ ನಿರ್ವಹಿಸಿ, ಯಾವುದೇ ವಿಳಂಬವಿಲ್ಲದೆ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು ಎಂದು ತಿಳಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕ್ಯಾನ್ವಾದಲ್ಲಿ 1,271 ಉದ್ಯೋಗಿಗಳ ವಜಾ: ಸಾಫ್ಟ್‌ವೇರ್ ಉದ್ಯಮಕ್ಕೆ ‘AI’...

2013ರಲ್ಲಿ ಆರಂಭವಾದ ಕ್ಯಾನ್ವಾ, ವೃತ್ತಿಪರ ಗ್ರಾಫಿಕ್ ವಿನ್ಯಾಸದ ಯಾವುದೇ ತಾಂತ್ರಿಕ ಪರಿಣತಿ ಅಥವಾ ಅನುಭವವಿಲ್ಲದ ಸಾಮಾನ್ಯರಿಗೂ ಪೋಸ್ಟರ್‌ಗಳು, ಪ್ರೆಸೆಂಟೇಷನ್‌ಗಳು, ಸಾಮಾಜಿಕ ಮಾಧ್ಯಮದ ಚಿತ್ರಗಳು, ವೀಡಿಯೊಗಳು ಹಾಗೂ ಜಾಹೀರಾತುಗಳನ್ನು ಅತ್ಯಂತ ಸುಲಭವಾಗಿ ಸೃಷ್ಟಿಸುವ ಅವಕಾಶವನ್ನು...

ಅಕ್ಕಿ ಬೆಲೆ ಏರಿಕೆಯ ಬಿಸಿ: ಗ್ರಾಹಕರ ಕೈ ಸುಡುತ್ತಿದೆ,...

ಅಡುಗೆ ಮನೆಯ ದಿನನಿತ್ಯದ ಅಗತ್ಯವಾಗಿರುವ ಅಕ್ಕಿಯ ಬೆಲೆ ದಿನದಿಂದ ದಿನಕ್ಕೆ ಏರುತ್ತಿದ್ದು, ಸಾಮಾನ್ಯ ಕುಟುಂಬಗಳ ಆರ್ಥಿಕ ಪರಿಸ್ಥಿತಿಯನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆ, ಹಣದುಬ್ಬರ, ಉದ್ಯೋಗ ಮತ್ತು...

ಮನುಷ್ಯ ಜಾತಿ ಒಂದೇ; ಮೇಲು–ಕೀಳು ಎಂಬ ಭೇದವೇಕೆ?

ಒಂದೆಡೆ ಧರ್ಮದ ಭೇದ ಮರೆತು ಸಹಬಾಳ್ವೆ ನಡೆಸುವ ಹಳ್ಳಿಗಳು; ಮತ್ತೊಂದೆಡೆ ಜಾತಿಯ ಹೆಸರಿನಲ್ಲಿ ಅಸ್ಪೃಶ್ಯತೆ, ಹಲ್ಲೆ ಮತ್ತು ಸಾಮಾಜಿಕ ಬಹಿಷ್ಕಾರ! ರಾಯಚೂರಿನ ತಿಡಿಗೋಳ ಘಟನೆ ಮನುಷ್ಯತ್ವ, ಸಮಾನತೆ ಮತ್ತು ಸಂವಿಧಾನದ ಆಶಯಗಳ ಕುರಿತು...
806719

ಶಿವಮೊಗ್ಗ ನಗರದಲ್ಲಿ ಜನಸಾಂದ್ರತೆ ಹೆಚ್ಚುತ್ತಿರುವುದು, ಶೈಕ್ಷಣಿಕ ಸಂಸ್ಥೆಗಳು ಮತ್ತು ಕೈಗಾರಿಕಾ ಕ್ಲಸ್ಟರ್‌ಗಳ ಬೆಳವಣಿಗೆಯಿಂದಾಗಿ ಆಧಾರ್ ನೋಂದಣಿ ಹಾಗೂ ನವೀಕರಣ ಸೇವೆಗಳಿಗೆ ಬೇಡಿಕೆ ಗಣನೀಯವಾಗಿ ಹೆಚ್ಚಾಗಿದೆ. ಈ ಹೊಸ ಕೇಂದ್ರದ ಆರಂಭದಿಂದಾಗಿ ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ಮತ್ತು ಸುಲಭವಾಗಿ ಲಭ್ಯವಾಗುವ ಸೇವೆಗಳು ನೇರವಾಗಿ ಸಿಗಲಿದ್ದು, ನಗರದ ಇತರ ಕೇಂದ್ರಗಳ ಮೇಲಿನ ಒತ್ತಡವೂ ಕಡಿಮೆಗೊಳ್ಳಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಯುಐಡಿಎಐ ಆರ್‌ಒ ಬೆಂಗಳೂರು ಉಪ ನಿರ್ದೇಶಕಿ ಪ್ರಿಯಾ ಶ್ರೀಕುಮಾರ್, ಪ್ರಾಜೆಕ್ಟ್ ಮ್ಯಾನೇಜರ್ ರಿಕೇಶ್ ಕುಮಾರ್, ಸಹಾಯಕ ವ್ಯವಸ್ಥಾಪಕ ಪ್ರಸಾದ್ ಬಾಬು, ಬಿಎಲ್ಎಸ್ ಇಂಟರ್ನ್ಯಾಷನಲ್ ಕ್ಲಸ್ಟರ್ ಮ್ಯಾನೇಜರ್ಶ್ಯಾಮ್ ಸುಂದರ್, ಆಧಾರ್ ಜಿಲ್ಲಾ ಸಂಯೋಜಕ ಸತೀಶ್ಚಂದ್ರ, ಹಾಜರಿದ್ದರು.

+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ನವೆಂಬರ್ 5ರಿಂದ 7ರವರೆಗೆ ಬೆಂಗಳೂರಿನಿಂದ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ; ಮುಂಗಡ ಟಿಕೆಟ್ ಕಾಯ್ದಿರಿಸಲು ಅವಕಾಶ

ದೀಪಾವಳಿ ಹಬ್ಬದ ಸಂಭ್ರಮದಲ್ಲಿ ತವರೂರಿಗೆ ಮರಳುವ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ...

ಹೆಂಡತಿ ಬೇರೆ ಗಂಡಸಿನೊಂದಿಗೆ ಮಾತನಾಡಿದರೆ ವಿವಾಹೇತರ ಸಂಬಂಧದ ಆರೋಪ ಮಾಡುವುದು ಕ್ರೌರ್ಯ: ಜಾರ್ಖಂಡ್ ಹೈಕೋರ್ಟ್

ಹೆಂಡತಿ ತನ್ನ ಗಂಡನ ಮೊಬೈಲ್ ಫೋನ್ ಬಳಸಿ ಬೇರೊಬ್ಬ ವ್ಯಕ್ತಿಯೊಂದಿಗೆ ಮಾತನಾಡಿದ್ದಾಳೆ...

ಕಾವೇರಿ ವಿವಾದ: ಕರ್ನಾಟಕ ವಿರುದ್ಧ ಸುಪ್ರೀಂನಲ್ಲಿ ತಮಿಳುನಾಡು ಮೌಖಿಕ ವಾದ ಮಂಡನೆ!

ಕಳೆದ ಅಕ್ಟೋಬರ್ 23ರಿಂದ ಕರ್ನಾಟಕ ಸರ್ಕಾರ ಕಾವೇರಿ ನೀರನ್ನು ಬಿಡುಗಡೆ ಮಾಡುತ್ತಿಲ್ಲ...

1,271 ಉದ್ಯೋಗಗಳಿಗೆ ‘ಕ್ಯಾನ್ವಾ’ ಕತ್ತರಿ; ಕೆಲಸ ಕಳೆದುಕೊಂಡವರಿಗೆ 6 ತಿಂಗಳ ಸಂಬಳ, ಮ್ಯಾಕ್‌ಬುಕ್ ಕೊಡುಗೆ!

 ಟೆಕ್ ಜಗತ್ತಿನ ಮುಂದುವರಿದ ಉದ್ಯೋಗ ಕಡಿತದ ಅಲೆಯಲ್ಲಿ ಜನಪ್ರಿಯ ಡಿಸೈನ್ ಸಾಫ್ಟ್‌ವೇರ್...