ಭದ್ರಾವತಿಯಿಂದ ಅಕ್ರಮವಾಗಿ ಕೇರಳಕ್ಕೆ ಸಾಗಿಸುತ್ತಿದ್ದ ಮೊಬೈಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿರುವ ಘಟನೆ ತೀರ್ಥಹಳ್ಳಿಯಲ್ಲಿ ನಡೆದಿದೆ
ಇಲ್ಲಿನ ಬಾಳೇಬೈಲು ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ಕಾರನ್ನು ತಪಾಸಣೆ ನಡೆಸಿದ ಪೊಲೀಸರು, ಕಾರಿನ ಸೀಟಿನ ಕೆಳಗೆ ಬ್ಯಾಗ್‌ನಲ್ಲಿ ಇರಿಸಲಾಗಿದ್ದ ವಿವಿಧ ಕಂಪನಿಗಳ ಸುಮಾರು 150ಕ್ಕೂ ಹೆಚ್ಚು ಮೊಬೈಲ್ ಫೋನ್‌ಗಳನ್ನು ಪತ್ತೆಹಚ್ಚಿದ್ದಾರೆ. ವಶಪಡಿಸಿಕೊಳ್ಳಲಾದ ಮೊಬೈಲ್‌ಗಳ ಮೌಲ್ಯ ಸುಮಾರು 16,50,000 ರೂಪಾಯಿಗಳೆಂದು ಅಂದಾಜಿಸಲಾಗಿದೆ.
ತೀರ್ಥಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಇಮಾನ್ ಬೇಗ್ ರೌಂಡ್ಸ್‌ನಲ್ಲಿದ್ದ ವೇಳೆ, ತೀರ್ಥರಾಮೇಶ್ವರ ಕೆಫೆ ಮುಂಭಾಗ ರಸ್ತೆ ಬದಿಯಲ್ಲಿ ನಿಂತಿದ್ದ ಬಿಳಿಯ ಬಣ್ಣದ ಹ್ಯುಂಡಾ ವೆನ್ಯೂ ಕಾರನ್ನ ಗಮನಿಸಿದ್ದಾರೆ. ಅನುಮಾನಗೊಂಡು ಕಾರಿನ ಚಾಲಕನನ್ನು ವಿಚಾರಿಸಿದ್ದಾರೆ. ಆತ ತಾನು ಮೊಹ್ಮದ್ ಷರೀಪ್ ಬಿನ್ ಅಜೀಜ್ (35) ಎಂದು ಪರಚಯಿಸಿಕೊಂಡು, ತಾನೊಬ್ಬ ಕಾರ್ ಡೀಲರ್, ಕೇರಳದ ಮಲಪ್ಪುರಂ ಜಿಲ್ಲೆಯ ತಿರೂರಂಗಡಿ ತಾಲೂಕಿನ ಚಲರಿ ಗ್ರಾಮದವನು ಎಂದಿದ್ದಾನೆ. ಇನ್ನುಷ್ಟು ವಿಚಾರಣೆಗಾಗಿ ಕಾರಿನ ಸಮೇತ ಚಾಲಕನನ್ತೀನು ರ್ಥಹಳ್ಳಿ ಪೊಲೀಸ್ ಠಾಣೆಗೆ ಕರೆತಂದು ಪರಿಶೀಲಿಸಿದ್ದಾರೆ. ಈ ವೇಳೆ ಕಾರಿನ ಸೀಟಿನ ಕೆಳಗಿನ ಬ್ಯಾಗ್‌ನಲ್ಲಿ 150ಕ್ಕೂ ಹೆಚ್ಚು ಮೊಬೈಲ್ ಫೋನ್‌ಗಳು ಪತ್ತೆಯಾಗಿವೆ.
ತೀವ್ರ ವಿಚಾರಣೆ ನಡೆಸಿದಾಗ ತಾನು ಭದ್ರಾವತಿಯ ಅಜಯ್, ವಿಜಯಕುಮಾರ್ ಮತ್ತು ಸೀನ ಅವರಿಂದ ಮೊಬೈಲ್‌ಗಳನ್ನು ಪಡೆದು ಮಾರಾಟಕ್ಕೆ ತೆಗೆದುಕೊಂಡು ಹೋಗುತ್ತಿರುವುದಾಗ ತಿಳಿಸಿದ್ದಾನೆ. ಇದು ಕಳವು ಮಾಡಿರುವ ಮೊಬೈಲ್‌ಗಳೆಂದು ಗೊತ್ತಾದ ತಕ್ಷಣವೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿದ್ದಾರೆ.




