ತಿಪಟೂರು | ಉಳಿತಾಯದಷ್ಟೇ ಹೂಡಿಕೆ ಕೂಡ ಮುಖ್ಯ : ಲೋಕೇಶ್.ಕೆ.ವಿ

Date:

 ಬಡವರು ಬಡವರಾಗಿಯೇ ಉಳಿದು, ಶ್ರೀಮಂತರು ಇನ್ನೂ ಶ್ರೀಮಂತರಾಗುತ್ತಿರಲು ಕಾರಣ, ಬಡವ ಹಣಕ್ಕಾಗಿ ದುಡಿಯುತ್ತಿದ್ದಾನೆ. ಆದರೆ ಶ್ರೀಮಂತ ಹಣದಿಂದ ಹಣ ದುಡಿಯುತ್ತಿದ್ದಾನೆ. ಇಲ್ಲಿ ಉಳಿತಾಯದ ಜೊತೆಗೆ ಹಣದ ಸರಿಯಾದ ಹೂಡಿಕೆ ಕೂಡ ಮುಖ್ಯವಾಗಿದೆ ಎಂದು ಮೋತಿಲಾಲ್ ಒಸ್ವಾಲ್ ಬ್ಯುಸಿನೆಸ್ ಡೆವೆಲಪ್ಮೆಂಟ್ ಮ್ಯಾನೇಜರ್ ಲೋಕೇಶ್.ಕೆ.ವಿ ತಿಳಿಸಿದರು.

- Advertisement -

ತಿಪಟೂರು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎಪಿಜೆ ಅಬ್ದುಲ್ ಕಲಾಂ ಸೆಮಿನಾರ್ ಹಾಲ್ ನಲ್ಲಿ ಗುರುವಾರ ವಾಣಿಜ್ಯ ಮತ್ತು ನಿರ್ವಹಣಾ ವಿಭಾಗ ಮತ್ತು ಐಕ್ಯೂಎಸಿ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಹೂಡಿಕೆ ಜಾಗೃತಿ ಕುರಿತು ಒಂದು ದಿನದ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅವರು, ಸಾಮಾನ್ಯವಾಗಿ ಜನರು ಹಣದ ಬಳಕೆ ಮತ್ತು ಉಳಿತಾಯದ ಬಗ್ಗೆ ಯೋಚಿಸುವಷ್ಟು ಹೂಡಿಕೆ ಬಗ್ಗೆ ಯೋಚಿಸಲು ಹೆದರುತ್ತಾರೆ. ಆದರೆ ಹೂಡಿಕೆಯಿಲ್ಲದೇ ನಮ್ಮ ಆರ್ಥಿಕ ಸ್ಥಿತಿ ನಿರ್ಲಿಪ್ತವಾಗಿರುತ್ತದೆ ಹೊರತು ಬೆಳವಣಿಗೆ ಆಗುವುದಿಲ್ಲ. ಹೂಡಿಕೆಯನ್ನು ಎಲ್ಲಿ, ಹೇಗೆ, ಎಷ್ಟರ ಮಟ್ಟಿಗೆ ಮಾಡಬೇಕು ಎಂಬುದು ತಿಳಿದಿರಬೇಕು ಎಂದರು. 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

 ಸದ್ಯ ಭಾರತ ಜಗತ್ತಿನ ನಾಲ್ಕನೇ ಪ್ರಬಲ ಎಕಾನಮಿ ಹೊಂದಿದ ರಾಷ್ಟ್ರವಾಗಿದ್ದು, ಮೊದಲ ಸ್ಥಾನದಲ್ಲಿರುವ ದೊಡ್ಡಣ್ಣ ಅಮೆರಿಕದಂತಹ ರಾಷ್ಟ್ರಗಳಲ್ಲಿ ಈಕ್ವಿಟಿ ಮಾರ್ಕೆಟ್ ಒಂದಂಕಿಲಿದ್ದು, ಭಾರತದಲ್ಲಿ ಎರಡಂಕಿಲಿರುವುದನ್ನು ನಾವು ಸರಿಯಾಗಿ ಬಳಕೆ ಮಾಡಿಕೊಳ್ಳಬೇಕಿದೆ. ಅದರ ಜೊತೆಗೆ ನಮ್ಮ ಆದಾಯದ ಮೂಲಗಳನ್ನು ಹೆಚ್ಚಿಸಿಕೊಳ್ಳಬೇಕು.ಅದರಲ್ಲೂ ವಿದ್ಯಾರ್ಥಿಗಳು ತಮ್ಮಲ್ಲಿನ ಅತ್ಯುತ್ತಮ ಬಂಡವಾಳ ಸಮಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು. 

     ತುಮಕೂರು ಲೆಕ್ಕಾಧಿಕಾರಿ ಕೆ.ಎಸ್.ಗಿರೀಶ್ ಮಾತನಾಡಿ, ಹಣದ ಸರಿಯಾದ ಹೂಡಿಕೆಯು ತುಂಬಾ ಮುಖ್ಯವಾಗಿದ್ದು, ಅದರಲ್ಲೂ ವಿದ್ಯಾರ್ಥಿಗಳು ಈ ಹಂತದಿಂದಲೇ ಸಣ್ಣ ಪ್ರಮಾಣದ ಹೂಡಿಕೆಯಿಂದ ತಮ್ಮ ಖರ್ಚುಗಳಿಗೆ ಪೋಷಕರನ್ನು ಅವಲಂಬಿಸುವಂತಾಗುವುದಿಲ್ಲ ಎಂದರು.

Advertisements

        ಪ್ರಾಂಶುಪಾಲರಾದ ಡಾ.ಶಶಿಕುಮಾರ್. ಎಚ್.ಸಿ ಮಾತನಾಡಿ, ಹೂಡಿಕೆ ವಿಚಾರದಲ್ಲಿ ವಿದ್ಯಾರ್ಥಿಗಳು ಜಾಗೃತಿ ವಹಿಸಿ ಮುಂದುವರೆಯಬೇಕು. ಹೆಚ್ಚಿನ ಹಣದ ಆಮಿಷಕ್ಕೆ ಬಿದ್ದು ಎಲ್ಲೂ ಎಡವಬಾರದು. ಹೂಡಿಕೆ ಕುರಿತು ನಿಮ್ಮ ವಿಚಾರ ವಿನಿಮಯ ಮತ್ತು ಜ್ಞಾನ ವಿಸ್ತಾರಕ್ಕೆ ಈ ಕಾರ್ಯಕ್ರಮ ಆಯೋಜಿಸಿದ್ದು, ಇದರ ಸಂಪೂರ್ಣ ಸದುಪಯೋಗ ಪಡೆದುಕೊಳ್ಳಬೇಕು ಎಂದರು. 

 ಕಾರ್ಯಕ್ರಮದಲ್ಲಿ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ.ಅನುಪ್ರಸಾದ್.ಕೆ.ವಿ, ನಿರ್ವಹಣಾ ವಿಭಾಗದ ಮುಖ್ಯಸ್ಥೆ ಡಾ.ಸರಸಾ.ಎಚ್.ಸಿ, ಪ್ರಾಧ್ಯಾಪಕರಾದ ನಾಗರಾಜ್.ಕೆ, ನಾರಾಯಣ ದಾಸ್, ಭಾರತಿ.ವೈ.ಕೆ, ಲೋಹಿತ್ ರಾಮ್.ಎಸ್.ಕೆ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಿಪಟೂರು | ಎಸ್ಐಆರ್ ಪ್ರಕ್ರಿಯೆಯಿಂದ ಯಾವೊಬ್ಬ ಮತದಾರನೂ ಹೊರಗುಳಿಯಬಾರದು : ಸಿ. ಬಿ. ಶಶಿಧರ್ (ಟೂಡ)

 ಚುನಾವಣಾ ಆಯೋಗ ಹಮ್ಮಿಕೊಂಡಿರುವ ಈ ಎಸ್ಐಆರ್-ಪ್ರಕ್ರಿಯೆಯಿಂದಾಗಿ ಕ್ಷೇತ್ರದ ಯಾವೊಬ್ಬ ಮತದಾರನೂ ಹೊರಗುಳಿಯಬಾರದು....

ತಿಪಟೂರು | ಜೂನ್ 22ಕ್ಕೆ ರೈತರ ಬೃಹತ್ ಪ್ರತಿಭಟನಾ ಕಾಲ್ನಡಿಗೆ ಜಾಥಾ

 ಖಾತೆದಾರರು ಮತ್ತು ಬಗರ್ ಹುಕುಂ ಸಾಗುವಳಿದಾರರ ಮೇಲೆ ಅರಣ್ಯ ಇಲಾಖೆಯ ದೌರ್ಜನ್ಯ...

ತಿಪಟೂರು | ಎಸ್ಐಆರ್ ಪ್ರಕ್ರಿಯೆ ಕುರಿತು ಜೂನ್ 19 ರಂದು ತರಬೇತಿ ಕಾರ್ಯಾಗಾರ

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಕುರಿತು ಸಾರ್ವಜನಿಕರಲ್ಲಿ...

ತಿಪಟೂರು | ಮೂವರು ಎನ್‌ಸಿಸಿ ಕೆಡೆಟ್‌ಗಳು ಭಾರತೀಯ ಸೇನೆಗೆ ಆಯ್ಕೆ

ತಿಪಟೂರು  ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 5, 4 ಎನ್‌ಸಿಸಿ...